ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಗೇಮಿಂಗ್ ಹೆಡ್‌ಫೋನ್‌ಗಳು!

|

ಟೆಕ್ ಮಾರುಕಟ್ಟೆಯಲ್ಲಿ ಹೆಡ್‌ಫೋನ್‌ಗಳು ಸಾಕಷ್ಟು ಬೇಡಿಕೆ ಪಡೆದುಕೊಂಡಿವೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ವೈವಿಧ್ಯಮಯವಾದ ಹೆಡ್‌ಫೋನ್‌ಗಳನ್ನು ಪರಿಚಯಿಸಿವೆ. ಇವುಗಳಲ್ಲಿ ಗೇಮಿಂಗ್‌ ಹೆಡ್‌ಫೋನ್‌ಗಳು ಕೂಡ ಸಾಕಷ್ಟು ಜನಪ್ರಿಯತೆ ಪಡೆದಿವೆ. ನಿಮ್ಮ ಆದ್ಯತೆಯ ಆಧಾರದ ಮೇಲೆ ನೀವು ಆಯ್ಕೆ ಮಾಡಬಹುದಾದ ಹಲವಾರು ಗೇಮಿಂಗ್ ಹೆಡ್‌ಫೋನ್‌ಗಳಿವೆ. ಗೇಮಿಂಗ್‌ ಪ್ರಿಯರಿಗೆ ಈ ಹೆಡ್‌ಫೋನ್‌ಗಳು ಉತ್ತಮ ಅನುಭವ ನೀಡಲಿವೆ.

ಗೇಮಿಂಗ್‌

ಹೌದು, ಗೇಮಿಂಗ್‌ ಪ್ರಿಯರಿಗೆ ಉತ್ತಮ ಅನುಭವ ನೀಡುವುದಕ್ಕಾಗಿಯೇ ಮಾರುಕಟ್ಟೆಯಲ್ಲಿ ಸಾಕಷ್ಟು ಗೇಮಿಂಗ್‌‌ ಹೆಡ್‌ಫೋನ್‌ಗಳು ಲಗ್ಗೆ ಇಟ್ಟಿವೆ. ಈ ಗೇಮಿಂಗ್‌ ಹೆಡ್‌ಫೋನ್‌ಗಳು ಗೇಮರ್‌ಗಳಿಗೆ ಉತ್ತಮ ಸೌಂಡ್‌ ಸಿಸ್ಟಂ ಅನ್ನು ನೀಡಲಿವೆ. ಜೊತೆಗೆ ಉತ್ತಮ ಬ್ಯಾಟರಿ ಬ್ಯಾಕಪ್‌ ಅನ್ನು ಕೂಡ ಹೊಂದಿವೆ. ಜೊತೆಗೆ ಹೊಸ ಮಾದರಿಯ ಟೆಕ್ನಾಲಜಿಯನ್ನು ಒಳಗೊಂಡಿವೆ. ಹಾಗಾದ್ರೆ ಮಾರುಕಟ್ಟೆಯಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತಮ ವಾಯರ್‌ಲೆಸ್‌ ಗೇಮಿಂಗ್‌ ಹೆಡ್‌ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಕೊಡ್ತೀವಿ ಓದಿರಿ.

