ಅಗ್ಗದ ಬೆಲೆಯಲ್ಲಿ ದೊರೆಯುವ ಹೆಚ್‌ಡಿ ಸೆಟ್-ಟಾಪ್ ಬಾಕ್ಸ್‌ಗಳು!

|

ಪ್ರಸ್ತುತ ಇಂಟರ್ನೆಟ್‌ ಅಧಾರಿತ ಸ್ಮಾರ್ಟ್‌ ಟಿವಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರೂ, ಟಿವಿಗೊಂದು ಡಿಟಿಹೆಚ್‌ ಸೆಟ್‌ಟಾಪ್‌ ಬಾಕ್ಸ್‌ ಕನೆಕ್ಷನ್ ಅಗತ್ಯವೇ ಸರಿ. ಇನ್ನು ಹೊಸದಾಗಿ ಡಿಟಿಹೆಚ್‌ ಸಂಪರ್ಕ ಪಡೆಯುವವರು ಹೆಚ್‌ಡಿ ಮಾದರಿಯ ಸೆಟ್‌ಅಪ್‌ ಬಾಕ್ಸ್‌ ಇನ್‌ಸ್ಟಾಲ್ ಮಾಡಿಸುತ್ತಾರೆ. ಆದರೆ ಈಗಾಗಲೇ ಡಿಟಿಹೆಚ್‌ ಕನೆಕ್ಷನ್‌ ಹೊಂದಿರುವ ಬಹುತೇಕ ಗ್ರಾಹಕರು ಎಸ್‌ಡಿ ಮಾದರಿಯ ಸೆಟ್‌ಟಾಪ್ ಬಾಕ್ಸ್‌ ಕನೆಕ್ಷನ್ ಹೊಂದಿದ್ದಾರೆ. ಹೆಚ್‌ಡಿ ಸೆಟ್‌ಟಾಪ್ ಬಾಕ್ಸ್‌ಗೆ ಅಪ್‌ಗ್ರೇಡ್‌ ಮಾಡುವುದು ಉತ್ತಮ.

ಸೆಟ್‌ಟಾಪ್‌

ಹೌದು, ಬಹುತೇಕ ಗ್ರಾಹಕರು ಎಸ್‌ಡಿ ಸೆಟ್‌ಟಾಪ್‌ ಮಾಡೆಲ್‌ಗಳನ್ನು ಹೊಂದಿದ್ದಾರೆ. ಕಂಪನಿಗಳು ಅಪ್‌ಗ್ರೇಡ್‌ ಆಗಲು ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತ ಸಾಗಿವೆ. ಎಸ್‌ಡಿ ಮತ್ತು ಹೆಚ್‌ಡಿ ಮಾಡೆಲ್‌ಗಳ ಪ್ರೈಸ್‌ನಲ್ಲಿಯೂ ಹೆಚ್ಚಿನ ಭಿನ್ನತೆಗಳಿಲ್ಲ. ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌ಗಳು ಕೈಗೆಟುವ ದರದಲ್ಲಿ ಲಭ್ಯವಾಗಿವೆ. ಮುಖ್ಯವಾಗಿ ಏರ್‌ಟೆಲ್‌, ಟಾಟಾಸ್ಕೈ, ಡಿ2ಹೆಚ್‌, ಡಿಶ್‌ ಟಿವಿ ಕಂಪನಿಗಳ ಸೆಟ್‌ಟಾಪ್‌ ಬಾಕ್ಸ್‌ಗಳು ಹೆಚ್ಚು ಗಮನ ಸೆಳೆದಿವೆ. ಹಾಗಾದರೇ ಕೆಲವು ಜನಪ್ರಿಯ ಬ್ರ್ಯಾಂಡ್‌ಗಳ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌ ದರಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

D2h ಹೆಚ್‌ಡಿ ಸೆಟ್-ಟಾಪ್ ಬಾಕ್ಸ್

D2h ಹೆಚ್‌ಡಿ ಸೆಟ್-ಟಾಪ್ ಬಾಕ್ಸ್

D2hನ ಸೆಟ್‌ಟಾಪ್‌ ಬಾಕ್ಸ್‌ ಸಹ ಆಕರ್ಷಕ ಪ್ರೈಸ್‌ ಟ್ಯಾಗ್‌ನಲ್ಲಿ ಹೆಚ್‌ಡಿ ಮಾಡೆಲ್‌ ಲಭ್ಯವಾಗಿಸಿದೆ. D2h ಹೆಚ್‌ಡಿ ಸೆಟ್-ಟಾಪ್ ಬಾಕ್ಸ್, ಇದು ಗ್ರಾಹಕರಿಗೆ ಲಭ್ಯವಿರುವ ಅತ್ಯಂತ ಒಳ್ಳೆ ಆಯ್ಕೆಗಳಲ್ಲಿ ಒಂದಾಗಿದೆ. ಹೆಚ್‌ಡಿ ಸೆಟ್-ಟಾಪ್ ಬಾಕ್ಸ್ 1,355ರೂ.ಗೆ ಲಭ್ಯವಿದೆ. ಇದರಲ್ಲಿ, ಸಬ್‌ಸ್ಕ್ರೈಬರ್‌ಗಳು D2h ನಿಂದ ಗೋಲ್ಡ್ ಹೆಚ್‌ಡಿ ಕಾಂಬೊ ಚಾನೆಲ್ ಪ್ಯಾಕ್‌ ಅನ್ನು 1 ತಿಂಗಳ ಚಂದಾದಾರಿಕೆಯನ್ನು ಪಡೆಯುತ್ತಾರೆ.

