ಗೂಗಲ್‌ ಡ್ರೈವ್‌ ಸೇರಿದ ಈ ಹೊಸ ಫೀಚರ್ಸ್‌ ನಿಮಗೆ ಸಾಕಷ್ಟು ಉಪಕಾರಿಯಾಗಲಿದೆ!

|

ಗೂಗಲ್‌ನ ಜನಪ್ರಿಯ ಸೇವೆಗಳಲ್ಲಿ ಗೂಗಲ್‌ ಡ್ರೈವ್‌ ಕೂಡ ಒಂದಾಗಿದೆ. ಬಳಕೆದಾರರು ತಮ್ಮ ಫೈಲ್‌ ಮತ್ತು ಇತರೆ ಡಾಕ್ಯುಮೆಂಟ್‌ಗಳನ್ನು ಸ್ಟೋರೇಜ್‌ ಮಾಡಲು ಗೂಗಲ್‌ ಡ್ರೈವ್‌ ಬಳಸುತ್ತಾರೆ. ಇನ್ನು ಗೂಗಲ್‌ ಡ್ರೈವ್‌ ಕೂಡ ಬಳಕೆದಾರರ ಅನುಕೂಲಕ್ಕಾಗಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಸದ್ಯ ಇದೀಗ ಗೂಗಲ್‌ ಡ್ರೈವ್‌ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈ ಫೀಚರ್ಸ್‌ ಗೂಗಲ್‌ ಡ್ರೈವ್‌ ಪ್ಲಾಟ್‌ಫಾರ್ಮ್‌ನಲ್ಲಿ ಫೈಲ್‌ಗಳನ್ನು ಸುಲಭವಾಗಿ ಹುಡುಕಲು ಬಳಕೆದಾರರಿಗೆ ಅನುಮತಿಸುತ್ತದೆ.

ಗೂಗಲ್‌

ಹೌದು, ಗೂಗಲ್‌ ಡ್ರೈವ್‌ ಸರ್ಚ್‌ ಚಿಪ್ಸ್‌ ಎಂಬ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಅನಾವರಣಗೊಂಡ Gmailನ ಸರ್ಚ್‌ ಫಿಲ್ಟರ್‌ಗಳ ಮಾದರಿಯಲ್ಲಿ ಇರುತ್ತದೆ. ಇದು ಬಳಕೆದಾರರು ಹುಡುಕುತ್ತಿರುವ ನಿರ್ದಿಷ್ಟ ಫೈಲ್‌ ಅನ್ನು ತ್ವರಿತವಾಗಿ ಹುಡುಕಲು ಸುಲಭವಾಗುತ್ತದೆ. ಸದ್ಯ ಈ ಫೀಚರ್ಸ್‌ ಇತ್ತೀಚಿನ ಗೂಗಲ್‌ ಡ್ರೈವ್ ಫೀಚರ್ಸ್‌ ಬೀಟಾ ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ. ಹಾಗಾದ್ರೆ ಗೂಗಲ್‌ ಡ್ರೈವ್‌ನಲ್ಲಿ ಸರ್ಚ್‌ ಚಿಪ್ಸ್‌ ಫೀಚರ್ಸ್‌ ಅನ್ನು ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಡ್ರೈವ್‌

ಗೂಗಲ್‌ ಡ್ರೈವ್‌ ತನ್ನ ಹೊಸ ಅಪ್ಡೇಟ್‌ನಲ್ಲಿ ಸರ್ಚ್‌ ಚಿಪ್ಸ್‌ ಅನ್ನು ಸೇರಿಸಿದೆ. ಬಳಕೆದಾರರು ತಮಗೆ ಬೇಕಾದ ಫೈಲ್‌ ಹೆಸರನ್ನು ಗೂಗಲ್‌ ಡ್ರೈವ್‌ನಲ್ಲಿ ನಮೂದಿಸಿದರೆ ಸಾಕು ಆ ಫೈಲ್‌ ದೊರಕಲಿದೆ. ನೀವು ಗೂಗಲ್‌ ಡ್ರೈವ್‌ನಲ್ಲಿ ಸ್ಟೋರೇಜ್‌ ಮಾಡಿರುವ ಯಾವುದೇ ಡಾಕ್ಯುಮೆಂಟ್‌ ಫೈಲ್ ಪ್ರಕಾರ, ಜನರು, ಫೈಲ್ ಕ್ಯಾಪ್ಶನ್‌, ಶೇರ್‌ ಡ್ರೈವ್ ಲೇಬಲ್‌ಗಳು ಮತ್ತು ಕಾರ್ಯಗಳ ಆಧಾರದ ಮೇಲೆ ಹೆಚ್ಚು ಸಂಬಂಧಿತ ಫಲಿತಾಂಶಗಳನ್ನು ನೀಡಲಿದೆ. ಸರ್ಚ್‌ ಚಿಪ್ಸ್‌ ಮೂಲಕ ನೀವು ಸ್ಥಳದ ಮಾಹಿತಿಯನ್ನು ನಮೂದಿಸಿದರೂ ಕೂಡ ಫೈಲ್‌ಗಳನ್ನು ಸರ್ಚ್‌ ಮಾಡಲು ಸಾಧ್ಯವಾಗಲಿದೆ.

