ಗೂಗಲ್‌ನಿಂದ ಪಿನ್-ಸೆಕ್ಯೂರ್‌ ಫೋಲ್ಡರ್ ಫೀಚರ್ಸ್‌ ಬಿಡುಗಡೆ!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಈಗಾಗಲೇ ಹಲವು ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸಿರುವ ಗೂಗಲ್‌ ಇದೀಗ ಪ್ರೈವೆಟ್‌ ಫೈಲ್‌ಗಳನ್ನ ಸೆಕ್ಯೂರ್‌ ಮಾಡುವ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ನಿಮ್ಮ ಗೂಗಲ್‌ ಫೈಲ್‌ನಲ್ಲಿ ಇರುವ ಫೈಲ್‌ಗಳನ್ನ ಫೈಲ್ ಮ್ಯಾನೇಜರ್ ಅಪ್ಲಿಕೇಶನ್‌ನಂತೆ ಸೆಕ್ಯೂರ್‌ ಮಾಡಲಿದೆ ಎಂದು ಹೇಳಲಾಗಿದೆ. ಇದು ಬಳಕೆದಾರರ ಖಾಸಗಿ ಫೈಲ್‌ಗಳನ್ನ ಪ್ರವೇಶಿಸುವ ಮೊದಲು ಪಿನ್‌ಕೋಡ್‌ ನಮೂದಿಸಬೇಕಾಗಿರುತ್ತದೆ.

Google

ಹೌದು, Google ನ ಫೈಲ್ಸ್ ಅಪ್ಲಿಕೇಶನ್ ಬಳಕೆದಾರರಿಗೆ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ಫೈಲ್ ಮ್ಯಾನೇಜರ್ ಅಪ್ಲಿಕೇಶನ್ ಆಗಿದ್ದು, ಇದಕ್ಕೆ ಇನ್ನಷ್ಟು ಹೊಸ ಮಾದರಿಯ ಫೀಚರ್ಸ್‌ಗಳನ್ನ ಸೇರಿಸಲಾಗಿದೆ. ಇದರಲ್ಲಿ ಸುರಕ್ಷಿತ ಫೋಲ್ಡರ್ ಫೀಚರ್ಸ್‌ ಕೂಡ ಒಂದಾಗಿದೆ. ಇದು ನಿಮ್ಮ ಖಾಸಗಿ ಫೈಲ್‌ಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಸಹಾಯ ಮಾಡುತ್ತದೆ. ಸುರಕ್ಷಿತವಾಗಿ ಸಂಗ್ರಹಿಸಲಾದ ನಿಮ್ಮ ಖಾಸಗಿ ಫೈಲ್‌ಗಳನ್ನು ಪಾಸ್‌ವರ್ಡ್‌ ಮೂಲಕ ರಕ್ಷಣೆ ಮಾಡುತ್ತದೆ. ಅಷ್ಟಕ್ಕೂ ಈ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಗೂಗಲ್‌ ತನ್ನ pin-protected Safe Folder feature ಬಳಕೆದಾರರ ಖಾಸಗಿ ಫೈಲ್‌ಗಳನ್ನ ರಕ್ಷಿಸುತ್ತದೆ. ಇದರಿಂದ ನಿಮ್ಮ ಖಾಸಗಿ ಫೈಲ್‌ಗಳನ್ನ 4-ಅಂಕಿಯ ಪಿನ್ ಕೋಡ್ ಪ್ರೊಟೆಕ್ಷನ್‌ ಅನ್ನು ಸೇರಿಸಬಹುದಾಗಿದೆ. ಆದ್ದರಿಂದ ಮೂಲಭೂತವಾಗಿ, ನಿಮ್ಮ ಸ್ನೇಹಿತರು ಅಥವಾ ಕುಟುಂಬದ ಯಾರಾದರೂ ನಿಮ್ಮ ಫೋನ್‌ನಲ್ಲಿ ಎಡವಿ ಲಾಕ್ ಪರದೆಯನ್ನು ತೆರೆದರೂ ಸಹ, ಸುರಕ್ಷಿತ ಫೋಲ್ಡರ್‌ನಲ್ಲಿ ಇರಿಸಲಾದ ಈ ಫೈಲ್‌ಗಳನ್ನು ಪ್ರವೇಶಿಸಲು ಯಾರಿಗೂ ಸಾಧ್ಯವಾಗುವುದಿಲ್ಲ ಎನ್ನಬಹುದಾಗಿದೆ

