Just In
- 41 min ago
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- 2 hrs ago
ರಿಯಲ್ಮಿ ಕಂಪೆನಿಯಿಂದ ಮೊದಲ ಪ್ರೀಮಿಯಂ ಆಂಡ್ರಾಯ್ಡ್ ಟ್ಯಾಬ್ಲೆಟ್ ಬಿಡುಗಡೆ!
- 3 hrs ago
ಭಾರತದ ಅತಿದೊಡ್ಡ ಡ್ರೋನ್ ಫೆಸ್ಟಿವಲ್ ಉದ್ಘಾಟನೆ ಮಾಡಲಿರುವ ಪ್ರಧಾನಿ ಮೋದಿ
- 4 hrs ago
ಏರ್ಟೆಲ್ ಗ್ರಾಹಕರೇ ಈ ಅಗ್ಗದ ಯೋಜನೆಯಲ್ಲಿ ಪ್ರತಿದಿನ 3GB ಡೇಟಾ ಸಿಗುತ್ತೆ!
Don't Miss
- Sports
IPL 2022: 'ರಾಯಲ್ಸ್' ಕದನದಲ್ಲಿ ಗೆಲ್ಲುವುದ್ಯಾರು? ರಾಜಸ್ಥಾನ ವಿರುದ್ಧ ಆರ್ಸಿಬಿ ಯೋಜನೆ ಹೇಗಿದೆ?
- News
ಬಳ್ಳಾರಿ: 300 ಕ್ಕೂ ಹೆಚ್ಚು ಮಾವು ತಳಿಗಳ ಪ್ರದರ್ಶನ, ಮಾರಾಟ ಮೇಳ
- Finance
Gold Rate Today: ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ: ಮೇ 26ರ ಬೆಲೆ ನೋಡಿ
- Movies
ಸಾಕಷ್ಟು ನಟ-ನಟಿಯರಿಗೆ ಬಟ್ಟೆ ಡಿಸೈನ್ ಮಾಡುವುದು ಇವರೇ ನೋಡಿ
- Automobiles
ಥರ್ಡ್ ಪಾರ್ಟಿ ಇನ್ಸುರೆನ್ಸ್: ಜೂನ್ 1ರಿಂದ ವಾಹನ ಮಾಲೀಕತ್ವ ಮತ್ತಷ್ಟು ದುಬಾರಿ!
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಾಟ್ಸಾಪ್ನಲ್ಲಿರುವ ಈ ಪ್ರೈವೆಸಿ ಫೀಚರ್ಸ್ಗಳ ಬಗ್ಗೆ ನಿಮಗೆಷ್ಟು ಗೊತ್ತು?
ಪ್ರಸ್ತುತ ದಿನಗಳಲ್ಲಿ ಡೇಟಾ ಪ್ರೈವೆಸಿಯ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಇಂದಿನ ಡಿಜಿಟಲ್ ಜಮಾನದಲ್ಲಿ ಡೇಟಾ ಪ್ರೈವೆಸಿಯ ಬಗ್ಗೆ ಎಷ್ಟೇ ಎಚ್ಚರಿಕೆ ವಹಿಸಿದರೂ ಕೂಡ ಕೆಲವೊಮ್ಮೆ ಹ್ಯಾಕರ್ಗಳು ಡೇಟಾವನ್ನು ಪ್ರವೇಶ ಮಾಡಿಬಿಟ್ಟಿರುತ್ತಾರೆ. ಆದರಿಂದ ಡೇಟಾ ಪ್ರೈವೆಸಿಯನ್ನು ಕಾಪಾಡಲು ಪ್ರತಿಯೊಂದು ಸೊಶೀಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು ಪ್ರೈವೆಸಿ ಫೀಚರ್ಸ್ಗಳನ್ನು ಪರಿಚಯಿಸಿವೆ. ಇದಕ್ಕೆ ವಾಟ್ಸಾಪ್ ಕೂಡ ಹೊರತಾಗಿಲ್ಲ. ವಾಟ್ಸಾಪ್ ತನ್ನ ಪ್ಲಾಟ್ಫಾರ್ಮ್ನಲ್ಲಿ ಬಳಕೆದಾರರ ಡೇಟಾ ಪ್ರೈವೆಸಿ ಕಾಪಾಡುವ ಅನೇಕ ಫೀಚರ್ಸ್ಗಳನ್ನು ಒಳಗೊಂಡಿದೆ.

