Just In
Don't Miss
- News
ಮೈಸೂರು, ಪೊಲೀಸರಿಂದ ತಪ್ಪಿಸಿಕೊಳ್ಳುವಾಗ ಇಬ್ಬರು ಸಾವು
- Sports
ಟೀಕೆಗಳಿಂದ ಗೊಂದಲಕ್ಕೀಡಾಗಬೇಡಿ: ವಿರಾಟ್ ಕೊಹ್ಲಿಗೆ ಹೀಗೆ ಕಿವಿಮಾತು ಹೇಳಿದ್ಯಾರು?
- Movies
ಬಾಡಿ ಶೇಮಿಂಗ್ ಇದೆ, ಒತ್ತಡ ಬೇಡ: ನಟಿ ಮಯೂರಿ
- Automobiles
ಐಷಾರಾಮಿ ಪೋರ್ಷೆ ಎಲೆಕ್ಟ್ರಿಕ್ ಕಾರು ಟೆಸ್ಟ್ ಡ್ರೈವ್ ಮಾಡಿದ ಮೆಗಾಸ್ಟಾರ್ ಮಮ್ಮುಟ್ಟಿ
- Lifestyle
ಸಂಖ್ಯಾಶಾಸ್ತ್ರ: ಈ ಜನ್ಮ ಸಂಖ್ಯೆ ಹೊಂದಿರುವವರ ದಾಂಪಾತ್ಯದಲ್ಲಿ ಸಮಸ್ಯೆಗಳೇ ಹೆಚ್ಚು
- Education
IOCL Recruitment 2022 : 43 ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಎಸಿ ಬಳಸಿದರೂ ವಿದ್ಯುತ್ ಬಿಲ್ ಕಡಿತ ಮಾಡುವುದು ಹೇಗೆ?
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗೂಗಲ್ ಮ್ಯಾಪ್ನಲ್ಲಿ ನಿಮ್ಮ ನ್ಯಾವಿಗೇಷನ್ ಐಕಾನ್ ಅನ್ನು ಬದಲಾಯಿಸುವುದು ಹೇಗೆ ?
ಇಂದಿನ ದಿನಗಳಲ್ಲಿ ನೀವು ಯಾವುದೇ ಸ್ಥಳಕ್ಕೆ ಹೋಗಬೇಕಾದರೂ ಗೂಗಲ್ ಮ್ಯಾಪ್ ಸಹಾಯಕ್ಕೆ ಬರಲಿದೆ. ಸದ್ಯ ಗೂಗಲ್ ಒಡೆತನದ ಗೂಗಲ್ ಮ್ಯಾಪ್ ಉತ್ತಮ ನ್ಯಾವಿಗೇಷನ್ ಅಪ್ಲಿಕೇಶನ್ ಆಗಿದೆ. ನಗರ ಪ್ರದೇಶಗಳಲ್ಲಿ ಹೆಚ್ಚಿನ ಜನರು ತಾವು ಪ್ರಯಾಣಿಸುವಾಗ ಗೂಗಲ್ ಮ್ಯಾಪ್ ಅನ್ನು ವ್ಯಾಪಕವಾಗಿ ಬಳಸುತ್ತಾರೆ. ಇನ್ನು ಗೂಗಲ್ ಮ್ಯಾಪ್ನಲ್ಲಿ ನೀವು ಯಾವುದೇ ಸ್ಥಳಕ್ಕೆ ನ್ಯಾವಿಗೇಟ್ ಮಾಡಿದಾಗ, ನೀವು ಯಾವ ದಿಕ್ಕಿಗೆ ಹೋಗಬೇಕು ಎಂಬುದರ ಕುರಿತು ಸ್ಪಷ್ಟತೆ ನೀಡಲು ಅಪ್ಲಿಕೇಶನ್ ಬ್ಲೂ ಕಲರ್ ಬಾಣವನ್ನು ತೋರಿಸುತ್ತದೆ. ಇದರಿಂದ ನೀವು ಸೇರಬೇಕಾದ ಸಳದ ದಿಕ್ಕು ತಿಳಿಯುವುದು ಸುಲಭವಾಗಿದೆ.

