ಗೂಗಲ್‌ನಲ್ಲಿ ನಿಮ್ಮ ಖಾತೆ ಹ್ಯಾಕ್‌ ಆಗುವ ಮುನ್ನವೇ ತಿಳಿಯಲು ಹೀಗೆ ಮಾಡಿ!

|

ಇತ್ತೀಚಿನ ದಿನಗಳಲ್ಲಿ ಡಿಜಿಟಲ್‌ ಅಕೌಂಟ್‌ಗಳ ಸುರಕ್ಷತೆ ಸವಾಲಿನ ವಿಷಯವಾಗಿದೆ. ಸೊಶೀಯಲ್‌ ಮೀಡಿಯಾ ಖಾತೆಗಳು, ಇ-ರಿಟೇಲ್ ಖಾತೆಗಳು, ಬ್ಯಾಂಕ್ ಅಥವಾ ಇಮೇಲ್ ಖಾತೆಗಳಿಗೆ ಪ್ರೊಟೆಕ್ಷನ್‌ ನೀಡುವುದಕ್ಕೆ ಸ್ಟ್ರಾಂಗ್‌ ಪಾಸ್‌ವರ್ಡ್‌ ಹೊಂದುವುದು ಅಗತ್ಯ. ಇದೇ ಕಾರಣಕ್ಕೆ ಪ್ರತಿಯೊಬ್ಬರೂ ಕೂಡ ತಮ್ಮ ಡಿಜಿಟಲ್‌ ಅಕೌಂಟ್‌ಗಳಿಗೆ ಪಾಸ್‌ವರ್ಡ್‌ ಪ್ರೊಟೆಕ್ಷನ್‌ ಅನ್ನು ಹೊಂದಿರುತ್ತಾರೆ. ಆದರೂ ಮುಂದುವರೆದ ಟೆಕ್ನಾಲಜಿಯ ಪರಿಣಾಮ ಹ್ಯಾಕರ್‌ಗಳು ನಿಮ್ಮ ಡಿಜಿಟಲ್‌ ಅಕೌಂಟ್‌ಗಳನ್ನು ಹ್ಯಾಕ್‌ ಮಾಡುವುದು ಕೂಡ ಸುಲಭದ ಕೆಲಸವಾಗಿದೆ.

ಗೂಗಲ್

ಹೌದು, ನಿಮ್ಮ ಡಿಜಿಟಲ್‌ ಅಕೌಂಟ್‌ಗಳನ್ನು ಹ್ಯಾಕ್‌ ಆಗದಂತೆ ಕಾಪಾಡುವುದು ಕಷ್ಟದ ಕೆಲಸವಾಗಿದೆ. ಸ್ಟ್ರಾಂಗ್‌ ಪಾಸ್‌ವರ್ಡ್‌ ಹೊಂದುವುದು ನಿಮ್ಮ ಡಿಜಿಟಲ್ ಅಕೌಂಟ್‌ಗಳನ್ನು ದುರುದ್ದೇಶಪೂರಿತ ಹ್ಯಾಕರ್‌ಗಳಿಂದ ರಕ್ಷಿಸುತ್ತದೆ. ಇದೇ ಕಾರಣಕ್ಕೆ ಗೂಗಲ್ ತನ್ನ ಬಳಕೆದಾರರಿಗೆ ಹ್ಯಾಕಿಂಗ್‌ ಎಚ್ಚರಿಕೆಯನ್ನು ನೀಡುತ್ತಿದೆ. ಹ್ಯಾಕರ್‌ಗಳು ನಿಮ್ಮ ಖಾತೆಯನ್ನು ಪ್ರವೇಶಿಸುವುದು ಕಂಡುಬಂದಲ್ಲಿ ಬಳಕೆದಾರರಿಗೆ ಆಲರ್ಟ್‌ ಮೆಸೇಜ್‌ ನೀಡಲಿದೆ. ಹಾಗಾದ್ರೆ ಗೂಗಲ್‌ ತನ್ನ ಬಳಕೆದಾರರ ಖಾತೆ ಹ್ಯಾಕ್‌ ಆಗಿರುವುದರ ಬಗ್ಗೆ ಹೇಗೆ ಮಾಹಿತಿ ನೀಡಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್

