ಆನ್‌ಲೈನ್‌ನಲ್ಲಿ ಇ-ಪ್ಯಾನ್ ಕಾರ್ಡ್‌ ಪಡೆಯುವುದಕ್ಕೆ ಈ ಕ್ರಮಗಳನ್ನು ಅನುಸರಿಸಿ?

|

ಪ್ರಸ್ತುತ ದಿನಗಳಲ್ಲಿ ಆದಾಯ ತೆರಿಗೆ ರಿಟರ್ನ್ಸ್‌ ಸೇರಿದಂತೆ ಹೆಚ್ಚಿನ ಹಣಕಾಸು ವಹಿವಾಟಿಗೆ ಪ್ಯಾನ್‌ಕಾರ್ಡ್‌ ಪ್ರಮುಖ ದಾಖಲೆಯಾಗಿದೆ. ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ಪ್ಯಾನ್ ಅಥವಾ ಶಾಶ್ವತ ಖಾತೆ ಸಂಖ್ಯೆಯು ಹಲವಾರು ಉದ್ದೇಶಗಳಿಗಾಗಿ ಬಳಸಬಹುದಾದ ಭಾರತದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಅಲ್ಲದೆ ಷೇರು ಮಾರುಕಟ್ಟೆಯಿಂದ ಷೇರುಗಳನ್ನು ಖರೀದಿಸುವುದು ಅಥವಾ ಆಸ್ತಿಯನ್ನು ಖರೀದಿಸುವುದು ಸೇರಿದಂತೆ ಅನೇಕ ಹಣಕಾಸು ಸೇವೆಗಳನ್ನು ಪಡೆಯಲು ಪ್ಯಾನ್ ಕಾರ್ಡ್ ಅವಶ್ಯಕವಾಗಿದೆ.

ಪ್ಯಾನ್‌ ಕಾರ್ಡ್‌

ಹೌದು, ಭಾರತದಲ್ಲಿ ಹಣಕಾಸಿನ ವ್ಯವಹಾರ ನಡೆಸುವಾಗ ಪ್ಯಾನ್‌ಕಾರ್ಡ್‌ ಪ್ರಮುಖವಾಗಿದೆ. ಪ್ಯಾನ್‌ ಕಾರ್ಡ್‌ ಅಂದರೆ ಪರ್ಮನೆಂಟ್‌ ಅಕೌಂಟ್‌ ನಂಬರ್‌ ಕಾರ್ಡ್‌ ಹತ್ತು ಅಂಕಿಗಳನ್ನು ಹೊಂದಿರುವ ಕಾರ್ಡ್‌ ಆಗಿದೆ. ಪ್ಯಾನ್‌ ಕಾರ್ಡ್‌ ಹೊಂದುವುದಕ್ಕೆ ಭಾರತದಲ್ಲಿ ಕೆಲವು ದಾಖಲೆಗಳು ಅಗತ್ಯ ಎನಿಸುತ್ತದೆ. ಆದರೆ ನಿಮ್ಮ ಬಳಿ ಅಗತ್ಯ ದಾಖಲೆಗಳನ್ನು ನೀವು ಹೊಂದಿಲ್ಲದಿದ್ದರೆ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಆಧಾಯ ತೆರಿಗೆ ಇಲಾಖೆ ನಿಮಗೆ ಇ-ಪ್ಯಾನ್‌ಕಾರ್ಡ್‌ ಪಡೆಯಲು ಅವಕಾಶ ನೀಡಿದೆ. ಹಾಗಾದ್ರೆ ಇ-ಪ್ಯಾನ್‌ ಕಾರ್ಡ್‌ ಪಡೆಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಪ್ಯಾನ್‌ಕಾರ್ಡ್‌

