ಗೂಗಲ್‌ ಮ್ಯಾಪ್‌ನಲ್ಲಿನ ಈ ಫೀಚರ್ಸ್‌ಗಳು ನಿಮ್ಮ ಪ್ರವಾಸವನ್ನು ಸುಲಭವಾಗಿಸಲಿದೆ!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಅನೇಕ ಜನಪ್ರಿಯ ಸೇವೆಗಳನ್ನು ಪರಿಚಯಿಸಿದೆ. ಇದರಲ್ಲಿ ಗೂಗಲ್‌ ಮ್ಯಾಪ್‌ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಗೂಗಲ್‌ ಮ್ಯಾಪ್‌ ಬೆಂಬಲದೊಂದಿಗೆ ನೀವು ಯಾವುದೇ ಹೊಸ ಪ್ರದೇಶಕ್ಕೆ ಬೇಕಾದರೂ ಪ್ರಯಾಣಿಸುವುದು ಸುಲಭವಾಗಿದೆ. ನೀವು ಹೋಗಬೇಕಾದ ಸ್ಥಳದ ಮಾರ್ಗದ ವಿವರವನ್ನು ಯಾರನ್ನು ಕೇಳಬೇಕಾದ ಅವಶ್ಯಕತೆಯಿಲ್ಲ. ಹೋಗಬೇಕಾದ ಸ್ಥಳವನ್ನು ಗೂಗಲ್‌ ಮ್ಯಾಪ್‌ನಲ್ಲಿ ನಮೂದಿಸಿದರೆ ಸಾಕು ನೀವು ತಲುಪಬೇಕಾದ ಸ್ಥಳಕ್ಕೆ ಸುಲಭವಾಗಿ ತಲುಪಬಹುದಾಗಿದೆ.

ಗೂಗಲ್‌ ಮ್ಯಾಪ್‌

ಹೌದು, ಗೂಗಲ್‌ನ ಗೂಗಲ್‌ ಮ್ಯಾಪ್‌ ಸೇವೆ ಇಂದು ಸಾಕಷ್ಟು ಸಹಾಯಕವಾಗಿದೆ. ಅದರಲ್ಲೂ ನಗರ ಪ್ರದೇಶದಲ್ಲಿ ಯಾವುದೇ ಸ್ಥಳಕ್ಕೆ ತಲುಪಬೇಕಾದರೂ ಗೂಗಲ್‌ ಮ್ಯಾಪ್‌ ಅನುಕೂಲಕರವಾಗಿದೆ. ಇದೇ ಕಾರಣಕ್ಕೆ ಗೂಗಲ್‌ ಕೂಡ ತನ್ನ ಮ್ಯಾಪ್‌ ಸೇವೆಯಲ್ಲಿ ಅನೇಕ ಅನುಕೂಲಕರ ಫೀಚರ್ಸ್‌ಗಳನ್ನು ಸೇರಿಸಿದೆ. ಗೂಗಲ್‌ ಮ್ಯಾಪ್‌ ಮೂಲಕ ನೀವು ಕೇವಲ ಸ್ಥಳಗಳನ್ನು ತಲುಪುವುದು ಮಾತ್ರವಲ್ಲ. ಇತರೆ ಅನೇಕ ಉಪಯೋಗಗಳನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ಅನೇಕ ಟ್ರಿಕ್ಸ್‌ಗಳನ್ನು ಗೂಗಲ್‌ ಮ್ಯಾಪ್‌ ಒಳಗೊಂಡಿದೆ. ಹಾಗಾದ್ರೆ ಗೂಗಲ್‌ ಮ್ಯಾಪ್‌ನಿಂದ ನಿಮಗೆ ಅನುಕೂಲವಾಗುವ ಅನೇಕ ಟ್ರಿಕ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಿಮ್ಮ ಪ್ರವಾಸಗಳನ್ನು ಸ್ವಯಂಚಾಲಿತವಾಗಿ ಆಯೋಜಿಸಿ

