Google Forms: ಗೂಗಲ್‌ ಫಾರ್ಮ್ ಕ್ರಿಯೆಟ್‌ ಮಾಡುವುದು ಹೇಗೆ?

|

ಪ್ರಸ್ತುತ ಜಗತ್ತಿನಾದ್ಯಂತ ಕೊರೊನಾ ಹಾವಳಿ ಮುಂದುವರೆದಿರುವ ಕಾರಣ ಆನ್‌ಲೈನ್ ಸಮೀಕ್ಷೆ, ಆನ್‌ಲೈನ್‌ ಕ್ವಿಜ್‌, ಆನ್‌ಲೈನ್‌ ಕ್ಲಾಸ್‌ ಸಾಮಾನ್ಯವಾಗಿ ಬಿಟ್ಟಿದೆ. ಸದ್ಯ ಕಾಲೇಜುಗಳು, ಶಾಲೆಗಳು, ಸಂಘ ಸಂಸ್ಥೆಗಳು ತಮ್ಮ ಉದ್ಯೋಗಿಗಳು, ವಿದ್ಯಾರ್ಥಿಗಳಿಂದ ಯಾವುದೇ ಫಾರ್ಮ್‌ ಅನ್ನು ತುಂಬಿಸಬೇಕಾದರೆ ಅದಕ್ಕೂ ಕೂಡ ಆನ್‌ಲೈನ್‌ ಮೊರ ಹೋಗಬೇಕಾದ ಅನಿವಾರ್ಯತೆ ಇದೆ. ಇದೇ ಕಾರಣಕ್ಕೆ ಬಹುತೇಕ ಸಂಸ್ಥೆಗಳು ಗೂಗಲ್ ಫಾರ್ಮ್‌ ಕ್ರಿಯೆಟ್‌ ಮಾಡಿ ಫಾರ್ಮ್‌ ಅನ್ನು ತುಂಬಲು ಕಳಿಸುತ್ತಿವೆ. ಇನ್ನು ಗೂಗಲ್ ಫಾರ್ಮ್‌ಗಳಲ್ಲಿ ಫಾರ್ಮ್ ಅನ್ನು ರಚಿಸುವುದು ಹೇಗೆ ಅನ್ನೊ ಗೊಂದಲ ಎಲ್ಲರಲ್ಲೂ ಇದ್ದೆ ಇದೆ.

ಗೂಗಲ್ ಫಾರ್ಮ್

ಹೌದು, ಆನ್‌ಲೈನ್‌ ಕ್ವಿಜ್‌, ಆನ್‌ಲೈನ್‌ ಸಮೀಕ್ಷೆ, ಗಾಗಿ ಇದೀಗ ಗೂಗಲ್ ಫಾರ್ಮ್‌ ಅನ್ನು ಕ್ರಿಯೆಟ್‌ ಮಾಡಿ ಹಂಚಿಕೊಳ್ಳಲಾಗುತ್ತಿದೆ. ಗೂಗಲ್‌ ಫಾರ್ಮ್‌ನಲ್ಲಿ ಸಮೀಕ್ಷೆಗಳನ್ನ ಸಹ ಮಾಡಲಾಗುತ್ತಿದೆ.ಈ ಮೂಲಕ ಉದ್ಯೋಗಿಗಳ , ವಿದ್ಯಾರ್ಥಿಗಳ, ಜನರ ಅಭಿಪ್ರಾಯವನ್ನ ಗೂಗಲ್‌ ಫಾರ್ಮ್‌ ಮೂಲಕ ದಾಖಲಿಸಲಾಗುತ್ತಿದೆ. ಆದರೆ ಕೆಲವರಿಗೆ ಗೂಗಲ್‌ ಫಾರ್ಮ್‌ ಕ್ರಿಯೆಟ್‌ ಮಾಡುವುದು ಹೇಗೆ ಅನ್ನೊ ಗೊಂದಲ ಇದೆ. ಹಾಗಾದ್ರೆ ಗೂಗಲ್‌ ಫಾರ್ಮ್‌ ಅನ್ನು ಕ್ರಿಯೆಟ್‌ ಮಾಡುವುದು ಹೇಗೆ, ಗೂಗಲ್‌ ಫಾರ್ಮ್‌ ಅನ್ನು ಶೇರ್‌ ಮಾಡುವುದು ಹೇಗೆ, ಗೂಗಲ್ ಫಾರ್ಮ್‌ ಅನ್ನು ಪರಿಶೀಲಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

Google Forms: ಗೂಗಲ್‌ ಫಾರ್ಮ್ ಕ್ರಿಯೆಟ್‌ ಮಾಡುವುದು ಹೇಗೆ?