ಇನ್ನು ಭಾರತದಲ್ಲಿ ವಾಸಿಸುವವರು, NRI ಗಳು, ಭಾರತೀಯ ಮೂಲದ ವ್ಯಕ್ತಿ, ಭಾರತದ ಸಾಗರೋತ್ತರ ನಾಗರಿಕರು, ಪ್ಯಾನ್‌ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಅಲ್ಲದೆ 1961 ರ ಆದಾಯ ತೆರಿಗೆ ಕಾಯಿದೆಯ ವ್ಯಾಪ್ತಿಯಲ್ಲಿ ಬರುವ ಯಾವುದೇ ಇತರರು ಅರ್ಜಿ ಸಲ್ಲಿಸಬಹುದು. ದರೆ ಪ್ಯಾನ್‌ ಕಾರ್ಡ್‌ ಪಡೆಯುವುದಕ್ಕೆ ಕೆಲವು ಔಪಚಾರಿಕತೆಗಳನ್ನು ಪೂರ್ಣಗೊಳಿಸುವ ಅಗತ್ಯವಿದೆ. ಆದರೆ ನೀವು ತುರ್ತು ಸಂದರ್ಭದಲ್ಲಿ ಅಗತ್ಯವಾದ ದಾಖಲೆಗಳನ್ನು ಹೊಂದಿಲ್ಲದಿದ್ದರೆ ಬೇಸರವಾಗುವುದು ಖಡಮಿತ. ಆದರೆ ಇದಕ್ಕಾಗಿ ಆನ್‌ಲೈನ್‌ನಲ್ಲಿ ಪ್ಯಾನ್ ಕಾರ್ಡ್ ಡೌನ್‌ಲೋಡ್ ಮಾಡುವ ಆಯ್ಕೆಯನ್ನು ಐಟಿ ಇಲಾಖೆ ಒದಗಿಸುತ್ತಿದೆ.

ಆನ್‌ಲೈನ್‌

ಇದೀಗ ಆದಾಯ ತೆರಿಗೆ ಇಲಾಖೆ ಆನ್‌ಲೈನ್‌ ಮೂಲಕ ಇ-ಪ್ಯಾನ್ ಕಾರ್ಡ್ ಪಡೆಯಲು ಅವಕಾಶ ನೀಡಿದೆ. ಇದಕ್ಕಾಗಿ ನಿಮ್ಮ ಬಳಿ ಆಧಾರ್‌ ಕಾರ್ಡ್‌ ಜೊತೆಗೆ ಲಿಂಕ್‌ ಮಾಡಲಾದ ಫೋನ್‌ ನಂಬರ್‌ ಇರಬೇಕು. ನಿಮ್ಮ ಫೋನ್‌ ನಂಬರ್ ಆದಾರ್‌ಗೆ ಲಿಂಕ್‌ ಆಗಿದ್ದರೆ ಮಾಗತ್ರ ಇ-ಪ್ಯಾನ್‌ ಕಾರ್ಡ್‌ ಪಡೆಯಲು ಸಾದ್ಯವಾಗಲಿದೆ. ಇನ್ನು ನೀವು ಇ-ಪ್ಯಾನ್‌ ಕಾರ್ಡ್‌ ಹೊಂದಿದ್ದರೆ ಅಗತ್ಯವೆನಿಸಿದಾಗ ಜೆರಾಕ್ಸ್‌ ಪ್ರತಿಯನ್ನು ತೆಗೆದುಕೊಂಡು ಹೋಗುವ ಅವಶ್ಯಕತೆಯಿಲ್ಲ. ಬದಲಿಗೆ ನಿಮ್ಮ ಇ-ಪ್ಯಾನ್‌ ಅನ್ನು ಪ್ರದರ್ಶಿಸಬಹುದಾಗಿದೆ. ಇನ್ನು ಇ-ಪ್ಯಾನ್ ಕಾರ್ಡ್ ಪಡೆಯುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಇ-ಪ್ಯಾನ್ ಕಾರ್ಡ್ ಅನ್ನು ಪಡೆಯುವುದು ಹೇಗೆ?

ಇ-ಪ್ಯಾನ್ ಕಾರ್ಡ್ ಅನ್ನು ಪಡೆಯುವುದು ಹೇಗೆ?