ಗೂಗಲ್

ಗೂಗಲ್‌ನಲ್ಲಿ ಬ್ರೌಸ್ ಟ್ಯಾಬ್ ಇದ್ದರೆ ಹೊಸ ಫೋಲ್ಡರ್ ಸ್ಟೋರೇಜ್‌ ಭಾಗದಲ್ಲಿ ಒಂದು ವಿಭಾಗವಾಗಿ ಕಾಣಿಸುತ್ತದೆ. ಗೂಗಲ್ ಫೋಲ್ಡರ್‌ನಲ್ಲಿರುವ ಫೈಲ್‌ಗಳನ್ನು ಸಹ ಎನ್‌ಕ್ರಿಪ್ಟ್ ಮಾಡುತ್ತದೆ. ಇದರಿಂದ ನೀವು ನಿಮ್ಮ ಪಿನ್ ಅನ್ನು ನೀವು ಮರೆತರೆ, ಒಳಗೆ ಫೈಲ್‌ಗಳು ಸೆಟ್‌ ಮಾಡಲಾಗಿರುತ್ತದೆ. ಇಲ್ಲಿ ಮತ್ತೊಂದು ಗಮನಾರ್ಹ ವಿಷಯವೆಂದರೆ ಗೂಗಲ್ ಫೈಲ್ಸ್ ಸುರಕ್ಷಿತ ಫೋಲ್ಡರ್‌ನಲ್ಲಿರುವ ಫೈಲ್‌ಗಳನ್ನು ಕ್ಲೌಡ್‌ಗೆ ಬ್ಯಾಕಪ್ ಮಾಡಲು ಅವಕಾಶವಿರುವುದಿಲ್ಲ ಎನ್ನಲಾಗ್ತಿದೆ. ಅಲ್ಲದೆ ಇದು ಫೈಲ್‌ಗಳ ಸುರಕ್ಷತೆಯನ್ನು ಒಂದು ರೀತಿಯಲ್ಲಿ ಹೆಚ್ಚಿಸುತ್ತದೆ, ಇದರರ್ಥ ನಿಮ್ಮ ಸುರಕ್ಷಿತ ಫೋಲ್ಡರ್ ಅನ್ನು ಅನೇಕ ಸಾಧನಗಳಲ್ಲಿ ಸಿಂಕ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ.

ಗೂಗಲ್

ಎಕ್ಸ್‌ಡಿಎ ವರದಿಯ ಪ್ರಕಾರ, ಆಂಡ್ರಾಯ್ಡ್ 11 ಬೀಟಾದಲ್ಲಿರುವ ಬಳಕೆದಾರರಿಗೆ ಈ ಫೀಚರ್ಸ್‌ ಲಭ್ಯವಿದೆ. ಆದಾಗ್ಯೂ, ಯಾವುದೇ ನಿರ್ದಿಷ್ಟ ಆಂಡ್ರಾಯ್ಡ್ ಆವೃತ್ತಿಯ ಅಗತ್ಯವಿಲ್ಲ. ಆದರಿಂದ ನೀವು ಈ ಫೀಚರ್ಸ್‌ ಅನ್ನು ಮೊದಲ ಬಾರಿಗೆ ತೆರೆದಾಗ ನೊಟೀಫೀಕೇಶನ್‌ ಅನ್ನು ತೋರಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಗೂಗಲ್ ಫೈಲ್ಸ್ ಸೆಕ್ಯೂರ್‌ ಫೋಲ್ಡರ್ ಫೀಚರ್ಸ್‌ ಅನ್ನು ವ್ಯಾಪಕವಾಗಿ ಹೊರತಂದಿಲ್ಲ ಎಂದು ಹೇಳಲಾಗ್ತಿದೆ. ಆದಾಗ್ಯೂ, ಎನ್‌ಕ್ರಿಪ್ಟ್ ಮಾಡಲಾದ ಫೋಲ್ಡರ್ ಅನ್ನು ಅಂತಿಮವಾಗಿ ತೆಗೆದುಹಾಕಲು ಯೋಜಿಸಿದ್ದರೆ ಇದು ಉತ್ತಮ ಫೀಚರ್ಸ್‌ ಆಯ್ಕೆಯಾಗಿದೆ ಎಂದು ಹೇಳಲಾಗ್ತಿದೆ.

Most Read Articles
Best Mobiles in India

English summary
Check out the newest Google Files feature that lets you use a 4-digit pin to secure your private data offline on your phone.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X