Google Forms: ಗೂಗಲ್‌ ಫಾರ್ಮ್ ಕ್ರಿಯೆಟ್‌ ಮಾಡುವುದು ಹೇಗೆ?

ಇನ್ನು Google ಫಾರ್ಮ್‌ಗಳಲ್ಲಿ ಫಾರ್ಮ್ ಕ್ರಿಯೆಟ್‌ ಮಾಡುವುದು ಸಾಕಷ್ಟು ಸುಲಭವಾಗಿದ್ದು, ಫಾರ್ಮ್‌ ಕ್ರಿಯೆಟ್‌ ಮಾಡುವುದು ಹೇಗೆ ಅನ್ನೊದನ್ನ ಹಂತಹಂತವಾಗಿ ತಿಳಿಯೋಣ ಬನ್ನಿರಿ.

ಹಂತ:1 Docs.google.com/forms ಗೆ ಭೇಟಿ ನೀಡಿ.

ಹಂತ:2 ನಂತರ, ಹೊಸ ಫಾರ್ಮ್ ಅನ್ನು ಕ್ರಿಯೆಟ್‌ ಮಾಡಲು + ಐಕಾನ್ ಅನ್ನು ಆಯ್ಕೆ ಮಾಡಿ, ನ್ಯೂ ಫಾರ್ಮ್ ಕ್ರಿಯೆಟ್‌ ಆಯ್ಕೆಯನ್ನು ಒತ್ತಿರಿ.

ಹಂತ:3 ಇದೀಗ ಫಾರ್ಮ್‌ಗೆ ನೀವು ಶೀರ್ಷಿಕೆ ಮತ್ತು ವಿವರಣೆಯನ್ನು ಸೇರಿಸಬಹುದು.

ಹಂತ:4 ಈ ಫಾರ್ಮ್‌ನಲ್ಲಿ ನೀವು ಪ್ರಶ್ನೆಗಳನ್ನು ಸೇರಿಸಬಹುದು, ಅಲ್ಲದೆ ಹೆಚ್ಚಿನ ಪ್ರಶ್ನೆಗಳನ್ನು ಸೇರಿಸುವುದಕ್ಕೆ ಟೂಲ್‌ಬಾರ್‌ನ ಬಲಭಾಗದಲ್ಲಿರುವ + ಐಕಾನ್ ಅನ್ನು ಒತ್ತಿರಿ.

ಹಂತ:5 ಇದೀಗ ನೀವು ಸೆಟ್ಟಿಂಗ್‌ಗಳ ಪಕ್ಕದಲ್ಲಿಯೇ ಇರುವ ಫ್ರೀ ವ್ಯೂವ್‌ ಐಕಾನ್ ಅನ್ನು ಸಹ ಕಾಣಬಹುದಾಗಿದೆ.

Google Forms: field ಅನ್ನು ಆಯ್ಕೆಡುವುದು ಹೇಗೆ?

Google Forms: field ಅನ್ನು ಆಯ್ಕೆಡುವುದು ಹೇಗೆ?

ಹಂತ:1 ನೀವು ನಿಮ್ಮ ಪ್ರಶ್ನೆಯನ್ನು ಆಯ್ಕೆ ಮಾಡಿದ ನಂತರ, ಇತರರು ನಿಮ್ಮ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕೆಂದು ನೀವು ಆರಿಸಿಕೊಳ್ಳಬಹುದು.