ನಿಮ್ಮ ಪ್ರವಾಸಗಳನ್ನು ಸ್ವಯಂಚಾಲಿತವಾಗಿ ಆಯೋಜಿಸಿ

ಗೂಗಲ್‌ ಮ್ಯಾಪ್‌ ಮೂಲಕ ನಿಮ್ಮ ಪ್ರವಾಸವನ್ನು ಅಯೋಜನೆ ಮಾಡಬಹುದು. ಇದಕ್ಕಾಗಿ ನೀವು ಗೂಗಲ್‌ ಮ್ಯಾಪ್‌ ಅಪ್ಲಿಕೇಶನ್ ನಲ್ಲಿ ಸೇವ್‌ ಟ್ಯಾಬ್ ಅನ್ನು ಕ್ಲಿಕ್ ಮಾಡಿ, ನಂತರ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ರಿಸರ್ವೆಶನ್ ಬಟನ್ ಕ್ಲಿಕ್ ಮಾಡಿ. ನೀವು ಪ್ರವಾಸ ಮಾಡುವ ಪ್ಲಾನ್‌, ವಿಮಾನಗಳು, ರೆಸ್ಟೋರೆಂಟ್ ರಿಸರ್ವೆಶನ್‌, ಇತ್ಯಾದಿಗಳನ್ನು ನಿಮ್ಮ ಪ್ಲಾನ್‌ ಪಟ್ಟಿಯಲ್ಲಿ ನೋಡಲು ನಿಮಗೆ ಸಾಧ್ಯವಾಗುತ್ತದೆ. ಇದರಿಂದ ನೀವು ಪ್ರವಾಸ ಮಾಡುವ ದಿನಾಂಕ, ದಿನದ ಬಗ್ಗೆ ನಿಮಗೆ ಅಗತ್ಯ ಮಾಹಿತಿಯನ್ನು ನೆನಪಿಸಲಿದೆ.

ನೀವು ಭೇಟಿ ನೀಡುವ ಸ್ಥಳಗಳನ್ನು ಪಿನ್ ಮಾಡಲು ಅವಕಾಶ

ನೀವು ಭೇಟಿ ನೀಡುವ ಸ್ಥಳಗಳನ್ನು ಪಿನ್ ಮಾಡಲು ಅವಕಾಶ

ಗೂಗಲ್‌ಮ್ಯಾಪ್‌ನಲ್ಲಿ ನೀವು ಆಗಾಗ್ಗೆ ಭೇಟಿ ನೀಡುವ ಸ್ಥಳವನ್ನು ಪಿನ್ ಮಾಡುವುದರಿಂದ ಆ ಸ್ಥಳದ ಮಾಹಿತಿ ಪಡೆಯಲು ಬೇಗನೇ ಪ್ರವೇಶ ದೊರೆಯಲಿದೆ. ಮ್ಯಾಪ್‌ನಲ್ಲಿ ನಿರ್ದಿಷ್ಟ ಸ್ಥಳವನ್ನು ಹುಡುಕುತ್ತಿರುವಾಗ, ನಿರ್ದೇಶನಗಳನ್ನು ತರಲು ನೀವು ಬಟನ್ ಅನ್ನು ಟ್ಯಾಪ್ ಮಾಡುವ ಮೂಲಕ ಪಿನ್‌ ಮಾಡುವ ಆಯ್ಕೆದೊರೆಯಲಿದೆ. ನಂತರ ಕೆಳಭಾಗದಲ್ಲಿರುವ Go ಟ್ಯಾಬ್ ಅನ್ನು ಟ್ಯಾಪ್ ಮಾಡಿ. ನಂತರ ನಿಮ್ಮ ಇತ್ತೀಚಿನ ಚಟುವಟಿಕೆಯ ಆಧಾರದ ಮೇಲೆ ಅಪ್ಲಿಕೇಶನ್‌ನ ಸೂಚಿಸಿದ ಸ್ಥಳಗಳನ್ನು ಪಿನ್‌ ಮಾಡಬಹುದು. ಇದರಿಂದ ನೀವು ಮತ್ತೆ ಅದೇ ಸ್ಥಳಕ್ಕೆ ಬೇಟಿ ನೀಡಿದರೆ ಮ್ಯಾಪ್‌ ನಿರ್ಧಿಷ್ಟ ಮಾಹಿತಿಯನೇ ತ್ವರಿತವಾಗಿ ಸೂಚಿಸಲಿದೆ.