ಹೌದು, ಗೂಗಲ್ ಮ್ಯಾಪ್ ನಿಮಗೆ ದಾರಿ ತೋರಿಸಲು ಬ್ಲೂ ಕಲರ್ ಐಕಾನ್ ಅನ್ನು ತೋರಿಸುತ್ತದೆ. ಆದರೆ ಎಲ್ಲಾ ಸಮಯದಲ್ಲೂ ನ್ಯಾವಿಗೇಷನ್ ಐಕಾನ್ ಅನ್ನು ಬಳಸುವುದು ಬೇಸರ ಎನಿಸಬಹುದು. ಆದರಿಂದ ಗೂಗಲ್ ಮ್ಯಾಪ್ ಕೆಲವು ವಿಶೇಷ ನ್ಯಾವಿಗೇಷನ್ ಐಕಾನ್ಗಳನ್ನು ಒಳಗೊಂಡಿದೆ. ನಿಮಗೆ ಬೇಕು ಎನಿಸಿದಾ ಬ್ಲೂ ಕಲರ್ ಐಕಾನ್ ಅನ್ನು ಕಾರ್ ಅಥವಾ ಇತರ ವಾಹನಕ್ಕೆ ಬದಲಾಯಿಸಬಹುದು. ಹಾಗಾದ್ರೆ ಗೂಗಲ್ ಮ್ಯಾಪ್ನಲ್ಲಿ ಇತರ ನ್ಯಾವಿಗೇಷನ್ ಆಯ್ಕೆಗಳನ್ನು ಬಲಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್ ಮ್ಯಾಪ್ನಲ್ಲಿ ನಿಮ್ಮ ನ್ಯಾವಿಗೇಷನ್ ಐಕಾನ್ ಅನ್ನು ಬದಲಾಯಿಸುವುದು ಹೇಗೆ ?
ಹಂತ:1 ಮೊದಲಿಗೆ ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಗೂಗಲ್ ಮ್ಯಾಪ್ ಅಪ್ಲಿಕೇಶನ್ ತೆರೆಯಿರಿ.
ಹಂತ:2 ಅಪ್ಲಿಕೇಶನ್ ಸ್ಕ್ರೀನ್ ಮೇಲ್ಭಾಗದಲ್ಲಿರುವ ಸರ್ಚ್ ಬಾರ್ನಲ್ಲಿ ಲೊಕೇಶನ್ ನಮೂದಿಸುವ ಮೂಲಕ ತಲುಪಬೇಕಾದ ಲೊಕೇಶನ್ ಸರ್ಚ್ ಮಾಡಿ.
ಹಂತ:3 ನಿಮ್ಮ ಲೊಕೇಶನ್ ವಿವರಗಳನ್ನು ಪಡೆದ ನಂತರ, "ದಿಕ್ಕುಗಳು" ಮತ್ತು "ಪ್ರಾರಂಭಿಸು" ಬಟನ್ ಅನ್ನು ಟ್ಯಾಪ್ ಮಾಡಿ. ನೀವು ಈ ಹಂತವನ್ನು ಪೂರ್ಣಗೊಳಿಸದಿದ್ದರೆ, ನಿಮ್ಮ ನ್ಯಾವಿಗೇಷನ್ ಐಕಾನ್ ಅನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ.
ಹಂತ:4 ಗೂಗಲ್ ಮ್ಯಾಪ್ ಈಗ ನಿಮಗೆ ನ್ಯಾವಿಗೇಶನ್ ಐಕಾನ್ ಅನ್ನು ತೋರಿಸುತ್ತದೆ. ನೀವು ಅದರ ಮೇಲೆ ಟ್ಯಾಪ್ ಮಾಡಬೇಕು. ನಂತರ ಅಪ್ಲಿಕೇಶನ್ ನಿಮಗೆ ನಾಲ್ಕು ವಾಹನ ಐಕಾನ್ಗಳನ್ನು ಪ್ರದರ್ಶಿಸುತ್ತದೆ. ಇದರಲ್ಲಿ ನೀವು ಯಾವುದಾದರೂ ಒಂದನ್ನು ಟ್ಯಾಪ್ ಮಾಡುವ ಮೂಲಕ ತಮ್ಮ ನೆಚ್ಚಿನ ಐಕಾನ್ ಅನ್ನು ಆಯ್ಕೆ ಮಾಡಬಹುದು.