ಏರ್‌ಟೆಲ್‌ ಡಿಜಿಟಲ್ ಟಿವಿ ಹೆಚ್‌ಡಿ ಸೆಟ್-ಟಾಪ್ ಬಾಕ್ಸ್

ಏರ್‌ಟೆಲ್‌ ಡಿಜಿಟಲ್ ಟಿವಿ ಹೆಚ್‌ಡಿ ಸೆಟ್-ಟಾಪ್ ಬಾಕ್ಸ್

ಹಾಗೆಯೇ ಏರ್‌ಟೆಲ್‌ ಡಿಜಿಟಲ್ ಟಿವಿ HD ಸೆಟ್-ಟಾಪ್ ಬಾಕ್ಸ್ ಸಹ ಗ್ರಾಹಕ ಸ್ನೇಹಿ ಬೆಲೆಯನ್ನು ಹೊಂದಿದೆ. ಏರ್‌ಟೆಲ್‌ನ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌ 1,500ರೂ.ಗಳ ಬೆಲೆಯಲ್ಲಿ ಲಭ್ಯವಿದೆ. ಈ ಬೆಲೆಯನ್ನು ನೀವು ಬೇಗನೆ ನಿರ್ಣಯಿಸುವ ಮೊದಲು, ಏರ್‌ಟೆಲ್ ವೆಬ್‌ಸೈಟ್‌ ಗಮನಿಸಿ. ಏಕೆಂದರೇ ಈ ಎಸ್‌ಟಿಬಿಯಲ್ಲಿ ಆನ್‌ಲೈನ್ ಪಾವತಿ ಮಾಡುವಾಗ ಏರ್‌ಟೆಲ್ ಡಿಜಿಟಲ್ ಟಿವಿ ಹೆಚ್ಚುವರಿ 10% ರಿಯಾಯಿತಿ ದೊರೆಯಲಿದೆ. ಹೀಗಾಗಿ ಏರ್‌ಟೆಲ್‌ನ ಈ ಎಸ್‌ಟಿಬಿಯ ಗ್ರಾಹಕರಿಗೆ ಜಸ್ಟ್‌ 1,350ರೂ .ಗಳಿಗೆ ಸಿಗಲಿದೆ. ಈ ಎಸ್‌ಟಿಬಿ ನಿಮಗೆ ರೆಕಾರ್ಡ್ ಮತ್ತು ಪ್ಲೇ ಆಯ್ಕೆಯನ್ನು ಕೂಡ ನೀಡುತ್ತಿದೆ.

ಡಿಶ್‌NXT ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌

ಡಿಶ್‌NXT ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌

ಡಿಶ್‌NXT ಕಂಪನಿಯು ಸಹ ಗ್ರಾಹಕರಿಗೆ ಉತ್ತಮ ಕೊಡುಗೆ ನೀಡಿದೆ. ಕಂಪನಿಯ ಹೆಚ್‌ಡಿ ಸೆಟ್-ಟಾಪ್ ಬಾಕ್ಸ್ ಗ್ರಾಹಕರಿಗೆ 1,590ರೂ. ರಲ್ಲಿ ಲಭ್ಯ ಮಾಡಿದೆ. ಇದರಲ್ಲಿ ಅವರು ಒಂದು ತಿಂಗಳ ಚಂದಾದಾರಿಕೆ ರಹಿತ, ಜೀವಮಾನದ ಖಾತರಿ ಮತ್ತು ಕೂಪನ್ ದುನಿಯಾದಿಂದ ರೂ. 2000 ಮೌಲ್ಯದ ಕೂಪನ್‌ಗಳನ್ನು ಪಡೆಯುತ್ತಾರೆ.

ಟಾಟಾ ಸ್ಕೈ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌

ಟಾಟಾ ಸ್ಕೈ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌

ಹಾಗೆಯೇ ಜನಪ್ರಿಯ ಟಾಟಾ ಸ್ಕೈ ಸಹ ಆಕರ್ಷಕ ಪ್ರೈಸ್‌ ಟ್ಯಾಗ್ ಹೊಂದಿದೆ. ಗ್ರಾಹಕರು ಟಾಟಾಸ್ಕೈ ಕಂಪನಿಯ ಹೆಚ್‌ಡಿ ಸೆಟ್-ಟಾಪ್ ಬಾಕ್ಸ್ ಅನ್ನು 1,499ರೂ.ಗಳಿಗೆ ಖರೀದಿಸಬಹುದಾಗಿದೆ.

Most Read Articles
Best Mobiles in India

English summary
HD Set-Top Boxes Under Rs 1,500 From Airtel, Dish TV And Others.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X