ಸರ್ಕಾರದಿಂದ ಹೊಸ 'ಫೇಸ್ ರಿಕಗ್ನಿಷನ್ ಸಿಸ್ಟಮ್'; ಮಾರುವೇಷದಲ್ಲಿದ್ದರೂ ಪತ್ತೆ ಮಾಡುತ್ತೆ!

|

ನಿರ್ಬಂಧಿತ ವಲಯಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಡಿಮೆ ರೆಸಲ್ಯೂಶನ್ ಚಿತ್ರಗಳಲ್ಲಿಯೂ ಸಹ, ಮುಖವಾಡ ಧರಿಸಿರುವ ಅಥವಾ ಮುಖ ಮುಚ್ಚಿಕೊಂಡಿರುವ ಅಥವಾ ಮಾಸ್ಕ್ ಹಾಕಿರುವ ಅಥವಾ ಮಂಕಿ ಕ್ಯಾಪ್ ಹಾಕಿರುವ, ಸಮಾಜಘಾತುಕ ವ್ಯಕ್ತಿಗಳ ಮುಖ ಗುರುತಿಸಲು ಫೇಸ್ ರಿಕಗ್ನಿಶನ್ ಸಿಸ್ಟಮ್ (Face Recognition System) ವ್ಯವಸ್ಥೆಯನ್ನು ಭಾರತ ಸರ್ಕಾರ ಅಭಿವೃದ್ಧಿಪಡಿಸಿದೆ.

ಭಾರತೀಯ

ರಕ್ಷಣಾ ಸಚಿವಾಲಯವು ತನ್ನ ಇತ್ತೀಚಿನ AI in Defence ಶೀರ್ಷಿಕೆಯ ವರದಿಯಲ್ಲಿ ಮಾರುವೇಷದಲ್ಲಿರುವವರ ಮುಖ ಗುರುತಿಸುವಿಕೆ ವ್ಯವಸ್ಥೆ (Face Recognition System under Disguise -FRSD) ತಂತ್ರಜ್ಞಾನದ ಬಗ್ಗೆ ತಿಳಿಸಿದೆ. ಇದನ್ನು ಮುಖ್ಯವಾಗಿ ಭಾರತೀಯ ಸೇನೆಗಾಗಿ ಅಭಿವೃದ್ಧಿಪಡಿಸಿದೆ. AI in Defence ವರದಿಯಲ್ಲಿ ಇನ್ನೂ ಹಲವಾರು AI ಆಧರಿತ ವ್ಯವಸ್ಥೆಗಳ ಬಗ್ಗೆಯೂ ಹೇಳಲಾಗಿದೆ. ಸರ್ವೇಲನ್ಸ್​ ಕ್ಯಾಮೆರಾಗಳ ಮೂಲಕ ಕಾಡಿನಲ್ಲಿ ಮುಖ ಗುರುತಿಸುವಿಕೆ ಬಹಳ ಕಷ್ಟಕರ.