ಮ್ಯಾಪ್‌ ಮೂಲಕ ನಿಮ್ಮ ಮ್ಯೂಸಿಕ್‌ ಕಂಟ್ರೋಲ್‌ ಮಾಡಿರಿ

ಮ್ಯಾಪ್‌ ಮೂಲಕ ನಿಮ್ಮ ಮ್ಯೂಸಿಕ್‌ ಕಂಟ್ರೋಲ್‌ ಮಾಡಿರಿ

ಗೂಗಲ್‌ ಮ್ಯಾಪ್‌ ಇಂಟರ್ಫೇಸ್‌ನಿಂದ ನಿಮ್ಮ ಮ್ಯೂಸಿಕ್‌ ಅನ್ನು ನೀವು ಕಂಟ್ರೋಲ್‌ ಮಾಡುವುದಕ್ಕೆ ಅವಕಾಶವಿದೆ. ಇದಕ್ಕಾಗಿ ನೀವು ಆಡಿಯೊ ಕಂಟ್ರೋಲ್‌ಗಳನ್ನು ನೇರವಾಗಿ ಅಪ್ಲಿಕೇಶನ್‌ಗೆ ಸೇರಿಸಬಹುದು. ಇದರಿಂದ ನೀವು ಪ್ರಸ್ತುತ ಪ್ಲೇ ಆಗುತ್ತಿರುವ ಟ್ಯೂನ್‌ಗಳನ್ನು ನೋಡಬಹುದು ಮತ್ತು ಅಗತ್ಯಕ್ಕೆ ತಕ್ಕಂತೆ ಷಫಲ್ ಮಾಡಬಹುದಾಗಿದೆ. ಇದಕ್ಕಾಗಿ ನೀವು ಮ್ಯಾಪ್‌ನಲ್ಲಿ ಸೆಟ್ಟಿಂಗ್‌ ತೆರೆಯಬೇಕಾಗುತ್ತದೆ, ನಂತರ "ನ್ಯಾವಿಗೇಷನ್ ಸೆಟ್ಟಿಂಗ್‌ಗಳು" ಆಯ್ಕೆಮಾಡಿ, ತದನಂತರ "ಅಸಿಸ್ಟೆಂಟ್ ಡೀಫಾಲ್ಟ್ ಮೀಡಿಯಾ ಪ್ರೊವೈಡರ್" ಅನ್ನು ಕ್ಲಿಕ್ ಮಾಡಿ. ಇದರಲ್ಲಿ ಲಭ್ಯವಿರುವ ಆಯ್ಕೆಗಳಲ್ಲಿ ಒಂದನ್ನು ನೀವು ಆರಿಸಬೇಕಾಗುತ್ತದೆ. ಇಲ್ಲಿ ನೀವು ಆಯ್ಕೆಮಾಡುವ ಯಾವುದೇ ಸೇವೆಯು ನಿಮ್ಮ ನ್ಯಾವಿಗೇಷನ್ ಇಂಟರ್ಫೇಸ್‌ನಲ್ಲಿ ತೋರಿಸುತ್ತದೆ.

