ಸರ್ಕಾರದಿಂದ 'ಆರೋಗ್ಯ ಸೇತು' ಕೊರೊನಾ ವೈರಸ್‌ ಟ್ರಾಕಿಂಗ್‌ ಆಪ್ ಬಿಡುಗಡೆ!

|

ದೇಶದಲ್ಲಿ ವ್ಯಾಪಕವಾಗಿ ವಿಸ್ತರಿಸುತ್ತಿರುವ ಕೊರೊನಾ ವೈರಸ್ ಸರಪಳಿಯನ್ನು ತುಂಡರಿಸಲು ಸರ್ಕಾರ 21 ದಿನಗಳ ಲಾಕ್‌ಡೌನ್ ಘೋಷಿಸಿದೆ. ಜನರು ಹೊರಗಡೆ ಓಡಾಡುವುದರಿಂದ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಹೀಗಾಗಿ ಸಾಮಾಜಿಕ ಅಂತರ ಕಾಪಾಡಿ ಮತ್ತು ಮನೆಯಲ್ಲಿ ಇರಿ ಎಂದು ಸೂಚಿಸಿದೆ. ಜನರಿಗೆ ಕೊರೊನಾ ವೈರಸ್‌ ಬಗ್ಗೆ ಸೂಕ್ತ ಮಾಹಿತಿ ಒದಗಿಸಲು ಮತ್ತು ಕೊರೊನಾ ವೈರಸ್ ಟ್ರಾಕ್ ಮಾಡಲು ಸರ್ಕಾರ ಇದೀಗ ಹೊಸದಾಗಿ ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ.

ಹೌದು, ಸಾರ್ವಜನಿಕರಿಗೆ ಕೊರೊನಾ ವೈರಸ್‌ ಟ್ರಾಕಿಂಗ್ ಮತ್ತು ಮಾಹಿತಿ ಒದಗಿಸಲು MyGov ಆಪ್‌ ಅನ್ನು ಹೊಂದಿದೆ. ಅದಾಗ್ಯೂ ಲೊಕೇಶನ್ ಆಧಾರಿತವಾಗಿ ಕೊರೊನಾ ಟ್ರಾಕ್ ಮಾಡುವುದಕ್ಕಾಗಿ ಈಗ ಆರೋಗ್ಯ ಸೇತು ಹೆಸರಿನ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಈ ಆಪ್ ಬಳಕೆದಾರರ ಲೊಕೇಶನ್ ಮತ್ತು ಬ್ಲೂಟೂತ್ ಆಕ್ಸಸ್‌ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ ಹಾಗೂ ಬಳಕೆದಾರರ ಸ್ಥಳದ ಸುತ್ತಮುತ್ತ ಕೋವಿಡ್-19 ಸೋಂಕಿತರು ಇದ್ದಾರ ಅಥವಾ ಇಲ್ಲವೇ ಎಂಬುದರ ಬಗ್ಗೆ ಮಾಹಿತಿ ತಿಳಿಸುತ್ತದೆ.

ಅಪಾಯದ ಮಟ್ಟ ಸೂಚಿಸುತ್ತದೆ

ಅಪಾಯದ ಮಟ್ಟ ಸೂಚಿಸುತ್ತದೆ

ಈ ಆಪ್ ಭಾರತದಲ್ಲಿನ ಕೊರೊನಾ ಸೋಂಕಿತರ ಅಂಕಿ-ಸಂಖ್ಯೆಯ ಪೂರ್ಣ ಮಾಹಿತಿ ಒಳಗೊಂಡಿದೆ. ಆಪ್ ಬಳಕೆ ಮಾಡುವ ವ್ಯಕ್ತಿಯು/ಬಳಕೆದಾರ ಯಾವ ಸ್ಥಳದಲ್ಲಿ ಇದ್ದಾರೆ ಎಂಬುದನ್ನು ಗುರುತಿಸಲು ಜಿಪಿಎಸ್ ಲೊಕೇಶನ್ ಆಕ್ಸಸ್ ಮಾಡಿಕೊಳ್ಳುತ್ತದೆ. ಹಾಗೂ ಕೊರೊನಾ ಸೋಂಕಿತರೇನಾದರೂ ಸುಮಾರು 6 ಅಡಿ ಅಂತರದಲ್ಲಿ ಇದ್ದಾರಾ ಇಲ್ಲವೇ ಎಂಬುದನ್ನು ತಿಳಿಸಲು ಬ್ಲೂಟೂತ್ ಸಂಕರ್ಪ ಬಳಕೆ ಆಗುತ್ತದೆ. ಲೊಕೇಶನ್ ಮತ್ತು ಬ್ಲೂಟೂತ್ ಈ ಆಧಾರದ ಮೇಲೆ ಬಳಕೆದಾರರ ಅಪಾಯ ಇದ್ದಾರಾ ಅಥವಾ ಇಲ್ಲವೇ ಎಂಬುದನ್ನು ತೋರಿಸುತ್ತದೆ.

