ಫ್ಲಿಪ್ ಕಾರ್ಟ್, ಅಮೇಜಾನ್ ಮತ್ತು ಇತರೆ ಕೆಲವು ಇ-ಟೈಲರ್ಸ್ ಗಳಿಗೆ ಅಂತಿಮವಾಗಿ ಲಭ್ಯವಾಗಿದೆ ಸಿಹಿಸುದ್ದಿ

By Gizbot Bureau
|

ಇ-ಕಾಮರ್ಸ್ ವೆಬ್ ಸೈಟ್ ಗಳಿಗೆ ಸಂಬಂಧಿಸಿದಂತೆ ನಿಯಂತ್ರಣ ಹೇರುವುದಕ್ಕೆ ಸರ್ಕಾರವು ಒಂದು ಹಂತದವರೆಗೆ ಪ್ರಯತ್ನಗಳನ್ನು ನಡೆಸಬಹುದು. ಕಿರಾಣಿ ಅಂಗಡಿ ಮತ್ತು ಸಣ್ಣ ವ್ಯಾಪಾರಿಗಳು ಸಲ್ಲಿಸಿರುವ ಎಲ್ಲಾ ಬೇಡಿಕೆಗಳ ಪೂರೈಕೆ ಅಸಾಧ್ಯವೆಂದು ಸರ್ಕಾರ ತಿಳಿಸಿದೆ. ಈ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ , ಅಮೇಜಾನ್ ಸೇರಿದಂತೆ ಇ-ಕಾಮರ್ಸ್ ವೆಬ್ ಸೈಟ್ ಗಳಿಗೆ ಇದು ಸಿಹಿಸುದ್ದಿಯಾಗಿದೆ.

ಫ್ಲಿಪ್ ಕಾರ್ಟ್, ಅಮೇಜಾನ್ ಮತ್ತು ಇತರೆ ಕೆಲವು ಇ-ಟೈಲರ್ಸ್ ಗಳಿಗೆ ಅಂತಿಮವಾಗಿ ಲಭ್ಯ

ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿರುವ ಪಿಯೂಷ್ ಘೋಯಲ್ ಅವರು ಸಣ್ಣ ವ್ಯಾಪಾರಿಗಳಿಗು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಇ-ಕಾಮರ್ಸ್ ಫ್ಲ್ಯಾಟ್ ಫಾರ್ಮ್ ನಿಂದ ಲಾಭ ಪಡೆಯುವುದು ಹೇಗೆ ಎಂಬ ಬಗ್ಗೆ ಕೆಲವು ಮಾರ್ಗಗಳನ್ನು ಅನ್ವೇಷಿಸುವುದಕ್ಕೆ ತಿಳಿಸಿದ್ದಾರೆ. ಆದರೆ ಈ ನಿಟ್ಟಿನಲ್ಲಿ ಈ ವಲಯದ ನಿಯಂತ್ರಕ್ಕಾಗಿ ಅವರು ಸಲ್ಲಿಸಿರುವ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ.

ಇ ಕಾಮರ್ಸ್

ವ್ಯಾಪಾರಿಗಳು ಇ ಕಾಮರ್ಸ್ ಕ್ಷೇತ್ರಕ್ಕೆ ನಿಯಂತ್ರಕ ಅಥವಾ ಪ್ರತ್ಯೇಕ ಕಾನೂನನ್ನು ಬಯಸಿದ್ದರು. ಆದರೆ ಅವರ ಸಮಸ್ಯೆಯನ್ನು ಪರಿಹರಿಸುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಸಣ್ಣ ವ್ಯಾಪಾರಿಗಳ ಪ್ರತಿನಿಧಿಗಳ ಜೊತೆಗೆ ಸಭೆಯನ್ನೂ ನಡೆಸಿದ್ದಾರೆ.

ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರವನ್ನು ಉತ್ತೇಜಿಸುವ ಇಲಾಖೆ(ಡಿಪಿಐಐಟಿ) ಕರಡು ರಾಷ್ಟ್ರೀಯ ಇಕಾಮರ್ಸ್ ನೀತಿಯನ್ನು ಸಾರ್ವಜನಿಕ ಗೊಳಿಸಿದೆ. ಇದರಲ್ಲಿ ಗಡಿಯಾಚೆಗಿನ ದತ್ತಾಂಶದ ಹರಿವನ್ನು ನಿಯಂತ್ರಿಸುವುದು,ಉದ್ಯೋಗ ಸೃಷ್ಟಿಗಾಗಿ ದೇಶದೊಳಗೆ ಕಂಪ್ಯೂಟಿಂಗ್ ಸೌಲಭ್ಯವನ್ನು ಪತ್ತೆ ಹಚ್ಚುವುದು, ಒಂದು ಸಮುದಾಯಕ್ಕೆ ಸಂಬಂಧಿಸಿದ ಡಾಟಾ ಪ್ರಾಧಿಕಾರಕ್ಕೆ ನಿರ್ಧಿಷ್ಟ ಸೆಟ್ಟಿಂಗ್ಸ್ ಇತ್ಯಾದಿಗಳಿಗೆ ಸಂಬಂಧಿಸಿದ ಡಾಟಾ ಪ್ರಪೋಸಲ್ ಇದೆ.

ವಾಣಿಜ್ಯ ಇಲಾಖೆ

ದೇಶದಲ್ಲಿ ಜನರೇಟ್ ಆಗಿರುವ ಡಾಟಾಗಳು ರಾಷ್ಟ್ರೀಯ ಆಸ್ತಿಯಾಗಿರುತ್ತದೆ ಮತ್ತು ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ಇದರ ಮೇಲೆ ಸಂಪೂರ್ಣ ಅಧಿಕಾರವಿರುತ್ತದೆ.ಆದರೆ ವಾಣಿಜ್ಯ ಇಲಾಖೆಯು ಕಳೆದ ವರ್ಷ ಬಿಡುಗಡೆ ಮಾಡಿದ ಕರಡು ನೀತಿಯಂತೆ ಇದು ಇರುವುದಿಲ್ಲ ಮತ್ತು ನಿಯಂತ್ರಕವನ್ನು ಕರೆಯುವುದಿಲ್ಲ.

ಸಭೆಯಲ್ಲಿ ಭಾಗವಹಿಸಿದ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ನೀತಿಯ ಅನುಸರಣೆಯನ್ನು ಮೇಲ್ವಿಚಾರಣೆ ಮಾಡಲು ನಿಯಂತ್ರಕ ಕಾರ್ಯವಿಧಾನವನ್ನು ಪ್ರಸ್ತಾಪಿಸಲಾಗಿತ್ತು. ದೇಶದಲ್ಲಿ ಕೆಲಸ ಮಾಡುತ್ತಿರುವ ಇ-ಕಾಮರ್ಸ್ ಪೋರ್ಟಲ್ ಗಳ ಒಟ್ಟು ಸಂಖ್ಯೆಯ ಬಗ್ಗೆ ಸರ್ಕಾರಕ್ಕೆ ಬಹಳ ಕಡಿಮೆ ಮಾಹಿತಿ ಇದೆ ಯಾಕೆಂದರೆ ಯಾವುದೇ ಅಧಿಕೃತ ಪ್ರಾಧಿಕಾರದೊಂದಿಗೆ ನೊಂದಣಿ ಮಾಡಿಕೊಳ್ಳುವುದು ಅನಿವಾರ್ಯವಿಲ್ಲದ ಕಾರಣ ಇದು ಸಾಧ್ಯವಾಗಿಲ್ಲ.