ಹಲವಾರು

ಕಾಡಿನಲ್ಲಿ ಸೆರೆಹಿಡಿಯಲಾದ ಚಿತ್ರಗಳು ಕಡಿಮೆ ಬೆಳಕಿನ ಕಾರಣದಿಂದ ಕಡಿಮೆ ರೆಲ್ಯೂಶನ್ ಹೊಂದಿರುತ್ತವೆ. ಅಲ್ಲದೇ ವ್ಯಕ್ತಿಗಳು ಮಾರುವೇಷದಲ್ಲಿದ್ದಾಗ, ಜನಜಂಗುಳಿಯಲ್ಲಿದ್ದಾಗ ಹಾಗೂ ಹಲವಾರು ಕಡೆಗಳಿಂದ ಬೆಳಕು ಬರುತ್ತಿರುವಾಗ ಸೆರೆಹಿಡಿದ ಚಿತ್ರಗಳಲ್ಲಿನ ವ್ಯಕ್ತಿಗಳ ಮುಖ ಗುರುತಿಸುವಾಗ ಈ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ. MoD ವರದಿಯ ಪ್ರಕಾರ, FRSD ಅಲ್ಗಾರಿದಮ್ ಅನ್ನು ಫೇಸ್ ಮಾಸ್ಕ್, ಗಡ್ಡ ಬಿಡುವುದು, ಮೀಸೆ ಬೆಳೆಸುವುದು, ವಿಗ್ ಧರಿಸುವುದು, ಕನ್ನಡಕ ಧರಿಸುವುದು, ತಲೆಗೆ ಬಟ್ಟೆ ಕಟ್ಟುವುದು, ಮಂಕಿ ಕ್ಯಾಪ್ ಧರಿಸುವುದು, ಟೋಪಿ ಧರಿಸುವುದು ಮುಂತಾದ ಮಾರುವೇಷಗಳಲ್ಲಿರುವಾಗಲೂ ಮುಖ ಗುರುತಿಸುವ ವ್ಯವಸ್ಥೆಯು ನೋಡುವ ರೀತಿಯಲ್ಲಿ ತರಬೇತಿ ನೀಡಲಾಗಿದೆ.

ವಲಯಗಳಲ್ಲಿ

ಮಾರುವೇಷಗಳು ಮಾತ್ರವಲ್ಲದೇ ಹಲವಾರು ಬೆಳಕಿನ ಸಂಯೋಜನೆಗಳು, ಮುಖದ ಮೇಲೆ ಬಿದ್ದ ನೆರಳು, ಜನಜಂಗುಳಿಯ ಗೊಂದಲ ಮುಂತಾದುವುಗಳನ್ನು ಸಹ ಹೊಸ ಫೇಸ್ ರಿಕಗ್ನಿಶನ್ ತಂತ್ರಜ್ಞಾನ ಪರಿಹರಿಸಬಲ್ಲದು. ಈ ವ್ಯವಸ್ಥೆಯನ್ನು ನಿರ್ಬಂಧಿತ ಮತ್ತು ಸುರಕ್ಷತಾ ವಲಯಗಳಲ್ಲಿ ವಿಡಿಯೋ ಸರ್ವೇಲನ್ಸ್​ಗಾಗಿ ಅಳವಡಿಸಬಹುದಾಗಿದೆ. 'AI- ಚಾಲಿತ ವಿಶ್ಲೇಷಣೆ ಮಾಡ್ಯೂಲ್ ವಿವಿಧ ಮೂಲಗಳಿಂದ ಗುಪ್ತಚರ ಡೇಟಾವನ್ನು ಪ್ರಕ್ರಿಯೆಗೊಳಿಸಲು ಶಕ್ತಗೊಳಿಸುತ್ತದೆ ಮತ್ತು ನಿಖರವಾದ ಮಾಹಿತಿ ಸಂಗ್ರಹಣೆಯ ಸಹಾಯದಿಂದ ಭಯೋತ್ಪಾದಕರು ಮತ್ತು ದೇಶ ವಿರೋಧಿ ಅಂಶಗಳನ್ನು ಗುರುತಿಸಲು ಮತ್ತು ಪತ್ತೆಹಚ್ಚಲು ಸಹಾಯ ಮಾಡುತ್ತದೆ' ಎಂದು MoD ವರದಿ ಹೇಳಿದೆ.

