Just In
Don't Miss
- News
ಭಾರತದಲ್ಲಿ 196 ಕೋಟಿ ದಾಟಿದ ಕೋವಿಡ್ ಲಸಿಕಾ ಅಭಿಯಾನ
- Movies
ದುಬೈನಲ್ಲಿ ಅಪ್ಪು ನೆಚ್ಚಿನ ಲ್ಯಾಂಬೋರ್ಗಿನಿ ಕಾರ್: ಯಾರು ಬಳಸುತ್ತಾರೆ ಗೊತ್ತಾ?
- Lifestyle
ಮಳೆಗಾಲದಲ್ಲಿ ಈ ಪ್ರಮುಖ ಆರೋಗ್ಯ ಸಮಸ್ಯೆಗಳ ಬಗ್ಗೆ ಇರಲಿ ಎಚ್ಚರ!
- Automobiles
ಬರೋಬ್ಬರಿ 40 ವೆರಿಯೆಂಟ್ಗಳನ್ನು ಹೊಂದಿರಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್
- Finance
ಅತೀ ಕಡಿಮೆ ಬಡ್ಡಿದರದಲ್ಲಿ ವೈಯಕ್ತಿಕ ಸಾಲ ನೀಡುತ್ತೆ ಈ ಬ್ಯಾಂಕುಗಳು!
- Sports
1983ರ ವಿಶ್ವಕಪ್ ವಿಜಯೋತ್ಸವಕ್ಕೆ 39 ವರ್ಷಗಳು: ಇಡೀ ದೇಶಕ್ಕೆ ಸ್ಫೂರ್ತಿ ನೀಡಿದ್ದ ಕಪಿಲ್ ದೇವ್ ತಂಡ!
- Education
BIMS Belagavi Recruitment 2022 : 10 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಗೂಗಲ್ ಟ್ರಾನ್ಸ್ಲೇಟ್ನಲ್ಲಿ ಅಚ್ಚರಿಯ ಬದಲಾವಣೆ! ಹೊಸದಾಗಿ 24 ಭಾಷೆಗಳ ಸೇರ್ಪಡೆ!
ಗೂಗಲ್ ನ ವಾರ್ಷಿಕ ಸಮ್ಮೇಳನ ಗೂಗಲ್ I/O 2022 ನಲ್ಲಿ ಹಲವು ಹೊಸ ಫೀಚರ್ಸ್ಗಳನ್ನು ಅನಾವರಣಗೊಳಿಸಲಾಗಿದೆ. ಭವಿಷ್ಯದಲ್ಲಿ ಗೂಗಲ್ ತನ್ನ ಆಂಡ್ರಾಯ್ಡ್ ಡಿವೈಸ್ನಲ್ಲಿ ಸೇರ್ಪಡೆ ಮಾಡುವ ಅನೇಕ ಫೀಚರ್ಸ್ಗಳನ್ನು ಘೋಷಣೆ ಮಾಡಲಾಗಿದೆ. ಇನ್ನು ಈ ಬಾರಿಯ ಗೂಗಲ್ I/O 2022ನಲ್ಲಿ ಗೂಗಲ್ ಟ್ರಾನ್ಸ್ಲೇಟ್ಗೆ ಸಂಬಂಧಿಸಿದಂತೆ ಅನೇಕ ಬದಲಾವಣೆಗಳನ್ನು ಪ್ರಕಟಿಸಿದೆ. ಅದರಂತೆ ಹೊಸ ಮೆಷಿನ್ ಲರ್ನಿಂಗ್ ತಂತ್ರವನ್ನು ಬಳಸಿಕೊಂಡು ಗೂಗಲ್ ಟ್ರಾನ್ಸ್ಲೇಟ್ನಲ್ಲಿ 24 ಹೊಸ ಭಾಷೆಗಳನ್ನು ಸೇರಿಸಲು ಗೂಗಲ್ ಮುಂದಾಗಿದೆ.