ಕಿರಾಣಿ ಮಳಿಗೆಗಳು

ಕಿರಾಣಿ ಮಳಿಗೆಗಳು, ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳ ಸಂಘಗಳ ಪ್ರತಿನಿಧಿಗಳು ವ್ಯಾಪಾರಿ ಮೈದಾನದ ಅವಶ್ಯಕತೆ ಮತ್ತು ವಿದೇಶಿ ಸ್ಪರ್ಧೆಯಿಂದ ಅವರು ಎದುರಿಸುತ್ತಿರುವ ಪರಭಕ್ಷಕ ಬೆಲೆ ಮತ್ತು ಇತರ ತಾರತಮ್ಯ ವಿಧಾನಗಳಂತಹ ಸ್ಪರ್ಧಾತ್ಮಕ-ವಿರೋಧಿ ಅಭ್ಯಾಸಗಳ ಪರಿಣಾಮದ ಬಗ್ಗೆ ಚರ್ಚೆ ನಡೆಸಿದರು.

ಸರ್ಕಾರವು ದತ್ತಾಂಶದ ಕಾನೂನಿನ ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು ಇಕಾಮರ್ಸ್ ವಲಯದ ನೀತಿಯನ್ನು ಕೂಡ ಬೆಂಬಲಿಸುತ್ತದೆ.ಇದು ಯಾವುದೇ ದುಷ್ಕೃತ್ಯಗಳನ್ನು ಗಮನಿಸುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇ-ಕಾಮರ್ಸ್ ನೀತಿ

ಗೋಯಲ್ ಭಾರತೀಯ ಮತ್ತು ಜಾಗತಿಕ ಇ-ಕಾಮರ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಕಂಪನಿಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಹತ್ತು ದಿನಗಳಲ್ಲಿ ನೀತಿಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಕೇಳಿಕೊಂಡಿದ್ದರು. ಅವರ ವಕೀಲರು ಕೋರಿದರೆ ಅವರೊಂದಿಗೆ ಮತ್ತೊಂದು ಸಭೆಯನ್ನು ಸಹ ಅವರು ಸೂಚಿಸಿದರು.

ಹೆಚ್ಚಿನ ಕಂಟ್ರೋಲ್ ನ್ನು ನಿಯಮಗಳು ಮತ್ತು ಕಾನೂನಿನ ಮೂಲಕ ಹೆಚ್ಚಿನ ನಿಯಂತ್ರಣ ತರುವ ಮೂಲಕ ಒಂದು ನಿರ್ಧಿಷ್ಟ ಹಂತದವರೆಗೆ ಮಾತ್ರ ಸಹಾಯ ಮಾಡುತ್ತದೆ. ಆದರೆ ದೀರ್ಘಾವಧಿ ಲಾಭಕ್ಕಾಗಿ ಅಲ್ಪಾವಧಿಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಮತ್ತು ಈ ಕಾರಣದಿಂದ ಜಾಗತಿಕ ಭಾರತ ಪ್ರತ್ಯೇಕವಾಗಿ ಉಳಿಯುವುದಕ್ಕೆ ಸಾಧ್ಯವಾಗುವುದಿಲ್ಲ. ಜಾಗತಿಕ ಮೌಲ್ಯ ಸರಪಳಿಯಲ್ಲಿ 5 ಟ್ರಿಲಿಯನ್ ಆರ್ಥಿಕತೆಯಾಗಲು ಅದರ ಭಾಗವಾಗಿರಬೇಕಾಗುತ್ತದೆ ಎಂದು ಸಚಿವಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.

ಕಾನೂನಿನ ಮಾಹಿತಿಯ ಅಂಶವನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಮೀಟಿವೈ) ತಿಳಿಸುತ್ತಿದೆ ಮತ್ತು ಕಿರಾಣಿ ಮಳಿಗೆಗಳು, ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳ ಸಂಘಗಳ ಪ್ರತಿನಿಧಿಗಳಿಗೆ ಕರಡು ಇ-ಕಾಮರ್ಸ್ ನೀತಿಗೆ ಸಂಬಂಧಿಸಿದ ಎಲ್ಲಾ ಸಲಹೆಗಳನ್ನು ಕಳುಹಿಸುವಂತೆ ಘೋಯಲ್ ಹೇಳಿದ್ದಾರೆ.

Most Read Articles
Best Mobiles in India

Read more about:
English summary
Here's finally some 'good news' for Flipkart, Amazon and other e-tailers

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more