 ಗೂಗಲ್‌ ಡ್ರೈವ್‌

ಇನ್ನು ಗೂಗಲ್‌ ಡ್ರೈವ್‌ ಬಳಸುವ ಬಳಕೆದಾರರು ಸಾಮನ್ಯವಾಗಿ ಫೈಲ್‌ ಹೆಸರನ್ನು ಮರೆತಿರುತ್ತಾರೆ. ಅಂತಹ ಸಂದರ್ಭದಲ್ಲಿ ನಿಮ್ಮ ಫೈಲ್‌ ಸರ್ಚ್‌ ಮಾಡಲು ಕೀವರ್ಡ್‌ಗಳು ನಿಮಗೆ ಸಹಾಯ ಮಾಡಲಿವೆ. ಅಲ್ಲದೆ ಬಳಕೆದಾರರು ಪ್ರಶ್ನೆಯನ್ನು ನಮೂದಿಸಿದಾಗ, ಗೂಗಲ್‌ ಡ್ರೈವ್ ಮೇಲ್ಭಾಗದಲ್ಲಿ ಬಟನ್‌ಗಳ ಸಾಲನ್ನು ಪ್ರದರ್ಶಿಸುತ್ತದೆ. ನೀವು ಹುಡುಕುತ್ತಿರುವ ನಿರ್ದಿಷ್ಟ ಫೈಲ್‌ಗಳನ್ನು ಹುಡುಕಲು ಈ ಫಿಲ್ಟರ್‌ಗಳು ಸಹಾಯಕವಾಗಲಿದೆ. ಸದ್ಯ ಈ ಫೀಚರ್ಸ್‌ ಅನ್ನು ಬಳಸಬೇಕಾದರೆ ಮೊದಲಿಗೆ ನೀವು ಗೂಗಲ್‌ನ ಫಾರ್ಮ್‌ಗೆ ಸೈನ್-ಅಪ್ ಮಾಡಬೇಕಾಗುತ್ತದೆ ಏಕೆಂದರೆ ಇದು ಪ್ರಸ್ತುತ ಬೀಟಾ ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ. ಗೂಗಲ್‌ ಡ್ರೈವ್‌ನ ಈ ಹೊಸ ಫೀಚರ್ಸ್‌ ಎಲ್ಲಾ Google Workspace ಗ್ರಾಹಕರಿಗೆ ಮತ್ತು G Suite Basic ಮತ್ತು ವ್ಯಾಪಾರ ಗ್ರಾಹಕರಿಗೆ ಲಭ್ಯವಿರುತ್ತದೆ ಎಂದು ಸರ್ಚ್‌ ದೈತ್ಯ ದೃಢಪಡಿಸಿದೆ.