ಹೌದು, ವಾಟ್ಸಾಪ್ ತನ್ನ ಪ್ಲಾಟ್ಫಾರ್ಮ್ನಲ್ಲಿ ಹಲವು ಪ್ರೈವೆಸಿ ಫೀಚರ್ಸ್ಗಳನ್ನು ಒಳಗೊಂಡಿದೆ. ಇದರಿಂದ ಬಳಕೆದಾರರ ಪ್ರೈವೆಸಿಗೆ ಯಾವುದೇ ದಕ್ಕೆ ಬಾರದಂತೆ ತಡೆಯಲು ಸಾದ್ಯವಾಗಲಿದೆ. ಜೊತೆಗೆ ನಿಮ್ಮ ಮೀಡಿಯಾ ಫೈಲ್ಗಳು, ಚಾಟ್ ಹಿಸ್ಟರಿ, ವಾಯ್ಸ್ ಮೆಸೇಜ್, ಡಾಕ್ಯುಮೆಂಟ್ಗಳನ್ನು ಸುರಕ್ಷಿತವಾಗಿಡಬಹುದಾಗಿದೆ. ಹಾಗಾದ್ರೆ ವಾಟ್ಸಾಪ್ನಲ್ಲಿ ನಿಮ್ಮ ಡೇಟಾ ಪ್ರೈವೆಸಿ ಕಾಪಾಡಬಲ್ಲ ಫೀಚರ್ಸ್ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಎನ್ಕ್ರಿಪ್ಟೆಡ್ ಚಾಟ್ಸ್
ವಾಟ್ಸಾಪ್ ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಹೊಂದಿರುವುದರಿಂದ ವಾಟ್ಸಾಪ್ ಕರೆಗಳು, ಟೆಕ್ಸ್ಟ್ ಮೆಸೇಜ್, ಫೋಟೋಗಳು, ವೀಡಿಯೊಗಳು, ಧ್ವನಿ ಸಂದೇಶಗಳು, ಡಾಕ್ಯುಮೆಂಟ್ಸ್ ಅನ್ನು ಬೇರೆಯವರು ಪ್ರವೇಶಿಸದಂತೆ ತಡೆಯಲಿದೆ. ನಿಮ್ಮ ವಾಟ್ಸಾಪ್ ಚಾಟ್ ಅನ್ನು ಬೇರೆ ಯಾರು ಕೂಡ ಹ್ಯಾಕ್ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ವಾಟ್ಸಾಪ್ ಹೇಳಿದೆ. ಪ್ರತಿಯೊಂದು ಸಂದೇಶವನ್ನು ಕಳುಹಿಸುವವರು ಮತ್ತು ಉದ್ದೇಶಿತ ಸ್ವೀಕರಿಸುವವರ ನಡುವೆ ಮಾತ್ರ ಹಂಚಿಕೊಳ್ಳಲಾಗುತ್ತದೆ. ವಾಟ್ಸಾಪ್ ಮತ್ತು ಥರ್ಡ್ ಪಾಟಿ ಕೂಡ ನೀವು ಮಾಡಿರುವ ಸಂದೇಶಗಳನ್ನು ಪ್ರವೇಶಿದಂತೆ ಎನ್ಕ್ರಿಪ್ಟ್ ಮಾಡಲಾಗಿದೆ.

ಡಿಸ್ಅಪಿಯರಿಂಗ್ ಮೆಸೇಜಸ್
ವಾಟ್ಸಾಪ್ ಡಿಸ್ಅಪಿಯರಿಂಗ್ ಮೆಸೇಜಸ್ ಫೀಚರ್ಸ್ ಬಳಕೆದಾರರಿಗೆ ಸಂದೇಶಗಳನ್ನು ಅಳಿಸಲು ಡೀಫಾಲ್ಟ್ ಟೈಮರ್ ಅನ್ನು ಸೆಟ್ ಮಾಡಲು ಅನುಮತಿಸುತ್ತದೆ. ಈ ಟೈಮರ್ ಅನ್ನು 24 ಗಂಟೆಗಳು, 7 ದಿನಗಳು ಅಥವಾ 90 ದಿನಗಳ ಅವಧಿಗೆ ಸೆಟ್ ಮಾಡಬಹುದು. ನೀವು ಸೆಟ್ ಮಾಡಿದ ದಿನದಂದು ಆ ಸಂದೇಶಗಳು ಆಟೋಮ್ಯಾಟಿಕ್ ಕಣ್ಮರೆಯಾಗಲಿದೆ. ಈ ಫೀಚರ್ಸ್ ಅನ್ನು ಬಳಕೆದಾರರು ವೈಯಕ್ತಿಕ ಚಾಟ್ಗಳು ಮತ್ತು ಗುಂಪು ಚಾಟ್ಗಳಲ್ಲಿ ಬಳಸಬಹುದಾಗಿದೆ.

