ಬಜೆಟ್‌ ಬೆಲೆಯಲ್ಲಿ ನೀವು ಖರೀದಿಸಬಹುದಾದ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್‌ಗಳು!

|

ಪ್ರಸ್ತುತ ದಿನಗಳಲ್ಲಿ ಹಬ್ಬ, ಹರಿದಿನಗಳ ಸಂದರ್ಭದಲ್ಲಿ ವಿಶೇಷ ಪಾರ್ಟಿ ಮಾಡುವ ಸಂಸ್ಕೃತಿ ಬೆಳೆಯುತ್ತಿದೆ. ವಿಕೆಂಡ್‌ ಪಾರ್ಟಿ, ಮನೆಯ ಸದಸ್ಯರೆಲ್ಲರೂ ಮನೆಯಲ್ಲಿಯೇ ಪಾರ್ಟಿ ಮಾಡುವ ಕಲೆ ಹೆಚ್ಚಾಗಿದೆ. ಇಂತಹ ಪಾರ್ಟಿಗಳಿಗೆ ಬ್ಲೂಟೂತ್‌ ಸ್ಪೀಕರ್‌ಗಳು ಇನ್ನಷ್ಟು ರಂಗು ತುಂಬುವ ಕೆಲಸವನ್ನು ಮಾಡುತ್ತವೆ. ಮನೆಯ ಮಂದಿಯೆಲ್ಲಾ ಒಂದೆಡೆ ಸೇರಿ ತಮಗಿಷ್ಟದ ಮ್ಯೂಸಿಕ್‌ಗೆ ಹೆಜ್ಜೆ ಹಾಕುವುದಕ್ಕೆ ಬ್ಲೂಟೂತ್‌ ಸ್ಪೀಕರ್‌ಗಳು ಉತ್ತಮ ಆಯ್ಕೆಯಾಗಿದೆ.

ಸ್ಪೀಕರ್‌

ಹೌದು, ಮನೆಯಲ್ಲಿಯೇ ಪಾರ್ಟಿ ಮಾಡುವಾಗ ಮ್ಯೂಸಿಕ್‌ಪ್ರಿಯರಿಗೆ ಬ್ಲೂಟೂತ್‌ ಸ್ಪೀಕರ್‌ಗಳು ಉತ್ತಮ ಆಯ್ಕೆಯಾಗಿವೆ. ಪೋರ್ಟಬಲ್ ಬ್ಲೂಟೂತ್ ಸ್ಪೀಕರ್‌ಗಳು ಉತ್ತಮ ಸೌಂಡ್‌ ಸಿಸ್ಟಂ ಹೊಂದಿದ್ದು, ಸುಲಭವಾಗಿ ಕ್ಯಾರಿ ಮಾಡಬಹುದಾಗಿದೆ. ಅಷ್ಟೇ ಅಲ್ಲ ವಾಟರ್‌ ಪ್ರೂಫ್‌ ವ್ಯವಸ್ಥೆಯನ್ನು ಹೊಂದಿರುವುದರಿಂದ ಎಂತಹ ಸನ್ನಿವೇಶದಲ್ಲೂ ಮ್ಯೂಸಿಕ್‌ ಅನ್ನು ಆಲಿಸಬಹುದಾಗಿದೆ. ಇನ್ನು ಮಾರುಕಟ್ಟೆಯಲ್ಲಿ ಬಜೆಟ್‌ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಬ್ಲೂಟೂತ್‌ ಸ್ಪೀಕರ್‌ಗಳು ಕೂಡ ಲಭ್ಯವಿದೆ. ಹಾಗಾದ್ರೆ 10,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ನೀವು ಖರೀದಿಸಬಹುದಾದ ಬ್ಲೂಟೂತ್‌ ಸ್ಪೀಕರ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಂಕರ್ ಸೌಂಡ್‌ಕೋರ್ ರೇವ್ ಮಿನಿ

