Gboard ನಲ್ಲಿ ಟೆಕ್ಸ್ಟ್‌ ಸ್ಕ್ಯಾನ್ ಮಾಡಲು Google ನಿಂದ ಹೊಸ ಫೀಚರ್ಸ್‌!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಪ್ರತಿ ಭಾರಿಯು ಬಳಕೆದಾರರ ಹಿತಕ್ಕಾಗಿ ಹೊಸ ಫೀಚರ್ಸ್‌ಗಳನ್ನ ಪರಿಚಯಿಸುವ ಗೂಗಲ್‌ ಈ ಭಾರಿ ತನ್ನ ಜಿಬೋರ್ಡ್‌ನಲ್ಲಿ ಮತ್ತೊಂದು ಹೊಸ ಫೀಚರ್ಸ್‌ ಪರಿಚಯಿಸಿದ್ದು, ಗ್ರಾಹಕರಿಗೆ ಇನ್ನಷ್ಟು ಅನುಕೂಲವನ್ನು ಮಾಡಿಕೊಟ್ಟಿದೆ. ಸದ್ಯ ಗೂಗಲ್‌ ಅಂಡ್ರಾಯ್ಡ್‌ನಲ್ಲಿ ಲಭ್ಯವಾದಾಗಿನಿಂದಲೂ ಗೂಗಲ್ ಹೊಸ ಫೀಚರ್ಸ್‌ಗಳನ್ನು ಜಿಬೋರ್ಡ್‌ಗೆ ಸೇರಿಸುತ್ತಲೇ ಬಂದಿದೆ. ಅಲ್ಲದೆ ಹೆಚ್ಚಿನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಇದು ಡೀಫಾಲ್ಟ್ ಕೀಬೋರ್ಡ್‌ನಂತೆ ಬಂದಿದ್ದರೂ ಸಹ, ಹಲವು ಗ್ರಾಹಕೀಕರಣ ಆಯ್ಕೆಗಳನ್ನು ಸಹ ಒಳಗೊಂಡಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಗೂಗಲ್‌ ಜಿಬೋರ್ಡ್‌ನಲ್ಲಿ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ಇಮೇಜ್‌ಗಳನ್ನು ಕಾಪಿ ಮಾಡುವುದಲ್ಲದೆ. ಟೆಕ್ಸ್ಟ್‌ ಅನ್ನು ಸಹ ಸ್ಕ್ಯಾನ್‌ ಮಾಡಲು ಅವಕಾಶ ನೀಡಲಿದೆ. ಇನ್ನು ನಿಮಗೆಲ್ಲಾ ತಿಳಿದಿರುವಂತೆ ಕೀಬೋರ್ಡ್ ಹೊರಬಂದ ನಂತರ ಕ್ಲಿಪ್‌ಬೋರ್ಡ್‌ನಿಂದ ಟೆಕ್ಸ್ಟ್‌ ಅನ್ನು ಸೆಲ್ಫ್‌ಪ್ರಾಂಪ್ಟ್ Gboardಗೆ ಇದು ಹೊಸ ಸೇರ್ಪಡೆಯ ಫೀಚರ್ಸ್‌ಗಳಲ್ಲಿ ಒಂದಾಗಿದೆ. Gboard ಒಂದು ಇಂಟರ್‌ಬಿಲ್ಟ್‌ ಕ್ಲಿಪ್ಬೋರ್ಡ್ ಅನ್ನು ಹೊಂದಿದೆ, ಇದು ಇಲ್ಲಿಯವರೆಗೆ ಟೆಕ್ಸ್ಟ್‌ ಅನ್ನು ಮಾತ್ರ ಕಾಪಿ ಮಾಡಲು ಅವಕಾಶ ನೀಡಿತ್ತು. ಇನ್ಮುಂದೆ ಇಮೇಜ್‌ ಅನನ್ಉ ಸಹ ಕಾಪಿ ಮಾಡಬಹುದಾಗಿದೆ.

