ಈ ಆಪ್ಸ್‌ ನಿಮ್ಮ ಫೋನಿನಲ್ಲಿ ಇದ್ದರೇ, ಕೂಡಲೇ ಡಿಲೀಟ್ ಮಾಡಿರಿ!

|

ಜನಪ್ರಿಯ ಗೂಗಲ್ ಸಂಸ್ಥೆಯು ತನ್ನ ಪ್ಲೇ ಸ್ಟೋರ್‌ನಿಂದ ಇದೀಗ ಮತ್ತೆ 7 ದುರುದ್ದೇಶಪೂರಿತ ಆಂಡ್ರಾಯ್ಡ್‌ ಅಪ್ಲಿಕೇಶನ್‌ಗಳನ್ನು ಕಿಕ್ ಔಟ್ ಮಾಡಿದೆ. ಗೂಗಲ್ ತೆಗೆದು ಹಾಕಿರುವ ಏಳು ಆಪ್‌ಗಳು ಟ್ರೋಜನ್ ಜೋಕರ್‌ನಂತಹ ಮಾಲ್‌ವೇರ್‌ನಿಂದ ಪ್ರಭಾವಿತವಾಗಿವೆ ಎಂದು ಹೇಳಲಾಗಿದೆ. ಹೀಗಾಗಿ ಬಳಕೆದಾರರು ಈ ಆಪ್‌ಗಳನ್ನು ಫೋನಿನಲ್ಲಿ ಹೊಂದಿದ್ದರೇ, ಕೂಡಲೇ ತೆಗೆದು ಹಾಕುವುದು/ಡಿಲೀಟ್ ಮಾಡುವುದು ಅಗತ್ಯ.

ದುರುದ್ದೇಶಪೂರಿತ

ಹೌದು, ಗೂಗಲ್ ಕಿಕ್ಔಟ್ ಮಾಡಿರುವ 7 ಆಪ್‌ಗಳಲ್ಲಿ ಜೋಕರ್ ಹೆಸರಿನ ಮಾಲ್ವೇರ್ ಅನ್ನು ಕ್ಯಾಸ್ಪರ್ಸ್ಕಿಯ ಭದ್ರತಾ ವಿಶ್ಲೇಷಕ ಟಟ್ಯಾನಾ ಶಿಶ್ಕೋವಾ ಅವರು ತಮ್ಮ ಸಂಸ್ಥೆಯಲ್ಲಿ ಪತ್ತೆ ಮಾಡಿದ್ದಾರೆ. ಈ ದುರುದ್ದೇಶಪೂರಿತ ಆಂಡ್ರಾಯ್ಡ್‌ ಅಪ್ಲಿಕೇಶನ್‌ಗಳು ಬಳಕೆದಾರರ ಫೋನ್ ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳನ್ನು ಹೊಂದಿವೆ. ಅಲ್ಲದೇ ಬಳಕೆದಾರರಿಗೆ ತಿಳಿಯದೆ ದುಬಾರಿ ಚಂದಾದಾರಿಕೆ ಸೇವೆಗಳಿಗೆ ಸೈನ್ ಅಪ್ ಮಾಡಬಹುದು. ಅದು ತಿಳಿಯುವ ಹೊತ್ತಿಗೆ ದೊಡ್ಡ ಮೊತ್ತದ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ. ಹೀಗಾಗಿ ಇಂತಹ ಆಪ್‌ಗಳು ಸುರಕ್ಷತೆಗೆ ಅಪಾಯಕಾರಿ.

ಗೂಗಲ್ ಕಿಕ್ ಔಟ್ ಮಾಡಿರುವ 7 ಆಪ್‌ಗಳು ಇಲ್ಲಿವೆ ನೋಡಿ:

ಗೂಗಲ್ ಕಿಕ್ ಔಟ್ ಮಾಡಿರುವ 7 ಆಪ್‌ಗಳು ಇಲ್ಲಿವೆ ನೋಡಿ:

