Just In
Don't Miss
- News
LIVE: ಜಾರ್ಖಂಡ್ 3ನೇ ಹಂತದ ಮತದಾನ ಸಂಪೂರ್ಣ ಅಪ್ಡೇಟ್ಸ್
- Sports
ವಿಶ್ವದಾಖಲೆಗಾಗಿ ಅಫ್ರಿದಿ, ಗೇಲ್ ಸಾಲು ಸೇರಿದ ಹಿಟ್ಮ್ಯಾನ್ ರೋಹಿತ್!
- Movies
ಬಿಗ್ ಬಾಸ್ ಶೋನಿಂದ ಹೊರಬಂದ ಸಲ್ಮಾನ್ ಖಾನ್, ಹೊಸ ನಿರೂಪಕಿ ಎಂಟ್ರಿ
- Lifestyle
ದಂಪತಿ ನಡುವಿದ್ದ ಭಿನ್ನಾಭಿಪ್ರಾಯ ಮತ್ತೆ ಸೆಕ್ಸ್ ಲೈಫ್ ಉತ್ತಮವಾಗಲು ಟಿಪ್ಸ್
- Finance
ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್ಟ್ರೊಜ್ ಕಾರು
- Education
ಸ್ಪೋರ್ಟ್ಸ್ ಅಥಾರಿಟಿಯಲ್ಲಿ 130 ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿ.. ತಿಂಗಳಿಗೆ 40,000/-ರೂ ವೇತನ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಎಲ್ಲೆಲ್ಲೂ ವೈಫೈ- ಹೋದಲೆಲ್ಲಾ ಇಂಟರ್ನೆಟ್ ನೀಡಲಿದೆ ಸರ್ಕಾರ
ಇನ್ನು ಕೆಲವೇ ದಿನಗಳಲ್ಲಿ ನೀವು ಎಲ್ಲಾ ಪಬ್ಲಿಕ್ ವೈಫೈ ಹಾಟ್ ಸ್ಪಾಟ್ ಗಳನ್ನು ನಿಮ್ಮ ಡಾಟಾ ಪ್ಲಾನ್ ಮೂಲಕ ಪ್ರವೇಶಿಸುವುದಕ್ಕೆ ಸಾಧ್ಯವಾಗಲಿದೆ. ನಿಮ್ಮ ಸ್ಥಳದ ಬದಲಾವಣೆಯಾದಾಗ ಒಂದು ವಾಹಕದಿಂದ ಇನ್ನೊಂದಕ್ಕೆ ಯಾವುದೇ ತೊಂದರೆ ಇಲ್ಲದೆ ಸ್ವಿಚ್ ಆಗುವುದಕ್ಕೆ ಇದು ನೆರವು ನೀಡುತ್ತದೆ. ಅಷ್ಟೇ ಅಲ್ಲ ಇದು ಪ್ರಪಂಚದಲ್ಲೇ ಮೊದಲನೆಯ ಮಾದರಿ ಯೋಜನೆಯಾಗಿರಲಿದೆ.

ನೀವೆಲ್ಲೋ ಇಂಟರ್ನೆಟ್ ಅಲ್ಲೇ!
ಸಿಂಪಲ್ ಆಗಿ ಹೇಳಬೇಕು ಎಂದರೆ ನೀವೆಲ್ಲೋ ಇಂಟರ್ನೆಟ್ ಅಲ್ಲೇ!.ಹೌದು ಇದು ಸರ್ಕಾರದ ಬಹುದೊಡ್ಡ ಯೋಜನೆ. ಸಾರ್ವಜನಿಕ ಸ್ಥಳಗಳಲ್ಲಿ ಉದಾಹರಣೆಗೆ ಬಸ್ ನಿಲ್ದಾಣ, ಪಾರ್ಕ್ ಗಳು, ಟೀ ಸ್ಟಾಲ್ ಗಳು, ಇತ್ಯಾದಿ ಇತ್ಯಾದಿ ಎಲ್ಲಾ ಪ್ರದೇಶಗಳಲ್ಲೂ ಕೂಡ ಅಂತರ್ಜಾಲ ಸಂಪರ್ಕವು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗಬೇಕು ಎಂದು ಸರ್ಕಾರದ ಯೋಚನೆಯಾಗಿದೆ.

