ಇಂದಿನ ದಿನಗಳಲ್ಲಿ ಮಹಿಳೆಯರು ಅಗತ್ಯವಾಗಿ ಬಳಸುವ ಟಾಪ್‌ ಗ್ಯಾಜೆಟ್ಸ್‌ಗಳು!

|

ಪ್ರಸ್ತುತ ಕಾಲಘಟ್ಟದಲ್ಲಿ ಟೆಕ್ನಾಲಜಿ ಆಧಾರಿತ ಡಿವೈಸ್‌ಗಳು ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿದೆ. ಇದರ ಪರಿಣಾಮ ಯಾವುದೇ ಕೆಲಸ ಕಾರ್ಯದಲ್ಲಿಯೂ ಸಹಾಯ ಮಾಡಬಲ್ಲ ಅನೇಕ ಗ್ಯಾಜೆಟ್ಸ್‌ಗಳನ್ನು ನಮ್ಮ ನಡುವೆ ಲಭ್ಯವಿದೆ. ಅದರಲ್ಲೂ ಮನೆಯಲ್ಲಿ ಅನೇಕ ಕೆಲಸಗಳನ್ನು ಸುಲಭ ಮಾಡುವ ಹಾಗೂ ಮಹಿಳೆಯರಿಗೆ ಸಹಾಯ ಮಾಡುವ ಗ್ಯಾಜೆಟ್ಸ್‌ಗಳು ಮಾರುಕಟ್ಟೆಯಲ್ಲಿ ಸಖತ್‌ ಸೌಂಡ್‌ ಮಾಡುತ್ತಿವೆ. ಗೃಹಿಣಿಯರಿಗೆ ಅವಶ್ಯಕ ಎನಿಸುವ ಗ್ಯಾಜೆಟ್ಸ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿವೆ.

ಗ್ಯಾಜೆಟ್ಸ್‌

ಹೌದು, ಮಹಿಳೆಯರಿಗೆ ಸಹಾಯಕವಾಗಬಲ್ಲ ಗ್ಯಾಜೆಟ್ಸ್‌ಗಳಿಗೆ ಎಂದಿಗೂ ಬೇಡಿಕೆ ಕಡಿಮೆಯಾಗುವುದಿಲ್ಲ. ಗೃಹಿಣಿಯನ್ನು ಆಕರ್ಷಿಸುವ ಹಾಗೂ ಅವರಿಗೆ ಅವಶ್ಯಕ ಎನಿಸುವ ಗ್ಯಾಜೆಟ್ಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇದಲ್ಲದೆ ಗ್ಯಾಜೆಟ್ಸ್‌ ತಯಾರಕರು ಕೂಡ ಮಹಿಳೆಯರನ್ನು ಆಕರ್ಷಿಸುವುದಕ್ಕಾಗಿ ಅನೇಕ ಟ್ರಿಕ್ಸ್‌ಗಳನ್ನು ಅನುಸರಿಸುವುದು ಸಾಮಾನ್ಯವಾಗಿದೆ. ಅಲ್ಲದೆ ಮಹಿಳಾ ಗ್ರಾಹಕರು ಏನನ್ನು ಬಯಸುತ್ತಾರೆ ಎಂಬುದರ ಬಗ್ಗೆ ಕೂಡ ಹೆಚ್ಚಿನ ಗಮನವನ್ನು ನೀಡುತ್ತಿದ್ದಾರೆ. ಇದರಿ ಪರಿಣಾಮವಾಗಿ ಮಹಿಳೆಯರಿಗೆ ಅಗತ್ಯವಾಗಿ ಬೇಕಾದ ಅನೇಕ ಡಿವೈಸ್‌ಗಳು ಮಾರುಕಟ್ಟೆಯಲ್ಲಿವೆ.