1. Now QRcode Scan (Over 10,000 installs)

2. EmojiOne Keyboard (Over 50,000 installs)

3. Battery Charging Animations Battery Wallpaper (Over 1,000 installs)

Keyboard

4. Dazzling Keyboard (Over 10 installs)

5. Volume Booster Louder Sound Equalizer (Over 100 installs)

6. Super Hero-Effect (Over 5,000 installs)

7. Classic Emoji Keyboard (Over 5,000 installs)

ಕೂಡಲೇ ಡಿಲೀಟ್ ಮಾಡಿ

ಕೂಡಲೇ ಡಿಲೀಟ್ ಮಾಡಿ

ಗೂಗಲ್ ತನ್ನ ಪ್ಲೇ ಸ್ಟೋರ್‌ ನಿಂದ ತೆಗೆದು ಹಾಕಿರುವ ಈ ಮೇಲೆ ತಿಳಿಸಿರುವ 7 ಅಪಾಯ ಕಾರಿ ಆಪ್‌ಗಳು ನಿಮ್ಮ ಫೋನಿನಲ್ಲಿ ಇದ್ದರೇ, ಕೂಡಲೇ ಆ ಆಪ್‌ ಗಳನ್ನು ಡಿಲೀಟ್ / ಅನ್‌ಇನ್‌ಸ್ಟಾಲ್ ಮಾಡಿಬಿಡಿ. ಏಕೆಂದರೇ ಇವು ದುರುದ್ದೇಶ ಪೂರಿತ ಆಪ್‌ ಆಗಿವೆ. ಈ ಆಪ್‌ಗಳಿಂದ ಸುರಕ್ಷತೆಗೆ ತೊಂದರೇ ಆಗುವ ಸಾಧ್ಯತೆಗಳಿರುತ್ತವೆ.

ಹೊಸದಾಗಿ ಆಪ್‌ ಡೌನ್‌ಲೋಡ್‌ ಮಾಡುವ ಮುನ್ನ ಎಚ್ಚರ ವಹಿಸುವುದು ಅಗತ್ಯ

ಹೊಸದಾಗಿ ಆಪ್‌ ಡೌನ್‌ಲೋಡ್‌ ಮಾಡುವ ಮುನ್ನ ಎಚ್ಚರ ವಹಿಸುವುದು ಅಗತ್ಯ

ಪ್ರಸ್ತುತ ಪ್ರತಿಯೊಂದು ಕೆಲಸಕ್ಕೂ ಆಪ್‌ಗಳಿಗೆ. ದೈನಂದಿನ ಅಗತ್ಯ ಸೇವೆಗಳಿಗೂ ಉಪಯುಕ್ತ ಆಪ್ಸ್‌ಗಳು ಬಂದಿವೆ. ಆದರೆ ಸ್ಮಾರ್ಟ್‌ಫೋನ್‌ ಬಳಕೆದಾರರು ಆಪ್ ಡೌನ್‌ಲೋಡ್ ಮಾಡುವ ಮೊದಲು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಉತ್ತಮ. ಗೂಗಲ್ ಪ್ಲೇ ಸ್ಟೋರ್‌ನಿಂದ ಯಾವುದೇ ಹೊಸ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಕೆಲವು ಅಂಶಗಳನ್ನು ಗಮನಿಸಲೇಬೇಕು. ಹಾಗಾದರೇ ಆಪ್‌ ಡೌನ್‌ಲೋಡ್ ಮಾಡುವ ಮುನ್ನ ತಪ್ಪದೇ ಗಮನಿಸಬೇಕಾದ ಅಂಶಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಅಧಿಕೃತ ಅಪ್ಲಿಕೇಶನ್ ಸ್ಟೋರ್‌ ಬಳಕೆ

ಅಧಿಕೃತ ಅಪ್ಲಿಕೇಶನ್ ಸ್ಟೋರ್‌ ಬಳಕೆ

ಬಳಕೆದಾರರು ತಮ್ಮ ಸ್ಮಾರ್ಟ್‌ಫೋನಿಗೆ ಹೊಸ ಅಪ್ಲಿಕೇಶನ್‌ ಗಳನ್ನು ಡೌನ್‌ಲೋಡ್ ಮಾಡಲು ಅಧಿಕೃತ ಅಪ್ಲಿಕೇಶನ್ ಸ್ಟೋರ್‌ ಗಳನ್ನು (ಗೂಗಲ್ ಪ್ಲೇ ಸ್ಟೋರ್) ಮಾತ್ರ ಬಳಸುವುದು ಅತೀ ಮುಖ್ಯವಾಗಿದೆ.

