Just In
- 7 hrs ago
ಇತ್ತೀಚಿನ ಒಪ್ಪೋ ಮೊಬೈಲ್ಗಳಿಗೆ ಅಮೆಜಾನ್ನಲ್ಲಿ ಭರ್ಜರಿ ಡಿಸ್ಕೌಂಟ್!
- 20 hrs ago
ಟ್ರೂಕಾಲರ್ ಮಾದರಿಯ ಹೊಸ ಕಾಲರ್ ಐಡಿ ಫೀಚರ್ಸ್ ಪರಿಚಯಿಸಲು ಟ್ರಾಯ್ ಸಿದ್ಧತೆ!
- 22 hrs ago
ಗ್ರಾಹಕರಿಗೆ ಬಿಗ್ ಶಾಕ್!..ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯಲ್ಲಿ ಭಾರೀ ಏರಿಕೆ!
- 23 hrs ago
20,000ರೂ.ಒಳಗೆ ನೀವು ಖರೀದಿಸಬಹುದಾದ ಐದು ಅತ್ಯುತ್ತಮ ಸ್ಮಾರ್ಟ್ಫೋನ್ಗಳು!
Don't Miss
- News
ಬೆಂಗಳೂರು; ಜಮೀನಿನಲ್ಲಿ ಲೇಔಟ್, ಪಟ್ಟಣೆಗೆರೆ ರೈತರ ಪ್ರತಿಭಟನೆ
- Sports
ಇಂಗ್ಲೆಂಡ್ ವಿರುದ್ಧದ ಟೆಸ್ಟ್, ಏಕದಿನ ಭಾರತ ತಂಡದಲ್ಲಿ ಈ ವೇಗಿ ಇರಬೇಕು ಎಂದ ಗವಾಸ್ಕರ್
- Movies
ಸರ್ಜರಿ ಇಲ್ಲದೆ, ಕೇವಲ ವರ್ಕೌಟ್ ಮಾಡಿಕೊಂಡೇ ದೇಹ ಸೌಂದರ್ಯ ಹೆಚ್ಚಿಸಿಕೊಂಡ ನಟರಿವರು
- Education
CUET 2022 Registration : ಪರೀಕ್ಷೆಗೆ ನೊಂದಾಯಿಸಿಕೊಳ್ಳಲು ಇಂದು ಕೊನೆಯ ದಿನ
- Automobiles
ಕೆಟಿಎಂ ಡ್ಯೂಕ್ 390 ಪ್ರತಿಸ್ಪರ್ಧಿ 2022ರ ಕಿಮ್ಕೊ ಕೆ ರೈಡರ್ 400 ಬೈಕ್ ಅನಾವರಣ
- Finance
ಟಾಪ್ 10 ಕಂಪನಿಗಳ ಪೈಕಿ 5 ಕಂಪನಿ ಮೌಲ್ಯ 1.78 ಲಕ್ಷ ಕೋಟಿ ಏರಿಕೆ
- Lifestyle
ಮೇ 22ರಿಂದ ರಿಂದ ಮೇ 28ರ ವಾರ ಭವಿಷ್ಯ: ಈ ರಾಶಿಯ ಉದ್ಯೋಗಿಗಳು ಯಾವುದೇ ಕೆಲಸದಲ್ಲೂ ನಿರ್ಲಕ್ಷ್ಯ ಮಾಡಬೇಡಿ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿಮ್ಮ ಬ್ರೌಸಿಂಗ್ ಪ್ರೈವೆಸಿ ಕಾಪಾಡಲು ಗೂಗಲ್ ಕ್ರೋಮ್ನಿಂದ ಹೊಸ ಪ್ಲಾನ್!