ಟೋಲ್-ಫ್ರೀ ಸಂಖ್ಯೆ 1075

ಟೋಲ್-ಫ್ರೀ ಸಂಖ್ಯೆ 1075

ಬಳಕೆದಾರರು ಕೊರೊನಾ ಸೋಂಕು ತಗಲುವ ಹೆಚ್ಚಿನ ಅಪಾಯದ ಪ್ರದೇಶದಲ್ಲಿದ್ದರೆ, ಆರೋಗ್ಯ ಪರೀಕ್ಷೆಗೆ ಹೋಗಲು ಸೂಚಿಸುತ್ತದೆ. ಮತ್ತು ನಿಮ್ಮ ಸ್ಥಳದ ಹತ್ತಿರದ ಆರೋಗ್ಯ ಪರೀಕ್ಷಾ ಕೇಂದ್ರದಲ್ಲಿ ಅಪಾಯಿಂಟ್ಮೆಂಟ್ ಅನ್ನು ನಿಗದಿಪಡಿಸಲು ಟೋಲ್-ಫ್ರೀ ಸಂಖ್ಯೆ 1075 ಗೆ ಕರೆ ಮಾಡಲು ಈ ಅಪ್ಲಿಕೇಶನ್ ಬಳಕೆದಾರರಿಗೆ ಸಲಹೆ ನೀಡುತ್ತದೆ. ಹಾಗೂ ಈ ಆರೋಗ್ಯ ಸೇತು ಆಪ್ ಕೊರೊನಾ ವೈರಾಣು ಸೋಂಕು ತಗುಲದಂತೆ ತಡೆಯುವ ಬಗ್ಗೆ ಮಾಹಿತಿ ನೀಡುತ್ತದೆ.

ಆರೋಗ್ಯ ಸಹಾಯವಾಣಿ ಸಂಖ್ಯೆ

ಆರೋಗ್ಯ ಸಹಾಯವಾಣಿ ಸಂಖ್ಯೆ

ಒಂದು ವೇಳೆ ಆಪ್ ಬಳಕೆದಾರರು COVID-19 ಪರೀಕ್ಷಗೆ ಒಳಗಾಗಿದ್ದರೇ ಅಥವಾ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದರೆ ಅವರ ಮಾಹಿತಿ/ಡೇಟಾವನ್ನು ಸರ್ಕಾರದೊಂದಿಗೆ ಹಂಚಿಕೊಳ್ಳುತ್ತದೆ. ಅಲ್ಲದೇ ಕೊರೊನಾ ವೈರಸ್‌ ಸೋಂಕಿನ ಬಗ್ಗೆ ಬಳಕೆದಾರರಲ್ಲಿರುವ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವ ಚಾಟ್‌ ಬಾಟ್ ವ್ಯವಸ್ಥೆಯನ್ನು ಅನ್ನು ಅಪ್ಲಿಕೇಶನ್ ಒಳಗೊಂಡಿದೆ, ಚಾಟ್‌ ಬಾಟ್ ಮೂಲಕ ರೋಗಲಕ್ಷಣಗಳ ಬಗ್ಗೆ ತಿಳಿಯಬಹುದಾಗಿದೆ. ಹಾಗೂ ಆರೋಗ್ಯ ಸಹಾಯವಾಣಿ ಸಂಖ್ಯೆಗಳನ್ನು ನೀಡುತ್ತದೆ.

ಕೊರೊನಾ ಕವಚ್ ಆಪ್

ಕೊರೊನಾ ಕವಚ್ ಆಪ್

ಕೊರೊನಾ ಕವಚ್ ಆಪ್ ಸಹ ಕೋವಿಡ್-19 ಟ್ರಾಕಿಂಗ್ ಆಪ್ ಆಗಿದ್ದು, ಇದು ಸಹ ಲೊಕೇಶನ್ ಆಧಾರಿತವಾಗಿದೆ. ಕೆಲವು ಕೊರೊನಾ ಸೋಂಕಿತರ ಬಗ್ಗೆ ವೈರಾಣು ಹರಡುವುದನ್ನು ತಡೆಯಲು ಸರ್ಕಾರ ಲೊಕೇಶನ್ ಆಧಾರಿತವಾಗಿ ಕಾರ್ಯನಿರ್ವಹಿಸಲಿದೆ. ಇನ್ನು ಈ ಆಪ್‌ ಅನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (MHFW) ಸಹಯೋಗದೊಂದಿಗೆ ಕೊರೊನಾ ಕವಚ್ ಹೆಸರಿನ COVID-19 ಟ್ರ್ಯಾಕರ್ ಆಪ್‌ ಅಭಿವೃದ್ದಿ ಪಡಿಸಿದೆ.