ಬಳಸದ ಆಪ್‌ ಅನ್‌ಇನ್‌ಸ್ಟಾಲ್ ಮಾಡಿ

ಬಳಸದ ಆಪ್‌ ಅನ್‌ಇನ್‌ಸ್ಟಾಲ್ ಮಾಡಿ

ಕೆಲವೊಮ್ಮೆ ಬಳಕೆದಾರರ ಸ್ಮಾರ್ಟ್‌ಫೋನ್‌ನಲ್ಲಿ ಮೇಲಿಂದ ಮೇಲೆ ಬಳಸದೆ ಇರುವ ಆಪ್‌ಗಳು ಹೆಚ್ಚಾಗಿರುತ್ತವೆ. ಹೀಗೆ ತುಂಬಾ ದಿನಗಳಿಂದ ಬಳಸದೇ ಇರುವ ಆಪ್‌ ಗಳನ್ನು ನಿಮ್ಮ ಫೋನಿನಿಂದ ಗೇಟ್‌ಪಾಸ್‌ ನೀಡಿ. ಸುರಕ್ಷತೆಯ ದೃಷ್ಠಿಯಿಂದ ಇದು ಉತ್ತಮ.

ಆಪ್‌ ಡೌನ್‌ಲೋಡ್‌ಗೂ ಮುನ್ನ ರಿವ್ಯೂವ್‌ಗಳನ್ನು ಓದಿರಿ

ಆಪ್‌ ಡೌನ್‌ಲೋಡ್‌ಗೂ ಮುನ್ನ ರಿವ್ಯೂವ್‌ಗಳನ್ನು ಓದಿರಿ

ಗೂಗಲ್‌ ಪ್ಲೇ ಸ್ಟೋರ್‌ ನಿಂದ ಹೊಸ ಆಪ್‌ ಅನ್ನು ಸ್ಮಾರ್ಟ್‌ಫೋನಿಗೆ ಡೌನ್‌ಲೋಡ್ ಮಾಡುವಾಗ ಆ ಬಗ್ಗೆ ಇತರೆ ಬಳಕೆದಾರರು ಬರೆದಿರುವ ವಿಮರ್ಶೆಗಳನ್ನು ಓದಿರಿ. ಹಾಗೂ ಆಪ್‌ ಡೆವಲಪರ್‌ಗಳ ಬಗ್ಗೆ ತಿಳಿಯಿರಿ.

ಡಿಸ್ಕೌಂಟ್‌ ನೀಡುವ ಆಪ್‌ಗಳಿಂದ ದೂರ ಇರಿ

ಡಿಸ್ಕೌಂಟ್‌ ನೀಡುವ ಆಪ್‌ಗಳಿಂದ ದೂರ ಇರಿ

ಬಹುತೇಕ ಆಪ್‌ಗಳಲ್ಲಿ ಆನ್‌ಲೈನ್ ಶಾಪಿಂಗ್ ರಿಯಾಯಿತಿ ಗಳನ್ನು ನೀಡುವ ಜಾಹಿರಾತು ತೋರಿಸುತ್ತಿರುತ್ತಾರೆ. ಇಂತಹ ಭರವಸೆ ನೀಡುವ ಅಪ್ಲಿಕೇಶನ್‌ ಗಳ ಬಗ್ಗೆ ಬಳಕೆದಾರರು ಎಚ್ಚರದಿಂದಿರಬೇಕು.

ಲಿಂಕ್‌ ಮೂಲಕ ಆಪ್‌ ಡೌನ್‌ಲೋಡ್ ಬೇಡ

ಲಿಂಕ್‌ ಮೂಲಕ ಆಪ್‌ ಡೌನ್‌ಲೋಡ್ ಬೇಡ

ಇಮೇಲ್‌ಗಳು, ಸಾಮಾಜಿಕ ಮಾಧ್ಯಮ ಇತ್ಯಾದಿಗಳಲ್ಲಿನ ಲಿಂಕ್‌ಗಳನ್ನು ಕ್ಲಿಕ್ ಮಾಡುವುದರ ಮೂಲಕ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್‌ ಮಾಡುವುದನ್ನು ತಪ್ಪಿಸಿ. ಗೂಗಲ್ ಪ್ಲೇ ಸ್ಟೋರ್ ಮೂಲಕ ಮಾತ್ರ ಇನ್‌ಸ್ಟಾಲ್ ಮಾಡಿಕೊಳ್ಳಿರಿ

Most Read Articles
Best Mobiles in India

English summary
Google Removes 7 Dangerous Android Apps: Check Full List Here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X