ಗೂಗಲ್‌ ಡ್ರೈವ್‌

ಇನ್ನು ಗೂಗಲ್‌ ಡ್ರೈವ್‌ ಬಳಕೆದಾರರು ಡ್ರೈವ್‌ ಅನ್ನು ಆಫ್‌ಲೈನ್‌ನಲ್ಲಿ ಪ್ರವೇಶಿಸುವ ಅವಕಾಶವನ್ನು ಸಹ ನೀಡಲಾಗಿದೆ. ಮೊದಲು ಫೈಲ್‌ಗಳನ್ನು ನೀವು ಆಫ್‌ಲೈನ್‌ನಲ್ಲಿ ಲಭ್ಯವಾಗುವಂತೆ ಹೈಲೈಟ್‌ ಮಾಡಬೇಕು. ಇದರಿಂದ ನಿಮಗೆ ಇಂಟರ್‌ನೆಟ್‌ ಕನೆಕ್ಟಿವಿಟಿ ಇಲ್ಲದೆ ಹೋದರೂ ಸಹ ಬ್ರೌಸರ್ ಬಳಸಿ ಫೈಲ್‌ಗಳನ್ನು ತೆರೆಯಲು ಅವಕಾಶ ನೀಡುತ್ತದೆ. ಈ ಫೀಚರ್ಸ್‌ ಅನ್ನು ಗೂಗಲ್ 2019 ರಲ್ಲಿಯೇ ಗೂಗಲ್ ಬೀಟಾ ವರ್ಷನ್‌ನಲ್ಲಿ ಪರಿಚಯಿಸಿತ್ತು. ಇದು ವೆಬ್‌ನಲ್ಲಿ ಗೂಗಲ್ ಡ್ರೈವ್ ಬಳಸುವಾಗ ಗೂಗಲ್ ಅಲ್ಲದ ಫೈಲ್ ಪ್ರಕಾರಗಳನ್ನು ಆಫ್‌ಲೈನ್‌ನಲ್ಲಿ ಹೈಲೈಟ್‌ ಮಾಡಲು ಅವಕಾಶ ನೀಡಿತ್ತು.

ಗೂಗಲ್‌ ಡ್ರೈವ್‌

ಸದ್ಯ ಈ ಫೀಚರ್ಸ್‌ ಇದೀಗ ಎಲ್ಲಾ ಬಳಕೆದಾರರಿಗೆ ಲಭ್ಯವಿದೆ. ಆದ್ದರಿಂದ, ನೀವು ಕೂಡ ನಿಮ್ಮ ಗೂಗಲ್‌ ಡ್ರೈವ್‌ನಲ್ಲಿ ಇರುವ ಪಿಡಿಎಫ್‌ಗಳು, ಇಮೇಜ್‌ಗಳು ಮತ್ತು ಮೈಕ್ರೋಸಾಫ್ಟ್ ಆಫೀಸ್ ದಾಖಲೆಗಳನ್ನು ಆಫ್‌ಲೈನ್‌ನಲ್ಲಿ ಪ್ರವೇಶಿಸಲು ಸಾಧ್ಯವಾಗಲಿದೆ. ಇನ್ನು ನೀವು ಗೂಗಲ್‌ ಡ್ರೈವ್‌ ಅನ್ನು ಆಫ್‌ಲೈನ್‌ನಲ್ಲಿ ಬಳಸುವ ಮೊದಲು ಮ್ಯಾಕ್ ಅಥವಾ ವಿಂಡೋಸ್‌ನಲ್ಲಿ ಡೆಸ್ಕ್‌ಟಾಪ್ ಅಪ್ಲಿಕೇಶನ್‌ ಆವೃತ್ತಿಯಲ್ಲಿ ಗೂಗಲ್ ಡ್ರೈವ್ ಅನ್ನು ಇನ್‌ಸ್ಟಾಲ್‌ ಮಾಡಿರಬೇಕು. ಇದಲ್ಲದೆ, "ಆಫ್‌ಲೈನ್" ಪ್ರವೇಶ ಆಯ್ಕೆಯನ್ನು ವೆಬ್‌ ಡ್ರೈವ್ ಸೆಟ್ಟಿಂಗ್‌ಗಳಲ್ಲಿ ಆಕ್ಟಿವ್‌ ಮಾಡಿರಬೇಕು. ಸೆಟಪ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಬೆಂಬಲಿತ ಫೈಲ್ ಮೇಲೆ ರೈಟ್‌ ಕ್ಲಿಕ್ ಮಾಡಿದರೆ "ಆಫ್‌ಲೈನ್ ಲಭ್ಯವಿದೆ" ಎಂಬ ಟಾಗಲ್ ತೋರಿಸುತ್ತದೆ.

Most Read Articles
Best Mobiles in India

English summary
Google Drive Search Chips Option Will Get You More Relevant Results With Ease.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X