ಎಲ್ಲೆಲ್ಲಿ ಲಭ್ಯ?
ಪಬ್ಲಿಕ್ ವೈಫೈ ನಿಗದಿತ ಸಮಯಕ್ಕೆ ಸೀಮಿತವಾಗಿ ಉಚಿತವಾಗಿರುತ್ತದೆ. ಇದು ಹೆಚ್ಚಾಗಿ ವಿಮಾನ ನಿಲ್ದಾಣಗಳು, ರೆಸ್ಟೋರೆಂಟ್ ಗಳು ಇತ್ಯಾದಿ ಸಾರ್ವಜನಿಕ ಪ್ರದೇಶಗಳಲ್ಲಿ ನೀಡಲಾಗುತ್ತಿದೆ. ಇದೀಗ ಸರ್ಕಾರವು ಬಸ್ ನಿಲ್ದಾಣಗಳು, ಮಾರುಕಟ್ಟೆಯ ಪ್ರದೇಶಗಳು, ರಸ್ತೆ ಬದಿಯ ಟೀ ಅಂಗಡಿಗಳು, ಪಾರ್ಕ್ ಗಳು ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲೂ ಕೂಡ ಸಾರ್ವಜನಿಕ ವೈಫೈ ವಿಸ್ತರಿಸುವುದಕ್ಕೆ ಚಿಂತನೆ ನಡೆಸಿದೆ.

ಜಂಟಿ ಪ್ರಸ್ತಾವನೆ:
ಈ ನಿಟ್ಟಿನಲ್ಲಿ ದೂರಸಂಪರ್ಕ ಇಲಾಖೆ(ಡಿಓಟಿ) ವೈ-ಫಿಂಟೆರೊಪೆರೆಬಿಲಿಟಿಯನ್ನು ಅನುಮೋದಿಸಿದೆ.ಇದು ಸಾರ್ವಜನಿಕರಿಗೆ ಅಂತರ್ಜಾಲದ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಈ ಮಾಡೆಲ್ ನ್ನು ಭಾರತ್ ವೈ-ಫೈ ಎಂದು ಹೆಸರಿಸಲಾಗಿದೆ. ಇದನ್ನು ಎಲ್ಲಾ ಟೆಲಿಕಾಂ ಸಂಸ್ಥೆಗಳು, ಇಂಟರ್ನೆಟ್ ಸೇವಾ ಪೂರೈಕೆದಾರರು, ವರ್ಚುವಲ್ ನೆಟ್ ವರ್ಕ್ ಆಪರೇಟರ್ ಗಳು ಜಂಟಿಯಾಗಿ ಪ್ರಸ್ತಾವಿಸಿದ್ದಾರೆ. ರೋಮಿಂಗ್ ಒಪ್ಪಂದಗಳ ಮೂಲಕ ಸಾರ್ವಜನಿಕ ಹಾಟ್ ಸ್ಪಾಟ್ ಗಳ ಮೂಲಕ ವೈಫೈ ನೀಡುವುದಕ್ಕೆ ಒಟ್ಟಾಗಿ ಕೆಲಸ ನಿರ್ವಹಿಸಲಿದ್ದಾರೆ.

