ಎಸ್‌ಬಿಐ ಬ್ಯಾಂಕ್‌ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶ ನೀಡಿದ ಸರ್ಕಾರ!

|

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಗ್ರಾಹಕರಿಗೆ ಪಿಐಬಿ ಬಿಗ್‌ ಆಲರ್ಟ್‌ ಮೆಸೇಜ್‌ ರವಾನಿಸಿದೆ. ಎಸ್‌ಬಿಐ ಗ್ರಾಹಕರ ಖಾತೆಗಳಿಗೆ ವಂಚಕರು ಹೇಗೆಲ್ಲಾ ಕನ್ನ ಹಾಕಲು ಯತ್ನಿಸುತ್ತಿದ್ದಾರೆ ಎನ್ನುವುದರ ಬಗ್ಗೆ ಎಚ್ಚರಿಕೆಯನ್ನು ನೀಡಿದೆ. ವಂಚಕರು ಹಣ ಮತ್ತು ಗ್ರಾಹಕರ ವೈಯಕ್ತಿಕ ವಿವರಗಳನ್ನು ಕದಿಯಲು ಹೊಸ ವಿಧಾನಗಳನ್ನು ಬಳಸುತ್ತಿರುವುದರ ಬಗ್ಗೆ ಮಾಹಿತಿ ನೀಡಿದೆ. ಸರ್ಕಾರದ ಹೊಸ ನೀತಿಗಳು, ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡುವ ಸರ್ಕಾರದ ಪ್ರೆಸ್‌ ಇನ್ಫರ್‌ಮೇಶನ್‌ ಬ್ಯೂರೋ (PIB) ಈ ಹೊಸ SMS ಹಗರಣದ ಬಗ್ಗೆ SBI ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.

ಎಸ್‌ಬಿಐ

ಹೌದು, ಪಿಐಬಿ ಎಸ್‌ಬಿಐ ಗ್ರಾಹಕರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ಅದರಂತೆ ನಿಮ್ಮ ಖಾತೆಯನ್ನು ಬ್ಲಾಕ್‌ ಮಾಡಲಾಗಿದೆ ಎಂದು ಬರುವ ನಕಲಿ ಸಂದೇಶಗಳ ಬಗ್ಗೆ ಜಾಗರೂಕರಾಗಿರಿ ಎಂದು ಎಸ್‌ಬಿಐ ಬಳಕೆದಾರರಿಗೆ ಪಿಐಬಿ ಹೇಳಿದೆ. ವಂಚಕರು ಎಸ್‌ಎಂಎಸ್‌ಗಳ ಮೂಲಕ ಇಂತಹ ನಕಲಿ ಎಚ್ಚರಿಕೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ವರದಿಯಾಗಿದೆ. ಹಾಗಾದ್ರೆ ವಂಚಕರು ಎಸ್‌ಬಿಐ ಗ್ರಾಹಕರಿಗೆ ಹೇಗೆಲ್ಲಾ ಕನ್ನ ಹಾಕುತ್ತಿದ್ದಾರೆ? ಇದರ ಬಗ್ಗೆ ಪಿಐಬಿ ಹೇಳಿರುವುದು ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಎಸ್‌ಬಿಐ

ಪಿಐಬಿ ಎಸ್‌ಬಿಐ ಬ್ಯಾಂಕ್‌ ಗ್ರಾಹಕರಿಗೆ ಬರುವ ನಕಲಿ ಸಂದೇಶಗಳ ಬಗ್ಗೆ ವರದಿ ಮಾಡಿದೆ. ಗ್ರಾಹಕರ ಹಣ ಮತ್ತು ವೈಯುಕ್ತಿಕ ವಿವರಗಳನ್ನು ಕದಿಯುವ ಸಲುವಾಗಿ ವಂಚಕರು ಹೊಸ ವಂಚನೆಯ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಅದರಂತೆ ನಿಮ್ಮ ಖಾತೆಯನ್ನು ಬ್ಲಾಕ್‌ ಮಾಡಲಾಗಿದೆ. ನಿಮ್ಮ ಖಾತೆಯನ್ನು ರಿಸ್ಟೋರ್‌ ಮಾಡಲು ನಿಮ್ಮ ಕೆವೈಸಿ ದಾಖಲೆ ನೀಡುವತೆ ಕೇಳುವ ನಕಲಿ ಸಂದೇಶಗಳು ಹರಿದಾಡುತ್ತಿವೆ. ಇದಲ್ಲದೆ ಬ್ಯಾಂಕ್‌ ಸಿಬ್ಬಂದಿಯ ಹೆಸರಿನಲ್ಲಿ ಕರೆಗಳು ಕೂಡ ಬರುತ್ತಿರುವುದರ ಬಗ್ಗೆ PIB ಎಚ್ಚರಿಕೆ ನೀಡಿದೆ.

