Just In
Don't Miss
- News
'ಪಶುವೈದ್ಯೆ' ಕೊಂದ ಪಾಪಿಗಳಾಯ್ತು, 'ನಿರ್ಭಯಾ' ನೀಚರಿಗೆಂದು ಶಿಕ್ಷೆ?
- Finance
ಈ 4 ಹೂಡಿಕೆ ಮೇಲೆ ಬರುವ ಆದಾಯಕ್ಕೆ ಭಾರತದಲ್ಲಿ ತೆರಿಗೆ ಇಲ್ಲ
- Automobiles
ಹೊಸ ಲುಕ್ನಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ 2020ರ ಮಹೀಂದ್ರಾ ಬೊಲೆರೊ
- Sports
ಭಾರತ vs ವಿಂಡೀಸ್ ಟಿ20ಗೂ ಮುನ್ನ ಅಜರುದ್ದೀನ್ ಸ್ಟ್ಯಾಂಡ್ ಲೋಕಾರ್ಪಣೆ
- Lifestyle
ಅತ್ಯಾಚಾರಿಗಳ ಅಂತ್ಯಕ್ಕೆ ಟ್ವಿಟ್ಟಿಗರ ಸಂಭ್ರಮ
- Movies
50 ದಿನ ಪೂರೈಸಿದ ಶ್ರೀಮುರಳಿ 'ಭರಾಟೆ' ಸಿನಿಮಾ
- Travel
ಲಕ್ಷದ್ವೀಪಕ್ಕೆ ಪ್ರವಾಸ ಹೋಗುವವರಿದ್ದೀರಾ? ಈ ಸಂಗತಿಗಳ ಬಗ್ಗೆ ಎಚ್ಚರಿಕೆ ಇರಲಿ
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
ಮೊಬೈಲ್ ಬ್ಯಾಟರಿ ರೇಡಿಯೇಶನ್ನಿಂದ ಮಾನವ ದೇಹಕ್ಕಾಗುವ ದುಷ್ಪರಿಣಾಮಗಳು ಯಾವುವು ಗೊತ್ತೇ?
ಸ್ಮಾರ್ಟ್ಫೋನ್ ಹೆಚ್ಚು ಹೆಚ್ಚು ಬಳಸಿದಂತೆಲ್ಲಾ, ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಸ್ಮಾರ್ಟ್ಫೋನ್ನಲ್ಲಿ ಮಾನವ ದೇಹದ ಮೇಲೆ ದುಷ್ಪರಿಣಾಮ ಬೀರುವ ಅಂಶಗಳಲ್ಲಿ ರೇಡಿಯೇಶನ್ ಮೊದಲ ಸ್ಥಾನ ಪಡೆದುಕೊಳ್ಳುತ್ತದೆ.
ವೈರ್ಲೆಸ್ ಮೊಬೈಲ್ಗಳನ್ನು ಹೆಚ್ಚಾಗಿ ಬಳಸಲು ಪ್ರಾರಂಭಿಸಿದಂತೆಲ್ಲಾ, ಫೋನ್ ಬ್ಯಾಟರಿ ರೇಡಿಯೇಶನ್ ಮಟ್ಟವು ಹೆಚ್ಚಾಗುತ್ತದೆ. ಇದರಿಂದ ಗಂಭೀರ ಪರಿಣಾಮಗಳು ಆರೋಗ್ಯದ ಮೇಲೆ ಉಂಟಾಗುತ್ತವೆ.
ಸ್ಮಾರ್ಟ್ಫೋನ್ನಲ್ಲಿ ಇಂಟರ್ನೆಟ್ ಸಂಪರ್ಕ ಇಲ್ಲದೇ ಜಿಪಿಎಸ್ ಬಳಕೆ ಹೇಗೆ?
ವ್ಯಕ್ತಿಯು 1 ಗಂಟೆಗಳ ಕಾಲ ಫೋನ್ನಲ್ಲಿ ಮಾತನಾಡಿದರೆ, ನಿಸ್ಸಂಶಯವಾಗಿ ಫೋನ್ ಬಿಸಿಯಾಗುತ್ತದೆ. ಇದರಿಂದ ಕಿವಿ ಮೇಲ್ಮೈ, ಒಳ ಕಿವಿ, ತಲೆ ಮೇಲ್ಮೈ ಮತ್ತು ಹೆಚ್ಚಿನದಾಗಿ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಅಂದಹಾಗೆ ಗಿಜ್ಬಾಟ್ನ ಇಂದಿನ ಲೇಖನದಲ್ಲಿ ಮೊಬೈಲ್ ಬ್ಯಾಟರಿ(Battery) ರೇಡಿಯೇಶನ್ನಿಂದ ಮನುಷ್ಯನ ದೇಹದ ಮೇಲೆ ಉಂಟಾಗುವ ಪರಿಣಾಮಗಳು ಮತ್ತು ಅವುಗಳನ್ನು ಹೇಗೆ ತಡೆಯಬಹುದು ಎಂದು ತಿಳಿಸುತ್ತಿದ್ದೇವೆ. ಮಾಹಿತಿಗಾಗಿ ಲೇಖನದ ಕೆಳಗಿನ ಸ್ಲೈಡರ್ಗಳನ್ನು ಓದಿರಿ.

