Just In
- 37 min ago
ಸ್ಮಾರ್ಟ್ವಾಚ್ ಇಲ್ಲವೇ ಸ್ಮಾರ್ಟ್ಬ್ಯಾಂಡ್ ಖರೀದಿಸುವ ಪ್ಲ್ಯಾನ್ ಇದ್ರೆ, ಈ ಚಾನ್ಸ್ ಕಳ್ಕೋಬೇಡಿ!
- 1 hr ago
ಇಯರ್ಫೋನ್ ಖರೀದಿಸುವವರಿಗೆ ಅಮೆಜಾನ್ನಲ್ಲಿ ಸಿಗಲಿದೆ ಬಿಗ್ ಡಿಸ್ಕೌಂಟ್!
- 3 hrs ago
ವಾಟ್ಸಾಪ್, ಟೆಲಿಗ್ರಾಮ್ನಂತಹ ಆಪ್ಗಳ ನಿಯಂತ್ರಣಕ್ಕೆ ಸರ್ಕಾರದಿಂದ ಹೊಸ ಪ್ಲಾನ್!
- 4 hrs ago
ಇಂದು ಇನ್ಫಿನಿಕ್ಸ್ ಹಾಟ್ 12 ಪ್ರೊ ಫಸ್ಟ್ ಸೇಲ್; ಡಿಸ್ಕೌಂಟ್ ಎಷ್ಟು ಗೊತ್ತಾ?
Don't Miss
- Movies
ಉತ್ತರದಲ್ಲಿ ವಿಜಯ್ ದೇವರಕೊಂಡ ಸುನಾಮಿ: ಬಾಲಿವುಡ್ಡಿಗರಿಗೆ ಹೊಟ್ಟೆ ಉರಿ!
- News
KIAL: 2025ಕ್ಕೆ 'ಏರ್ಫೋರ್ಟ್ ಸ್ಮಾರ್ಟ್ಸಿಟಿ 1ನೇ ಹಂತ ಪೂರ್ಣ
- Sports
CWG 2022: ಶ್ರೀಲಂಕಾದ 10 ಕ್ರೀಡಾಪಟುಗಳು ನಾಪತ್ತೆ!: ಲಂಕಾ ಕ್ರೀಡಾಪಟುಗಳ ಈ ಚಾಳಿಯ ಇತಿಹಾಸವೇ ವಿಚಿತ್ರ!
- Finance
ಮುಕೇಶ್ ಅಂಬಾನಿ ಮಾಸಿಕ ವೇತನ ಕೇಳಿದ್ರೆ ಅಚ್ಚರಿ ಮೂಡುತ್ತೆ!
- Automobiles
ಫೋರ್ಡ್ ಇಂಡಿಯಾದ ಸನಂದ್ ಕಾರ್ಖಾನೆ ಟಾಟಾ ಮೋಟಾರ್ಸ್ ತೆಕ್ಕೆಗೆ: 726 ಕೋಟಿ ರೂ.ಗೆ ಖರೀದಿ
- Lifestyle
ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್: ಇವರಿಗೆ ಸಿಗುವ ಸಂಬಳ, ಭತ್ಯೆ ಸೌಲಭ್ಯಗಳೇನು?
- Travel
ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!
- Education
CSB Recruitment 2022 : 66 ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
60,000ರೂ.ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಲ್ಯಾಪ್ಟಾಪ್ಗಳು!
ಇತ್ತೀಚಿನ ದಿನಗಳಲ್ಲಿ ಲ್ಯಾಪ್ಟಾಪ್ಗಳು ಹೆಚ್ಚು ಬೇಡಿಕೆ ಪಡೆದುಕೊಂಡಿರುವ ಗ್ಯಾಜೆಟ್ಸ್ ಎನಿಸಿಕೊಂಡಿದೆ. ಆನ್ಲೈನ್ ಕ್ಲಾಸ್, ವರ್ಕ್ ಫ್ರಂ ಹೋಮ್ ಪರಿಕಲ್ಪನೆ ಶುರುವಾದ ನಂತರ ಲ್ಯಾಪ್ಟಾಪ್ಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಮನೆಯಿಂದಲೇ ಕೆಲಸ ನಿರ್ವಹಿಸುವವರಿಗೆ ಲ್ಯಾಪ್ಟಾಪ್ ಅವಶ್ಯಕವಾಗಿದೆ. ಇನ್ನು ಇಂದಿಗೂ ಕೂಡ ಆನ್ಲೈನ್ ಕ್ಲಾಸ್ಗಳು ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳನ್ನು ಸೆಳೆಯುವ ಲ್ಯಾಪ್ಟಾಪ್ಗಳು ಕೂಡ ಮಾರುಕಟ್ಟೆಗೆ ಎಂಟ್ರಿ ನೀಡಿವೆ.

