Just In
Don't Miss
- News
LIVE: ಜಾರ್ಖಂಡ್ 3ನೇ ಹಂತದ ಮತದಾನ ಸಂಪೂರ್ಣ ಅಪ್ಡೇಟ್ಸ್
- Sports
ವಿಶ್ವದಾಖಲೆಗಾಗಿ ಅಫ್ರಿದಿ, ಗೇಲ್ ಸಾಲು ಸೇರಿದ ಹಿಟ್ಮ್ಯಾನ್ ರೋಹಿತ್!
- Movies
ಬಿಗ್ ಬಾಸ್ ಶೋನಿಂದ ಹೊರಬಂದ ಸಲ್ಮಾನ್ ಖಾನ್, ಹೊಸ ನಿರೂಪಕಿ ಎಂಟ್ರಿ
- Lifestyle
ದಂಪತಿ ನಡುವಿದ್ದ ಭಿನ್ನಾಭಿಪ್ರಾಯ ಮತ್ತೆ ಸೆಕ್ಸ್ ಲೈಫ್ ಉತ್ತಮವಾಗಲು ಟಿಪ್ಸ್
- Finance
ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್ಟ್ರೊಜ್ ಕಾರು
- Education
ಸ್ಪೋರ್ಟ್ಸ್ ಅಥಾರಿಟಿಯಲ್ಲಿ 130 ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿ.. ತಿಂಗಳಿಗೆ 40,000/-ರೂ ವೇತನ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಟಿಕ್ಟಾಕ್, ಹೆಲೊಗೆ ಮತ್ತೆ ನೋಟಿಸ್!..ಬ್ಯಾನ್ ಮಾಡಲು ಒತ್ತಡ?
ದೇಶದ್ರೋಹಿ ಚಟುವಟಿಕೆಗಳಿಗೆ ಟಿಕ್ಟಾಕ್ ಹಾಗೂ ಹೆಲೋ ಆಪ್ಗಳನ್ನು ಬಳಸಲಾಗುತ್ತಿದೆ ಎಂಬ ದೂರಿನ ಮೇರೆಗೆ ಎರಡೂ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ನೋಟಿಸ್ ನೀಡಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆಯಾಗಿರುವ ಸ್ವದೇಶಿ ಜಾಗರಣ ಮಂಚ್ ಇತ್ತೀಚೆಗೆ ಈ ಬಗ್ಗೆ ದೂರು ನೀಡಿತ್ತು. ಇದರ ಬೆನ್ನಲ್ಲೇ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನೋಟಿಸ್ ಜಾರಿ ಮಾಡಿದೆ. ಜತೆಗೆ ದತ್ತಾಂಶ ವರ್ಗಾವಣೆ, ಸುಳ್ಳು ಸುದ್ದಿ, ಮತ್ತಿತರೆ ವಿಚಾರಗಳ ಸಂಬಂಧ 21 ಪ್ರಶ್ನೆಗಳನ್ನೂ ಕೇಳಿದೆ.
ಹೌದು, ಚೀನಾದ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಟಿಕ್ಟಾಕ್ ಮತ್ತು ಹೆಲೊಗಳಿಗೆ ಕೇಂದ್ರ ಸರ್ಕಾರ ನೋಟಿಸ್ ನೀಡಿದ್ದು, ಭಾರತದಲ್ಲಿ ದೇಶವಿರೋಧಿ ಚಟುವಟಿಕೆಗಳಿಗೆ ಈ ತಾಣಗಳು ಬಳಕೆಯಾಗುತ್ತಿವೆ ಎಂದು ಆರೋಪಿಸಲಾಗಿದೆ. ಎರಡೂ ಸಂಸ್ಥೆಗಳಿಗೆ ನೋಟಿಸ್ ನೀಡಿರುವ ಮಾಹಿತಿ ತಂತ್ರಜ್ಞಾನ ಸಚಿವಾಲಯವು, ಈ ನೋಟಿಸ್ಗೆ ಪ್ರತಿಕ್ರಿಯೆ ನೀಡಲು ಇದೇ 22ರ ಗಡುವು ನೀಡಿದೆ. ಅದರೊಳಗೆ ಪ್ರತಿಕ್ರಿಯೆ ನೀಡದೇ ಇದ್ದರೆ ಈ ಆಪ್ಗಳ ಮೇಲೆ ನಿಷೇಧ ಹೇರುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸೈಬರ್ ಕಾನೂನು ಮತ್ತು ಇ-ಭದ್ರತೆ ವಿಭಾಗವು ಎರಡೂ ಸಂಸ್ಥೆಗಳಿಗೆ ಸುದೀರ್ಘ ಪ್ರಶ್ನಾವಳಿಯನ್ನು ಕಳುಹಿಸಿದ್ದು, ಆಪ್ ಮೂಲಕ ಅನಧಿಕೃತ ಮಾಹಿತಿ ಹಂಚಿಕೆ ನಡೆಯುತ್ತಿದೆಯೇ ಎಂಬ ಪ್ರಶ್ನೆಯೂ ಅದರಲ್ಲಿ ಸೇರಿದೆ. ದೇಶ ದ್ರೋಹಿ ಚಟುವಟಿಕೆಗಳ ಕುರಿತ ಆರೋಪಗಳಿಗೆ ಉತ್ತರಿಸುವಂತೆ ಹಾಗೂ ಭಾರತೀಯ ಗ್ರಾಹಕರ ಡೇಟಾಗಳನ್ನು ವಿದೇಶಕ್ಕೆ ಅಥವಾ ಬೇರಾವುದೇ ಖಾಸಗಿ ಕಂಪನಿಗೆ ವರ್ಗಾವಣೆ ಅಥವಾ ಮಾರಾಟ ಮಾಡದಿರುವಂತೆಯೂ ಸರ್ಕಾರ ಸೂಚಿಸಿದೆ ಎನ್ನಲಾಗಿದೆ.