ಗೂಗಲ್ ಮೂಲಕ ನೀವು ನಿಮ್ಮ ಖಾತೆ ಹ್ಯಾಕ್‌ ಆಗಿದೆಯಾ ಇಲ್ಲವೇ ಅನ್ನೊದನ್ನ ಚೆಕ್‌ ಮಾಡುವುದು ಇದೀಗ ಸುಲಭವಾಗಿದೆ. ಇದರಿಂದ ಬಳಕೆದಾರರು ತಮ್ಮ ಡಜಿಟಲ್‌ ಖಾತೆಗಳು ಹ್ಯಾಕ್‌ ಆಗುವ ಮುನ್ನವೇ ಎಚ್ಚರಿಕೆ ಪಡೆಯಲಿದ್ದಾರೆ. ಇದಕ್ಕೆಂದೆ ಗೂಗಲ್‌ ಕ್ರೋಮ್ ಎಕ್ಸ್‌ಟೆನ್ಶನ್ ಅನ್ನು ಕಳೆದ ವರ್ಷ ಪರಿಚಯಿಸಿದೆ. ಇದನ್ನು ಆನ್‌ಲೈನ್ ಪಾಸ್‌ವರ್ಡ್ ಮ್ಯಾನೇಜರ್‌ಗೆ ಮತ್ತು ಬ್ರೌಸರ್‌ನಲ್ಲಿ ಕೂಡ ಸಂಯೋಜಿಸಿದೆ.

ಗೂಗಲ್‌ಕ್ರೋಮ್‌ನಲ್ಲಿ

ನೀವು ನಿಮ್ಮ ಗೂಗಲ್‌ಕ್ರೋಮ್‌ನಲ್ಲಿ password.google.com ಗೆ ಹೋದರೆ, ಪಾಸ್‌ವರ್ಡ್ ಮ್ಯಾನೇಜರ್ ಎಂದು ಲೇಬಲ್ ಮಾಡಲಾಗಿರುವ ಪೇಜ್‌ ಕಾಣಲಿದೆ. ಇದರಲ್ಲಿ ಪಾಸ್‌ವರ್ಡ್ ವೆರಿಫಿಕೇಶನ್‌ ಇರುತ್ತದೆ. ಇದು ಗೂಗಲ್ ಕ್ರೋಮ್ ಬಳಸಿ ನಿಮ್ಮ ಯಾವುದೇ ಡಿಜಿಟಲ್ ಖಾತೆಗಳಿಗೆ ನೀವು ಲಾಗ್ ಇನ್ ಆಗಿದ್ದರೆ, ವೆಬ್‌ಸೈಟ್‌ಗೆ ಲಾಗಿನ್ ಮಾಡಲು ನೀವು ಬಳಸುವ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಡೇಟಾ ಹ್ಯಾಕ್‌ ಮಾಡುತ್ತಿದ್ದರೆ ನಿಮಗೆ ಎಚ್ಚರಿಕೆ ನೀಡುತ್ತದೆ.

ಗೂಗಲ್‌ನಲ್ಲಿ

ಗೂಗಲ್‌ನಲ್ಲಿ ಈಗಾಗಲೇ ಈ ಸೆಟ್ಟಿಂಗ್ ಅನ್ನು ಪೂರ್ವನಿಯೋಜಿತವಾಗಿ ಆನ್ ಮಾಡಲಾಗಿದೆ. ಇದು ನೀವು ಸೇವ್‌ ಮಾಡಿದ ಎಲ್ಲಾ ರುಜುವಾತುಗಳನ್ನು ಒಂದೇ ಸಮಯದಲ್ಲಿ ಪರಿಶೀಲಿಸಲು ಅವಕಾಶ ನೀಡಲಿದೆ. ಇದಲ್ಲದೆ ಹೆಚ್ಚುವರಿಯಾಗಿ, ಕ್ರೋಮ್ ನೀವು ಸೇವ್‌ ಮಾಡಿರುವ ಪಾಸ್‌ವರ್ಡ್‌ಗಳನ್ನು ಪರಿಶೀಲಿಸುತ್ತದೆ. ನಂತರ ಅವುಗಳಲ್ಲಿ ಯಾವುದಾದರೂ ಡೇಟಾ ಹ್ಯಾಕ್‌ನಲ್ಲಿ ಬಹಿರಂಗಗೊಂಡಿದೆಯೇ ಎಂದು ನಿಮಗೆ ತಿಳಿಸುತ್ತದೆ. ಇದಕ್ಕಾಗಿ ಗೂಗಲ್‌ ಕ್ರೋಮ್‌ ನಿಮ್ಮ ಎಲ್ಲಾ ದಾಖಲೆಗಳನ್ನು ಪರಿಶೀಲನೇ ಮಾಡಲಿದೆ. ಮೊದಲು ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ಎನ್‌ಕ್ರಿಪ್ಟ್ ಮಾಡಲಿದೆ.