ಶೇರ್ ಯುವರ್ ಲೊಕೇಶನ್

ಶೇರ್ ಯುವರ್ ಲೊಕೇಶನ್

ಇನ್ನು ಗೂಗಲ್‌ ಮ್ಯಾಪ್‌ ಮೂಲಕ ನಿಮ್ಮ ಸ್ನೇಹಿತರಿಗೆ ನಿಮ್ಮ ಲೊಕೇಶನ್‌ ಅನ್ನು ಶೇರ್ ಮಾಡುವುದಕ್ಕೆ ಅವಕಾಶವಿದೆ. ಇದರಿಂದ ನಿಮ್ಮನ್ನು ಹುಡುಕಲು ನೀವು ಅವರಿಗೆ ಸಹಾಯ ಮಾಡಬಹುದು.ಗೂಗಲ್‌ ಮ್ಯಾಪ್‌ನಲ್ಲಿ ಲೊಕೇಶನ್‌ ಸೆರ್‌ ಮಾಡುವುದಕ್ಕಾಗಿ ಮ್ಯಾಪ್‌ನಲ್ಲಿ ಕಾಣುವ ನೀಲಿ ಸ್ಥಳದ ಚುಕ್ಕೆಯ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಂತರ ಬರುವ ಮೆನುವಿನಿಂದ "ಲೊಕೇಶನ್‌ ಶೇರ್‌ಮಾಡಿ" ಆಯ್ಕೆಮಾಡಿ. ನಿರ್ದಿಷ್ಟ ಸಮಯದವರೆಗೆ ಅಥವಾ ನೀವು ಈ ಫೀಚರ್ಸ್‌ ಅನ್ನು ಆಫ್ ಮಾಡುವವರೆಗೆ ಮ್ಯಾಪ್‌ನಲ್ಲಿ ನಿಮ್ಮ ಲೊಕೇಶನ್‌ ಅನ್ನು ಶೇರ್‌ ಮಾಡಲು ಇದು ನಿಮಗೆ ಅವಕಾಶ ನೀಡಲಿದೆ.

ರೆಸ್ಟೋರೆಂಟ್ಗಳ ಬಗ್ಗೆ ಮಾಹಿತಿ ಪಡೆಯಿರಿ

ರೆಸ್ಟೋರೆಂಟ್ಗಳ ಬಗ್ಗೆ ಮಾಹಿತಿ ಪಡೆಯಿರಿ

ನೀವು ಪ್ರವಾಸ ಮಾಡುವಾಗ ನೀವು ತಲುಪಬೇಕಾಗಿರುವ ಸ್ಥಳದ ಹಾದಿಯಲ್ಲಿ ಯಾವ ರೆಸ್ಟೋರೆಂಟ್‌ ಸಿಗಲಿದೆ. ಯಾವುದು ಉತ್ತಮ ರೇಟಿಂಗ್‌ ಪಡೆದಿದೆ ಎಂಬ ಮಾಹಿತಿಯನ್ನು ಗೂಗಲ್‌ ಮ್ಯಾಪ್‌ನಲ್ಲಿ ಪಡೆಯಬಹುದಾಗಿದೆ. ಇದಕ್ಕಾಗಿ ನೀವು ಗೂಗಲ್‌ ಮ್ಯಾಪ್‌ ಪರದೆಯ ಮೇಲ್ಭಾಗದಲ್ಲಿರುವ "ರೆಸ್ಟೋರೆಂಟ್‌ಗಳು" ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ಪ್ರದರ್ಶಿಸಲಾದ ಆಯ್ಕೆಗಳಿಂದ ಆರಿಸಿಬೇಕಾಗುತ್ತದೆ. ಅಲ್ಲದೆ ಪರದೆಯ ಎಡ ಮೂಲೆಯಲ್ಲಿರುವ ಸಣ್ಣ ನಿಯಂತ್ರಣ ಐಕಾನ್ ಅನ್ನು ಟ್ಯಾಪ್ ಮಾಡಿ ಮತ್ತು ನಿಮಗೆ ಬೇಕಾದ ಯಾವುದೇ ಫಿಲ್ಟರ್‌ಗಳನ್ನು ಆಯ್ಕೆ ಮಾಡಬಹುದು.

