ಬಳಕೆದಾರರಿಗೆ ಟ್ಯಾಪ್-ಟು-ಪೇ ಫೀಚರ್ಸ್‌ ಪರಿಚಯಿಸಿದ ಗೂಗಲ್ ಪೇ!

|

ಅತ್ಯಂತ ಜನಪ್ರಿಯ ಯುಪಿಐ ಪಾವತಿ ಸೇವೆಗಳಲ್ಲಿ ಒಂದಾದ ಗೂಗಲ್ ಪೇ ತನ್ನ ಬಳಕೆದಾರರಿಗೆ ಮತ್ತೊಂದು ಹೊಸ ಫೀಚರ್ಸ್‌ ಒಂದನ್ನು ಪರಿಚಯಿಸಿದೆ. ಸದ್ಯ ಗೂಗಲ್‌ಪೇ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಟೋಕನೈಸೇಶನ್ ಸೇವೆಯನ್ನ ಪರಿಚಯಿಸಿದೆ. ಈ ಮೂಲಕ ಟ್ಯಾಪ್‌ ಟು ಪೇ ಫೀಚರ್ಸ್‌ ಅನ್ನು ಪರಿಚಯಿಸಿದೆ. ಟೋಕನೈಸೇಶನ್ ಮೂಲಕ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುವ ಬಳಕೆದಾರರಿಗೆ NFC-ಶಕ್ತಗೊಂಡ ಪಾಯಿಂಟ್-ಆಫ್-ಸೇಲ್ ಟರ್ಮಿನಲ್‌ಗಳಲ್ಲಿ ಟ್ಯಾಪ್‌ ಟು ಪೇ ಮೂಲಕವೇ ಹಣವನ್ನು ವರ್ಗಾಯಿಸಬಹುದಾಗಿದೆ. ಪ್ರಸ್ತುತ ಈ ಫಿಚರ್ಸ್‌ ವೀಸಾ ಪಾವತಿ ನೆಟ್‌ವರ್ಕ್‌ನಲ್ಲಿ ಆಕ್ಸಿಸ್ ಮತ್ತು ಎಸ್‌ಬಿಐ ಕಾರ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ.

ಗೂಗಲ್ ಪೇ

ಹೌದು, ಗೂಗಲ್ ಪೇ ಹೊಂದಿರುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಬಳಕೆದಾರರು ತಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ತಮ್ಮ ಕಾರ್ಡ್‌ನ ವಿವರಗಳನ್ನ ಹಂಚಿಕೊಳ್ಳದೇ ಪೇ ಮಾಡಬಹುದಾಗಿದೆ. ಇದಕ್ಕಾಗಿ ಟ್ಯಾಪ್‌ ಟು ಪೇ ಫಿಚರ್ಸ್‌ ಅನ್ನು ಪರಿಚಯಿಸಲಾಗಿದೆ. ಇದರ ಮೂಲಕ ತಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳನ್ನು ಹಂಚಿಕೊಳ್ಳದೆ ತಮ್ಮ ಫೋನ್‌ಗೆ ಲಗತ್ತಿಸಲಾದ ಸುರಕ್ಷಿತ ಡಿಜಿಟಲ್ ಟೋಕನ್ ಮೂಲಕ ಪೇಮೆಂಟ್‌ ಅನ್ನು ಪೇ ಮಾಡಬಹುದು. ಈ ಫೀಚರ್ಸ್‌ ಮೂಲಕ ಆನ್‌ಲೈನ್ ವ್ಯಾಪಾರಿಗಳೊಂದಿಗೆ ಒನ್-ಟೈಮ್ ಪಾಸ್‌ವರ್ಡ್ (OTP) ಮೂಲಕ ಕಾರ್ಯನಿರ್ವಹಿಸುತ್ತದೆ. ಇನ್ನುಳಿದಂತೆ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ಪೇ

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ನಲ್ಲಿ ಗೂಗಲ್‌ಪೇ ಮೂಲಕ ಟ್ಯಾಪ್ ಮತ್ತು ಪೇ ಫೀಚರ್ಸ್‌ ಅನ್ನು ಸಕ್ರಿಯಗೊಳಿಸಲು, ಬಳಕೆದಾರರು ತಮ್ಮ ಕಾರ್ಡ್ ವಿವರಗಳನ್ನು ನಮೂದಿಸುವ ಮೂಲಕ ಒಂದು ಬಾರಿ ಸೆಟ್‌ಮಾಡಬೇಕಿದೆ. ಅಲ್ಲದೆ ತಮ್ಮ ಕಾರ್ಡ್ ಅನ್ನು ಗೂಗಲ್‌ಗೆ ಸೇರಿಸಲು ಬ್ಯಾಂಕಿನಿಂದ ನಿಮ್ಮ ಫೋನ್‌ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಬೇಕಿದೆ. ಒಟಿಪಿ ನೋಂದಣಿಯ ನಂತರ, NFC-ಶಕ್ತಗೊಂಡ ಟರ್ಮಿನಲ್‌ಗಳಲ್ಲಿ ಪಾವತಿಗಳನ್ನು ಮಾಡಲು ಈ ಫೀಚರ್ಸ್‌ಅನ್ನು ಬಳಸಬಹುದು.