ಕೊರೊನಾ ಕವಚ್ ಆಪ್ ಕಾರ್ಯ ಹೇಗೆ

ಕೊರೊನಾ ಕವಚ್ ಆಪ್ ಕಾರ್ಯ ಹೇಗೆ

ಬಳಕೆದಾರರು ಈ ಆಪ್‌ಗೆ ಲಾಗ್‌ ಇನ್ ಆದ ಮೊದಲಿಗೆ ಆರು ಸರಳ ಪ್ರಶ್ನೆಗಳಿಗೆ ಅವರು ಉತ್ತರಿಸಬೇಕಿರುತ್ತದೆ. ಅವುಗಳು ಕೊರೊನಾ ವೈರಸ್‌ ಕುರಿತಾಗಿರುತ್ತವೆ. ನಿಮಗೆ ಉಸಿರಾಟದ ತೊಂದರೇ ಇದೆಯಾ? ನೀವು ವಿದೇಶದಿಂದ ಬಂದಿರುವಿರಾ? ದೇಹದ ಉಷ್ಣಾಂಶ ಎಷ್ಟು? ಒಣ ಕೆಮ್ಮು ಅಥವಾ ಗಂಟಲು ನೋವು ಇದೆಯಾ? ವಿದೇಶದಿಂದ ಯಾರನ್ನಾದರು ಭೇಟಿ ಮಾಡಿರುವಿರಾ? ಈ ಪ್ರಶ್ನೆಗಳು ಇರುತ್ತವೆ.

ಬಳಕೆದಾರರ ವಿಂಗಡಣೆ

ಬಳಕೆದಾರರ ವಿಂಗಡಣೆ

ಆಪ್‌ ಲಾಗ್‌ ಇನ್ ಸಮಯದಲ್ಲಿ ಕೇಳಲಾದ ಪ್ರಶ್ನೆಗಳ ಅಧಾರದ ಮೇಲೆ ಬಳಕೆದಾರರನ್ನು ವಿಂಗಡಿಸುವ ವ್ಯವಸ್ಥೆ ಈ ಆಪ್‌ನಲ್ಲಿ ಮಾಡಲಾಗಿದೆ. ಎಲ್ಲ ಪ್ರಶ್ನೆ ಉತ್ತರಿಸಿದ ಬಳಿಕ ಹಸಿರು ಬಣ್ಣದ ಕೋಡ್ ಕಂಡರೇ ಎಲ್ಲ ಉತ್ತಮ ಎಂದರ್ಥ. ಅದೇ ಕಿತ್ತಳೆ ಬಣ್ಣದ ಕೋಡ್ ಕಂಡರೇ ವೈದ್ಯರನ್ನು ಸಂಪರ್ಕಿಸಲು ಸೂಚನೆ. ಇನ್ನು ಸಂಪರ್ಕ ತಡೆಗೆ ಹಳದಿ ಬಣ್ಣದ ಕೋಡ್ ಮತ್ತು ಸೋಂಕಿತರಿಗೆ ಕೆಂಪು ಬಣ್ಣದ ಕೋಡ್ ಸೂಚಿಸಲಾಗುತ್ತದೆ.

ಅಲರ್ಟ್ ಮಾಡುತ್ತೆ

ಅಲರ್ಟ್ ಮಾಡುತ್ತೆ

ಬಳಕೆದಾರರು ಪ್ರಶ್ನೆಗಳಿಗೆ ಮಾಹಿತಿ ನೀಡಿ. ಬಣ್ಣಗಳ ಸೂಚನೆ ಪಡೆದ ಬಳಿಕ ಕವಚ್ ಬಟನ್ ಅನ್ನು ಸಕ್ರಿಯ/ಆಕ್ಟಿವ್ ಮಾಡಿಕೊಳ್ಳುವುದು. ಆ ನಂತರ ಈ ಆಪ್ ನಿಮ್ಮನ್ನು ಟ್ರಾಕ್ ಮಾಡುತ್ತಲೇ ಇರುತ್ತದೆ. ಮನೆಯಿಂದ ಹೋರಗೆ ಹೋದಾಗ ನಿಮ್ಮ ಲೊಕೇಶನ್ ವ್ಯಾಪ್ತಿಯಲ್ಲಿ ಎಲ್ಲಾದರು ಸೋಂಕಿತರು ಅಥವಾ quarantine ವ್ಯಕ್ತಿಗಳು ಬಂದಿರುವ ವ್ಯಕ್ತಿಗಳು ಇದ್ದರೇ ಅಲರ್ಟ್ ಮಾಡುತ್ತದೆ ಎಂದು ಹೇಳಲಾಗಿದೆ.

Most Read Articles
Best Mobiles in India

English summary
Aarogya Setu app will use your smartphone’s location data and Bluetooth to check if you have been near a COVID-19 infected person or not.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X