ಇದಲ್ಲದೆ, ನೀವು ಇತರ ಸಾರಿಗೆ ವಿಧಾನಗಳ ಬದಲಿಗೆ "ಡ್ರೈವ್" ಮೂಲಕ ನ್ಯಾವಿಗೇಷನ್ ಅನ್ನು ಆರಿಸಿದಾಗ ಮಾತ್ರ ಈ ಫೀಚರ್ಸ್ ಕಾರ್ಯನಿರ್ವಹಿಸುತ್ತದೆ. ರೈಲು, ಬಸ್ ಮತ್ತು ಬೈಕ್ನಂತಹ ಇತರ ಪ್ರಯಾಣ ವಿಧಾನಗಳನ್ನು ಆಯ್ಕೆ ಮಾಡಿದರೆ ಈ ಫೀಚರ್ಸ್ ಲಭ್ಯವಾಗುವುದಿಲ್ಲ. ಮೊದಲು ಡ್ರೈವ್ ಮೋಡ್ನಲ್ಲಿ ಹೊಸ ವಾಹನ ಆಯ್ಕೆಯನ್ನು ಆರಿಸಿದರೆ ಮತ್ತು ನಂತರ ಇತರ ಮೋಡ್ಗಳಿಗೆ ಬದಲಾಯಿಸಿದರೆ, ಗೂಗಲ್ ಮ್ಯಾಪ್ ಕಾರ್ಯನಿರ್ವಹಿಸುವುದಿಲ್ಲ ಎನ್ನುವುದನ್ನು ನೀವು ಗಮನಿಸಬೇಕು.

ಗೂಗಲ್ ಮ್ಯಾಪ್ನಲ್ಲಿ ನಿಮ್ಮ ಮನೆಯ ವಿಳಾಸವನ್ನು ಎಡಿಟ್ ಮಾಡುವುದು ಹೇಗೆ?
ಹಂತ:1 ನಿಮ್ಮ Android ಫೋನ್ನಲ್ಲಿ Google ಮ್ಯಾಪ್ಅನ್ನು ಪ್ರಾರಂಭಿಸಿ.
ಹಂತ:2 ಕೆಳಭಾಗದಲ್ಲಿ ಲಭ್ಯವಿರುವ ಸೇವ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:3 ನಿಮ್ಮ ಮನೆ ಮತ್ತು ಕೆಲಸದ ವಿಳಾಸಗಳನ್ನು ತೋರಿಸುವ ಲೇಬಲ್ಗೆ ಸ್ವೈಪ್ ಮಾಡಿ.
ಹಂತ:4 ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಿ ಮತ್ತು ಹೋಮ್ ಎಡಿಟ್ ಅನ್ನು ಆಯ್ಕೆಮಾಡಿ.
ಹಂತ:5 ನೀವು ಕೆಲಸದ ವಿಳಾಸವನ್ನು ಬದಲಾಯಿಸಲು ಬಯಸಿದರೆ, ಎಡಿಟ್ ವರ್ಕ್ ಅನ್ನು ಆಯ್ಕೆಮಾಡಿ.
ಹಂತ:6 ಪ್ರಸ್ತುತ ವಿಳಾಸವನ್ನು ತೆರವುಗೊಳಿಸಿ, ನಂತರ ಹೊಸದನ್ನು ಸೇರಿಸಿ. ನೀವು ಮ್ಯಾಪ್ನಲ್ಲಿ ಹುಡುಕಬಹುದು ಅಥವಾ ಸರಳವಾಗಿ ಆಯ್ಕೆ ಮಾಡಬಹುದು.
ಹಂತ:7 ಇದಾದ ನಂತರ ನಿಮ್ಮ ಮನೆ ಅಥವಾ ಕೆಲಸದ ವಿಳಾಸವನ್ನು ಸಹ ನೀವು ಡಿಲೀಟ್ ಮಾಡಬಹುದು. ನಿಮಗೆ ಬೇಕಾಗಿರುವುದು ಮನೆಗಾಗಿ ತೆಗೆದುಹಾಕಿ ಆಯ್ಕೆಯನ್ನು ಆರಿಸಿ ಅಥವಾ ಉಳಿಸಿದ -> ಲೇಬಲ್ ಅಡಿಯಲ್ಲಿ ಕೆಲಸ ಮಾಡಬಹುದಾಗಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999