ಮಹಿಳೆ

ಇನ್ನು ಮನೆಯ ನಿರ್ವಹಣೆ ವಿಚಾರ ಬಂದಾಗ ಮಹಿಳೆ ಯಾವಾಗಲೂ ಮೊದಲ ಸ್ಥಾನದಲ್ಲಿ ನಿಲ್ಲುತ್ತಾಳೆ. ಇಂತಹ ಮಹಿಳೆಗೆ ಮನೆಗೆಲಸದಲ್ಲಿ ಸಹಾಯ ಮಾಡುವ ಗ್ಯಾಜೆಟ್ಸ್‌ಗಳು ಹೆಚ್ಚು ಆಕರ್ಷಿತವಾಗಿವೆ. ಮನೆಗೆಲಸಕ್ಕೆ ಸುಲಭವಾಗುವ ಗ್ಯಾಜೆಟ್ಸ್‌ಗಳಿಂದ ಮಹಿಳೆಯರು ಕೂಡ ಸಾಕಷ್ಟು ಅನುಕೂಲವನ್ನು ಪಡೆದುಕೊಳ್ಳುತ್ತಿದ್ದಾರೆ. ಇವುಗಳಲ್ಲಿ ಕ್ಲಾತ್‌ ವಾಶಿಂಗ್‌, ಡಿಶ್‌ವಾಶ್‌, ಹೇರ್‌ ಡ್ರೈಯರ್‌ಗಳಿಗೆ ಬೇಡಿಕೆ ಇದೆ. ಹಾಗಾದ್ರೆ ಇಂದಿನ ದಿನಗಳಲ್ಲಿ ಮಹಿಳೆಯರು ಹೊಂದಿರಲೇಬೇಕಾದ ಟಾಪ್ ಗ್ಯಾಜೆಟ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗಿಜ್ಮೋರ್ ಸ್ಲೇಟ್

ಗಿಜ್ಮೋರ್ ಸ್ಲೇಟ್

ಗಿಜ್ಮೋರ್‌ ಬ್ರ್ಯಾಂಡ್‌ ಮಹಿಳೆಯರಿಗಾಗಿಯೇ ಮಹಿಳಾ-ನಿರ್ದಿಷ್ಟ ಸ್ಮಾರ್ಟ್ ವಾಚ್ ಅನ್ನು ಬಿಡುಗಡೆ ಮಾಡಿದೆ. ಗಿಜ್ಮೋರ್‌ ಸ್ಲೇಟ್ ವಾಚ್‌ ಅನ್ನು ಮಹಿಳೆಯರಿಗಾಗಿ ವಿಶೇಷವಾಗಿ೯ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ರಕ್ತದ ಆಮ್ಲಜನಕ ಮಾನಿಟರ್, ಹೃದಯ ಬಡಿತ ಮಾನಿಟರ್, ಸ್ಲೀಪ್ ಟ್ರ್ಯಾಕರ್ ಮುಂತಾದ ಪ್ರಮಾಣಿತ ಫೀಚರ್ಸ್‌ಗಳನ್ನು ನೀಡಲಾಗಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ ಋತುಚಕ್ರದ ಟ್ರ್ಯಾಕರ್ ಅನ್ನು ಕೂಡ ಒಳಗೊಂಡಿದೆ. ಇದರಿಂದ ಈ ಗ್ಯಾಜೆಟ್ಸ್‌ ಕೂಡ ಮಹಿಳೆಯರಿಗೆ ಸೂಕ್ತ ಎನಿಸಲಿದೆ.

ಡಿಶ್‌ವಾಶರ್

ಡಿಶ್‌ವಾಶರ್

ಇಂದಿನ ದಿನಗಳಲ್ಲಿ ಮನೆಯಲ್ಲಿ ಮಹಿಳೆಯರಿಗೆ ಉಪಯುಕ್ತವಾದ ಗ್ಯಾಜೆಟ್ಸ್‌ಗಳಲ್ಲಿ ಡಿಶ್‌ವಾಶರ್‌ ಕೂಡ ಒಂದಾಗಿದೆ. ಡಿಶ್‌ವಾಶರ್‌ ಮೂಲಕ ಹೆಚ್ಚಿನ ಕಲೆಯನ್ನು ಹೋಗಲಾಡಿಸಬಹುದಾಗಿದೆ. ಭಾರತ ದೇಶದ ಸಾಮಾನ್ಯ ಅಡುಗೆ ಮನೆಗಳಲ್ಲಿ ಕಂಡುಬರುವ ಕಲೆಗಳನ್ನು ಹೋಗಲಾಡಿಸುವ ಸಾಮರ್ಥ್ಯವನ್ನು ಈ ಡಿಶ್‌ವಾಶರ್‌ಗಳು ಹೊಂದಿವೆ. ಇದರಲ್ಲಿ ಎಲಿಸ್ಟಾ ಡಿಶ್‌ವಾಶರ್ EDC12SS ಸೂಕ್ತವಾದ ಆಯ್ಕೆ ಎನಿಸಲಾಗಿದೆ. ಇದು ಸ್ಟೇನ್‌ಲೆಸ್ ಸ್ಟೀಲ್ ಬಾಡಿ, ಎಲ್‌ಇಡಿ ಮಾದರಿಯ ಡಿಸ್‌ಪ್ಲೇ ಮತ್ತು ಫ್ರೀ-ಸ್ಟ್ಯಾಂಡಿಂಗ್ ಸ್ಟ್ರಕ್ಚರ್ ಅನ್ನು ಹೊಂದಿದೆ.