ಮೊಬೈಲ್ ರೇಡಿಯೇಶನ್ ಬಯೋಲಾಜಿಕಲ್ ಡಿಸಾರ್ಡರ್ಗೆ ಕಾರಣವಗುತ್ತದೆ.
ಸ್ಮಾರ್ಟ್ಫೋನ್ಗಳು ಕರೆ ಮಾಡಿದಾಗ, ಟೆಕ್ಸ್ಟ್ ಮಾಡಿದಾಗ, ವೀಡಿಯೊ ಸ್ಟ್ರೀಮ್ ಮತ್ತು ಮ್ಯೂಸಿಕ್ ಕೇಳುವಾಗ 'ರೇಡಿಯೋ ಫ್ರಿಕ್ವೆನ್ಸಿ ರೇಡಿಯೇಶನ್ ಅಥವಾ ಮೈಕ್ರೋವೇವ್ ರೇಡಿಯೇಶನ್ ಅನ್ನು ಹೊರಸೂಸುತ್ತದೆ. ಈ ರೇಡಿಯೇಶನ್ಗಳು ಮಾನವನ ದೇಹದಲ್ಲಿ ಜೈವಿಕ ಪರಿಣಾಮವಾಗಿ ಜೀವ ರಾಸಾಯನಿಕ ಜೀವಕೋಶ ಕ್ರಿಯೆಗಳಿಗೆ ಅಡ್ಡಿ ಉಂಟುಮಾಡುತ್ತವೆ. ರಕ್ತ ತಡೆ ನಿರ್ಭಂದ ಸಾಧ್ಯತೆ ಮತ್ತು ಮಿದುಳು ಗ್ಲುಕೋಸ್ ಚಯಾಪಚಯಗಳ ಮೇಲೆ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತವೆ.

ಮಾನವನ ದೇಹದ ಮೇಲೆ ಬ್ಯಾಟರಿ ರೇಡಿಯೇಶನ್ನ ಸಾಮಾನ್ಯ ಲಕ್ಷಣಗಳು
ಸ್ಮಾರ್ಟ್ಫೋನ್ಗಳನ್ನು ಹೆಚ್ಚು ಗಂಟೆಗಳ ಕಾಲ ಬಳಸಿದ್ದಲ್ಲಿ, ಬಿಸಿಯಾದ ರೇಡಿಯೇಶನ್ ಕ್ರಿಯೇಟ್ ಆಗುತ್ತವೆ. ಇದು ಒಂದು ಕಾಳಜಿಯ ವಿಷಯವಾಗಿದೆ.
ಈ ಪ್ರಕ್ರಿಯೆಗಳಿಂದ ಸಾಮಾನ್ಯವಾಗಿ ತಲೆನೋವು, ತಲೆ ಸುತ್ತುವಿಕೆ, ಆಯಾಸ ಮತ್ತು ಇತರೆ ಲಕ್ಷಣಗಳು ಕಂಡುಬರುತ್ತವೆ.
ಕೆಳಗಿನ ಸ್ಲೈಡರ್ಗಳಲ್ಲಿ ಈ ಗಂಭೀರ ದುಷ್ಪರಿಣಾಮಗಳನ್ನು ತಡೆಗಟ್ಟುವುದು ಹೇಗೆ ಎಂದು ತಿಳಿಯಿರಿ.

ಕರೆ ಲಿಮಿಟ್ ಇರಲಿ
ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೆ ಅಗತ್ಯವಿದ್ದಾಗ ಮತ್ತು ತುರ್ತುಸಂದರ್ಭದ ನಿಮಿತ್ತ ಕರೆ ಮಾಡಿ. ಹೆಚ್ಚಿನ ಸಮಯಗಳು ಕರೆಯಲ್ಲಿ ಇರುವುದರಿಂದ ಬಳಕೆದಾರರ ಆರೋಗ್ಯದ ಮೇಲೆ ಒಂದಕ್ಕಿಂತ ಹೆಚ್ಚು ಪರಿಣಾಮಗಳು ಬೀರುತ್ತದೆ.

