ಹರ್ಮನ್ ಕಾರ್ಡನ್ ಸಂಸ್ಥೆಯಿಂದ ಮೂರು ಹೊಸ ಹೆಡ್‌ಫೋನ್‌ ಬಿಡುಗಡೆ!

|

ಟೆಕ್‌ ವಲಯದಲ್ಲಿ ಸಾಕಷ್ಟು ವಿಭಿನ್ನ ಮಾದರಿಯ ಹೆಡ್‌ಫೋನ್‌ಗಳು ಲಭ್ಯವಿವೆ. ಸ್ಮಾರ್ಟ್‌ಫೋನ್ ಪ್ರಿಯರ ಆಯ್ಕೆಗೆ ತಕ್ಕಂತೆ ಹೊಸ ವಿನ್ಯಾಸದ ಹಲವು ಹೆಡ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡುತ್ತಲೇ ಇವೆ. ಸದ್ಯ ಇದೀಗ ಆಡಿಯೋ ಬ್ರಾಂಡ್ ಹರ್ಮನ್ ಕಾರ್ಡನ್ ಭಾರತದಲ್ಲಿ aura ಸ್ಟುಡಿಯೋ 3, ಎಸ್ಕ್ವೈರ್ ಮಿನಿ 2, ಹರ್ಮನ್ ಕಾರ್ಡನ್ ನಿಯೋ ಮತ್ತು ಓನಿಕ್ಸ್ ಸ್ಟುಡಿಯೋ 6 ಸೇರಿದಂತೆ ಫ್ಲೈ ಸರಣಿ ಹೆಡ್‌ಫೋನ್‌ಗಳು ಮತ್ತು ಸ್ಪೀಕರ್‌ಗಳನ್ನು ಬಿಡುಗಡೆ ಮಾಡಿದೆ. ಇನ್ನು ಫ್ಲೈ ಸರಣಿಯಲ್ಲಿ ಫ್ಲೈ BT, ಫ್ಲೈ TWS, ಮತ್ತು ಫ್ಲೈ ANC ಹೆಡ್‌ಫೋನ್‌‌ಗಳನ್ನ ಪರಿಚಯಿಸಲಾಗಿದೆ.

ಹರ್ಮನ್ ಕಾರ್ಡನ್

ಹೌದು, ಆಡಿಯೋ ಬ್ರಾಂಡ್ ಹರ್ಮನ್ ಕಾರ್ಡನ್ ಸಂಸ್ಥೆ ನಾಲ್ಕು ಹೊಸ ಹೆಡ್‌ಫೋನ್‌ಗಳನ್ನ ಬಿಡುಗಡೆ ಮಾಡಿದೆ. ಇದರಲ್ಲಿ ಫ್ಲೈ ಸರಣಿಯ ಹೆಡ್‌ಫೊನ್‌ಗಳು ಕುಡ ಸೇರಿವೆ. ಇನ್ನು ಹರ್ಮನ್ ಕಾರ್ಡನ್ ಫ್ಲೈ ಸರಣಿಯ BT, TWS ಮತ್ತು ANC, ಹೆಡ್‌ಫೋನ್‌ಗಳು ಕ್ರಮವಾಗಿ 5,999ರೂ , 10,999ರೂ, ಮತ್ತು 20,999 ರೂ, ಬೆಲೆಯನ್ನ ಹೊಂದಿದೆ. ಇದಲ್ಲದೆ ಔರಾ ಸ್ಟುಡಿಯೋ 3, ಎಸ್ಕ್ವೈರ್ ಮಿನಿ 2 , ಒನಿಕ್ಸ್ ಸ್ಟುಡಿಯೋ 6 ಮತ್ತು ಕಾರ್ಡನ್‌ ನಿಯೋ ಹೆಡ್‌ಫೋನ್‌‌ ಬೆಲೆ ಕ್ರಮವಾಗಿ, 25,999ರೂ, 11,599ರೂ, 15,999ರೂ, ಮತ್ತು 7,999ರೂ.ಬೆಲೆಯನ್ನ ಹೊಂದಿದೆ. ಇನ್ನುಳಿದಂತೆ ಈ ಹೆಡ್‌ಫೋನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

HKಫ್ಲೈ bt ಹೆಡ್‌ಫೋನ್

HKಫ್ಲೈ bt ಹೆಡ್‌ಫೋನ್

ಇನ್ನು HKಫ್ಲೈ bt ಹೆಡ್‌ಫೋನ್ ಸರಣಿಯು ಜೋಡಿಸದ, ಆರಾಮದಾಯಕ ಮತ್ತು ಟ್ರೂಲಿ ವಾಯರ್‌ಲೆಸ್‌ ಅನುಭವವನ್ನು ನೀಡುವ ಗುರಿಯನ್ನು ಹೊಂದಿದೆ. ಈ ಸರಣಿಯ ಹೆಡ್‌ಫೋನ್‌ಗಳು ವೇಗದ ಜೋಡಣೆಯ ಫೀಚರ್ಸ್‌ ಜೊತೆಗೆ ಮತ್ತು ಫುಲ್‌ ಆಕ್ಟಿವ್‌ ಟಚ್‌ ಕಂಟ್ರೋಲ್‌ ಅನ್ನು ಹೊಂದಿವೆ. ಜೊತೆಗೆ ಇದು 15-ಗಂಟೆಗಳ ಕಂಪೋಸ್ಡ್‌ ಪ್ಲೇಬ್ಯಾಕ್‌ ಮ್ಯೂಸಿಕ್‌ ಅನುಭವವನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಇದು ಟಾಕ್ ಥ್ರೂ, ವಾಯ್ಸ್ ಅಸಿಸ್ಟೆಂಟ್ ಸಪೋರ್ಟ್ ಮತ್ತು sweat-proof ಅನ್ನು ಸಹ ನೀಡಲಾಗಿದೆ.