ಸ್ಟೀಲ್ ಸಿರೀಸ್ ಆರ್ಕ್ಟಿಸ್ 7

ಸ್ಟೀಲ್ ಸಿರೀಸ್ ಆರ್ಕ್ಟಿಸ್ 7

ಸ್ಟೀಲ್ ಸಿರೀಸ್ ಆರ್ಕ್ಟಿಸ್ 7 ಹೆಡ್‌ಫೋನ್‌ 2.4GHz ವಾಯರ್‌ಲೆಸ್ ಜೋಡಿ ಹೆಡ್‌ಫೋನ್‌ ಆಗಿದೆ. ಇದು ಅಲ್ಟ್ರಾ ಲೋ ಲೇಟೆನ್ಸಿ ಮತ್ತು ಜಿರೋ ಇಂಟರ್‌ಫೇಸ್‌ ನೀಡಲಿದೆ. ಇದು ಡಿಸ್ಕಾರ್ಡ್-ಪ್ರಮಾಣೀಕೃತ ಮೈಕ್ರೊಫೋನ್ ಅನ್ನು ಹೊಂದಿದೆ. ಜೊತೆಗೆ ಈ ಹೆಡ್‌ಫೋನ್‌ DTS ಹೆಡ್‌ಫೋನ್:X v.20 ಸರೌಂಡ್ ಸೌಂಡ್ ಟೆಕ್ನಾಲಜಿಯನ್ನು ಸಹ ಒಳಗೊಂಡಿದೆ. ಇದಲ್ಲದೆ ಈ ಹೆಡ್‌ಫೋನ್‌ ಉತ್ತಮವಾದ ಬ್ಯಾಟರಿ ಬ್ಯಾಕಪ್‌ ಅನ್ನು ಹೊಂದಿದ್ದು, ಸಿಂಗಲ್‌ ಚಾರ್ಜ್‌ನಲ್ಲಿ 24 ಗಂಟೆಗಳ ಕಾಲ ಬಾಳಿಕೆ ನೀಡಲಿದೆ. ಪ್ರಸ್ತುತ ಅಮೆಜಾನ್‌ನಲ್ಲಿ ಈ ಹೆಡ್‌ಫೋನ್‌ ರಿಯಾಯಿತಿ ದರದಲ್ಲಿ ಕೇವಲ 15,999ರೂ.ಗಳಿಗೆ ಲಭ್ಯವಾಗಲಿದೆ.

ಕೊರ್ಸೇರ್ ವಾಯ್ಡ್ RGB ಎಲೈಟ್ ಹೆಡ್‌ಫೋನ್‌

ಕೊರ್ಸೇರ್ ವಾಯ್ಡ್ RGB ಎಲೈಟ್ ಹೆಡ್‌ಫೋನ್‌

ಕೊರ್ಸೇರ್ ವಾಯ್ಡ್ RGB ಎಲೈಟ್ ಹೆಡ್‌ಫೋನ್‌ 7.1 ಸರೌಂಡ್ ಸೌಂಡ್ ಅನ್ನು ನೀಡಲಿದೆ. ಇನ್ನು ಈ ಹೆಡ್‌ಫೋನ್‌ 2.4Ghz ವಾಯರ್‌ಲೆಸ್ ಕಂಟ್ಯಾಕ್ಟ್‌ ಅನ್ನು ಹೊಂದಿದೆ. ಜೊತೆಗೆ ಈ ಹೆಡ್‌ಫೋನ್‌ 20Hz-30,000Hz ಫ್ರಿಕ್ವೆನ್ಸಿ ರೇಂಜ್‌ ಹೊಂದಿದ್ದು, 50mm ಆಡಿಯೊ ಡ್ರೈವರ್‌ಗಳನ್ನು ಹೊಂದಿದೆ. ಇದಲ್ಲದೆ ಈ ಹೆಡ್‌ಫೋನ್‌ಗಳನ್ನು ಮೈಕ್ರೋಫೈಬರ್ ಮೆಶ್ ಫ್ಯಾಬ್ರಿಕ್ ಮತ್ತು ಪ್ಲಶ್ ಮೆಮೊರಿ ಫೋಮ್ ಇಯರ್‌ಪ್ಯಾಡ್‌ಗಳಿಂದ ಮುಚ್ಚಲಾಗಿದೆ. ಈ ಹೆಡ್‌ಫೋನ್‌ 16 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಇನ್ನು ಈ ಹೆಡ್‌ಫೋನ್‌ಗಳು ಡಿಸ್ಕಾರ್ಡ್-ಪ್ರಮಾಣೀಕೃತ ಓಮ್ನಿಡೈರೆಕ್ಷನಲ್ ಮೈಕ್ರೊಫೋನ್ ಅನ್ನು ಸಹ ಒಳಗೊಂಡಿವೆ. ಪ್ರಸ್ತುತ ಈ ಹೆಡ್‌ಫೋನ್‌ ಅಮೆಜಾನ್‌ನಲ್ಲಿ ಡಿಸ್ಕೌಂಟ್‌ ಪಡೆದುಕೊಂಡಿದ್ದು 16,999ರೂ.ಬೆಲೆಗೆ ಲಭ್ಯವಾಗಲಿದೆ.

