Just In
Don't Miss
- Automobiles
ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಡೀಸೆಲ್..!
- News
ಮಕ್ಕಳಿಗಾಗಿ ವಿಶೇಷ ಬಜೆಟ್: ಮುಂದಿನ ವರ್ಷದಿಂದ ಜಾರಿ ಸಾಧ್ಯತೆ
- Sports
ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ನಡೆದ ಬೆಟ್ ಮೌಲ್ಯವೆಷ್ಟು ಗೊತ್ತ?!
- Movies
ಮೇಕಪ್ ಆರ್ಟಿಸ್ಟ್ ನಿಧನ: ಕಣ್ಣೀರಿಟ್ಟ ನಟಿ ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Finance
7,000 ರುಪಾಯಿ ಗುಜರಿ ಕಾರಿಗೆ 7 ಕೋಟಿ ಕೊಟ್ಟು ಖರೀದಿಸಿದ್ದ ಎಲಾನ್ ಮಸ್ಕ್
- Lifestyle
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಗೂಗಲ್ ಮ್ಯಾಪ್ನಲ್ಲಿ ಇನ್ನು ಸ್ಥಳೀಯ ಭಾಷೆ ಲಭ್ಯ!.ಪ್ರಯಾಣಿಕರ ಹಾದಿ ಸುಗಮ!
ಟೆಕ್ ದಿಗ್ಗಜ ಗೂಗಲ್ ಸಂಸ್ಥೆಯ ಪ್ರತಿ ಸೇವೆಗಳು ಬಳಕೆದಾರರಿಗೆ ಅನುಕೂಲಕರವಾಗಿದ್ದು, ಅದರಲ್ಲಿಯೂ ಗೂಗಲ್ ಮ್ಯಾಪ್ ಅತ್ಯುತ್ತಮ ಮಾರ್ಗದರ್ಶಿಯಾಗಿ ಬಿಂಬಿತವಾಗಿದೆ. ಒಂದಿಲ್ಲೊಂದು ಅಪ್ಡೇಟ್ ಫೀಚರ್ಸ್ಗಳನ್ನು ಅಳವಡಿಸಿಕೊಳ್ಳುತ್ತಲೇ ಸಾಗಿರುವ ಗೂಗಲ್ ಮ್ಯಾಪ್ ಬಳಕೆದಾರರಿಗೆ ಹೆಚ್ಚು ಉಪಯುಕ್ತವಾಗಿದೆ. ಸಂಸ್ಥೆಯು ಇದೀಗ ಮತ್ತೊಂದು ಫೀಚರ್ ಅನ್ನು ಗೂಗಲ್ ಮ್ಯಾಪ್ನಲ್ಲಿ ಸೇರಿಸಲಿದೆ.

ಹೌದು, ಗೂಗಲ್ ಮ್ಯಾಪ್ನಲ್ಲಿ ಒಂದು ನಿಗದಿತ ಸ್ಥಳದಿಂದ ತಲುಪುವ ಸ್ಥಳದ ವರೆಗೂ ವಾಯಿಸ್ ಮೂಲಕ ಮಾರ್ಗ ಮಾಹಿತಿ ತಿಳಿಸುವ ಸೌಲಭ್ಯ ಇದೆ. ಆದ್ರೆ ಇದೀಗ ಹೊಸದಾಗಿ ಟ್ರಾನ್ಸ್ಲೇಟ್ ಫೀಚರ್ ಸೇರಿದ್ದು, ಸ್ಥಳದ ಹೆಸರು ಮತ್ತು ವಿಳಾಸ ಮಾಹಿತಿಯನ್ನು ಪ್ರಾದೇಶಿಕ ಭಾಷೆಯಲ್ಲಿಯೇ ತಿಳಿಸುತ್ತದೆ. ಇಲ್ಲಿ 'ಟೆಕ್ಟ್ಸ್ ಟು ಸ್ಪೀಚ್' ತಂತ್ರಜ್ಞಾನ ಬಳಕೆ ಇರಲಿದೆ. ಇದರಿಂದ ಪ್ರವಾಸಿಗರಿಗೆ ಹೆಚ್ಚು ಪರಿಣಾಮಕಾರಿಯಾಗಲಿದೆ.