ಹೌದು, ಗೂಗಲ್ ತನ್ನ ಟ್ರಾನ್ಸ್ಲೇಟ್ ಸೇವೆಗೆ ಹೊಸದಾಗಿ 24 ಭಾಷೆಗಳನ್ನು ಸೇರಿಸಿದೆ. ಇದರಿಂದ ಗೂಗಲ್ ಟ್ರಾನ್ಸ್ಲೇಟ್ನಲ್ಲಿ ನೀವು ಇನ್ನು ಹಲವು ಆಯ್ಕೆಯ ಭಾಷೆಗಳನ್ನು ಕಾಣಬಹುದಾಗಿದೆ. ಇದರಿಂದ ಬಳಕೆದಾರರು ಯಾವುದೇ ಭಾಷೆಗಾದರೂ ತಮ್ಮ ಪಠ್ಯವನ್ನು ಟ್ರಾನ್ಸ್ಲೇಟ್ ಮಾಡುವುದಕ್ಕೆ ಅವಕಾಶ ದೊರೆಯಲಿದೆ. ಈ ಹೊಸ ಭಾಷೆಗಳ ಸೇರ್ಪಡೆಯಿಂದ ಟ್ರಾನ್ಸ್ಲೇಟ್ ಮಾಡುವ ಭಾಷೆಗಳ ಸಂಖ್ಯೆ 133ಕ್ಕೆ ಏರಿದೆ. ಇನ್ನುಳಿದಂತೆ ಗೂಗಲ್ ಟ್ರಾನ್ಸ್ಲೇಟ್ನಲ್ಲಿ ಯಾವೆಲ್ಲಾ ಬದಲಾವಣೆಗಳು ಬರಲಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್ ಟ್ರಾನ್ಸ್ಲೇಟ್: 24 ಹೊಸ ಭಾಷೆಗಳಿಗೆ ಬೆಂಬಲ
ಗೂಗಲ್ ಟ್ರಾನ್ಸ್ಲೇಟ್ ತನ್ನ ಅನುವಾದ ಸೇವೆಗೆ 24 ಹೊಸ ಭಾಷೆಗಳನ್ನು ಸೇರಿಸಿದೆ. ಇದರಿಂದ ಗೂಗಲ್ ಟ್ರಾನ್ಸ್ಲೇಟ್ ಬೆಂಬಲಿಸುವ ಭಾಷೆಗಳ ಸಂಖ್ಯೆಯನ್ನು ಒಟ್ಟು 133ಕ್ಕೆ ಏರಿದೆ. ಈ 24 ಹೊಸದಾಗಿ ಸೇರಿಸಲಾದ ಭಾಷೆಗಳಲ್ಲಿ ಭಾರತದ ಎಂಟು ಭಾಷೆಗಳು ಕೂಡ ಸೇರಿವೆ. ಇದರಲ್ಲಿ ಅಸ್ಸಾಮಿ (ಈಶಾನ್ಯ ಭಾರತ), ಭೋಜ್ಪುರಿ (ಉತ್ತರ ಭಾರತ), ಡೋಗ್ರಿ (ಉತ್ತರ ಭಾರತ), ಕೊಂಕಣಿ (ಮಧ್ಯ ಭಾರತ), ಮೈಥಿಲಿ (ಉತ್ತರ ಭಾರತ), ಮಣಿಪುರಿ (ಈಶಾನ್ಯ ಭಾರತ), ಮಿಜೋ (ಈಶಾನ್ಯ ಭಾರತ) ಮತ್ತು ಸಂಸ್ಕೃತ ಸೇರಿವೆ.

ಈ ಹೊಸ ಭಾಷೆಗಳ ಸೇರ್ಪಡೆಯು ಗೂಗಲ್ ಟ್ರಾನ್ಸ್ಲೇಟ್ ತಾಂತ್ರಿಕ ಮೈಲಿಗಲ್ಲನ್ನು ಒದಗಿಸುತ್ತದೆ. ಏಕೆಂದರೆ ಇವು ಝೀರೋ-ಶಾಟ್ ಮೆಷಿನ್ ಟ್ರಾನ್ಸ್ಲೇಟ್ ಅನ್ನು ಬಳಸಿಕೊಂಡು ಸೇರಿಸಲಾದ ಮೊದಲ ಭಾಷೆಗಳಾಗಿವೆ. ಇದರಿಂದ ಗೂಗಲ್ ಟ್ರಾನ್ಸ್ಲೇಟ್ನಲ್ಲಿ ಕಾಣದ ಭಾಷಾ ಜೋಡಿಗಳ ನಡುವೆ ನೇರವಾಗಿ ಭಾಷಾಂತರಿಸಬಹುದು. ಅಂದರೆ ನೀವು ನೋಡದೆಯೇ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಿಸಬಹುದು. ಸದ್ಯ ಈ ಟೆಕ್ನಾಲಜಿ ಇನ್ನೂ ಪರಿಪೂರ್ಣವಾಗಿಲ್ಲ ಎಂದು ಗೂಗಲ್ ಹೇಳಿದೆ.