ಅಲ್ಗೋರಿದಮ್

ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡುವ ಸಮಾಜಘಾತುಕ ವ್ಯಕ್ತಿಗಳನ್ನು ಪತ್ತೆ ಮಾಡಲು ಸಹ ಇದನ್ನು ಬಳಸಬಹುದಾಗಿದೆ. ಅಲ್ಲದೆ ಬೃಹತ್ ಪ್ರಮಾಣದ ದತ್ತಾಂಶದಿಂದ ಮುಖ ಪತ್ತೆ ಮಾಡಲು ಕೂಡ ಈ ಅಲ್ಗೋರಿದಮ್ ಅನ್ನು ಸುರಕ್ಷತಾ ಏಜೆನ್ಸಿಗಳು ಬಳಸಿಕೊಳ್ಳಬಹುದು. AI ಆಧಾರಿತ ವ್ಯವಸ್ಥೆ: ಸೀಕರ್ ಸಿಸ್ಟಮ್ ಎಂದು ಕರೆಯಲ್ಪಡುವ ಮತ್ತೊಂದು AI ಆಧಾರಿತ ವ್ಯವಸ್ಥೆಯನ್ನು ತಯಾರಿಸಲಾಗಿದೆ.

ಸ್ಥಾಪಿಸುವಲ್ಲಿ

ಶಸ್ತ್ರಾಸ್ತ್ರ ವ್ಯವಸ್ಥೆಗಳಲ್ಲಿ ಸ್ವಾಯತ್ತತೆಯ ಪರಿಚಯ, ISR (ಗುಪ್ತಚರ, ಕಣ್ಗಾವಲು ಮತ್ತು ವಿಚಕ್ಷಣ), ದತ್ತಾಂಶ ನಿರ್ವಹಣೆ, ಭಯೋತ್ಪಾದನೆಯನ್ನು ನಿಲ್ಲಿಸುವಲ್ಲಿ, ಭಯೋತ್ಪಾದನಾ ನಿಗ್ರಹ ಕ್ರಮಗಳನ್ನು ಸ್ಥಾಪಿಸುವಲ್ಲಿ, ಸೈನಿಕರನ್ನು ರಕ್ಷಿಸುವಲ್ಲಿ ಒಂದು ದೊಡ್ಡ ಆಸ್ತಿಯಾಗಿದೆ. 'ವಾಸ್ತವವಾಗಿ, ರಕ್ಷಣೆಯಲ್ಲಿನ AI ಆಳವಾದ ಮಟ್ಟದಲ್ಲಿ ಯುದ್ಧ ಮತ್ತು ಸಂಘರ್ಷವನ್ನು ಬದಲಾಯಿಸಬಹುದು' ಎಂದು ವರದಿ ಹೇಳಿದೆ.

ಮೇಲ್ವಿಚಾರಣೆ

ಸ್ವಯಂ ಒಳಗೊಂಡಿರುವ, ಮುಖದ ಗುರುತಿಸುವಿಕೆ, ಕಣ್ಗಾವಲು, ಮೇಲ್ವಿಚಾರಣೆ ಮತ್ತು ವಿಶ್ಲೇಷಣಾ ವ್ಯವಸ್ಥೆಯು ಭಯೋತ್ಪಾದನೆಯನ್ನು ಎದುರಿಸಲು ಬೆದರಿಕೆಗಳನ್ನು ಗುರುತಿಸಲು ಮತ್ತು ಪತ್ತೆಹಚ್ಚಲು, ನಿರಂತರ ಕಣ್ಗಾವಲು ಮತ್ತು ತೊಂದರೆಗೊಳಗಾದ ಪ್ರದೇಶಗಳ ಮೇಲ್ವಿಚಾರಣೆ ಮಾಡಲು ಇದನ್ನು ಬಳಸಬಹುದಾಗಿದೆ. ಹೆಚ್ಚುವರಿಯಾಗಿ, ನಿರ್ಣಾಯಕ ಮಿಲಿಟರಿ ಮತ್ತು ನಾಗರಿಕ ಸಂಸ್ಥೆಗಳ ಅತ್ಯಾಧುನಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಗಡಿ ದಾಟುವ ಸ್ಥಳಗಳಲ್ಲಿ ಮೇಲ್ವಿಚಾರಣೆ ಮಾಡಲು ಈ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು.

Best Mobiles in India

English summary
Govt develops face recognition system to spot anti-social elements.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X