ಇಂದಿನ ದಿನಗಳಲ್ಲಿ ಯಾವುದೇ ಮಾಹಿತಿ ಬೇಕಿದ್ದರೂ ಗೂಗಲ್ ಕ್ರೋಮ್ನಲ್ಲಿ ಸರ್ಚ್ ಮಾಡೋದು ಸಾಮಾನ್ಯವಾಗಿಬಿಟ್ಟಿದೆ. ಆದರಿಂದ ಹೆಚ್ಚಿನ ಜನರು ಗೂಗಲ್ ಕ್ರೋಮ್ ಸೈಟ್ಗೆ ಬೇಟಿ ನೀಡುತ್ತಾರೆ. ಇದೇ ಕಾರಣಕ್ಕೆ ಗೂಗಲ್ ಕ್ರೋಮ್ ಕೂಡ ತನ್ನ ಬಳಕೆದಾರರಿಗೆ ಹಲವು ಫೀಚರ್ಸ್ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಆನ್ಲೈನ್ನಲ್ಲಿ ಹೆಚ್ಚು ಪ್ರೈವೆಸಿ ಬ್ರೌಸಿಂಗ್ ಕಾಪಾಡುವುದಕ್ಕಾಗಿ ಹೊಸ ಹೆಜ್ಜೆ ಇಡಲು ಮುಂದಾಗಿದೆ. ಇದಕ್ಕಾಗಿ ಗೂಗಲ್ ಕ್ರೋಮ್ನ ಡೆವಲಪರ್ ಆವೃತ್ತಿಯಲ್ಲಿ ಹೊಸ ವಿಷಯಗಳ API ಅನ್ನು ಶೀಘ್ರದಲ್ಲೇ ಪರೀಕ್ಷಿಸುತ್ತಿದೆ ಎಂದು ವರದಿಯಾಗಿದೆ.

ಹೌದು, ಗೂಗಲ್ ಕ್ರೋಮ್ ಸರ್ಚ್ ಬ್ರೌಸಿಂಗ್ನಲ್ಲಿ ಹೆಚ್ಚು ಪ್ರೈವೆಸಿ ಸೆಟ್ ಮಾಡುವುದಕ್ಕಾಗಿ ಹೊಸ ಎಪಿಐ ಅನ್ನು ಪರೀಕ್ಷಿಸುತ್ತಿದೆ. ಈ ಹೊಸ ವಿಧಾನ ಪಬ್ಲಿಷರ್ಸ್, ಕ್ರಿಯೆಟರ್ಸ್ ಮತ್ತು ಇತರ ಡೆವಲಪರ್ಗಳಿಗೆ ಜಾಹೀರಾತು ವ್ಯವಹಾರದ ಮೇಲೆ ಋಣಾತ್ಮಕ ಪರಿಣಾಮ ಬೀರದಂತೆ ಸಹಾಯ ಮಾಡಲಿದೆ. ನೀವು ಸರ್ಚ್ ಮಾಡುವ ವಿಚಾರದ ಆಧಾರದ ಮೇಲೆ ಬರುವ ಜಾಹಿರಾತುಗಳು ಋಣಾತ್ಮಕ ಪರಿಣಾಂ ಬೀರದಂತೆ ಉತ್ತಮ ಜಾಹಿರಾತು ನೀಡಲಿದೆ. ಇದಕ್ಕಾಗಿ ಗೂಗಲ್ ಕ್ರೋಮ್ ಬ್ರೌಸರ್ ಶೀಘ್ರದಲ್ಲೇ ಥರ್ಡ್-ಪಾರ್ಟಿ ಕುಕೀಗಳನ್ನು ತೆಗೆದುಹಾಕಲಿದೆ ಎನ್ನಲಾಗಿದೆ. ಹಾಗಾದ್ರೆ ಗೂಗಲ್ ಕ್ರೋಮ್ನ ಹೊಸ ಎಪಿಐ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್ ಕ್ರೋಮ್ನಲ್ಲಿ ಬಳಕೆದಾರರ ನಿಯಂತ್ರಣಗಳನ್ನು ಒಳಗೊಂಡಿರುವ ವಿಷಯಗಳ ಡೆವಲಪರ್ ಪ್ರಯೋಗವನ್ನು ಪ್ರಾರಂಭಿಸಲು ಪ್ಲಾನ್ ಮಾಡಿದೆ. ಇದರಿಂದ ವೆಬ್ಸೈಟ್ ಡೆವಲಪರ್ಗಳು ಮತ್ತು ಜಾಹೀರಾತು ಉದ್ಯಮವನ್ನು ಪ್ರಯತ್ನಿಸಲು ಅನುವು ಮಾಡಿಕೊಡುತ್ತದೆ ಎಂದು ತನ್ನ ಬ್ಲಾಗ್ ಪೋಸ್ಟ್ನಲ್ಲಿ ಹೇಳಿದೆ. ಇದು ಬಳಕೆದಾರರ ಕಂಟ್ರೋಲ್ ಮತ್ತು ಇತರ ತಾಂತ್ರಿಕ ಅಂಶಗಳ ಅಂತಿಮ ವಿನ್ಯಾಸ ಬಳಕೆದಾರರ ಪ್ರತಿಕ್ರಿಯೆ ಮತ್ತು ಪ್ರಯೋಗ ಹಂತದಲ್ಲಿ ಗೂಗಲ್ ಏನು ಮಾಡಲಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಲಾಗಿದೆ.