ಹೌದು, ಬದಲಾದ ಜೀವನ ಶೈಲಿಯ ಕಾರಣದಿಂದಾಗಿ ಲ್ಯಾಪ್ಟಾಪ್ ಮಾರುಕಟ್ಟೆ ಇಂದು ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಕೇವಲ ಕಚೇರಿಗಳಿಗೆ ಸೀಮಿತವಾಗಿದ್ದ ಲ್ಯಾಪ್ಟಾಪ್ಗಳು ಇಂದು ಮನೆ ಮನೆಯಲ್ಲಿಯೂ ಕೂಡ ರಾರಾಜಿಸುತ್ತಿವೆ. ಇದೇ ಕಾರಣಕ್ಕೆ ಪ್ರಮುಖ ಲ್ಯಾಪ್ಟಾಪ್ ಕಂಪೆನಿಗಳು ಕೂಡ ಹಲವು ಹೊಸ ಮಾದರಿಯ ಲ್ಯಾಪ್ಟಾಪ್ಗಳನ್ನು ಪರಿಚಯಿಸಿವೆ. ಇದರಲ್ಲಿ ವಿದ್ಯಾರ್ಥಿ ಸ್ನೇಹಿ, ಗೇಮಿಂಗ್ ಪ್ರಿಯರನ್ನು ಸೆಳೆಯುವ ಹಾಗೂ ವರ್ಕ್ ಪ್ರಂ ಹೋಮ್ಗೆ ಸೂಕ್ತ ಎನಿಸುವ ಲ್ಯಾಪ್ಟಾಪ್ಗಳು ಸೇರಿವೆ.

ಲ್ಯಾಪ್ಟಾಪ್ಗಳ ಬಳಕೆ ಹೆಚ್ಚಾದಂತೆ ಹಲವು ವಿಧದ ಬೆಲೆಗಳ ಲ್ಯಾಪ್ಟಾಪ್ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಇದರಲ್ಲಿ ನಿಮ್ಮ ಕೆಲಸ ಕಾರ್ಯಗಳಿಗೆ ಅನುಗುಣವಾಗಿ ಅತ್ಯುತ್ತಮ ಕಾರ್ಯದಕ್ಷತೆ ನೀಡುವ ಪ್ರೊಸೆಸರ್ ಒಳಗೊಂಡ ಲ್ಯಾಪ್ಟಾಪ್ಗಳನ್ನು ಕೂಡ ಆಯ್ಕೆ ಮಾಡಬಹುದಾಗಿದೆ. ಸದ್ಯ ನಿಮ್ಮ ಬಜೆಟ್ ಸುಮಾರು 60,000ರೂ. ಆಗಿದ್ದರೆ ನೀವು ಯಾವೆಲ್ಲಾ ಲ್ಯಾಪ್ಟಾಪ್ಗಳನ್ನು ಖರೀದಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಲೆನೊವೊ ಐಡಿಯಾಪಾಡ್ ಗೇಮಿಂಗ್ 3
ಲೆನೊವೊ ಐಡಿಯಾಪಾಡ್ ಗೇಮಿಂಗ್ 3 ಗೇಮರ್ಗಳಿಗೆ ಸೂಕ್ತವಾದ ಲ್ಯಾಪ್ಟಾಪ್ ಆಗಿದೆ. ಈ ಲ್ಯಾಪ್ಟಾಪ್ 15.6 ಇಂಚಿನ IPS LCD ಫುಲ್ HD ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸಲಿದೆ. ಇದು ರೈಜೆನ್ 5 5600H ಪ್ರೊಸೆಸರ್ ಬಲವನ್ನು ಹೊಂದಿದ್ದು, ವಿಂಡೋಸ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 512GB ಸ್ಟೋರೇಜ್ ಹೊಂದಿದೆ. ಪ್ರಸ್ತುತ ಈ ಲ್ಯಾಪ್ಟಾಪ್ ವಿವಿಧ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ 59,990ರೂ.ಗಳಿಗೆ ಲಭ್ಯವಿದೆ.