ಲಾಜಿಟೆಕ್ G733

ಲಾಜಿಟೆಕ್ G733

ಲಾಜಿಟೆಕ್ G733 ವಾಯರ್‌ಲೆಸ್ ಗೇಮಿಂಗ್ ಹೆಡ್‌ಫೋನ್‌ ಡ್ಯುಯಲ್-ಝೋನ್ RGB ಲೈಟಿಂಗ್ ಅನ್ನು ಒಳಗೊಂಡಿದೆ. ಇದು ರಿವರ್ಸಿಬಲ್ ಸಸ್ಪೆನ್ಷನ್ ಹೆಡ್‌ಬ್ಯಾಂಡ್ ಅನ್ನು ಸಹ ಹೊಂದಿದೆ. ಇದಲ್ಲದೆ ಸಿಂಗಲ್‌ ಚಾರ್ಜ್‌ನಲ್ಲಿ 29 ಗಂಟೆಗಳವರೆಗೆ ಬಾಳಿಕೆ ನೀಡಲಿದೆ. ಈ ಗೇಮಿಂಗ್ ಹೆಡ್‌ಫೋನ್‌ಗಳು ಉತ್ತಮ ಧ್ವನಿ ಗುಣಮಟ್ಟಕ್ಕಾಗಿ ಸುಧಾರಿತ ಫಿಲ್ಟರ್‌ಗಳೊಂದಿಗೆ ಡಿಟ್ಯಾಚೇಬಲ್ ಮೈಕ್ರೊಫೋನ್‌ನೊಂದಿಗೆ ಬರುತ್ತವೆ. ಇದು ಲಾಜಿಟೆಕ್‌ನ PRO-G ಡ್ರೈವರ್‌ಗಳು ಮತ್ತು DTS ಹೆಡ್‌ಫೋನ್ X 2.0 ಸರೌಂಡ್ ಸೌಂಡ್ ಟೆಕ್ನಾಲಜಿಯನ್ನು ಸಹ ಹೊಂದಿದೆ.

ಹೈಪರ್ ಎಕ್ಸ್ ಕ್ಲೌಡ್ ಸ್ಟಿಂಗರ್ ಕೋರ್

ಹೈಪರ್ ಎಕ್ಸ್ ಕ್ಲೌಡ್ ಸ್ಟಿಂಗರ್ ಕೋರ್

ಹೈಪರ್‌ಎಕ್ಸ್ ಕ್ಲೌಡ್ ಸ್ಟಿಂಗರ್ ಕೋರ್ ಗೇಮಿಂಗ್‌ ಹೆಡ್‌ಫೋನ್‌ 2.4GHz ವಾಯರ್‌ಲೆಸ್ ಹೆಡ್‌ಫೋನ್‌ಗಳ ಮತ್ತೊಂದು ಜೋಡಿಯಾಗಿದೆ. ಇದು ವರ್ಧಿತ ಬಾಸ್‌ಗಾಗಿ 40mm ಡ್ರೈವರ್‌ಗಳನ್ನು ಮತ್ತು ಗೊಂದಲವನ್ನು ತಡೆಯಲು ಮುಚ್ಚಿದ-ಕಪ್ ವಿನ್ಯಾಸವನ್ನು ಹೊಂದಿದೆ. ಇನ್ನು ಈ ಗೇಮಿಂಗ್ ಹೆಡ್‌ಫೋನ್‌ಗಳು ಹೊಂದಾಣಿಕೆ ಮಾಡಬಹುದಾದ ಉಕ್ಕಿನ ಸ್ಲೈಡರ್‌ಗಳು ಮತ್ತು ಗಾಳಿಯ ಕುಶನ್‌ಗಳನ್ನು ಹೊಂದಿವೆ. ಇದಲ್ಲದೆ ವಾಲ್ಯೂಮ್ ಅನ್ನು ಸರಿಹೊಂದಿಸಲು ನೀವು ಆನ್‌ಬೋರ್ಡ್ ಆಡಿಯೊ ಕಂಟ್ರೋಲ್‌ ಮತ್ತು ನಾಯ್ಸ್‌ ಕ್ಯಾನ್ಸಲೇಶನ್‌ ಮೈಕ್ರೊಫೋನ್ ಅನ್ನು ಸಹ ಹೊಂದಿದೆ. ಪ್ರಸ್ತುತ ಅಮೆಜಾನ್‌ ನಲ್ಲಿ 16,594ರೂ.ಬೆಲೆಗೆ ಖರೀದಿಸಬಹುದಾಗಿದೆ.