ಗೂಗಲ್

ಇದಲ್ಲದೆ ಗೂಗಲ್ ಲೈವ್ ವ್ಯೂ ಅನ್ನು ಕೂಡ ಒಳಗೊಂಡಿದೆ. ಇದು ವಿಮಾನ ನಿಲ್ದಾಣ, ಸಾರಿಗೆ ನಿಲ್ದಾಣ ಅಥವಾ ಮಾಲ್‌ಗಳಂತಹ ಸ್ಥಳಗಳಲ್ಲಿ ಬಳಕೆದಾರರಿಗೆ ಮಾರ್ಗದರ್ಶನ ನೀಡಲು AR ಅನ್ನು ಬಳಸುತ್ತದೆ. ಈ ವೈಶಿಷ್ಟ್ಯದ ಬಗ್ಗೆ ಉತ್ತಮವಾದ ಅಂಶವೆಂದರೆ ಇದು ಗೇಟ್ ಅನ್ನು ಬದಲಾಯಿಸಲು ಅಥವಾ ಚೆಕ್-ಇನ್ ಕೌಂಟರ್‌ಗೆ ಹೋಗಲು ಹತ್ತಿರದ ಎಲಿವೇಟರ್ ಅಥವಾ ಮೆಟ್ಟಿಲುಗಳನ್ನು ಹುಡುಕಲು ಬಳಕೆದಾರರಿಗೆ ಸಹಾಯ ಮಾಡುತ್ತದೆ.

ಗೂಗಲ್ ಮ್ಯಾಪ್ಸ್

ಇನ್ನು ನೀವು ಪ್ರಯಾಣ ಮಾಡುವ ಹೈವೆಯಲ್ಲಿ ಎಲ್ಲೆಲ್ಲಿ ಟೊಲ್‌ ಇದೆ. ಯಾವ ಟೊಲ್‌ನಲ್ಲಿ ಎಷ್ಟು ಶುಲ್ಕ ಕಟ್ಟಬೇಕು ಎನ್ನುವ ಮಾಹಿತಿಯನ್ನು ಸಹ ನೀಡಲಿದೆ. ಟೊಲ್‌ ಶುಲ್ಕದ ಮಾಹಿತಿ ತಿಳಿಸುವ ವೈಶಿಷ್ಟ್ಯವನ್ನು ಹೇಗೆ ಉತ್ತಮವಾಗಿ ಕಾರ್ಯಗತಗೊಳಿಸಬೇಕು ಎಂಬುದರ ಕುರಿತು ನಕ್ಷೆಗಳ ಅಭಿವೃದ್ಧಿ ತಂಡವನ್ನು ನಿರ್ದೇಶಿಸಲು ಬಳಕೆದಾರರನ್ನು ಸಮೀಕ್ಷೆ ಮಾಡುವ ಮುನ್ನೋಟ ಕಾರ್ಯಕ್ರಮದ ಸದಸ್ಯರನ್ನು ಗುರುತಿಸಲಾಗಿದೆ. ಬಳಕೆದಾರರು ಆಯ್ಕೆ ಮಾಡುವ ಮುನ್ನ ಟೋಲ್ ದರಗಳನ್ನು ಚಾಲನಾ ಮಾರ್ಗದಲ್ಲಿ ಪ್ರದರ್ಶಿಸಲಾಗುತ್ತದೆ. ಇದು ಅವರಿಗೆ ತಿಳುವಳಿಕೆಯುಳ್ಳ ಆಯ್ಕೆ ಮಾಡಲು ಅವಕಾಶ ನೀಡುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಗೂಗಲ್ ಮ್ಯಾಪ್ಸ್ ಹೊಸ ಆಯ್ಕೆಯು ಭಾರತದಲ್ಲಿ ಮಾರ್ಗಗಳಲ್ಲಿ ಟೋಲ್‌ಗಳನ್ನು ಗುರುತಿಸುತ್ತದೆ ಮತ್ತು ತೋರಿಸುತ್ತದೆ. ಆದ್ದರಿಂದ, ಟೋಲ್‌ಗಳ ಅಂದಾಜು ವೆಚ್ಚವನ್ನು ನೀಡುವ ವೈಶಿಷ್ಟ್ಯವು ಭಾರತದಲ್ಲಿ ಬಳಕೆದಾರರಿಗೆ, ಇತರ ಪ್ರದೇಶಗಳ ಜೊತೆಗೆ, ಅದು ಸಂಭವಿಸಿದಾಗಲೆಲ್ಲಾ ಹೊರಹೊಮ್ಮುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ.

Most Read Articles
Best Mobiles in India

English summary
Google Maps has several features which you have probably not explored yet. Here are some tricks you can benefit from.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X