ಮೈಕ್ರೋವೇವ್ ಓವೆನ್

ಮೈಕ್ರೋವೇವ್ ಓವೆನ್

ಮೈಕ್ರೋವೇವ್ ಓವನ್ ಇಂದಿನ ದಿನಗಳಲ್ಲಿ ಪ್ರತಿ ಮನೆಯಲ್ಲಿಯೂ ಕೂಡ ಅಗತ್ಯವಾದ ಗ್ಯಾಜೆಟ್ಸ್‌ ಆಗಿದೆ. ಮಹಿಳೆಯರು ತಾವು ಮಾಡಿಟ್ಟ ತಿಂಡಿಯನ್ನು ಮತ್ತೆ ಬಿಸಿ ಮಾಡುವುದಕ್ಕೆ ಇದು ಉಪಯುಕ್ತವಾಗಿದೆ. ಇದರಿಂದ ಮನೆಯ ಸದಸ್ಯರಿಗಾಗಿ ಮತ್ತೆ ಮತ್ತೆ ಬಿಸಿ ಮಾಡುವ ಕೆಲಸ ತಪ್ಪಲಿದೆ. ಬೇಕು ಎನಿಸಿದಾಗ ಓವೆನ್‌ ಮೂಲಕ ಬಿಸಿ ಮಾಡಿಕೊಳ್ಳಬಹುದು. ಇದರಿಂದ ಮಹಿಳೆಯರು ತಮ್ ಬೇರೆ ಕೆಲಸಗಳ ಕಡೆ ಗಮನ ಹರಿಸುವುದಕ್ಕೆ ಸಹಾಯ ಮಾಡಲಿದೆ.

ಎಲೆಕ್ಟ್ರಿಕ್ ರೈಸ್ ಕುಕ್ಕರ್

ಎಲೆಕ್ಟ್ರಿಕ್ ರೈಸ್ ಕುಕ್ಕರ್

ಯಾವುದೇ ಮಹಿಳೆಗೆ ಎಲೆಕ್ಟ್ರಿಕ್ ರೈಸ್ ಕುಕ್ಕರ್ ಹೆಚ್ಚು ಉಪಯುಕ್ತವಾದ ಗ್ಯಾಜೆಟ್ಸ್‌ ಆಗಿದೆ. ಇದರಿಂದ ನೀವು ಅಕ್ಕಿ, ಬಿರಿಯಾನಿ ಅಥವಾ ಸ್ಟೀಮ್ ತರಕಾರಿಗಳನ್ನು ಬೇಯಿಸಬಹುದಾಗಿದೆ. ನೀವು ಬಿಡುವಿಲ್ಲದ ಸಂದರ್ಭದಲ್ಲಿ ಎಲೆಕ್ಟ್ರಿಕ್ ರೈಸ್ ಕುಕ್ಕರ್ ಅನ್ನು ಸುಲಭವಾಗಿ ಬಳಸಬಹುದು. ಇದರಲ್ಲಿ ಅಕ್ಕಿಯನ್ನು ಬೇಯಿಸುವುದರ ಜೊತೆಗೆ, ಇದನ್ನು ಸೂಪ್, ಬೀನ್ಸ್ ಮತ್ತು ಸ್ಟ್ಯೂಗಳನ್ನು ಬೇಯಿಸಲು ಸಹ ಬಳಸಬಹುದು.