ಇನ್ನು ಗೂಗಲ್ ಕ್ರೋಮ್ ವಿಷಯಗಳ API ಅದರ 'ಗೌಪ್ಯತೆ ಸ್ಯಾಂಡ್ಬಾಕ್ಸ್' ಇನಿಶಿಯೇಟಿವ್ ಪಾರ್ಟ್ ಆಗಿದೆ. ಇದು ಹೆಚ್ಚು ಇನಿಶಿಯೇಟಿವ್ ವೆಬ್ ಬ್ರೌಸಿಂಗ್ ಅನುಭವವನ್ನು ನಿರ್ಮಿಸುವ ಗೂಗಲ್ನ ಪ್ರಯತ್ನವಾಗಿದೆ. ಸದ್ಯ ಗೂಗಲ್ ಕ್ರೋಮ್ ತನ್ನ ಥರ್ಡ್ ಪಾರ್ಟಿ ಕುಕೀಸ್ಗಳನ್ನು ಬದಲಿಸಲು 'ಫೆಡರೇಟೆಡ್ ಲರ್ನಿಂಗ್ ಆಫ್ ಕೋಹೋರ್ಟ್ಸ್' ಪ್ರಸ್ತಾಪದ ಪ್ಲಾನ್ಗಳನ್ನು ಇದು ಮೊದಲೇ ಘೋಷಿಸಿದೆ. ಇದರಿಂದ ನೀವು ಸರ್ಚ್ ಮಾಡಿದ ಆಧಾರದ ಮೇಲೆ ಜಾಹಿರಾತುಗಳನ್ನು ನೀಡುವುದನ್ನು ಸುದಾರಿಸಲಿದೆ.

ಎಪಿಐ ಯಾವ ವಿಷಯಗಳನ್ನು ನಿರ್ಧಾರ ಮಾಡಲಿದೆ?
ಗೂಗಲ್ನ ಹೊಸ ಎಪಿಐ ಬಳಕೆದಾರರು ಆಸಕ್ತಿ ಹೊಂದಿರುವ ಕೆಲವು ವಿಷಯಗಳನ್ನು ವಿಷಯಗಳ ಬಗ್ಗೆ ನಿರ್ಧರಿಸುತ್ತದೆ. ಇದು ಬಳಕೆದಾರರ ಬ್ರೌಸರ್ನೊಂದಿಗೆ ಲಭ್ಯವಿರುವ ಡೇಟಾ ಆಗಿರುತ್ತದೆ. ಬಳಕೆದಾರರು ಭೇಟಿ ನೀಡುವ ಪ್ರತಿಯೊಂದು ವೆಬ್ಸೈಟ್ ಅನ್ನು ಟ್ರ್ಯಾಕ್ ಮಾಡುವ ಥರ್ಡ್ ಪಾರ್ಟಿ ಕುಕೀಗಳ ಬದಲಿಗೆ ಈ ವಿಷಯಗಳು ಟ್ರ್ಯಾಕ್ ಮಾಡುವುದಿಲ್ಲ. ಬದಲಿಗೆ ಬಳಕೆದಾರರ ಆಸಕ್ತಿಯ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಬಳಕೆದಾರರಿಗೆ ಯಾವ ಜಾಹೀರಾತುಗಳನ್ನು ತೋರಿಸಬಹುದು ಎಂಬುದನ್ನು ನಿರ್ಧರಿಸಲು ಇದನ್ನು ಟ್ರ್ಯಾಕ್ ಮಾಡಲಾಗುತ್ತದೆ. ನಂತರ ಥರ್ಡ್ ಪಾರ್ಟಿ ವೆಬ್ಸೈಟ್ಗಳೊಂದಿಗೆ ತನ್ನ ವಿಷಯವನ್ನು ಶೇರ್ ಮಾಡಿಕೊಳ್ಳಲಿದೆ.