ಹೆಚ್ಪಿ ವಿಕ್ಟಸ್
ಹೆಚ್ಪಿ ವಿಕ್ಟಸ್ ಲ್ಯಾಪ್ಟಾಪ್ 60,000ರೂ ಒಳಗೆ ನೀವು ಖರೀದಿಸಲು ಬಯಸುವ ಲ್ಯಾಪ್ಟಾಪ್ಗಳಲ್ಲಿ ಉತ್ತಮ ಆಯ್ಕೆಯಾಗಿದೆ. ಈ ಲ್ಯಾಪ್ಟಾಪ್ 16.1 ಇಂಚಿನ ಫುಲ್ ಹೆಚ್ಡಿ ಡಿಸ್ಪ್ಲೇ ಯನ್ನು ಹೊಂದಿದೆ. ಈ ಡಿಸ್ಪ್ಲೇ 60Hz ರಿಫ್ರೆಶ್ ರೇಟ್ ಮತ್ತು 250 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಅನ್ನು ಒಳಗೊಂಡಿದೆ. ಇದು ರೈಜೆನ್ 5 5600H ಪ್ರೊಸೆಸರ್ ಅನ್ನು ಹೊಂದಿದೆ. ಹಾಗೆಯೇ 8GB RAM ಮತ್ತು 512 GB ಸ್ಟೋರೇಜ್ ಹೊಂದಿದೆ. ಇದನ್ನು 32GB DDR4-3200 SDRAM ವರೆಗೆ ಅಪ್ಗ್ರೇಡ್ ಮಾಡಬಹುದು. ಜೊತೆಗೆ 70WHr ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಪ್ರಸ್ತುತ ಅಮೆಜಾನ್ ಪ್ಲಾಟ್ಫಾರ್ಮ್ನಲ್ಲಿ ಈ ಲ್ಯಾಪ್ಟಾಪ್ ಅನ್ನು ನೀವು ಕೇವಲ 55,990ರೂ.ಗಳಿಗೆ ಖರೀದಿಸಬಹುದಾಗಿದೆ.

ಆಸುಸ್ ವಿವೋ ಬುಕ್ 14 ಪ್ರೊ OLED
ಆಸುಸ್ ವಿವೋ ಬುಕ್ 14 ಪ್ರೊ OLED 60,000ರೂ.ಒಳಗೆ ಲಭ್ಯವಾಗುವ ಲ್ಯಾಪ್ಟಾಪ್ಗಳಲ್ಲಿ ಉತ್ತಮ ಆಯ್ಕೆಯಾಗಿದೆ. ಈ ಲ್ಯಾಪ್ಟಾಪ್ 90Hz ರಿಫ್ರೆಶ್ ರೇಟ್ ಒಳಗೊಂಡ 14 ಇಂಚಿನ 2.8K OLED ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ 600ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಅನ್ನು ಹೊಂದಿದೆ. ಹಾಗೇಯೆ ಹೆಚ್ಡಿಆರ್ ಟ್ರೂ ಬ್ಲ್ಯಾಕ್ 600 ಸ್ಟ್ಯಾಂಡರ್ಡ್ ಮತ್ತು ಡಾಲ್ಬಿ ವಿಷನ್ ಸಾಮರ್ಥ್ಯವನ್ನು ಹೊಂದಿದೆ. ಈ ಡಿಸ್ಪ್ಲೇ DCI-P3 ಕಲರ್ ಸ್ಪೇಸ್ 100% ಅನ್ನು ಹೊಂದಿದೆ.