ಇನ್ನು ದೇಶ ದ್ರೋಹಿ ಚಟುವಟಿಕೆಗಳ ಕುರಿತ ಆರೋಪಗಳಿಗೆ ಎರಡೂ ಸಂಸ್ಥೆಗಳು ಜಂಟಿಯಾಗಿ ಪ್ರತಿಕ್ರಿಯಿಸಿವೆ. ಭಾರತವು ನಮ್ಮ ಅತ್ಯಂತ ಪ್ರಬಲ ಮಾರುಕಟ್ಟೆಯಾಗಿದ್ದು ಸರ್ಕಾರದ ಜತೆ ತಾವು ಸಹಕರಿಸುವುದಾಗಿ ಟಿಕ್ಟಾಕ್ ಮತ್ತು ಹೆಲೊ ತಾಣಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. ನಿಮಗೆಲ್ಲಾ ತಿಳಿದಿರುವಂತೆ ಕಳೆದ ಏಪ್ರಿಲ್ನಲ್ಲಿ ಟಿಕ್ಟಾಕ್ ಆಪ್ ನಿಷೇಧಿಸಿದ್ದ ಮದ್ರಾಸ್ ಹೈಕೋರ್ಟ್ ಬಳಿಕ ನಿಷೇಧ ಹಿಂಪಡೆದಿತ್ತು. ಇದೀಗ ಮತ್ತೆ ನಿಷೇಧದ ಸುಳಿಯಲ್ಲಿ ಟಿಕ್ಟಾಕ್ ಆಪ್ ಸಿಲುಕಿದ್ದರೆ, ಹೆಲೊ ಹೊಸದಾಗಿ ಸೇರಿಕೊಂಡಿದೆ.
ಮೊಬೈಲ್ ನಂಬರ್ ಬದಲಿಸುವಾಗ ಹುಷಾರ್!..ಈ ಸುದ್ದಿ ಭಯ ಹುಟ್ಟಿಸುತ್ತಿದೆ!
ಈ ಎರಡೂ ಆಪ್ಗಳು ಚೀನಾದ ಅಂತರ್ಜಾಲ ಸಂಸ್ಥೆ ಬೈಟ್ಡಾನ್ಸ್ನ ಮಾಲೀಕತ್ವದ್ದಾಗಿದೆ. ಬೈಟ್ಡಾನ್ಸ್ ಸಂಸ್ಥೆಯು ತನ್ನ ಟಿಕ್ಟಾಕ್ ಮತ್ತು ಹೆಲೊ ಆಪ್ಗಳಿಗಾಗಿ ಮುಂದಿನ ಮೂರು ವರ್ಷಗಳಲ್ಲಿ ಭಾರತದಲ್ಲಿ 7,000 ಕೋಟಿ ರೂ. ಬಂಡವಾಳ ಹೂಡಲು ನಿರ್ಧರಿಸಿದೆ ಎನ್ನಲಾಗಿದ್ದು, ಭಾರತದಲ್ಲಿ ತಂತ್ರಜ್ಞಾನ ಮೂಲಸೌಕರ್ಯ ಕಲ್ಪಿಸಲು ಮುಂದಾಗಿತ್ತು. ಈ ವೇಳೆಯಲ್ಲಿ ಟಿಕ್ಟಾಕ್ ಮತ್ತು ಹೆಲೊ ಮೇಲೆ ಮತ್ತೆ ಸರ್ಕಾರ ಕ್ರಮ ಕೈಗೊಳ್ಳುಲು ಮುಂದಾಗಿರುವುದು ಕಂಪೆನಿಯ ಕೈ ಕಟ್ಟಿಹಾಕಿದಂತಾಗಿದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090