ಅಂಕರ್ ಸೌಂಡ್‌ಕೋರ್ ರೇವ್ ಮಿನಿ

ಅತ್ಯುತ್ತಮ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್‌ಗಳಲ್ಲಿ ಸೌಂಡ್‌ಕೋರ್ ರೇವ್ ಮಿನಿ ಕೂಡ ಉತ್ತಮ ಆಯ್ಕೆಯಾಗಿದೆ. ಈ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್‌ 80W ಪವರ್‌ ಔಟ್‌ಪುಟ್‌ ಅನ್ನು ಹೊಂದಿದ್ದು, ಬ್ಲೂಟೂತ್ 5.0 ಬೆಂಬಲಿಸಲಿದೆ. ಇನ್ನು ಈ ಸ್ಪೀಕರ್ IPX7 ರೇಟಿಂಗ್‌ ವಾಟರ್‌ ಪ್ರೂಪ್‌ ವ್ಯವಸ್ಥೆ ಹೊಂದಿದೆ. ಇನ್ನು ಈ ಪೋರ್ಟಬಲ್ ಬ್ಲೂಟೂತ್ ಪಾರ್ಟಿ ಸ್ಪೀಕರ್ ಮುಂಭಾಗದಲ್ಲಿ ವರ್ಣರಂಜಿತ ಆರ್‌ಜಿಬಿ ಎಲ್‌ಇಡಿ ಲೈಟ್‌ಗಳನ್ನು ಹೊಂದಿದ್ದು, ಪ್ಲೇ ಆಗುತ್ತಿರುವ ಮ್ಯೂಸಿಕ್‌ ಜೊತೆಗೆ ಸಿಂಕ್ ಆಗುತ್ತದೆ. ಇನ್ನು ಈ ರೇವ್ ಮಿನಿ 5.25-ಇಂಚಿನ ವೂಫರ್, 2-ಇಂಚಿನ ಟ್ವೀಟರ್ ಮತ್ತು 5.25-ಇಂಚಿನ ನಿಷ್ಕ್ರಿಯ ರೇಡಿಯೇಟರ್ ಅನ್ನು ಹೊಂದಿದೆ. ಇದು 10,000mAh ಬ್ಯಾಟರಿಯಿಂದ ಬೆಂಬಲಿತವಾಗಿದ್ದು, 18 ಗಂಟೆಗಳವರೆಗೆ ಬಾಳಿಕೆ ಬರಲಿದೆ. ಆಂಕರ್ ಸೌಂಡ್‌ಕೋರ್ ರೇವ್ ಮಿನಿ ಸ್ಪೀಕರ್‌ ಪ್ರಸ್ತುತ 9,499 ರೂ.ಬೆಲೆಗೆ ಲಭ್ಯವಿದೆ.

ಬೋಟ್ ಸ್ಟೋನ್ 1500

ಬೋಟ್ ಸ್ಟೋನ್ 1500

ಬೋಟ್ ಸ್ಟೋನ್ 1500 ಪೋರ್ಟಬಲ್ ಬ್ಲೂಟೂತ್ ಸ್ಪೀಕರ್‌ ಟ್ರೂಲಿ ವೈರ್‌ಲೆಸ್ ಸ್ಟಿರಿಯೊವನ್ನು ಬೆಂಬಲಿಸುತ್ತದೆ. ಅಂದರೆ ಇದರಲ್ಲಿ ನೀವು ಅನೇಕ ಬೋಟ್ ಸ್ಟೋನ್ 1500 ಸ್ಪೀಕರ್‌ಗಳನ್ನು ಏಕಕಾಲದಲ್ಲಿ ಜೋಡಿಸಬಹುದು. ಇನ್ನು ಬೋಟ್ ಸ್ಟೋನ್ 1500 ಒಳಾಂಗಣ ಮತ್ತು ಹೊರಾಂಗಣ ಮೋಡ್ ಸೇರಿದಂತೆ ಎರಡು ವಿಧಾನಗಳನ್ನು ನೀಡುತ್ತದೆ. ಈ ಡಿವೈಸ್‌ 4000 mAh ಬ್ಯಾಟರಿಯನ್ನು ಹೊಂದಿದ್ದು, ಉತ್ತಮ ಬ್ಯಾಟರಿ ಬ್ಯಾಕಪ್‌ ನೀಡಲಿದೆ. ಈ ಸ್ಪೀಕರ್ ಅನ್ನು ಪ್ರಸ್ತುತ ಫ್ಲಿಪ್‌ಕಾರ್ಟ್‌ನಿಂದ ರೂ 6,990 ಕ್ಕೆ ಖರೀದಿಸಬಹುದು.