ದೇಹಕ್ಕೆ ಮೊಬೈಲ್ ನೇರ ಸಂಪರ್ಕ ಹೊಂದುವುದನ್ನು ತಪ್ಪಿಸಿ
ಸ್ಮಾರ್ಟ್ಫೋನ್ ಸ್ಟ್ಯಾಂಡ್ಬೈ ಮೋಡ್ನಲ್ಲಿ ಇದ್ದರೆ, ಹತ್ತಿರದ ಇತರೆ ಸೆಲ್ ಫೋನ್ಗಳೊಂದಿಗೆ ನಿರಂತರವಾಗಿ ಸಂಪರ್ಕ ಹೊಂದಿ ಉತ್ತಮ ಸಿಗ್ನಲ್ ಪಡೆಯುತ್ತದೆ.
ಆದ್ದರಿಂದ ಒಂದು ಸ್ಮಾರ್ಟ್ಫೋನ್ ಟ್ರ್ಯಾನ್ಸ್ಮಿಟ್ ಪ್ರತಿ 30 ಸೆಕೆಂಡ್ಗಳಿಗೂ ರೇಡಿಯೇಶನ್ ತಾಪ ಹೆಚ್ಚಿಸುತ್ತದೆ. ನೀವು ಕಾರ್ಯನಿರ್ವಹಿಸಲಿ ಅಥವಾ ನೀವು ಡಿವೈಸ್ ಇಟ್ಟಿರುವ ಸ್ಥಳದ ಆಧಾರಿತವಾಗಿ ರೇಡಿಯೇಶನ್ ತಾಪ ಹೆಚ್ಚಾಗುತ್ತದೆ. ಆದ್ದರಿಂದ ಫೋನ್ ಅನ್ನು ನಿಮ್ಮ ದೇಹದ ಪಕ್ಕ ನೇರವಾಗಿ ಇಟ್ಟುಕೊಳ್ಳುವುದನ್ನು ತಪ್ಪಿಸಿ. ನೇರ ಸಂಪರ್ಕವನ್ನು ದೇಹಕ್ಕೆ ಮೊಬೈಲ್ ಹೊಂದಿದ್ದಲ್ಲಿ ದೇಹದ ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ.

ವಾಹನ ಚಲಿಸುವಾಗ ಸ್ಮಾರ್ಟ್ಫೋನ್ ಬಳಸದಿರಿ
ಬಸ್ಸು, ಕಾರು, ರೈಲು ಅಥವಾ ಇತರೆ ಯಾವುದೇ ವಾಹನಗಳಲ್ಲಿ ಇರಲಿ, ಫೋನ್ ಹೆಚ್ಚಾಗಿ ಬಳಸುವುದನ್ನು ತಪ್ಪಿಸಿ. ಕಾರಣ ಮೊಬೈಲ್ ಆಂಟೆನಾ ಕಾಂಟ್ಯಾಕ್ಟ್ಗಳನ್ನು ಸ್ಕ್ಯಾನ್ಸ್ ಮಾಡುತ್ತದೆ ಮತ್ತು ಸಿಗ್ನಲ್ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ಪ್ರಕ್ರಿಯೆಯಿಂದ ಹೆಚ್ಚಿನ ರೇಡಿಯೇಶನ್ ಹೊರಸೂಸಲ್ಪಡುತ್ತದೆ.

ಕಾರು ಪಾರ್ಕ್ನಲ್ಲಿರುವ ವೇಳೆ ಮೊಬೈಲ್ ಬಳಕೆ ತಪ್ಪಿಸಿ
ಕಾರು ಪಾರ್ಕ್ನಲ್ಲಿರುವ ವೇಳೆ ಆ ಪ್ರದೇಶದ ಶಾಖ ಹೊರಸೂಸುವಿಕೆಯಿಂದ, ಬ್ಯಾಟರಿ ರೇಡಿಯೇಶನ್ ಹೆಚ್ಚಾಗಿ ಅನಾಹುತಕ್ಕೆ ಕಾರಣವಾಗಬಹುದು.

ಮಲಗಿರುವ ಪಕ್ಕದಲ್ಲಿ ಫೋನ್ ಇಡದಿರಿ
ರಾತ್ರಿ ವೇಳೆ ಮಲಗಿರುವ ಸಮಯದಲ್ಲಿ ಪಕ್ಕದಲ್ಲಿ ಫೋನ್ ಇಟ್ಟುಕೊಳ್ಳುವಿಕೆಯಿಂದ, ಫೋನ್ ರೇಡಿಯೇಶನ್ ನಿದ್ರೆ ಕ್ರಿಯೆಗೆ ಅಡ್ಡಿ ಪಡಿಸುವುದಲ್ಲದೇ, ಅಲರ್ಜಿಗಳು, ಹೃದಯ ಬಡಿತ ಹೆಚ್ಚಾಗುವಿಕೆ, ಸ್ನಾಯು ನೋವು ಮತ್ತು ದೌರ್ಬಲ್ಯದ ಮೇಲೆ ಪರಿಣಾಮ ಬೀರುತ್ತದೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090