Just In
Don't Miss
- Movies
ಹಿಟ್ಲರ್ ಕಲ್ಯಾಣ: ತನ್ನ ತಾಯಿಗೆ ಪಾಠ ಕಲಿಸುತ್ತಾಳ ಲೀಲಾ?
- News
ಪಕ್ಷ ಬಿಡೋರು ಬಿಡಲಿ, ಹೊಸದಾಗಿ ಪಕ್ಷ ಕಟ್ತೀವಿ: ಉದ್ಧವ್ ಠಾಕ್ರೆ
- Education
BIMS Belagavi Recruitment 2022 : 10 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
SL-w vs IND-w 2ನೇ ಟಿ20: ಸರಣಿ ಗೆಲುವಿನ ಮೇಲೆ ಕಣ್ಣಿಟ್ಟ ಕೌರ್ ಪಡೆ; ಪಂದ್ಯ ಯಾವಾಗ, ಎಲ್ಲಿ?
- Finance
ಡೇಟಿಂಗ್ ಆಪ್ ಪರಿಚಯ: ಯುವತಿಗೆ ರೂಪಾಯಿ 5.7 ಕೋಟಿ ನೀಡಿದ ಬ್ಯಾಂಕ್ ಮ್ಯಾನೇಜರ್ ಬಂಧನ
- Automobiles
ಹೇಗಿವೆ ಗೊತ್ತಾ ರಾಯಲ್ ಎನ್ಫೀಲ್ಡ್ ಕಸ್ಟಮೈಸ್ಡ್ ಬೈಕ್ಗಳು: ಅಭಿಮಾನಿಗಳಿಗಾಗಿ 4 ಮಾದರಿಗಳ ಪ್ರದರ್ಶನ
- Lifestyle
ಪುರುಷರಲ್ಲಿ ಲೈಂಗಿಕ ಶಕ್ತಿಯ ಸಮಸ್ಯೆಗೆ ಈ ಹಣ್ಣುಗಳೇ ಪವರ್ಫುಲ್ ಮದ್ದು
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಗೂಗಲ್ ಪ್ಲೇನಲ್ಲಿ ಹೊಸ ಪ್ರಿಪೇಯ್ಡ್ ಚಂದಾದಾರಿಕೆ ಪರಿಚಯಿಸಿದ ಗೂಗಲ್!
ಗೂಗಲ್ ತನ್ನ ಪ್ಲೇ ಸ್ಟೋರ್ನಲ್ಲಿ ಅಪ್ಲಿಕೇಶನ್ ಡೆವಲಪರ್ಗಳಿಗಾಗಿ ಹೊಸ ಪ್ರಿಪೇಯ್ಡ್ ಚಂದಾದಾರಿಕೆ ಪ್ಲಾನ್ಗಳನ್ನು ಪರಿಚಯಿಸಲು ಮುಂದಾಗಿದೆ. ಅಪ್ಲಿಕೇಶನ್ ಡೆವಲಪರ್ಗಳ ಹಣಗಳಿಕೆ ಸಾಮರ್ಥ್ಯವನ್ನು ಸುದಾರಿಸುವುದಕ್ಕಾಗಿ ಈ ಪ್ಲಾನ್ ರೂಪಿಸಿದೆ ಎನ್ನಲಾಗಿದೆ. ಇದಕ್ಕಾಗಿ ಹೊಸ ಪ್ರಿಪೇಯ್ಡ್ ಚಂದಾದಾರಿಕೆ ಪ್ಲಾನ್ಗಳು ಮತ್ತು ಕನ್ಸೋಲ್ UI ಅನ್ನು ಸ್ವೀಕರಿಸುತ್ತಿದೆ. ಸದ್ಯ ಈ ಹೊಸ ಪ್ಲಾನ್ ಬಗ್ಗೆ ಗೂಗಲ್ I/O ಡೆವಲಪರ್ ಕಾನ್ಫರೆನ್ಸ್ ಸಂದರ್ಭದಲ್ಲಿ ಘೋಷಣೆ ಮಾಡಲಾಗಿದೆ.