ಕೊರ್ಸೇರ್ ವರ್ಚುಸೊ RGB

ಕೊರ್ಸೇರ್ ವರ್ಚುಸೊ RGB

ಕೊರ್ಸೇರ್ ವರ್ಚುಸೊ RGB ವಾಯರ್‌ಲೆಸ್ ಗೇಮಿಂಗ್ ಹೆಡ್‌ಫೋನ್‌ಗಳು 7.1 ಸರೌಂಡ್ ಸೌಂಡ್ ತಂತ್ರಜ್ಞಾನವನ್ನು ಹೊಂದಿವೆ. ಇದು 50 ಎಂಎಂ ಸ್ಪೀಕರ್ ಡ್ರೈವರ್‌ಗಳನ್ನು ಹೊಂದಿದೆ ಮತ್ತು ಟೈಪ್-ಸಿ ಮತ್ತು 3.5 ಎಂಎಂ ಕನೆಕ್ಟರ್‌ಗಳನ್ನು ಒಳಗೊಂಡಂತೆ ಮೂರು ವಿಧಾನಗಳ ಸಂಪರ್ಕವನ್ನು ಬೆಂಬಲಿಸುತ್ತದೆ. ಇನ್ನು ಈ ಹೆಡ್‌ಫೋನ್‌ಗಳು ಓಮ್ನಿಡೈರೆಕ್ಷನಲ್ ಮೈಕ್ರೊಫೋನ್ ಅನ್ನು ಒಳಗೊಂಡಿದ್ದು ಡಿಟ್ಯಾಚೇಬಲ್ ಆಗಿದೆ. ಇದು ಮೆಮೊರಿ ಫೋಮ್ ಇಯರ್‌ಪ್ಯಾಡ್‌ಗಳನ್ನು ಮತ್ತು ಆರಾಮದಾಯಕವಾದ ಫಿಟ್‌ಗಾಗಿ ಮೆತ್ತೆ-ಸಾಫ್ಟ್ ಹೆಡ್‌ಬ್ಯಾಂಡ್ ಅನ್ನು ಒಳಗೊಂಡಿದೆ. ಪ್ರಸ್ತುತ ಅಮೆಜಾನ್‌ನಲ್ಲಿ ಈ ಹೆಡ್‌ಫೋನ್‌ 22,601ರೂ ಬೆಲೆಗೆ ಲಭ್ಯವಾಗಲಿದೆ.

ರೇಜರ್ ಬ್ಲ್ಯಾಕ್‌ಶಾರ್ಕ್ V2 ಪ್ರೊ

ರೇಜರ್ ಬ್ಲ್ಯಾಕ್‌ಶಾರ್ಕ್ V2 ಪ್ರೊ

ರೇಜರ್ ಬ್ಲ್ಯಾಕ್‌ಶಾರ್ಕ್ V2 ಪ್ರೊ ವಾಯರ್‌ಲೆಸ್ ಗೇಮಿಂಗ್ ಹೆಡ್‌ಫೋನ್‌ ಟೈಟಾನಿಯಂ 50mm ಡ್ರೈವರ್‌ ಹೊಂದಿದೆ. ಇದು ಲೋ ಲೇಟೆನ್ಸಿಹೊಂದಿದ್ದು, USB ಸೌಂಡ್ ಕಾರ್ಡ್‌ನೊಂದಿಗೆ Razer HyperClear ಕಾರ್ಡಿಯಾಯ್ಡ್ ಮೈಕ್ರೊಫೋನ್ ಹೊಂದಿದೆ. ಇನ್ನು ಈ ಗೇಮಿಂಗ್ ಹೆಡ್‌ಫೋನ್‌ಗಳು ಆರಾಮದಾಯಕವಾದ ಫಿಟ್‌ಗಾಗಿ ಮೆಮೊರಿ ಫೋಮ್ ಇಯರ್ ಕುಶನ್‌ಗಳನ್ನು ಸಹ ಹೊಂದಿವೆ. ಇದು ವಿಂಡೋಸ್ ಮತ್ತು MAC ಪಿಸಿಗಳು, ಕನ್ಸೋಲ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ. ಪ್ರಸ್ತುತ ಈ ಹೆಡ್‌ಫೋನ್‌ ಅಮೆಜಾನ್‌ನಲ್ಲಿ 17,060ರೂ.ಗಳಿಗೆ ಖರೀದಿಸಬಹುದಾಗಿದೆ.

Most Read Articles
Best Mobiles in India

English summary
Wireless gaming headphones also offer all that you get with wired headphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X