ಗೂಗಲ್‌

ಬಳಕೆದಾರರು ಇದೀಗ ಗೂಗಲ್‌ Chrome ಅಥವಾ ಗೂಗಲ್‌ ಬೆಂಬಲಿತ ಅಪ್ಲಿಕೇಶನ್‌ಗಳಿಂದ ಚಿತ್ರಗಳನ್ನು ಕಾಪಿ ಮಾಡಲು ಸಾಧ್ಯವಾಗಲಿದೆ. ಅಲ್ಲದೆ ಕಾಪಿ ಮಾಡಿದ ಇಮೇಜ್‌ ಅನ್ನು ತಾತ್ಕಾಲಿಕವಾಗಿ Gboard ಕ್ಲಿಪ್‌ಬೋರ್ಡ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಇಮೇಜ್ ಎಂಬೆಡಿಂಗ್ ಅನ್ನು ಬೆಂಬಲಿಸುವ ಟೆಕ್ಸ್ಟ್‌ ಫಿಲ್ಡ್‌ನಲ್ಲಿಯೂ ಬಳಕೆದಾರರು ಇಮೇಜ್‌ ಅನ್ನು ಪೇಸ್ಟ್‌ ಮಾಡಬಹುದಾಗಿದೆ. ಈ ಫೀಚರ್ಸ್‌ ಪ್ರಸ್ತುತ ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸುವ ಡಿವೈಸ್‌ಗಳಲ್ಲಿ ಕಾರ್ಯನಿರ್ವಹಿಸಲಿದೆ.

ಗೂಗಲ್‌

ಇನ್ನು ಗೂಗಲ್‌ Chrome ನಲ್ಲಿನ ಫೋಟೋವನ್ನು ಬಳಕೆದಾರರು ದೀರ್ಘಕಾಲ ಒತ್ತಿ ಮತ್ತು ಚಿತ್ರವನ್ನು ನಕಲಿಸುವ ಆಯ್ಕೆಯನ್ನು ಈಗಾಗಲೇ ನೀಡಲಾಗಿದೆ. ಒಮ್ಮೆ ನಕಲಿಸಿದ ನಂತರ, ಚಿತ್ರವನ್ನು ಬೆಂಬಲಿತ ಅಪ್ಲಿಕೇಶನ್‌ಗಳಲ್ಲಿ ಲಗತ್ತಾಗಿ ಅಂಟಿಸಬಹುದಾಗಿದೆ. ಅಲ್ಲದೆ Gboard ಅನ್ನು ತರಲು ಬಳಕೆದಾರರು ಅಪ್ಲಿಕೇಶನ್ ತೆರೆಯಬೇಕು ಮತ್ತು ಪಠ್ಯ ಕ್ಷೇತ್ರದಲ್ಲಿ ಟ್ಯಾಪ್ ಮಾಡಬೇಕಾಗುತ್ತದೆ. ಅದು ತೆರೆದ ನಂತರ, ಕ್ಲಿಪ್‌ಬೋರ್ಡ್ ಆಯ್ಕೆಗೆ ಹೋಗಿ ಮತ್ತು ಬಯಸಿದ ಫೋಟೋವನ್ನು ಆರಿಸಬೇಕಾಗುತ್ತದೆ. ಇದನ್ನು ಆಂಡ್ರಾಯ್ಡ್ 11 ರಲ್ಲಿ, ಇತ್ತೀಚಿನ ಪುಟದಿಂದ ಚಿತ್ರಗಳನ್ನು ಸಹ ನಕಲಿಸಬಹುದಾಗಿದೆ.