ಹೌದು, ಗೂಗಲ್ ತನ್ನ ಪ್ಲೇ ಸ್ಟೋರ್ನಲ್ಲಿ ಹೊಸ ಚಂದಾದಾರಿಕೆಗಳನ್ನು ಪರಿಚಯಸಿದೆ. ಇದರಿಂದ ಡೆವಲಪರ್ಗಳಿಗೆ ಹೆಚ್ಚಿನ ಅವಕಾಶ ನೀಡುವ ಗುರಿಯನ್ನು ಹೊಂದಿವೆ. ಇದರಲ್ಲಿ ಮಲ್ಟಿ ಬೇಸ್ ಪ್ಲಾನ್ಗಳು ಮತ್ತು ಆಫರ್ಗಳನ್ನು ಸೆಟ್ ಮಾಡುವ ಆಯ್ಕೆಯನ್ನು ಕೂಡ ನೀಡಲಾಗಿದೆ. ಈ ಹೊಸ ಬದಲಾವಣೆಗಳಲ್ಲಿ ಹೊಸ SKU ಗಳನ್ನು ರಚಿಸುವ ಮತ್ತು ನಿರ್ವಹಿಸುವ ಅಗತ್ಯವನ್ನು ಕಡಿಮೆ ಮಾಡುವ ಅವಕಾಶವಿದೆ. ಇದರ ಮೂಲಕ ಡೆವಲಪರ್ಗಳಿಗೆ ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇನ್ನುಳಿದಂತೆ ಈ ಹೊಸ ಬದಲಾವಣೆಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್ ತನ್ನ ವಾರ್ಷಿಕ ಸಮ್ಮೇಳನದಲ್ಲಿ ಗೂಗಲ್ ಪ್ಲೇ ಸ್ಟೋರ್ನಲ್ಲಿ ಹೊಸ ಚಂದಾದಾರಿಕೆಗಳನ್ನು ಪರಚಯಿಸುವುದಾಗಿ ಹೇಳಿದೆ. ಇದರಿಂದ ಡೆವಲಪರ್ಗಳಿಗೆ ಹಣಗಳಿಕೆಯ ಸಾಮರ್ಥ್ಯ ಹೆಚ್ಚಾಗಲಿದೆ ಎಂದು ಹೇಳಿದೆ. ಇದಕ್ಕಾಗಿ ಬೇಸ್ ಪ್ಲಾನ್ಗಳು ಮತ್ತು ಆಫರ್ಗಳಾಗಿ ಬೇರ್ಪಡಿಸುವ ಮೂಲಕ ಡೆವಲಪರ್ಗಳಿಗಾಗಿ ಪ್ಲೇ ಕನ್ಸೋಲ್ನಲ್ಲಿ ಬದಲಾವಣೆಗಳನ್ನು ಮಾಡಿದೆ. ಇದು ಡೆವಲಪರ್ಗಳಿಗೆ ತಮ್ಮ ಬಳಕೆದಾರರಿಗೆ 1 ತಿಂಗಳ ಪ್ರಿಪೇಯ್ಡ್ ಪ್ಲಾನ್ ಮಾರಾಟ ಮಾಡುವ ಹೊಸ ಆಯ್ಕೆಯನ್ನು ನೀಡಿದೆ.

ಇನ್ನು ಆಟೋ-ಅಪ್ಡೇಟ್ ಪ್ಲಾನ್ ಅಥವಾ ವಾರ್ಷಿಕ ಆಟೋ-ಅಪ್ಡೇಟ್ ಪ್ಲಾನ್ ಅನ್ನು ನೀಡಿದೆ. ಈ ಪ್ರಿಪೇಯ್ಡ್ ಯೋಜನೆಗಳನ್ನು ಅಪ್ಲಿಕೇಶನ್ನಲ್ಲಿನ ಖರೀದಿಗಳ ಮೂಲಕ ಅಥವಾ ಗೂಗಲ್ ಪ್ಲೇ ನಿಂದ ಖರೀದಿಸಬಹುದು. ಸದ್ಯ ಈ ಯೋಜನೆಗಳು ಭಾರತ ಮತ್ತು ಆಗ್ನೇಯ ಏಷ್ಯಾದಂತಹ ಪ್ರದೇಶಗಳಲ್ಲಿ ಡೆವಲಪರ್ಗಳಿಗೆ ಚಂದಾದಾರಿಕೆ ಆದಾಯವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಅಲ್ಲದೆ ಆಟೋ-ಅಪ್ಡೇಟ್ ಪ್ಲಾನ್ಗಳನ್ನು ಖರೀದಿಸಲು ಹಿಂಜರಿಯುವ ಬಳಕೆದಾರರನ್ನು ಆಕರ್ಷಿಸುವುದಕ್ಕೆ ಸಾಧ್ಯವಾಗಲಿದೆ ಎಂಬ ಮಾತು ಕೂಡ ಕೇಳಿ ಬಂದಿದೆ.

