ವೆಬ್‌ ಆವೃತ್ತಿಯಲ್ಲಿ ಲೊ ಲೈಟ್‌ ಮೋಡ್‌ ಫೀಚರ್ಸ್‌ ಸೇರಿಸಿದ ಗೂಗಲ್‌ ಮೀಟ್‌!

|

ಗೂಗಲ್ ಮೀಟ್ ಜನಪ್ರಿಯ ವೀಡಿಯೋ ಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಕೊರೊನಾ ನಂತರ ಬದಲಾದ ಕಾಲಘಟ್ಟದಲ್ಲಿ ಗೂಗಲ್‌ ಮೀಟ್‌ ಎಲ್ಲರಿಗೂ ಅಗತ್ಯ ಎನಿಸಿದೆ. ಮನೆಯಿಂದಲೇ ಕಾರ್ಯನಿರ್ವಹಿಸುವವರಿಗೆ, ವರ್ಚುವಲ್‌ ಮೀಟಿಂಗ್‌ ಆಯೋಜಿಸುವುದಕ್ಕೆ ಗೂಗಲ್‌ ಮೀಟ್‌ ಉಪಯುಕ್ತವಾಗಿದೆ. ಇನ್ನು ಗೂಗಲ್‌ ಮೀಟ್‌ ಕೂಡ ತನ್ನ ಬಳಕೆದಾರರಿಗೆ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದೀಗ ತನ್ನ ವೆಬ್-ಆವೃತ್ತಿಗೂ ಲೊ-ಲೈಟ್ ಮೋಡ್ ಫೀಚರ್ಸ್‌ ಅನ್ನು ಸೇರಿಸಿದೆ.

ಗೂಗಲ್‌ ಮೀಟ್‌

ಹೌದು, ಗೂಗಲ್‌ ಮೀಟ್‌ ಇದೀಗ ತನ್ನ ವೆಬ್‌ ಆವೃತ್ತಿಯಲ್ಲಿ ಲೊ-ಲೈಟ್ ಮೋಡ್ ಅನ್ನು ಪರಿಚಯಿಸಿದೆ. ಇನ್ನು ಈ ಲೊ-ಲೈಟ್‌ ಮೋಡ್‌ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಅನ್ನು ಬಳಸಲಿದೆ. ನೀವು ಗಾಡವಾದ ಕತ್ತಲೆಯ ಸ್ಥಳದಲ್ಲಿದ್ದರೆ ನಿಮ್ಮ ವೀಡಿಯೋವನ್ನು ಆಟೋ ಮ್ಯಾಟಿಕ್‌ ಆಗಿ ಸೆಟ್‌ ಮಾಡಬಹುದು. ಈ ಫೀಚರ್ಸ್‌ ಈಗಾಗಲೇ ಗೂಗಲ್ ಮೀಟ್‌ನ ಸ್ಮಾರ್ಟ್‌ಫೋನ್ ಆವೃತ್ತಿಯಲ್ಲಿ ಪರಿಚಯಿಸಲಾಗಿದೆ. ಹಾಗಾದ್ರೆ ಲೊ-ಲೈಟ್‌ ಮೋಡ್‌ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಗೂಗಲ್‌ ಮೀಟ್‌ ವೆಬ್‌ ಆವೃತ್ತಿಯಲ್ಲಿ ಪರಿಚಯಿಸಿರುವ ಲೊ-ಲೈಟ್‌ ಮೋಡ್‌ ಗಾಡವಾದ ಕತ್ತಲೆಯ ಸ್ಥಳದಲ್ಲಿದ್ದರೂ ಆಟೋಮ್ಯಾಟಿಕ್‌ ಆಗಿ ಸೆಟ್‌ಮಾಡಲಿದೆ. ನಿಮ್ಮ ಹಿಂದೆ ಡಾರ್ಕನೆಸ್‌ ಇರುವುದು, ಇಲ್ಲವೇ ಹೆಚ್ಚಿನ ಬೆಳಕಿರುವುದು ಕಂಡು ಬಂದಾಗ ತನಗೆ ಬೇಕಾದಂತೆ ಲೈಟ್‌ ಮೋಡ್‌ ಅನ್ನು ಸೆಟ್‌ ಮಾಡಿಕೊಳ್ಳಲಿದೆ. ಬಿಸಿಲಿನ ಸಂದರ್ಭದಲ್ಲಿ ಅನೇಕ ಕ್ಯಾಮೆರಾಗಳಿಗೆ ಸವಾಲಾಗಿರಲಿದೆ. ಅದರೆ ಗೂಗಲ್ ಮೀಟ್ ವೆಬ್‌ನಲ್ಲಿ ಈಗ ಬಳಕೆದಾರರು ಕಡಿಮೆ ಬೆಳಕಿದ್ದಾಗ ಆಟೋಮ್ಯಾಟಿಕ್‌ ಆಗಿ ಪತ್ತೆ ಮಾಡುತ್ತದೆ. ಜೊತೆಗೆ ಅವರ ಗೋಚರತೆಯನ್ನು ಸುಧಾರಿಸಲು ಬ್ರೈಟ್‌ನೆಸ್‌ ಅನ್ನು ಹೆಚ್ಚಿಸುತ್ತದೆ ಎಂದು ಕಂಪನಿ ಹೇಳಿದೆ.