ಟ್ವಿಟರ್

ಇನ್ನು ಬಳಕೆದಾರರಿಗೆ ಎಚ್ಚರಿಕೆ ನೀಡಲು ಸರ್ಕಾರಿ ಸಂಸ್ಥೆ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್‌ ಮಾಡಿದೆ. ಇದರಲ್ಲಿ ನಿಮ್ಮ @TheOfficialSBI ಖಾತೆಯನ್ನು ನಿರ್ಬಂಧಿಸಲಾಗಿದೆ ಎಂಬ ಫೇಕ್‌ ಸಂದೇಶದ ಬಗ್ಗೆ ಮಾಹಿತಿನ ನೀಡಿದೆ. ಆದರಿಂದ ಬಳಕೆದಾರರು ಈ ರೀತಿಯ ಸಂದೇಶಗಳಲ್ಲಿ ಅವರ ವೈಯಕ್ತಿಕ ಅಥವಾ ಬ್ಯಾಂಕಿಂಗ್ ವಿವರಗಳನ್ನು ಹಂಚಿಕೊಳ್ಳಲು ಕೇಳುವ ಇಮೇಲ್‌ಗಳಿಗೆ ಪ್ರತಿಕ್ರಿಯೆ ನೀಡಬೇಡಿ ಎಂದು ಹೇಳಿದೆ.

ಅವಧಿ

ಸಂದೇಶದ ಮೂಲಕ ವಂಚಕರು ತಮ್ಮ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಲು ಸಂದೇಶದೊಂದಿಗೆ ಕಳುಹಿಸಲಾದ ಲಿಂಕ್ ಅನ್ನು ಕ್ಲಿಕ್ ಮಾಡಲು ಬಳಕೆದಾರರನ್ನು ಕೇಳುತ್ತಾರೆ. ಅದರಂತೆ ವಂಚನೆ ಸಂದೇಶದಲ್ಲಿದೆ "ಆತ್ಮೀಯ A/c ಹೋಲ್ಡರ್ SBI ಬ್ಯಾಂಕ್ ಡಾಕ್ಯುಮೆಂಟ್‌ಗಳ ಅವಧಿ ಮುಗಿದಿದೆ A/c ಅನ್ನು ನಿರ್ಬಂಧಿಸಲಾಗುತ್ತದೆ ಈಗ ಕ್ಲಿಕ್ ಮಾಡಿ http://sbikvs.II ನೆಟ್‌ಬ್ಯಾಂಕಿಂಗ್‌ನಿಂದ ನವೀಕರಿಸಿ." ಎಂದು ಬರೆಯಲಾಗಿದೆ. ಒಂದು ವೇಳೆ ಈ ಲಿಂಕ್‌ ಅನ್ನು ಕ್ಲಿಕ್‌ ಮಾಡಿದರೆ ನಿಮ್ಮ ವೈಯುಕ್ತಿಕ ಮಾಹಿತಿ ಕಳುವಾಗಲಿದೆ. ಆದರಿಂದ ಎಸ್‌ಬಿಐ ಗ್ರಾಹಕರು ಈ ಮಾದರಿಯ ಸಂದೇಶಗಳನ್ನು ಸ್ವೀಕರಿಸಿದರೆ, ತಕ್ಷಣವೇ report.phishing @sbi.co.in ನಲ್ಲಿ ವರದಿ ಮಾಡಬೇಕು ಮತ್ತು ಬ್ಯಾಂಕ್ ತಕ್ಷಣ ಕ್ರಮ ತೆಗೆದುಕೊಳ್ಳುತ್ತದೆ.

ಸಂದೇಶವನ್ನು

ಇನ್ನು ಈ ಸಂದೇಶವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದು SBI ನಿಂದ ಕಳುಹಿಸಿಲ್ಲ ಅನ್ನೊದು ತಿಳಿಯುತ್ತದೆ. ಏಕೆಂದರೆ ಇದರಲ್ಲಿರುವ ವ್ಯಾಕರಣ ದೋಷಗಳು, ಫಾರ್ಮ್ಯಾಟ್ ಸಮಸ್ಯೆಗಳು, ವಿರಾಮಚಿಹ್ನೆಯ ಸಮಸ್ಯೆಗಳನ್ನು ಗಮನಿಸಬಹುದು. ಅಲ್ಲದೆ ಇದರಲ್ಲಿರುವ ಲಿಂಕ್ ಕೂಡ ಅಧಿಕೃತ SBI ವೆಬ್‌ಸೈಟ್‌ನಲ್ಲಿಲ್ಲ. ಇನ್ನು ಎಸ್‌ಬಿಐ ಬಳಕೆದಾರರಿಗೆ ನಕಲಿ ಸಂದೇಶಗಳು ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಕೂಡ ಅನೇಕ ಸ್ಕ್ಯಾಮರ್‌ಗಳು ಎಸ್‌ಬಿಐ ಬಳಕೆದಾರರಿಗೆ ತಮ್ಮ ಬ್ಯಾಂಕಿಂಗ್ ಮತ್ತು ವೈಯಕ್ತಿಕ ವಿವರಗಳನ್ನು ನಮೂದಿಸಲು ಅಗತ್ಯವಿರುವ ಲಿಂಕ್ ಅನ್ನು ಕಳುಹಿಸಿ ವಂಚಿಸಿದ್ದಾರೆ. ಆದರಿಂದ ನಕಲಿ ಸಂದೇಶಗಳ ಬಗ್ಗೆ ಬ್ಯಾಂಕ್‌ ಗ್ರಾಹಕರು ಎಚ್ಚರದಿಂದಿರುವುದು ಒಳ್ಳೆಯದು.

Most Read Articles
Best Mobiles in India

Read more about:
English summary
PIB is asking SBI users to be careful of messages that inform them that their account has been blocked.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X