UE ಬೂಮ್ 2 ಬ್ಲೂಟೂತ್ ಸ್ಪೀಕರ್‌

UE ಬೂಮ್ 2 ಬ್ಲೂಟೂತ್ ಸ್ಪೀಕರ್‌

UE ಬೂಮ್ 2 ಸ್ಪೀಕರ್‌ ಉತ್ತಮ ಗುಣಮಟ್ಟದ ಸೌಂಡ್‌ ಸಿಸ್ಟಂ ಅನ್ನು ನೀಡಲಿದೆ. ಇನ್ನು ಈ ಸ್ಪೀಕರ್‌ 360 ಡಿಗ್ರಿ ಆಡಿಯೊದೊಂದಿಗೆ ಬರುತ್ತದೆ, ಇದು ಸಣ್ಣ ಪಾರ್ಟಿಗಳು ಅಥವಾ ಔಟ್‌ಸೈಡ್‌ ಪಾರ್ಟಿಗಳಿಗೆ ಉತ್ತಮ ಆಯ್ಕೆಯಾಗಿದೆ. ಇದಲ್ಲದೆ ಯುಇ ಬೂಮ್ ಆಪ್ ಬಳಸಿ ನೀವು ಸ್ಪೀಕರ್‌ನಲ್ಲಿ ಧ್ವನಿಯನ್ನು ಕಸ್ಟಮೈಸ್ ಮಾಡಬಹುದು. ಸ್ಪೀಕರ್ ಅದರ ಗಾತ್ರಕ್ಕೆ ಸಮರ್ಪಕವಾದ ಬಾಸ್ ಅನ್ನು ನೀಡುತ್ತದೆ. ಇನ್ನು ಈ ಸ್ಪೀಕರ್‌ ಅತ್ಯುತ್ತಮ 360 ಡಿಗ್ರಿ ಸ್ಪೀಕರ್‌ಗಳಲ್ಲಿ ಒಂದಾಗಿದೆ. ಪ್ರಸ್ತುತ ಅಮೆಜಾನ್ ಇಂಡಿಯಾದಲ್ಲಿ ರೂ. 7,999 ಗಳಿಗೆ ಲಭ್ಯವಾಗಲಿದೆ.

ಜೂಕ್ ರಾಕರ್ ಟಾರ್ಪಿಡೊ

ಜೂಕ್ ರಾಕರ್ ಟಾರ್ಪಿಡೊ

ಜೂಕ್ ಸಂಸ್ಥೆಯ ಅತ್ಯುತ್ತಮ ಬ್ಲೂಟೂತ್ ಸ್ಪೀಕರ್ ಇದಾಗಿದೆ. ಈ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್ ಅನ್ನು ಟ್ಯಾಂಕ್‌ ಮಾದರಿಯಲ್ಲಿ ದೊರೆಯಲಿದೆ. ಈ ಸ್ಪೀಕರ್ 50W ಔಟ್ಪುಟ್ ಅನ್ನು ಹೊಂದಿದ್ದು, 5200mAh ಬ್ಯಾಟರಿಯನ್ನು ಹೊಂದಿದೆ. ಇದು ಫುಲ್‌ ಚಾರ್ಜ್‌ ನಂತರ 5-6 ಗಂಟೆಗಳ ಕಾಲ ಸುಲಭವಾಗಿ ಇರುತ್ತದೆ. ಸದ್ಯ ಈ ಸ್ಪೀಕರ್ ಆನ್‌ಲೈನ್‌ನಲ್ಲಿ 5,000 ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿದೆ.

LG XBOOM GO PL5

LG XBOOM GO PL5

ಎಲ್‌ಜಿ ಎಕ್ಸ್‌ಬೂಮ್ ಗೋ ಪಿಎಲ್ 5 ಬ್ಲೂಟೂತ್ ಸ್ಪೀಕರ್ ಕೂಡ ಬಜೆಟ್‌ ಬೆಲೆಯಲ್ಲಿ ಲಭ್ಯವಾಗುವ ಸ್ಪೀಕರ್‌ ಆಗಿದೆ. ನಿಮ್ಮ ಪಾರ್ಟಿಯಲ್ಲಿ ಮ್ಯೂಸಿಕ್‌ನೊಂದಿಗೆ ಸಿಂಕ್ ಮಾಡುವ ಎಲ್ಇಡಿ ಲೈಟ್‌ಗಳೊಂದಿಗೆ ಬರಲಿದೆ. ಈ ಸ್ಪೀಕರ್ ಸೌಂಡ್ ಬೂಸ್ಟ್ ಎಂಬ ಇಕ್ಯೂ ಮೋಡ್ ಅನ್ನು ಹೊಂದಿದೆ, ಇದು ಸೌಂಡ್‌ಸ್ಟೇಜ್ ಅನ್ನು ವಿಸ್ತರಿಸುತ್ತದೆ. ಇದಲ್ಲದೆ ಈ ಸ್ಪೀಕರ್ ಐಪಿಎಕ್ಸ್ 5 ರೇಟಿಂಗ್‌ನೊಂದಿಗೆ ಬರುತ್ತದೆ. ನಿಮ್ಮ ಫೋನ್‌ನ ವಾಯ್ಸ್ ಅಸಿಸ್ಟೆಂಟ್ ಅನ್ನು ಸಕ್ರಿಯಗೊಳಿಸಲು ಸ್ಪೀಕರ್ ವಾಯ್ಸ್ ಕಮಾಂಡ್ ಹಾಟ್‌ಕೀ ಕೂಡ ಪ್ಯಾಕ್ ಮಾಡುತ್ತದೆ. ಇದರೊಂದಿಗೆ 18 ಗಂಟೆಗಳ ಪ್ಲೇಬ್ಯಾಕ್ ಅನ್ನು ನೀಡಲಿದೆ. ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಪೀಕರ್‌ 9,999 ರೂ.ಬೆಲೆ ಹೊಂದಿದೆ.

Most Read Articles
Best Mobiles in India

English summary
here are some of the best portable party speakers for under Rs 10,000 ahead of the festive season.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X