ಕೊರೊನಾ ಪತ್ತೆ ಹಚ್ಚಲು ಸರ್ಕಾರದಿಂದ ಎಕ್ಸ್‌ರೇ ಸೇತು ಅಪ್ಲಿಕೇಶನ್‌ ಬಿಡುಗಡೆ!

|

ಪ್ರಸ್ತುತ ದಿನಗಳಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಇದನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಸರ್ಕಾರ ಕೂಡ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಕೊರೊನಾ ಅಲೆ ನಿಯಂತ್ರಣಕ್ಕೆ ಹಲವಾರು ಕ್ರಮ ಕೈ ಗೊಂಡಿರುವ ಸರ್ಕಾರ ಇದೀಗ ಹೊಸ ಅಪ್ಲಿಕೇಶನ್‌ ಒಂದನ್ನು ಪರಿಚಯಿಸಿದೆ. ಸದ್ಯ ಇದೀಗ ಸರ್ಕಾರವು ಕೃತಕ ಬುದ್ಧಿಮತ್ತೆ ಆಧಾರಿತ ಎಕ್ಸ್-ರೇ ಸೇತುವನ್ನು ಪ್ರಾರಂಭಿಸಿದೆ, ಇದನ್ನು ವಾಟ್ಸಾಪ್ ಮೂಲಕ ಕೂಡ ನಿರ್ವಹಿಸಬಹುದಾಗಿದೆ.

ಸರ್ಕಾರ

ಹೌದು, ಸರ್ಕಾರ ಎಕ್ಸ್‌ರೇ ಸೇತು ಎನ್ನುವ ಅಪ್ಲಿಕೇಶನ್‌ ಪರಿಚಯಿಸಿದೆ. ಇದು ಕೃತಕ ಬುದ್ದಿಮತ್ತೆ ಆಧಾರದಲ್ಲಿ ಕಾರ್ಯನಿರ್ವಹಿಸಲಿದೆ. ನಿಮ್ಮ ಎದೆಯ ಎಕ್ಸ್‌ರೇ ಬಳಸಿ ಕೋವಿಡ್ ಅನ್ನು ಕಂಡುಹಿಡಿಯುವ ಕಾರ್ಯವನ್ನು ಈ ಅಪ್ಲಿಕೇಶನ್‌ ಮಾಡಲಿದೆ. ಇದನ್ನು ವಾಟ್ಸಾಪ್‌ ಮೂಲಕ ಬಳಸಬಹುದಾಗಿದೆ. ಕೋವಿಡ್ ಪತ್ತೆಗಾಗಿ ಮೂಲ ಡಿವೈಸ್‌ಗಳಿಗೆ ಹೆಣಗಾಡುತ್ತಿರುವ ಗ್ರಾಮೀಣ ವೈದ್ಯರಿಗೆ ಇದು ಪ್ರಮುಖ ಸಾಧನವಾಗಲಿದೆ. ಇದಕ್ಕಾಗಿ ಸರ್ಕಾರವು ಲಾಭೋದ್ದೇಶವಿಲ್ಲದ ಸಂಸ್ಥೆ ಆರ್ಟ್‌ಪಾರ್ಕ್ ಮತ್ತು ನಿರಮೈ ಅವರೊಂದಿಗೆ ಪಾಲುದಾರಿಕೆ ಹೊಂದಿದೆ. ಹಾಗಾದ್ರೆ ಈ ಅಪ್ಲಿಕೇಶನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಮಾರ್ಟ್‌ಅಪ್‌

ಬೆಂಗಳೂರು ಮೂಲದ ಸ್ಮಾರ್ಟ್‌ಅಪ್‌ ಸಂಸ್ಥೆಯೊಂದು ಈ ಅಪ್ಲಿಕೇಶನ್‌ ಅನ್ನು ರೂಪಿಸಿದೆ. ಈ ಅಪ್ಲಿಕೇಶನ್‌ ಬಳಸಿ ಕೋವಿಡ್‌ ಟೆಸ್ಟ್‌ ಅನ್ನು ಮಾಡಬಹುದಾಗಿದೆ. ಇದರಲ್ಲಿರುವ ಎಐ ತಂತ್ರಜ್ಞಾನದ ಮೂಲಕ ಇದು ಸಾಧ್ಯವಾಗಲಿದೆ. ಅಂದರೆ ವಾಟ್ಸಾಪ್‌ ಮೂಲಕ ಕಳುಹಿಸಿದ ಎಕ್ಸ್‌ರೇ ಚಿತ್ರಗಳನ್ನು ಪರಿಶೀಲಿಸಿ ಕೋವಿಡ್‌ ವರದಿಯನ್ನು ನೀಡುವ ಸಾಮರ್ಥ್ಯವನ್ನು ಈ ಅಪ್ಲಿಕೇಶನ್‌ ಹೊಂದಿದೆ. ಎಐ ಸಿಸ್ಟಮ್ನೊಂದಿಗೆ ಸಂಸ್ಕರಿಸಿದ ಎಕ್ಸರೆ ಬಳಸಿ COVID-19 ಅನ್ನು ಕಂಡುಹಿಡಿಯಲು ಹೊಸ ತಂತ್ರಜ್ಞಾನವು ಸಹಾಯ ಮಾಡುತ್ತದೆ. ಇದಕ್ಕಾಗಿ ಪ್ರಸ್ತುತ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎನ್ನಲಾಗಿದೆ.