ಫೀಚರ್ಸ್‌

ಇನ್ನು ಈ ಫೀಚರ್ಸ್‌ ಅನ್ನು ನೀವು ಕಡಿಮೆ ಬೆಳಕು ಇರುವ ಸಂದರ್ಭದಲ್ಲಿ ಕಾರ್ಯನಿರ್ವಹಿಸಬಹುದಾಗಿದೆ. ನಿಮ್ಮ ಬೆಳಕಿನ ಪರಿಸ್ಥಿತಿಗಳು ಬದಲಾದಾಗ, ಗೂಗಲ್ ಮೀಟ್ ತನಗೆ ಬೇಕಾದಂತೆ ಹೊಂದಿಕೊಳ್ಳಲಿದೆ. ಇದಕ್ಕಾಗಿ ಎಐ ಕ್ಯಾಮೆರಾಗಳು ಸಹಾಯಮಾಡಲಿದೆ. ಇನ್ನು ಈ ಹೊಸ ಫೀಚರ್ ಅನ್ನು ಗೂಗಲ್‌ ವರ್ಕ ಸ್ಪೇಸ್‌, G ಸೂಟ್‌ ಬೇಸಿಕ್‌ ಮತ್ತು G ಸೂಟ್‌ ಬ್ಯುಸಿನೆಸ್‌ ಬಳಕೆದಾರರಿಗೆ ಪರಿಚಯಿಸಲಾಗುತ್ತಿದೆ. ನೀವು ಹೊಸ ಅಪ್ಡೇಟ್‌ ಅನ್ನು ಸ್ವೀಕರಿಸಿದ ನಂತರ, ಈ ಫೀಚರ್ಸ್‌ ಸಕ್ರಿಯಗೊಳ್ಳಲಿದೆ. ಇದರಿಂದ ನೀವು ಕಡಿಮೆ ಬೆಳಕಿನ ಸಮಯದಲ್ಲಿಯೂ ನಿಮ್ಮ ಮೀಟಿಂಗ್‌ನಲ್ಲಿ ಉತ್ತಮ ಅನುಭವ ಪಡೆಯಲು ಸಾಧ್ಯವಾಗಲಿದೆ.

ಗೂಗಲ್ ಮೀಟ್ ವೆಬ್‌ ಆವೃತ್ತಿಯಲ್ಲಿ ಲೊ-ಲೈಟ್‌ ಮೋಡ್ ನಿಷ್ಕ್ರೀಯಗೊಳಿಸುವುದು ಹೇಗೆ ?

ಗೂಗಲ್ ಮೀಟ್ ವೆಬ್‌ ಆವೃತ್ತಿಯಲ್ಲಿ ಲೊ-ಲೈಟ್‌ ಮೋಡ್ ನಿಷ್ಕ್ರೀಯಗೊಳಿಸುವುದು ಹೇಗೆ ?

ಗೂಗಲ್‌ ಮೀಟ್‌ನ ಈ ಫೀಚರ್ಸ್‌ ಅನ್ನು ನೀವು ಆಕ್ಟಿವ್‌ ಮಾಡಿದ್ರೆ, ನಿಮ್ಮ ಡಿವೈಸ್‌ ಸ್ಲೋ ಆಗಲಿದೆ. ನಿಮ್ಮ ಕಂಪ್ಯೂಟರ್‌ನಲ್ಲಿ ಇತರ ಅಪ್ಲಿಕೇಶನ್‌ಗಳು ವೇಗವಾಗಿ ರನ್ ಆಗಲು ಈ ಫೀಚರ್ಸ್‌ ಅನ್ನು ಆಫ್ ಮಾಡಬಹುದಾಗಿದೆ. ಇನ್ನು ಗೂಗಲ್‌ ಮೀಟ್‌ನಲ್ಲಿ ಲೊ ಲೈಟ್‌ ಮೋಡ್‌ ಸೆಟ್ಟಿಂಗ್‌ಗಳಲ್ಲಿ ಲೊ-ಲೈಟ್‌ ಮೋಡ್ ಅನ್ನು ನಿಷ್ಕ್ರಿಯಗೊಳಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಹಂತ:1 ನಿಮ್ಮ ಲ್ಯಾಪ್‌ಟಾಪ್‌ನಲ್ಲಿ Meet.google.com ತೆರೆಯಿರಿ.

ಹಂತ:2 ವೀಡಿಯೊ ಕಾಲ್‌ಗೆ ಜಾಯಿನ್‌ ಆಗಿರಿ.

ಹಂತ:3 ನೀವು ಜಾಯಿನ್‌ ಆಗುವ ಮೊದಲು ಅಥವಾ ಕರೆ ಸಮಯದಲ್ಲಿ, ನೀವು "ಮೋರ್‌" ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ಸೆಟ್ಟಿಂಗ್‌ಗಳ ವಿಭಾಗಕ್ಕೆ ಹೋಗಿ.

ಹಂತ:4 ಎಡಭಾಗದಲ್ಲಿ, ನೀವು "ವೀಡಿಯೋ" ನೋಡುತ್ತೀರಿ, ಅದರ ಮೇಲೆ ಕ್ಲಿಕ್ ಮಾಡಿ. ನಂತರ ನೀವು ವೀಡಿಯೊ ಲೈಟಿಂಗ್ ಅನ್ನು ಆಫ್ ಮಾಡಬಹುದು.

Most Read Articles
Best Mobiles in India

English summary
Google Meet update: The new low-light feature is being rolled out to Google Workspace, G Suite Basic, and G Suite Business users.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X