ವಿಶ್ವದಲ್ಲೇ ಮೊದಲ ಪ್ರಯೋಗ:
ಟೆಲಿಕಾಂ ಇಲಾಖೆ ಮತ್ತು ಉದ್ಯಮವು ವೈ-ಫೈ ಹಾಟ್ಸ್ಪಾಟ್ಗಳನ್ನು ಬಳಸಿಕೊಂಡು ಒಂದು ಅನನ್ಯ ಪರಿಹಾರವನ್ನು ವಿನ್ಯಾಸಗೊಳಿಸಲು, ಪರೀಕ್ಷಿಸಲು ಮತ್ತು ಹೊರತರಲು ಒಟ್ಟಾಗಿ ಪಾಲುದಾರಿಕೆ ಹೊಂದಿದೆ ಎಂದು ಭಾರತದ ಸೆಲ್ಯುಲರ್ ಆಪರೇಟರ್ ಅಸೋಸಿಯೇಷನ್ ನ ಡೈರೆಕ್ಟರ್ ಜನರಲ್ ಆಗಿರುವ ರಾಜನ್ ಮ್ಯಾಥ್ಯೂಸ್ ತಿಳಿಸಿದ್ದಾರೆ. ಇದು ವಿಶ್ವದಲ್ಲೇ ನಡೆಸುತ್ತಿರುವ ಮೊದಲ ಪ್ರಯೋಗ ಎಂಬುದಾಗಿ ಕೂಡ ಅವರು ಹೇಳಿದ್ದಾರೆ.

ಏಕಮಾತ್ರ ಅಕೌಂಟ್:
ಭಾರತ್ ವೈಫೈ ಅಡಿಯಲ್ಲಿ ಚಂದಾದಾರರು ಯಾವುದೇ ಚಂದಾದಾರಿಕೆಯ ಡಾಟಾ ಪ್ಲಾನ್ ನ್ನು ಬಳಸಬಹುದು ಅಥವಾ ಐಎಸ್ ಪಿ ಯಿಂದ ಡೆಪ್ಲಾಯ್ ಆಗಿರುವ ಇತರೆ ಹಾಟ್ ಸ್ಪಾನ್ ಕೂಡ ಬಳಸಬಹುದು ಮತ್ತು ಅದಕ್ಕಾಗಿ ಪ್ರತಿ ಬಾರಿಯೂ ಹೊಸ ಪ್ಲಾನ್ ಖರೀದಿಸಬೇಕಾಗುವ ಅಗತ್ಯವೂ ಇರುವುದಿಲ್ಲ.
ಹಿಂಬದಿಯಲ್ಲಿ ಎಲ್ಲಾ ಕಂಪೆನಿಗಳು ಏಕಮಾತ್ರ ಅಕೌಂಟ್ ನ್ನು ಹೊಂದಿದ್ದು ತಮ್ಮ ಪಾವತಿ ಫ್ಲ್ಯಾಟ್ ಫಾರ್ಮ್ ನ್ನು ನಿರ್ವಹಣೆ ಮಾಡಲಿವೆ.

ದೊಡ್ಡ ನೆಟ್ ವರ್ಕ್ ನ ಅಗತ್ಯತೆ:
ಇದರಲ್ಲಿರುವ ಪ್ರಮುಖ ಚಾಲೆಂಜ್ ಎಂದರೆ ದೊಡ್ಡ ಮಟ್ಟದ ನೆಟ್ ವರ್ಕ್.( ಎರಡು ವರ್ಷದಲ್ಲಿ 5 ಮಿಲಿಯನ್ ವೈಫೈ ಹಾಟ್ ಸ್ಪಾಟ್ ). ಆದರೆ ಸರ್ಕಾರದ ಅಗತ್ಯತೆಯನ್ನು ಪೂರೈಸುವ ನಿಟ್ಟಿನಲ್ಲಿ ರೋಬಸ್ಟ್ ಸೆಕ್ಯುರಿಟಿಯೊಂದಿಗೆ ನಾಗರೀಕರಿಗೆ ವೈಫೈ ಬಳಕೆಯ ಸರಳತೆಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ,
ಕೆಲವು ನಿರ್ಧಾರಗಳು ಬಾಕಿ:
ಗೃಹ ಸಚಿವಾಲಯವು ಟೆಲ್ಕೋಸ್ನಿಂದ ಪರಿಹಾರ, ಟ್ರೈಯಿಂದ ವೈ-ಫೈ ಆಕ್ಸೆಸ್ ನೆಟ್ವರ್ಕ್ ಇಂಟರ್ಫೇಸ್ (ವಾನಿ) ಎಂಬ ಇನ್ನೊಂದನ್ನು ಈಗಾಗಲೇ ತೆರವುಗೊಳಿಸಿದೆ. ಇದೀಗ ನಿರ್ಧಾರವಾಗಬೇಕಿರುವು WANI ಆರ್ಕಿಟೆಕ್ಚರ್ ಮೂಲಕವೋ ಅಥವಾ ಭಾರತ್ ವೈಫೈ ಮೂಲಕವೋ ಎಂಬುದು ನಿರ್ಧಾರವಾಗಬೇಕಿದೆ ಎಂದು ಹೇಳಲಾಗಿದೆ.