ಗೂಗಲ್ ಪ್ಲೇ ಸ್ಟೋರ್ನಲ್ಲಿ ಡೆವಲಪರ್ಗಳು ಈ ವಿಶೇಷ ಆಫರ್ನೊಂದಿಗೆ ಬೇಸ್ ಪ್ಲಾನ್ಗಳನ್ನು ಬೆಂಬಲಿಸುವ ನಮ್ಯತೆಯನ್ನು ಸಹ ಹೊಂದಬಹುದು. ಅಂದರೆ ನಿರ್ದಿಷ್ಟ ಪ್ರದೇಶಗಳಲ್ಲಿ ವಿಭಿನ್ನ ಬೆಲೆಗಳಲ್ಲಿ ಆಫರ್ಗಳನ್ನು ಒದಗಿಸುವುದಕ್ಕೆ ಕಸ್ಟಮೈಸ್ ಮಾಡಬಹುದು. ಅಲ್ಲದೆ ಅರ್ಹ ಬಳಕೆದಾರರಿಗೆ ವಿಶೇಷ ಬೆಲೆಗಳನ್ನು ನೀಡಲು ಸಹ ಅವುಗಳನ್ನು ಬಳಸಬಹುದು. ಇನ್ನು ಸೆಕೆಂಡ್-ಚಾನ್ಸ್ ಫ್ರಿ ಟ್ರಯಲ್ ಅಥವಾ ವಿನ್-ಬ್ಯಾಕ್ ಆಫರ್ಗಳಂತಹ ಕಸ್ಟಮ್ ಆಫರ್ಗಳನ್ನು ನೀಡುವ ಮೂಲಕ ಚಂದಾದಾರರನ್ನು ಮರಳಿ ಪಡೆಯುವುದಕ್ಕೆ ಕೂಡ ಅವಕಾಶ ನೀಡಲಾಗಿದೆ.

ಇದಲ್ಲದೆ ಗೂಗಲ್ ತನ್ನ ವಾರ್ಷಿಕ ಸಮ್ಮೇಳನದಲ್ಲಿ ಗೂಗಲ್ ವ್ಯಾಲೇಟ್ ಬಗ್ಗೆ ಕೂಡ ಘೋಷಣೆ ಮಾಡಿದೆ. ಗೂಗಲ್ ವ್ಯಾಲೆಟ್ ಒಂದು ಡಿಜಿಟಲ್ ಲಾಕರ್ ಆಗಿದ್ದು, ಇದರಲ್ಲಿ ಪ್ರಮುಖ ದಾಖಲೆಗಳನ್ನು ಸ್ಟೋರ್ ಮಾಡಬಹುದು. ಅಂದರೆ ಬಳಕೆದಾರರು ತಮ್ಮ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳ ಮೂಲಕ ಹೋಟೆಲ್ ಕೀಗಳು ಮತ್ತು ಕಚೇರಿ ಬ್ಯಾಡ್ಜ್ಗಳನ್ನು ಸೇವ್ ಮಾಡುವುದಕ್ಕೆ ಮತ್ತು ಪ್ರವೇಶಿಸುವುದಕ್ಕೆ ಅನುಮತಿಸಲಿದೆ. ಇದಲ್ಲದೆ ಗೂಗಲ್ ವ್ಯಾಲೇಟ್ನಲ್ಲಿ ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್ ಮತ್ತು ID ಗಳನ್ನು ಸ್ಟೋರೇಜ್ ಮಾಡುವುದಕ್ಕೆ ಗೂಗಲ್ ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದೆ ಎನ್ನಲಾಗಿದೆ. ಹಾಗೇ ನೋಡಿದರೆ ಭಾರತದಲ್ಲಿ, ಈಗಾಗಲೇ ಡಿಜಿಲಾಕರ್ ಮತ್ತು ಎಂಪರಿವಾಹನ್ನಂತಹ ಅಪ್ಲಿಕೇಶನ್ಗಳಲ್ಲಿ ತಮ್ಮ ದಾಖಲೆಗಳನ್ನು ಸಂಗ್ರಹಿಸಲು ಸರ್ಕಾರವು ಬಳಕೆದಾರರಿಗೆ ಅವಕಾಶ ನೀಡಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999