ARTPARK

ಕಳೆದ 10 ತಿಂಗಳುಗಳಲ್ಲಿ ARTPARK, ನಿರಮೈ ಆರೋಗ್ಯ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ AI ಸಂಶೋಧಕರ ನಿಕಟ ಸಹಯೋಗದೊಂದಿಗೆ ವಿನ್ಯಾಸಗೊಳಿಸಲಾಗಿರುವ Xraysetu ಕಾರ್ಯನಿರತ ವೈದ್ಯರಿಗೆ ಬಳಸಲು ತ್ವರಿತ ಮತ್ತು ಸರಳವಾಗಿದೆ. ಭಾರತೀಯ ಆರೋಗ್ಯ ರಕ್ಷಣೆಯ ಭವಿಷ್ಯಕ್ಕೆ ಇದು ಮಾದರಿಯಾಗಬಹುದು ಎಂದು ನಾವು ನಂಬುತ್ತೇವೆ, ಪ್ರತಿಯೊಬ್ಬರೂ ಇರಬಹುದಾದ ಎಲ್ಲರಿಗೂ ಪ್ರವೇಶಿಸಬಹುದು "ಎಂದು ವೆಬ್‌ಸೈಟ್ ನಲ್ಲಿ ಹೇಳಲಾಗಿದೆ. ಇನ್ನು ಸ್ಟಾರ್ಟ್ ಅಪ್ ನಿರಮೈ ಮತ್ತು ಐಐಎಸ್‌ಸಿ ಸಹಯೋಗದೊಂದಿಗೆ ಎಕ್ಸ್-ರೇ ಸೆಟು ಅಭಿವೃದ್ಧಿಪಡಿಸಲಾಗಿದೆ ಎಂದು ಆರ್ಟ್‌ವರ್ಕ್ ಸಿಇಒ ಉಮಕಾಂತ್ ಹೇಳಿದ್ದಾರೆ.

ಎಕ್ಸ್-ರೇ ಸೆಟು ಬಳಸಿ ಪರೀಕ್ಷೆಗಳನ್ನು ಹೇಗೆ ನಡೆಸಬಹುದು?

ಎಕ್ಸ್-ರೇ ಸೆಟು ಬಳಸಿ ಪರೀಕ್ಷೆಗಳನ್ನು ಹೇಗೆ ನಡೆಸಬಹುದು?

ಸದ್ಯ ಈ ಹೊಸ ಅಪ್ಲಿಕೇಶನ್‌ ಬಳಸಲು ವೈದ್ಯರು www.xraysetu.com ಗೆ ಭೇಟಿ ನೀಡಬೇಕಾಗಿದೆ. ಇದು ಪ್ರಸ್ತುತ ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ

ಹಂತ:1 ಒಮ್ಮೆ ನೀವು ವೆಬ್‌ಸೈಟ್‌ಗೆ ಭೇಟಿ ನೀಡಿದಾಗ, ನೀವು ‘ಉಚಿತ ಎಕ್ಸ್-ರೇ ಸೇತು ಬೀಟಾವನ್ನು ಪ್ರಯತ್ನಿಸಿ' ಬಟನ್ ಅನ್ನು ಕಾಣಬಹುದು.

ಹಂತ:2 ನೀವು ಗುಂಡಿಯನ್ನು ಕ್ಲಿಕ್ ಮಾಡಿದಾಗ, ನಿಮ್ಮನ್ನು ಎಕ್ಸ್-ರೇ ಸೇತುವಿನ ವಾಟ್ಸಾಪ್ ಚಾಟ್ ವಿಂಡೋಗೆ ಕರೆದೊಯ್ಯಲಾಗುತ್ತದೆ.

ಹಂತ:3 ನಂತರ ನೀವು ರೋಗಿಯ ಎಕ್ಸ್-ರೇ ಚಿತ್ರವನ್ನು ಕಳುಹಿಸಬಹುದು. 2 ಪುಟಗಳ ರೋಗನಿರ್ಣಯವನ್ನು ಕೆಲವೇ ನಿಮಿಷಗಳಲ್ಲಿ ಕಳುಹಿಸಲಾಗುತ್ತದೆ. ನಂತರ ವೈದ್ಯರು ರೋಗಿಗಳಿಗೆ ಅನುಗುಣವಾಗಿ ಸಲಹೆ ನೀಡಬಹುದು.

ಈ ಉಪಕರಣವು ಗ್ರಾಮೀಣ ಪ್ರದೇಶದ ವೈದ್ಯರು, ವಿಕಿರಣಶಾಸ್ತ್ರಜ್ಞರಿಗೆ ಮಾತ್ರ ಉಪಯುಕ್ತವಾಗಿದೆ. XraySetu ಬಳಸಿ, ಗ್ರಾಮೀಣ ವೈದ್ಯರು ನಿಮಿಷಗಳಲ್ಲಿ ಎದೆಯ XRay ಯ ವ್ಯಾಖ್ಯಾನವನ್ನು ಪಡೆಯಬಹುದು. ಈ ತಂತ್ರಜ್ಞಾನದ ವಿಶೇಷತೆಯೆಂದರೆ ಅದು ಕಡಿಮೆ ರೆಸಲ್ಯೂಶನ್ ಹೊಂದಿರುವ ಚಿತ್ರಗಳನ್ನು ಸಹ ಓದಬಲ್ಲದು ಎಂದು ಹೇಳಲಾಗಿದೆ.

Most Read Articles
Best Mobiles in India

English summary
For this project, the government plans to onboard 10,000 doctors in small towns were RT-PCR and CT Scans are not available for COVID detection.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X