ದೊಡ್ಡ ಟಾರ್ಗೆಟ್:
2019 ಡಿಸೆಂಬರ್ ಒಳಗೆ ಒಂದು ಮಿಲಿಯನ್ ವೈಫೈ ಹಾಟ್ ಸ್ಪಾಟ್ ಗಳನ್ನು ಇಂಡಸ್ಟ್ರಿ ಸೆಟ್ ಮಾಡಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಇದು ಸದ್ಯ ಇರುವ ಸಂಖ್ಯೆಗಿಂತ ಬಹಳ ದೊಡ್ಡದು. ಯಾಕೆಂದರೆ ಸದ್ಯ ಲಭ್ಯವಿರುವ ಮಾಹಿತಿಯ ಆಧಾರದಲ್ಲಿ ಒಟ್ಟು 370,000 ಹಾಟ್ ಸ್ಪಾಟ್ ಗಳು ಮಾತ್ರವೇ ಇದೆ. ದೊಡ್ಡ ಮಟ್ಟದಲ್ಲಿ ಯೋಜನೆಯನ್ನು ರೂಪಿಸಲಾಗಿದೆ. ಖಂಡಿತ ಇದಕ್ಕೆ ಕೆಲವೇ ವರ್ಷಗಳಲ್ಲಿ ಫುಲ್ ಸ್ಟಾಪ್ ಸಿಗಲಿದ್ದು ಸಾರ್ವಜನಿಕರಿಗೆ ಅನುಕೂಲವಾಗಿದೆ. ಬೆಲೆಯ ಬಗ್ಗೆ ಖಂಡಿತ ಇನ್ನೂ ಕುತೂಹಲಗಳಿವೆ. ಮುಂದಿನ ದಿನಗಳಲ್ಲಿ ಎಲ್ಲವೂ ಸೆಟ್ ಆದ ನಂತರ ಈ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ.
ಆದಾಯಕ್ಕೆ ಅವಕಾಶ:
ಇದು ಪ್ರಮುಖವಾಗಿ ಅಂತರ್ಜಾಲವನ್ನು ದೇಶದಾದ್ಯಂತ ವಿಸ್ತರಿಸುವ ಉದ್ದೇಶವಾಗಿದೆ ಎಂದು DoT ತಿಳಿಸಿದೆ. ಸ್ಥಳೀಯ ಚಹಾ ಅಥವಾ ಪಾನ್ ಅಂಗಡಿಗಳಲ್ಲಿ ಟೆಲ್ಕೋಗಳ ವೈ-ಫೈ ಯೋಜನೆಗಳನ್ನು ಮರುಮಾರಾಟ ಮಾಡುವ ‘ಏಜೆಂಟರು' ಎಂದು ಕರೆಯಲ್ಪಡುವವರಿಗೆ ಇದು ಉದ್ಯೋಗ ಮತ್ತು ಆದಾಯದ ಅವಕಾಶವನ್ನು ಒದಗಿಸುತ್ತದೆ.
ಕಾಲೇಜು ಕ್ಯಾಂಪಸ್ ಗಳು ಸೇರಿದಂತೆ ಹಲವು ಸಾರ್ವಜನಿಕ ಸ್ಥಳಗಳಲ್ಲಿ ಜಿಯೋ ಈಗಾಗಲೇ 300,000 ಕ್ಕೂ ಅಧಿಕ ವೈಫೈ ಹಾಟ್ ಸ್ಪಾಟ್ ಗಳನ್ನು ಸೆಟ್ ಮಾಡಿದೆ ಎಂದು ತಿಳಿಸಿದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090