ಈ ಲ್ಯಾಪ್ಟಾಪ್ AMD ರೈಜೆನ್ 7 5800H CPU ಪ್ರೊಸೆಸರ್ ಹೊಂದಿದ್ದು,ಆಸುಸ್ ವಿಂಡೋಸ್ 11ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು 16GB RAM ಮತ್ತು 512GB PCIe Gen 3 SSD ಅನ್ನು ಹೊಂದಿದೆ. ಜೊತೆಗೆ 50WHr ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, 90W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರಿಂದ ಈ ಲ್ಯಾಪ್ಟಾಪ್ ಅನ್ನು ನೀವು ಕೇವಲ 30 ನಿಮಿಷಗಳಲ್ಲಿ 50% ಚಾರ್ಜ್ ಮಾಡಬಹುದಾಗಿದೆ. ಪ್ರಸ್ತುತ ಈ ಲ್ಯಾಪ್ಟಾಪ್ನ ಆರಂಭಿಕ ಬೆಲೆ 59,990 ರೂ.ಆಗಿದೆ.

MSI ಮಾಡರ್ನ್ 15
MSI ಮಾಡರ್ನ್ 15 ಲ್ಯಾಪ್ಟಾಪ್ ನಿಮಗೆ 55,990 ರೂ.ಬೆಲೆಯಲ್ಲಿ ಲಭ್ಯವಾಗಲಿದೆ. ಈ ಲ್ಯಾಪ್ಟಾಪ್ 60Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ 15.6 ಇಂಚಿನ ಫುಲ್ HD IPS LCD ಡಿಸ್ಪ್ಲೇ ಹೊಂದಿದೆ. ಇದು ರೈಜೆನ್ 7 5700U ಸರಣಿಯ ಪ್ರೊಸೆಸರ್ ಹೊಂದಿದೆ. ಹಾಗೆಯೇ ಈ ಲ್ಯಾಪ್ಟಾಪ್ 8GB RAM ಮತ್ತು 512GB NVMe SSD ಸ್ಟೋರೇಜ್ ಹೊಂದಿದೆ. ಈ ಲ್ಯಾಪ್ಟಾಪ್ನಲ್ಲಿ RAM ಅನ್ನು 64GB ವರೆಗೆ ವಿಸ್ತರಿಸಬಹುದಾಗಿದೆ. ಜೊತೆಗೆ 52WHr ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಈ ಲ್ಯಾಪ್ಟಾಪ್ ತನ್ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ HDMI ಪೋರ್ಟ್, USB Gen 3.2 Gen 2 Type-C ಪೋರ್ಟ್ ಮತ್ತು ಮೂರು USB Gen 3.2 Gen 2 Type-A ಪೋರ್ಟ್ಗಳನ್ನು ಒಳಗೊಂಡಿದೆ.

ಆಸುಸ್ ವಿವೋಬುಕ್ 16X
60,000ರೂ.ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಅತ್ಯುತ್ತಮ ಲ್ಯಾಪ್ಟಾಪ್ಗಳಲ್ಲಿ ಆಸುಸ್ ವಿವೋಬುಕ್ 16X ಲ್ಯಾಪ್ಟಾಪ್ ಬೆಸ್ಟ್ ಎನಿಸಲಿದೆ. ಇದು 16:10 ರಚನೆಯ ಅನುಪಾತವನ್ನು ಹೊಂದಿರುವ 16 ಇಂಚಿನ ಫುಲ್ ಹೆಚ್ಡಿ ಡಿಸ್ಪ್ಲೇಯನ್ನು ಹೊಂದಿದೆ. ಈ ಲ್ಯಾಪ್ಟಾಪ್ AMD ರೈಜೆನ್ 7 5800H ಗೇಮಿಂಗ್-ಗ್ರೇಡ್ CPU ಪ್ರೊಸೆಸರ್ ಹೊಂದಿದೆ. ಇದು ವಿಂಡೋಸ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದಲ್ಲದೆ 16GB RAM ಮತ್ತು 512GB PCIe 3.0 SSD ಸ್ಟೋರೇಜ್ ಒಳಗೊಂಡಿದೆ. ಹಾಗೆಯೇ 90W ವೇಗದ ಚಾರ್ಜಿಂಗ್ ಬೆಂಬಲಿಸುವ 50 WHr ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಪ್ರಸ್ತುತ ಈ ಲ್ಯಾಪ್ಟಾಪ್ನ ಆರಂಭಿಕ ಬೆಲೆ 54,990 ರೂ.ಆಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086