ವ್ಯೂ ಒನ್ಸ್
'ವ್ಯೂ ಒನ್ಸ್' ಫೀಚರ್ಸ್ ನೀವು ಸೆಂಡ್ ಮಾಡುವ ಫೋಟೋಗಳು ಮತ್ತು ವೀಡಿಯೊಗಳನ್ನು ಚಾಟ್ ತೆರೆದ ನಂತರ ಅವುಗಳನ್ನು ಚಾಟ್ನಿಂದ ಕಣ್ಮರೆಯಾಗುವಂತೆ ಸಕ್ರಿಯಗೊಳಿಸುತ್ತದೆ. ಇದರಿಂದ ಬಳಕೆದಾರರಿಗೆ ಅವರ ಗೌಪ್ಯತೆಯ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ.

ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಬ್ಯಾಕಪ್
ಮೆಸೇಜ್ ಬ್ಯಾಕಪ್ನಲ್ಲಿ ವಾಟ್ಸಾಪ್ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ನೀಡುತ್ತದೆ. ಬ್ಯಾಕ್ಅಪ್ಗಳಲ್ಲಿ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಎಂದರೆ ಗೂಗಲ್ ಡ್ರೈವ್ ಅಥವಾ ಐಕ್ಲೌಡ್ನಲ್ಲಿ ಸ್ಟೋರೇಜ್ ಆಗಿರುವ ಮೀಡಿಯಾ ಮತ್ತು ಮೆಸೇಜ್ಗಳನ್ನು ಯಾದೃಚ್ಛಿಕ ಎನ್ಕ್ರಿಪ್ಶನ್ ಕೀಲಿಯೊಂದಿಗೆ ಎನ್ಕ್ರಿಪ್ಟ್ ಮಾಡಲಾಗುತ್ತದೆ. ಇದನ್ನು ಬಳಕೆದಾರರು ಪಾಸ್ವರ್ಡ್ ಮೂಲಕ ಕೂಡ ಬ್ಯಾಕಪ್ ಮಾಡಬಹುದಾಗಿದೆ.

ಬ್ಲಾಕ್ ಆಂಡ್ ರಿಪೋರ್ಟ್
ಬಳಕೆದಾರರು ತಮ್ಮ ಚಾಟ್ಗಳಲ್ಲಿ ಅಪರಿಚಿತ ಸಂಖ್ಯೆಗಳಿಂದ ಸಮಸ್ಯೆಗಳನ್ನು ಎದುರಿಸಿದರೆ ಅಂತಹ ಸಂಪರ್ಕಗಳನ್ನು ಬ್ಲಾಕ್ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಅಷ್ಟೇ ಅಲ್ಲ ವಾಟ್ಸಾಪ್ನಲ್ಲಿ ನಿಮಗೆ ಸಮಸ್ಯೆ ಎನಿಸುವ ಅಕೌಂಟ್ಗಳ ಬಗ್ಗೆ ರಿಪೋರ್ಟ್ ಕೂಡ ಮಾಡಬಹುದಾಗಿದೆ. ಬಳಕೆದಾರರು ವರದಿ ಮಾಡಿದ ಸಂದೇಶಗಳನ್ನು ಸತ್ಯ-ಪರೀಕ್ಷಕರು ಅಥವಾ ಕಾನೂನು ಜಾರಿ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲು ಬಯಸಿದರೆ ತಮ್ಮ ಫೋನ್ನಲ್ಲಿ ಇರಿಸಿಕೊಳ್ಳುವುದಕ್ಕೆ ಕೂಡ ಆಯ್ಕೆಯನ್ನು ನೀಡಲಾಗಿದೆ.

ಗ್ರೂಪ್ ಪ್ರೈವೆಸಿ ಸೆಟ್ಟಿಂಗ್ಸ್
ವಾಟ್ಸಾಪ್ನ ಪ್ರೈವೆಸಿ ಸೆಟ್ಟಿಂಗ್ ಮತ್ತು ಇನ್ವೈಟ್ ಫೀಚರ್ಸ್ ನಿಮನ್ನು ಗ್ರೂಪ್ಗಳಿಗೆ ಯಾರು ಸೇರಿಸಬಹುದು ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಈ ಮಹತ್ವದ ಬದಲಾವಣೆಯು ಬಳಕೆದಾರರ ಗೌಪ್ಯತೆಯನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮನ್ನು ಅನಗತ್ಯ ಗುಂಪುಗಳಿಗೆ ಬೇರೆಯವರು ಸೇರಿಸುವುದನ್ನು ತಡೆಯುತ್ತದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999