ಫ್ಲೈ ANC ಹೆಡ್‌ಫೋನ್‌

ಫ್ಲೈ ANC ಹೆಡ್‌ಫೋನ್‌

ಫ್ಲೈ ಎಎನ್‌ಸಿ ಹೆಡ್‌ಫೋನ್‌ 40mm ಕಸ್ಟಮ್ ಆಡಿಯೋ ಡ್ರೈವರ್‌ಗಳನ್ನ ಹೊಂದಿದ್ದು, ಆಟ್ರೋಪ್ಲೇ ನಾಯ್ಸ್‌ ಕ್ಯಾನ್ಸಲೇಶನ್‌ ಸಿಸ್ಟಂ ಅನ್ನು ಹೊಂದಿದೆ. ಅಲ್ಲದೆ ಈ ಹೆಡ್‌ಫೊನ್‌ ಬ್ಲೂಟೂತ್‌ನೊಂದಿಗೆ 20-ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್ ಅನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಸಹ ನೀಡಲಾಗಿದೆ ಎಂದು ಹೇಳಲಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ, ಸುಲಭವಾಗಿ ಬದಲಾಯಿಸಲು ಡಿವೈಸ್‌ಗಳ ನಡುವೆ ಮಲ್ಟಿ-ಪಾಯಿಂಟ್ ಕನೆಕ್ಟಿವಿಟಿಯನ್ನು ಸಹ ಪಡೆಯಬಹುದಾಗಿದೆ.

ಪ್ಲೈ BT ಹೆಡ್‌ಫೋನ್‌

ಪ್ಲೈ BT ಹೆಡ್‌ಫೋನ್‌

ಇನ್ನು ಫ್ಲೈ ಬಿಟಿ,ಹೆಡ್‌ಫೋನ್‌ 8.6mm ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಅಲ್ಲದೆ ಹರ್ಮನ್ ಕಾರ್ಡನ್ ಸಂಸ್ಥೆಯ ಪ್ರಕಾರ ಈ ಹೆಡ್‌ಫೊನ್‌ 8 ಗಂಟೆಗಳ ಆಕ್ಟಿವ್‌ ಲಿಸನಿಂಗ್‌ ಸಾಮರ್ಥ್ಯವನ್ನು ಹೊಂದಿದೆ ಎಂದು ಖಾತರಿಪಡಿಸಿದೆ. ಅಲ್ಲದೆ ಇದು ನೆಕ್‌ಬ್ಯಾಂಡ್ ವಿನ್ಯಾಶವನ್ನು ಹೊಂದಿದ್ದು, ಉತ್ತಮ ಗುಣಮಟ್ಟದ ಫ್ಯಾಬ್ರಿಕ್ ಕೇಬಲ್ ಜೊತೆಗೆ ಮ್ಯಾಗ್ನೆಟಿಕ್ ಇಯರ್‌ಬಡ್‌ಗಳನ್ನು ಹೊಂದಿದೆ.

AURA ಸ್ಟುಡಿಯೋ

AURA ಸ್ಟುಡಿಯೋ

ಔರಾ ಸ್ಟುಡಿಯೋ ಸ್ಪೀಕರ್‌ 3 ಪಾರದರ್ಶಕ ಆವರಣವನ್ನು ಹೊಂದಿದೆ. ಅಲ್ಲದೆ ಇದು ದೃಷ್ಟಿ ಆಸಕ್ತಿಯನ್ನು ಹೆಚ್ಚಿಸುವ ಆಂಬಿಯೆಂಟ್‌ ಲೈಟಿಂಗ್‌ ಎಫೆಕ್ಟ್‌ ಅನ್ನು ಹೊಂಡಿದೆ. ಜೊತೆಗೆ ಟ್ವೀಟರ್ ಮತ್ತು ಮಿಡ್‌ಗಳನ್ನು ಹೊಂದಿರುವ ಎರಡು 15 W ಸ್ಪೀಕರ್‌ಗಳು ಇದನ್ನು ಶಕ್ತಗೊಳಿಸುತ್ತವೆ. ಅಲ್ಲದೆ ಇದು 100W ಸಬ್ ವೂಫರ್‌ನೊಂದಿಗೆ ಸಂಯೋಜಿಸಿ ಉತ್ತಮ-ಗುಣಮಟ್ಟದ ಆಡಿಯೊವನ್ನು ನೀಡುತ್ತದೆ.

Onyx Studio 6

Onyx Studio 6

ಇನ್ನು ಓನಿಕ್ಸ್ ಸ್ಟುಡಿಯೋ 6 ಸ್ಪೀಕರ್‌ ಅನ್ನು ಪೋರ್ಟಬಿಲಿಟಿ ಮತ್ತು ‘ಸ್ಟೈಲ್' ಅನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಈ ಬ್ಲೂಟೂತ್ ಸ್ಪೀಕರ್ ಸಿಂಗಲ್‌ ಚಾರ್ಜಿಂಗ್‌ನಲ್ಲಿ 8 ಗಂಟೆಗಳ ಗೇಮಿಂಗ್‌ ಸಮಯವನ್ನು ನೀಡುತ್ತದೆ ಎಂದು ಹರ್ಮನ್ ಕಾರ್ಡನ್ ಹೇಳಿದೆ.

Most Read Articles
Best Mobiles in India

English summary
The HK FLY BT, TWS and ANC cost ₹5,999, ₹10,999 and ₹20,999 respectively. The HK Aura Studio 3, Esquire Mini 2Onyx Studio 6 and Neo cost ₹25,999, ₹11,599, ₹15,999 and ₹7,999 respectively.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X