ವಾಶಿಂಗ್‌ ಮೆಷಿನ್

ವಾಶಿಂಗ್‌ ಮೆಷಿನ್

ಇಂದಿನ ಕಾಲಘಟ್ಟದಲ್ಲಿ ಪ್ರತಿಯೊಬ್ಬ ಮಹಿಳೆಯು ಬಯಸುವ ಗ್ಯಾಜೆಟ್ಸ್‌ಗಳಲ್ಲಿ ವಾಶಿಂಗ್‌ ಮೆಷಿನ್‌ ಪ್ರಮುಖವಾದದ್ದು. ವಾಶಿಂಗ್‌ ಮೆಷಿನ್‌ ಮಹಿಳೆಯರಿಗೆ ತಮ್ಮ ಕೆಲಸದ ಹೊರೆಯನ್ನು ಸಾಕಷ್ಟು ಕಡಿಮೆ ಮಾಡಲಿದೆ. ಏಕೆಂದರೆ ಮನೆಯ ಸದಸ್ಯರೆಲ್ಲರ ಬಟ್ಟೆಗಳನ್ನು ವಾಶ್‌ ಮಾಡುವುದಕ್ಕೆ ವಾಶಿಂಗ್‌ ಮೆಷಿನ್‌ ಅವಶ್ಯಕ ಎನಿಸಲಿದೆ. ಇದರಿಂದ ಮಹಿಳೆಯರು ಬಟ್ಟೆ ತೊಳೆಯುವುದಕ್ಕಾಗಿ ಸಾಕಷ್ಟು ಕಷ್ಟ ಪಡುವುದು ತಪ್ಪಲಿದೆ.

ವಾಕ್ಯೂಮ್‌ ಕ್ಲಿನರ್‌

ವಾಕ್ಯೂಮ್‌ ಕ್ಲಿನರ್‌

ವಾಕ್ಯೂಮ್‌ ಕ್ಲಿನರ್‌ಗಳು ಇಂದಿನ ಆಧುನಿಕ ಮನೆಗಳಲ್ಲಿ ಅತಿ ಅಗತ್ಯವಾದ ಡಿವೈಸ್‌ ಆಗಿದೆ. ಇದರಿಂದ ನಿಮ್ಮ ಮನೆಯ ಮೂಲೆ ಮೂಲೆಗಳಲ್ಲಿ ಅಡಗಿರುವ ದೂಳನ್ನು ಹೋಗಲಾಡಿಸುವುದಕ್ಕೆ ಸಾಧ್ಯವಾಗಲಿದೆ. ಮಹಿಳೆಯರು ತಮ್ಮ ಮನೆಯನ್ನು ಸ್ವಚ್ಚಗೊಳಿಸುವಾಗ ಕೆಲಸವನ್ನು ಸುಲಭ ಮಾಡುವುದಕ್ಕೆ ಇದು ಸಹಾಯಕವಾಗಿದೆ. ವ್ಯಾಕ್ಯೂಮ್‌ ಕ್ಲಿನರ್‌ ಬಳಸುವುದರಿಂದ ಮನೆಯ ಸ್ವಚ್ಛತೆಯನ್ನು ಕಾಪಾಡುವುದು ಸುಲಭವಾಗಿದೆ.

ಪವರ್ ಬ್ಯಾಂಕ್

ಪವರ್ ಬ್ಯಾಂಕ್

ಫೋನ್‌ ಬಳಸುವವರಿಗೆ ಪವರ್‌ ಬ್ಯಾಂಕ್‌ ಅತಿ ಅವಶ್ಯಕವಾಗಿದೆ. ಯಾವುದೇ ಪ್ರವಾಸ ಇಲ್ಲವೇ ಪ್ರಯಾಣದಂತಹ ಸಂದರ್ಭಗಳಲ್ಲಿ ನಿಮ್ಮ ಸ್ಮಾರ್ಟ್‌ಫೋನಿನ ಪವರ್‌ ದಾಹ ತೀರಿಸುವುದಕ್ಕೆ ಪವರ್‌ ಬ್ಯಾಂಕ್‌ಗಳು ಸೂಕ್ತ. ಸದ್ಯ ನೀವು ಖರೀದಿಸಬಹುದಾದ ಅತ್ಯುತ್ತಮ ಪವರ್‌ ಬ್ಯಾಂಕ್‌ಗಳಲ್ಲಿ Mi 10,000 mAh ಪವರ್ ಬ್ಯಾಂಕ್ ಸೂಕ್ತವಾದ ಆಯ್ಕೆಯಾಗಿದೆ. ಇದಲ್ಲದೆ ನೀವು 20,000 mAh ಆವೃತ್ತಿಯನ್ನು ಆರಿಸಿಕೊಳ್ಳಬಹುದು.