ಗೂಗಲ್

ಈ ಕಾಪಿ-ಪೇಸ್ಟ್‌ ಕಾರ್ಯವು ಈಗಿನಂತೆ ಒಟ್ಟು 21 ಅಪ್ಲಿಕೇಶನ್‌ಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಎಕ್ಸ್‌ಡಿಎ ಡೆವಲಪರ್‌ಗಳು ಕ್ಲಿಪ್‌ಬೋರ್ಡ್‌ನಿಂದ ಇಮೇಜ್ ಅಂಟಿಸುವಿಕೆಯನ್ನು ಬೆಂಬಲಿಸುವ ಒಂದೆರಡು ಅಪ್ಲಿಕೇಶನ್‌ಗಳನ್ನು ಬಹಿರಂಗಪಡಿಸಲಾಗಿದೆ. ಇವುಗಳಲ್ಲಿ ಎಒಎಸ್ಪಿ ಮೆಸೇಜಿಂಗ್, ಫೇಸ್‌ಬುಕ್, ಗೂಗಲ್ ಡಾಕ್ಸ್, ಗೂಗಲ್ ಸಂದೇಶಗಳು, ಹ್ಯಾಂಗ್‌ ಔಟ್ಸ್‌ಗಳು, ಹಲೋ, ಇಮೋ, ಲೈನ್, ಮೆಸೆಂಜರ್ ಲೈಟ್, ಮೊಟೊರೊಲಾ ಸಂದೇಶಗಳು, ಸರಿ, ಸ್ಯಾಮ್‌ಸಂಗ್ ಸಂದೇಶಗಳು, ಸ್ಕೈಪ್, ಸ್ನ್ಯಾಪ್‌ಚಾಟ್, ಟ್ವಿಟರ್, ವಾಟ್ಸಾಪ್ ಮತ್ತು ಇತರೆ ಆಪ್‌ಗಳಲ್ಲಿಯೂ ಸಹ ಈ ಅವಕಾಶವನ್ನು ನೀಡಲಾಗಿದೆ.

Gboard ನಲ್ಲಿ ಗೂಗಲ್ ಲೆನ್ಸ್

Gboard ನಲ್ಲಿ ಗೂಗಲ್ ಲೆನ್ಸ್

ಇನ್ನು ಗೂಗಲ್‌ನಲ್ಲಿ ಮತ್ತೊಂದು ಹೊಸ ಫೀಚರ್ಸ್‌ ಅನ್ನು ಪರಿಚಯಿಸಲಾಗಿದೆ. ಸದ್ಯ ಗೂಗಲ್‌ ಜಿಬೋರ್ಡ್‌ಗೆ ಹೊಸದಾದ ಮತ್ತೊಂದು ಫೀಚರ್ಸ್‌ ಎಂದರೆ ಗೂಗಲ್ ಲೆನ್ಸ್ ಏಕೀಕರಣ. ಈ ಲೆನ್ಸ್‌ನೊಂದಿಗೆ, ಬಳಕೆದಾರರು ಈಗ ವೆಬ್‌ಸೈಟ್ ಅಥವಾ ಛಾಯಾಚಿತ್ರದಿಂದ ಪಠ್ಯವನ್ನು ಸ್ಕ್ಯಾನ್ ಮಾಡಲು ಸಾಧ್ಯವಾಗುತ್ತದೆ. ಇದನ್ನು ಬಳಸಲು, ಲೆನ್ಸ್ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ನೀವು ಪಠ್ಯದ ಅಪೇಕ್ಷಿತ ಭಾಗವನ್ನು ಆಯ್ಕೆ ಮಾಡಿದ ನಂತರ, "ಕೀಬೋರ್ಡ್‌ಗೆ ಕಳುಹಿಸಿ" ಆಯ್ಕೆಯನ್ನು ಆರಿಸಿ. ಇದರ ನಂತರ, ಟೆಕ್ಸ್ಟ್‌ ಫಿಲ್ಡ್‌ನಲ್ಲಿ Gboard ಆಟೋಮ್ಯಾಟಿಕ್‌ ಆಗಿ ಟೆಕ್ಸ್ಟ್‌ ಅನ್ನು ಪೆಸ್ಟ್‌ ಮಾಡಲಿದೆ.

Most Read Articles
Best Mobiles in India

English summary
The latest update to Google Gboard allows copying images via its clipboard. The new Lens feature allows for scanning text from any page.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X