ಗೂಗಲ್‌

ಗೂಗಲ್‌ ಎನ್‌ಕ್ರಿಪ್ಶನ್‌ ಮಾಡಿದ ದಾಖಲೆಗಳನ್ನು ಹ್ಯಾಕ್‌ ಮಾಡಿರುವ ಡೇಟಾ ಎನ್‌ಕ್ರಿಪ್ಶನ್‌ ವಿರುದ್ಧ ಹೋಲಿಕೆ ಮಾಡಲಿದೆ. ಎನ್‌ಕ್ರಿಪ್ಟ್ ಮಾಡಲಾದ ಡೇಟಾದ ಸೆಟ್‌ಗಳ ನಡುವಿನ ಹೊಂದಾಣಿಕೆಯನ್ನು ಕ್ರೋಮ್ ಪತ್ತೆ ಮಾಡಿದರೆ, ಅದು ನಿಮ್ಮ ಪಾಸ್‌ವರ್ಡ್ ಬದಲಾಯಿಸಲು ಸೂಚಿಸುವ ಆಲರ್ಟ್‌ ಅನ್ನು ಡಿಸ್‌ಪ್ಲೇ ಮಾಡಲಿದೆ. ಇದೆಲ್ಲವೂ ಸ್ವಯಂಚಾಲಿತವಾಗಿ ಸಂಭವಿಸಿದರೂ, ಗೂಗಲ್ ಸೇವಾ ಬಳಕೆದಾರರು ಸೇವ್‌ ಮಾಡಿದ ಪಾಸ್‌ವರ್ಡ್‌ಗಳ ಹೆಲ್ತ್‌ ಅನ್ನು ಚೆಕ್‌ ಮಾಡಬಹುದಾಗಿದೆ. ಇನ್ನು ನೀವು ಗೂಗಲ್‌ನಲ್ಲಿ ಸೇವ್‌ ಮಾಡಿದ ನಿಮ್ಮ ಪಾಸ್‌ವರ್ಡ್‌ಗಳ ಸ್ಟ್ರಾಂಗ್‌ ಆಗಿದೆಯಾ ಎಂದು ಚೆಕ್‌ ಮಾಡುವುದಕ್ಕೆ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಚೆಕ್

ಹಂತ 1: ಮೊದಲು https://passwords.google.com/checkup/start ಪುಟಕ್ಕೆ ಬೇಟಿ ನೀಡಿ
ಹಂತ 2: ನಂತರ ಚೆಕ್ ಪಾಸ್ವರ್ಡ್ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 3: ನಿಮ್ಮ Google ಖಾತೆಗೆ ಲಾಗ್ ಇನ್ ಮಾಡಿ.
ಹಂತ 4: ಇದರಲ್ಲಿ ನಿಮ್ಮ ಪಾಸ್‌ವರ್ಡ್ ಡೇಟಾದ ವಿವರವಾದ ಖಾತೆಯನ್ನು ನೋಡಬಹುದು. ಇಲ್ಲಿ ನಿಮ್ಮ ಪಾಸ್‌ವರ್ಡ್‌ಗಳಿಗೆ ತೊಂದರೆಯಾಗಿದ್ದರೆ ನಿಮಗೆ ಮಾಹಿತಿ ನೀಡಲಿದೆ.
ಹಂತ 5: ನಿಮ್ಮ ಯಾವುದೇ ಪಾಸ್‌ವರ್ಡ್ ದುರ್ಬಲವಾಗಿದ್ದರೆ, ಗೂಗಲ್‌ ನಿಮಗೆ ಪಾಸ್‌ವರ್ಡ್ ಬದಲಾವಣೆ ಆಯ್ಕೆಯನ್ನು ತೋರಿಸುತ್ತದೆ.
ಹಂತ 6: ಈ ಆಯ್ಕೆಯನ್ನು ಕ್ಲಿಕ್ ಮಾಡುವುದರಿಂದ ನಿಮ್ಮ ದುರ್ಬಲ ಪಾಸ್‌ವರ್ಡ್ ಅನ್ನು ಸ್ಟ್ರಾಂಗ್‌ ಆಗಿ ಬದಲಾಯಿಸಲು ಸಾಧ್ಯವಾಗುತ್ತದೆ.

ಹೀಗೆ ಮಾಡುವುದರ ಮೂಲಕ ನಿಮ್ಮ ಅಕೌಂಟ್‌ ಹ್ಯಾಕ್‌ ಆಗುವ ಮುನ್ನವೇ ತಿಳಿಯುವುದು ಸುಲಭವಾಗಲಿದೆ.

Most Read Articles
Best Mobiles in India

English summary
Here’s a step-by-step guide of how you can check the strength of your saved passwords.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X