ಹೇರ್ ಡ್ರೈಯರ್

ಹೇರ್ ಡ್ರೈಯರ್

ಮಹಿಳೆಯರಿಗೆ ಅವಶ್ಯಕ ಎನಿಸುವ ಗ್ಯಾಜೆಟ್ಸ್‌ಗಳಲ್ಲಿ ಹೇರ್‌ ಡ್ರೈಯರ್‌ ಕೂಡ ಒಂದಾಗಿದೆ. ಸ್ನಾನ ಮಾಡಿದ ನಂತರ ತಮ್ಮ ತಲೆ ಕೂದಲನ್ನು ಒಣಗಿಸುವುದಕ್ಕೆ ಇದು ತುಂಬಾ ಸಹಾಯಕವಾಗಿದೆ. ಇಂದಿನ ಮಳೆ ದಿನಗಳಲ್ಲಿ ಹೇರ್‌ ಡ್ರೈಯರ್‌ ತುಂಬಾನೆ ಅವರ್ಶಯಕ ಎನಿಸಲಿದೆ. ಪ್ರಸ್ತುತ ವೇಗಾ ಯು-ಸ್ಟೈಲ್‌ 1600 W ಫೋಲ್ಡಬಲ್ ಹೇರ್ ಡ್ರೈಯರ್ ಅತ್ಯುತ್ತಮವಾದ ಹೇರ್‌ ಡ್ರೈಯರ್‌ ಎನಿಸಿಕೊಂಡಿದೆ. ಇದನ್ನು ನೀವು ಮಡಿಸಿಡಬಹುದಾಗಿರುವುದರಿಂದ ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಬಹುದಾಗಿದೆ.

ಫಿಲಿಪ್ಸ್ ಕಾರ್ಡ್ಲೆಸ್ ಎಪಿಲೇಟರ್

ಫಿಲಿಪ್ಸ್ ಕಾರ್ಡ್ಲೆಸ್ ಎಪಿಲೇಟರ್

ಹೊರಗಡೆ ಯಾವುದೇ ಸಭೆ ಸಮಾರಂಭಕ್ಕೆ ಹೋಗಬೇಕು ಎಂದಾಗ ಮಹಿಳೆ ನೀಡುವ ಮೊದಲ ಅಧ್ಯತೆ ಎಂದರೆ ಅಲಂಕಾರ. ತಮ್ಮ ಅಲಂಕಾರದ ಬಗ್ಗೆ ಹೆಚ್ಚಿನ ಅದ್ಯತೆ ನೀಡುವ ಮಹಿಳೆಯರಿಗೆ ಫಿಲಿಪ್ಸ್‌ ಕಾರ್ಡ್ಲೆಸ್‌ ಎಪಿಲೇಟರ್‌ ಗ್ಯಾಜೆಟ್ಸ್‌ ಅವಶ್ಯಕ ಎನಿಸಲಿದೆ. ಏಕೆಂದರೆ ಇದರಿಂದ ಅನಗತ್ಯವಾಗಿರುವ ಮುಖದ ಮೇಲಿನ ಕೂದಲನ್ನು ಟ್ರಿಮ್‌ ಮಾಡುವುದಕ್ಕೆ ಇದು ಸೂಕ್ತವಾಗಿದೆ. ಇದರಿಂದ ನಿಮ್ಮ ಮುಖ ಇನ್ನಷ್ಟು ಅಂಧವಾಗಿ ಕಾಣಲಿದೆ.

Best Mobiles in India

Read more about:
English summary
Here are The top 9 gadgets that every women use.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X