ಈ ವಿಷಯಗಳಲ್ಲಿ "ಫಿಟ್ನೆಸ್" ನಿಂದ "ಪ್ರಯಾಣ ಮತ್ತು ಸಾರಿಗೆ" ತನಕ ಇರಬಹುದು ಎನ್ನಲಾಗಿದೆ. ಬಳಕೆದಾರರ ಬ್ರೌಸಿಂಗ್ ಹಿಸ್ಟರಿ ಆಧಾರದ ಮೇಲೆ ಈ ವಿಷಯಗಳನ್ನು ನಿರ್ಧರಿಸಲಾಗುತ್ತದೆ. ವೆಬ್ಸೈಟ್ಗಳಿಗೆ ಸಂಬಂಧಿಸಿದ ವಿಷಯಗಳನ್ನು ಬ್ರೌಸರ್ ನಿರ್ಧರಿಸುತ್ತದೆ. ಈ ವಿಷಯಗಳನ್ನು ವೆಬ್ಸೈಟ್ಗಳಿಗೆ ನಿಯೋಜಿಸಲಾಗಿರುತ್ತದೆ. ಆದರಿಂದ ಯಾವುದೇ ಸೈಟ್ಗೆ ನೀವು ಭೇಟಿ ನೀಡಿದಾಗ, ಕಳೆದ ಮೂರು ವಾರಗಳಲ್ಲಿ ಒಂದೊಂದು ವಿಷಯವನ್ನು ಸೈಟ್ ಮತ್ತು ಅದರ ಜಾಹೀರಾತು ಪಾಲುದಾರರೊಂದಿಗೆ ಹಂಚಿಕೊಳ್ಳಲಾಗುತ್ತದೆ. ಪ್ರತಿ ಬ್ರೌಸರ್ನ ವಿಷಯಗಳನ್ನು ಮೂರು ವಾರಗಳ ಅವಧಿಗೆ ಮಾತ್ರ ಸಂಗ್ರಹಿಸಲಾಗುತ್ತದೆ ಎಂದು ಸಹ ಹೇಳಲಾಗಿದೆ.

ಇದರಿಂದ ಬಳಕೆದಾರರಿಗೆ ಸಂಬಂಧಿತ ಜಾಹೀರಾತುಗಳನ್ನು ತೋರಿಸಲು ಇದು ಸಹಾಯ ಮಾಡಲಿದೆ. ನೀವು ಯಾವುದೇ ಸೈಟ್ ತೆರೆದಾಗ ನಿಮಗೆ ಅಸಹ್ಯ ಎನಿಸುವ ಅಥವಾ ನಿಮಗೆ ಮುಜುಗರ ಮಾಡುವ ಜಾಹಿರಾತುಗಳನ್ನು ಪ್ರದರ್ಶನ ಮಾಡುವುದನ್ನು ತಡೆಯಲಿದೆ. ಇದರಿಂದ ನಿಮ್ಮ ಪ್ರೈವೆಸಿಗೆ ಯಾವುದೆ ದಕ್ಕೆ ಬರುವುದಿಲ್ಲ ಎನ್ನಲಾಗಿದೆ. ಈ ಎಪಿಐ ಕ್ರೋಮ್ ಬಳಕೆದಾರರ ನಿಯಂತ್ರಣಗಳನ್ನು ಹೊಂದಿದ್ದು ವಿಷಯಗಳನ್ನು ನೋಡಲು, ಅವರು ಇಷ್ಟಪಡದ ಯಾವುದನ್ನಾದರೂ ತೆಗೆದುಹಾಕಲು ಅನುಮತಿಯನ್ನು ನೀಡಲಿದೆ.
ಸದ್ಯ ಈ ಟೆಕ್ನಾಲಜಿ ಇನ್ನು ಕೂಡ ಅಭಿವೃದ್ಧಿಯ ಆರಂಭಿಕ ಹಂತದಲ್ಲಿದೆ. ಈ ಪ್ರಯೋಗಗಳ ಫಲಿತಾಂಶಗಳು ಮತ್ತು ವೆಬ್ ಸಮುದಾಯದಿಂದ ಪ್ರತಿಕ್ರಿಯೆಗಳು ಟೈಮ್ಲೈನ್ ಅನ್ನು ತಿಳಿಸುತ್ತದೆ ಎಂದು ಗೂಗಲ್ ಕಂಪನಿ ತನ್ನ ಬ್ಲಾಗ್ ಪೋಸ್ಟ್ನಲ್ಲಿ ಹೇಳಿಕೊಂಡಿದೆ. ಆದರಿಂದ ಇದು ಎಲ್ಲರಿಗೂ ಲಭ್ಯವಾಗುವುದರ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿ ಇಲ್ಲ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999