ಗೂಗಲ್ ಮಲ್ಟಿಸರ್ಚ್
ಇನ್ನು ಗೂಗಲ್ ತನ್ನ ಅಪ್ಲಿಕೇಶನ್ನಲ್ಲಿ ಮಲ್ಟಿ-ಸರ್ಚ್ ಅನ್ನು ಪ್ರಾರಂಭಿಸಿದೆ. ಇದರಿಂದ ಒಂದೇ ಸಮಯದಲ್ಲಿ ಇಮೇಜ್ಗಳು ಮತ್ತು ಟೆಕ್ಸ್ಟ್ ಎರಡನ್ನೂ ಸರ್ಚ್ ಮಾಡುವುದಕ್ಕೆ ಸಾಧ್ಯವಾಗಲಿದೆ. ಅಲ್ಲದೆ ಬಳಕೆದಾರರು ಚಿತ್ರ ಅಥವಾ ಸ್ಕ್ರೀನ್ಶಾಟ್ ಅನ್ನು ಬಳಸಲು ಸಾಧ್ಯವಾಗುತ್ತದೆ. ಇದಲ್ಲದೆ ಚಿತ್ರದಲ್ಲಿ ಉಡುಪುಗಳು, ಗೃಹೋಪಯೋಗಿ ವಸ್ತುಗಳು, ಆಹಾರ ಇತ್ಯಾದಿಗಳನ್ನು ಹೊಂದಿರುವ ಸ್ಥಳೀಯ ರೆಸ್ಟೋರೆಂಟ್ಗಳು ಅಥವಾ ಚಿಲ್ಲರೆ ವ್ಯಾಪಾರಿಗಳ ಆಯ್ಕೆಗಳನ್ನು ನೋಡಲು "ನಿಯರ್ ಮಿ" ಆಯ್ಕೆಯನ್ನು ಕೂಡ ಸೇರಿಸಬಹುದಾಗಿದೆ. ಸದ್ಯ ಮಲ್ಟಿಸರ್ಚ್ ಫೀಚರ್ಸ್ ಯುನೈಟೆಡ್ ಸ್ಟೇಟ್ಸ್ನಲ್ಲಿ ಇಂಗ್ಲಿಷ್ನಲ್ಲಿ ಬೀಟಾ ವರ್ಷನ್ನಲ್ಲಿ ಲಭ್ಯವಿದೆ. ಆದರೆ ಇದು ಎಲ್ಲಾ ಬಳಕೆದಾರರಿಗೆ ಯಾವಾಗ ಲಭ್ಯವಾಗಲಿದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ.

ಗೂಗಲ್ ವ್ಯಾಲೇಟ್
ಆಂಡ್ರಾಯ್ಡ್ 13ನಲ್ಲಿ ಗೂಘಲ್ ವ್ಯಾಲೇಟ್ ಕೂಡ ಅಪ್ಡೇಟ್ ಪಡೆದುಕೊಳ್ಳಲಿದೆ. ಇದರಿಂದ ಶೀಘ್ರದಲ್ಲೇ ಬಳಕೆದಾರರು ತಮ್ಮ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳ ಮೂಲಕ ಹೋಟೆಲ್ ಕೀಗಳು ಮತ್ತು ಕಚೇರಿ ಬ್ಯಾಡ್ಜ್ಗಳನ್ನು ಸೇವ್ ಮಾಡುವುದಕ್ಕೆ ಮತ್ತು ಪ್ರವೇಶಿಸುವುದಕ್ಕೆ ಅನುಮತಿಸಲಿದೆ. ಇದಲ್ಲದೆ ಗೂಗಲ್ ವ್ಯಾಲೇಟ್ನಲ್ಲಿ ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್ ಮತ್ತು ID ಗಳನ್ನು ಸ್ಟೋರೇಜ್ ಮಾಡುವುದಕ್ಕೆ ಗೂಗಲ್ ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದೆ ಎನ್ನಲಾಗಿದೆ. ಹಾಗೇ ನೋಡಿದರೆ ಭಾರತದಲ್ಲಿ, ಈಗಾಗಲೇ ಡಿಜಿಲಾಕರ್ ಮತ್ತು ಎಂಪರಿವಾಹನ್ನಂತಹ ಅಪ್ಲಿಕೇಶನ್ಗಳಲ್ಲಿ ತಮ್ಮ ದಾಖಲೆಗಳನ್ನು ಸಂಗ್ರಹಿಸಲು ಸರ್ಕಾರವು ಬಳಕೆದಾರರಿಗೆ ಅವಕಾಶ ನೀಡಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999