ಹಂತ:2 ಉತ್ತರ ನಿಡಲು ನೀವು ಆಯ್ಕೆಗಳ ಅವಕಾಶವನ್ನ ನೀಡಬಹುದು, ಒಂದು ಸಾಲಿನ ಉತ್ತರವನ್ನು ನೀಡಲು ಸೂಕ್ತವಾಗಿದೆ ಮತ್ತು ಪ್ಯಾರಾಗ್ರಾಫ್ ಉತ್ತರ ಮಾದರಿ ಈ ರೀತಿಯ ಮಾದರಿಗಳನ್ನ ಆಯ್ಕೆ ಮಾಡಬಹುದಾಗಿದೆ.

ಹಂತ:3 ಇದಾದ ನಂತರ ಫಾರ್ಮ ಕೆಳಗೆ ನೀವು ಉತ್ತರ ಪ್ರಕಾರವನ್ನು ಬಹು ಆಯ್ಕೆ, ಚೆಕ್‌ಬಾಕ್ಸ್‌ಗಳು ಅಥವಾ ಡ್ರಾಪ್‌ಡೌನ್ ಎಂದು ಸೆಟ್‌ಮಾಡಬಹುದಾಗಿದೆ.

ಹಂತ:4 ಅಲ್ಲದೆ ಬಹು ಆಯ್ಕೆ ಪ್ರಶ್ನೆಗಳಲ್ಲಿ ಹೆಚ್ಚಿನ ಕಾಲಮ್‌ಗಳು ಮತ್ತು ಸಾಲುಗಳನ್ನು ಹೊಂದಲು ನೀವು ಬಯಸಿದರೆ, ನೀವು ಮಲ್ಟಿಪಲ್ ಚಾಯ್ಸ್ ಗ್ರಿಡ್ ಅಥವಾ ಚೆಕ್‌ಬಾಕ್ಸ್ ಗ್ರಿಡ್ ಅನ್ನು ಆಯ್ಕೆ ಮಾಡಬಹುದು.

ಗೂಗಲ್‌ ಫಾರ್ಮ್

ಇಷ್ಟೇ ಅಲ್ಲ ನೀವು ಸಮೀಕ್ಷೆ ಮಾಡುವುದಾದರೆ ಅದನ್ನ ಯಾವ ವಿದಾನದಲ್ಲಿ ಮಾಡಲು ಬಯಸುತ್ತಿರೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದು. ಅಲ್ಲದೆ ನಿವು ಉತ್ತರವನ್ನು ಬಯಸುವ ವ್ಯಕ್ತಿಗಗಳಿಂದ ಯಾವ ಮಾದರಿಯ ಉತ್ತರವನ್ನ ಬಯಸುತ್ತಿರೋ ಅದಕ್ಕು ಸಹ ಅವಕಾಶವನ್ನ ನೀಡಲು ಇದರಲ್ಲಿ ಅವಕಾಶವನ್ನ ನೀಡಲಾಗಿದೆ. ಹೀಗೆ ಹಂತಹಂತವಾಗಿ ನೀವು ಆಯ್ಕೆ ಮಾಡುವ ಮಾದರಿಯ ಫಾರ್ಮ್‌ ಅನ್ನು ಗೂಗಲ್‌ ಫಾರ್ಮ್‌ನಲ್ಲಿ ಕ್ರಿಯೆಟ್‌ ಮಾಡಬಹುದಾಗಿದೆ. ಈ ಮೂಲಕ ಗೂಗಲ್‌ ಫಾರ್ಮ್‌ ಅನ್ನು ನಿವು ಸಹ ಕ್ರಿಯೆಟ್‌ ಮಾಡಿ ನಿಮ್ಮ ನೆಚ್ಚಿನ ಫಿಲ್ಡ್‌ ಅನ್ನು ಆಯ್ಕೆ ಮಾಡಬಹುದು. ಇದರಿಂದ ನಿವು ಬಯಸುವ ಉತ್ತರವನ್ನು ಪಡೆಯಲು ಅವಕಾಶವನ್ನು ನೀಡಬಹುದಾಗಿದೆ.

Most Read Articles
Best Mobiles in India

Read more about:
English summary
From quizzes to questionnaires, Google Forms is one of the best tools for surveys of all kinds can help you get it done.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X