ಹಂತ:1 ಮೊದಲು, ಆದಾಯ ತೆರಿಗೆ ವೆಬ್‌ಸೈಟ್ ವಿಭಾಗಕ್ಕೆ ಲಾಗ್ ಇನ್ ಮಾಡಬೇಕು.
ಹಂತ:2 ನಂತರ ಕ್ವಿಕ್‌ ಸರ್ವಿಸ್‌ ಟ್ಯಾಬ್‌ನ ಅಡಿಯಲ್ಲಿ ತ್ವರಿತ ಇ-ಪ್ಯಾನ್‌ ಮೇಲೆ ಕ್ಲಿಕ್ ಮಾಡಿ.
ಹಂತ:3 ನಂತರ ಗೆಟ್‌ ನ್ಯೂ ಇ-ಪ್ಯಾನ್‌ ಮೇಲೆ ಕ್ಲಿಕ್‌ ಮಾಡಿ
ಹಂತ:4 ಇದೀಗ ನಿಮ್ಮ ಆಧಾರ್‌ ಸಂಖ್ಯೆಯನ್ನು ನಮೂದಿಸಿ, ಸಬ್ಮಿಟ್‌ ಮಾಡಿ.
ಹಂತ:5 ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. ಆ OTP ಅನ್ನು ನಮೂದಿಸಿ ಮತ್ತು ದೃಢೀಕರಣ ಬಟನ್ ಅನ್ನು ಟ್ಯಾಪ್ ಮಾಡಿ
ಹಂತ:6 ಇದಾದ ನಂತರ ನಿಮ್ಮ ಭಾವಚಿತ್ರ, ನಿಮ್ಮ ಜನ್ಮ ದಿನಾಂಕವನ್ನು ನಮೂದಿಸಲು ಅದು ನಿಮ್ಮನ್ನು ಕೇಳುತ್ತದೆ, ಅದನ್ನು ನಮೂದಿಸಿದ ನಂತರ ನೀವು ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಬೇಕು.
ಹಂತ:7 ನಂತರ, ನೀವು ಇ-ಪ್ಯಾನ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ.
ಹಂತ:8 ಬಳಕೆದಾರರು ತಮ್ಮ ಪ್ಯಾನ್ ಕಾರ್ಡ್‌ನ ಪಿಡಿಎಫ್ ಫೈಲ್ ಅನ್ನು ಪ್ರವೇಶಿಸಲು ಪಾಸ್‌ವರ್ಡ್ ಅನ್ನು ನಮೂದಿಸಬೇಕಾಗುತ್ತದೆ, ಅದು ಮೂಲತಃ ಅವರ ಜನ್ಮ ದಿನಾಂಕವಾಗಿರಲಿದೆ.

ಪ್ಯಾನ್‌ ಕಾರ್ಡ್‌

ಪ್ಯಾನ್‌ ಕಾರ್ಡ್‌ ಈಗ ಎಲ್ಲಾ ರೀತಿಯ ಅರ್ಥಿಕ ವ್ಯವಹಾರಗಳಿಗೂ ಅವಶ್ಯಕವಾಗಿದೆ. ನೀವು ಐವತ್ತು ಸಾವಿರಕ್ಕೂ ಹೆಚ್ಚಿನ ಹಣ ಡೆಪಾಸಿಟ್‌ ಮಾಡುವುದಕ್ಕೂ ಕೂಡ ಪ್ಯಾನ್‌ ಅಪ್‌ಡೇಟ್‌ ಮಾಡಬೇಕಾದ ಅನಿವಾರ್ಯತೆ ಇದೆ. ನಿಮ್ಮ ಬ್ಯಾಂಕ್‌ ಖಾತೆ, ಪಿಎಫ್‌ ಅಕೌಂಟ್‌ ಸೇರಿದಂತೆ ಎಲ್ಲಾ ಮಾದರಿಯ ಹಣಕಾಸಿನ ವಹಿವಾಟುಗಳಿಗೆ ಪ್ಯಾನ್‌ ಕಡ್ಡಾಯ. ಇದರ ಜೊತೆಗೆ ಪ್ಯಾನ್‌ ಜೊತೆಗೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡುವುದು ಕೂಡ ಕಡ್ಡಾಯವಾಗಿದೆ.

Most Read Articles
Best Mobiles in India

Read more about:
English summary
Income Tax Department provides the option to download an e-PAN card via the official website.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X