ಟೋಕನೈಸೇಶನ್

ಟೋಕನೈಸೇಶನ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಸಂಖ್ಯೆಗಳಂತಹ ಸೂಕ್ಷ್ಮ ಡೇಟಾವನ್ನು ಟೋಕನ್‌ಗಳೊಂದಿಗೆ ಬದಲಾಯಿಸಲು ಸಹಾಯ ಮಾಡುತ್ತದೆ. ಅಲ್ಲದೆ ಬಳಕೆದಾರರಿಗೆ ಯಾವುದೇ ಮಾದರಿಯ ವಂಚನೆಯ ಸಾಧ್ಯತೆಗಳು ಉಂಟಾಗದಂತೆ ಕಾರ್ಯನಿರ್ವಹಿಸಲಿದೆ. ಟೋಕನೈಸೇಶನ್ ಫೀಚರ್ಸ್‌ ಪ್ರಸ್ತುತ ಸಮಯದಲ್ಲಿ ಸುರಕ್ಷಿತವಾಗಿ ವಹಿವಾಟು ನಡೆಸಲು ಬಳಕೆದಾರರಿಗೆ ಅವಕಾಶವನ್ನು ನೀಡಲಿದೆ ಎಂದು ಗೂಗಲ್‌ಪೇ ಹೇಳಿಕೊಂಡಿದೆ. ಅಲ್ಲದೆ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ವ್ಯಾಪಾರಿ ವಹಿವಾಟುಗಳನ್ನು ಇದರ ಮೂಲಕ ಇನ್ನಷ್ಟು ವಿಸ್ತರಿಸಬಹುದಾಗಿದೆ ಎಂದು ಹೇಳಿದೆ.

ಗೂಗಲ್‌ ಪೇ

ಸದ್ಯ ಗೂಗಲ್‌ ಪೇ ಟ್ಯಾಪ್‌ ಟುಪೇ ಫೀಚರ್ಸ್‌ ವೀಸಾ ಪಾವತಿ ನೆಟ್‌ವರ್ಕ್ ಹೊಂದಿರುವ ಆಕ್ಸಿಸ್ ಮತ್ತು ಎಸ್‌ಬಿಐ ಕಾರ್ಡ್ ಹೊಂದಿರುವವರಿಗೆ ಮಾತ್ರ ಲಭ್ಯವಾಗಲಿದೆ. ಜೊತೆಗೆ ಭಾರತದಲ್ಲಿ ಟೋಕನೈಸೇಶನ್‌ನೊಂದಿಗೆ ಕಾರ್ಡ್ ಆಧಾರಿತ ಪಾವತಿಗಳನ್ನು ಇನ್ನಷ್ಟು ವಿಸ್ತರಿಸಲು ಕೋಟಕ್‌ ಸೇರಿದಂತೆ ಇತರೆ ಬ್ಯಾಂಕ್‌ಗಳ ಜೊತೆಗೆ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ. ಹಾಗೇ ನೋಡಿದರೆ ಗೂಗಲ್ ಪೇ ತನ್ನ ಗೂಗಲ್ ಫಾರ್ ಇಂಡಿಯಾ 2019 ರಲ್ಲಿ ಟೋಕನೈಸೇಶನ್ ಫೀಚರ್ಸ್‌ ಅನ್ನು ಪರಿಚಯಿಸಿದೆ. ಪ್ರತಿ ಫೋನ್‌ಗೆ ವಿಶಿಷ್ಟವಾದ ಡಿಜಿಟಲ್ ಟೋಕನ್ ಬಳಸಿ ವಹಿವಾಟು ನಡೆಸಲು ಇದು ಸುರಕ್ಷಿತ ಮಾರ್ಗವಾಗಿದೆ.

ಗೂಗಲ್‌ ಪೇ

ಇನ್ನು ಗೂಗಲ್‌ ಪೇ ಪರಿಚಯಿಸಿರುವ ಟ್ಯಾಪ್‌ ಟು ಸೇವೆ ಮೂಲಕ ಗ್ರಾಹಕರು ಯಾವುದೇ ಫಿನ್‌ ಸಂಖ್ಯೆಯನ್ನು ನಮೂದಿಸದೆ ಕೇವಲ ನಿಮ್ಮ ಡೆಬಿಟ್‌ ಕಾರ್ಡ್‌ ಅನ್ನು ಗೂಗಲ್‌ ಪೇ ಮೇಲೆ ಟ್ಯಾಪ್‌ ಮಾಡಿ ಹಣವನ್ನು ಪಾವತಿಸಬಹುದಾಗಿದೆ. ಇದು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಾಗಲಿದೆ. ಇದರಿಂದ ಆಪ್‌ಲೈನ್‌ ಅಥವಾ ಆನ್‌ಲೈನ್‌ ವ್ಯಾಪಾರ ಮಾಡುವ ಸಂದರ್ಭದಲ್ಲಿ ಟರ್ಮಿನಲ್‌ಗಳಲ್ಲಿ POS ಪೇ ಸೇವೆಗಳಲ್ಲಿ ಇದನ್ನು ಬಳಸಬಹುದಾಗಿದ್ದು, ಗ್ರಾಹಕರಿಗೆ ಪೇಮೆಂಟ್‌ ಪೇ ಮಾಡುವುದು ಇದೀಗ ಇನ್ನಷ್ಟು ಸುಲಭವಾಗಿದೆ.

Most Read Articles
Best Mobiles in India

Read more about:
English summary
Google Pay announced the rollout of tokenisation across its platform, enabling users with debit and credit cards to transact at NFC-enabled point-of-sale (POS) terminals and online merchants through its tap-to-pay feature. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X