ಗೂಗಲ್ ಮ್ಯಾಪ್ನಲ್ಲಿ ಸ್ಥಳದ ಹೆಸರು ಮತ್ತು ವಿಳಾಸದ ಪಕ್ಕದಲ್ಲಿನ ಹೊಸ ಸ್ಪೀಕರ್ ಐಕೋನ್ ಟ್ಯಾಪ್ ಮಾಡಿದರೇ ಗೂಗಲ್ ಲೌಡ್ ಸ್ಪೀಕರ್ನಲ್ಲಿ ಮಾಹಿತಿ ತಿಳಿಸುತ್ತದೆ. ಈ ಮಾಹಿತಿಯು ಪ್ರಯಾಣಿಕರ ಮುಂದಿನ ಹಾದಿಯನ್ನು ಸುಗಮಗೊಳಿಸುತ್ತದೆ. ಹಾಗೆಯೇ ಪ್ರಯಾಣಿಕರು/ಬಳಕೆದಾರರು ಇನ್ನಷ್ಟು ಹೆಚ್ಚಿನ ಮಾಹಿತಿ ಬಯಸಿದರೇ ಗೂಗಲ್ ಮ್ಯಾಪ್ ತ್ವರಿತವಾಗಿ ಗೂಗಲ್ ಟ್ರಾನ್ಸ್ಲೇಶನ್ ಆಪ್ಗೆ ಲಿಂಕ್ ಮಾಡುತ್ತದೆ ಎಂದು ಸಂಸ್ಥೆಯು ತಿಳಿಸಿದೆ.

ಗೂಗಲ್ ಈ ಹೊಸ ಫೀಚರ್ ಅನ್ನು ಇದೇ ತಿಂಗಳಿನಲ್ಲಿ ಬಿಡುಗಡೆ ಮಾಡಲಿದ್ದು, ಆಂಡ್ರಾಯ್ಡ್ ಮತ್ತು ಐಓಎಸ್ ಆಪರೇಟಿಂಗ್ ಸಿಸ್ಟಮ್ ಬಳಕೆದಾರರಿಬ್ಬರಿಗೂ ಲಭ್ಯವಾಗಲಿದೆ. ಹಾಗೆಯೇ ಈ ಫೀಚರ್ ಆರಂಭದಲ್ಲಿ ಸುಮಾರು 50 ಪ್ರಾದೇಶಿಕ ಭಾಷೆಗಳಿಗೆ ಸಫೋರ್ಟ್ ಮಾಡಲಿದೆ. ಆ ನಂತರದಲ್ಲಿ ಇನ್ನಷ್ಟು ಸ್ಥಳೀಯ ಭಾಷೆಗಳಿಗೂ ಬೆಂಬಲ ನೀಡುವ ಯೋಜನೆಯನ್ನು ಒಳಗೊಂಡಿರುವುದಾಗಿ ಗೂಗಲ್ ಹೇಳಿದೆ.

'ಟೆಕ್ಟ್ಸ್ ಟು ಸ್ಪೀಚ್' ತಂತ್ರಜ್ಞಾನವು ಆಟೋಮ್ಯಾಟಿಕ್ ಆಗಿ ಬಳಕೆದಾರರು ಫೋನಿನಲ್ಲಿ ಯಾವ ಭಾಷೆಯನ್ನು ಬಳಕೆಮಾಡುತ್ತಿದ್ದಾರೆ ಎನ್ನುವುದನ್ನು ಗ್ರಹಿಸುತ್ತದೆ. ಮತ್ತು ಯಾವ ಸ್ಥಳಕ್ಕೆ ಪ್ರಯಾಣ ಬೆಳೆಸುತ್ತಿದ್ದಾರೆ ಎನ್ನುವ ಮಾಹಿತಿ ಗ್ರಹಿಸಿಕೊಳ್ಳಲಿದೆ ಎನ್ನಲಾಗಿದೆ. ಇದನ್ನು ಹೊರತುಪಡಿಸಿ ಹೆಚ್ಚಿನ ಮಾಹಿತಿ ಅಗತ್ಯ ಎನಿಸಿದರೇ ಬಳಕೆದಾರರಿಗೆ ಗೂಗಲ್ ಟ್ರಾನ್ಸ್ಲೇಶನ್ ಆಪ್ ಕನೆಕ್ಟ್ ಮಾಡುತ್ತದೆ.

ಇನ್ನು ಗೂಗಲ್ನ ಈ ಹೊಸ ಫೀಚರ್ ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗೆ ಮುಂದಿನ ತಿಂಗಳು ದೊರೆಯಲಿದೆ. ಗೂಗಲ್ ಐಓ ಕಾರ್ಯಕ್ರಮದಲ್ಲಿ ಈ ಫೀಚರ್ ಬಗ್ಗೆ ಸಂಸ್ಥೆಯು ಮಾಹಿತಿ ನೀಡಿತ್ತು.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090