ನಿಮ್ಮ ಸ್ಮಾರ್ಟ್‌ಫೋನ್‌ ಸ್ಲೋ ಆಗಿದ್ದರೆ ಈ ನಿಯಮಗಳನ್ನು ಫಾಲೋ ಮಾಡಿ!

|

ಇದು ಸ್ಮಾರ್ಟ್‌ಫೋನ್‌ ಜಮಾನ. ಸ್ಮಾರ್ಟ್‌ಫೋನ್‌ ಇಲ್ಲದೆ ಮನೆಯಿಂದ ಹೊರಬರುವುದೇ ಕಷ್ಟ ಎನ್ನುವ ಕಾಲಘಟ್ಟದಲ್ಲಿದ್ದೇವೆ. ಎಲ್ಲಾ ಕೆಲಸಕ್ಕೂ ಮೊಬೈಲ್‌ ಅವಶ್ಯಕ ಎನ್ನುವ ಮಟ್ಟಿಗೆ ಕಾಲ ಬದಲಾಗಿದೆ. ಇದೇ ಕಾರಣಕ್ಕೆ ಎಲ್ಲರೂ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಹೊಂದುವುದಕ್ಕೆ ಬಯಸುತ್ತಾರೆ. ಬದಲಾದ ಸನ್ನಿವೇಶದಲ್ಲಿ ಎಲ್ಲಾ ಕಾರ್ಯಗಳಿಗೂ ಇಂದು ಒಂದೊಂದು ಅಪ್ಲಿಕೇಶನ್‌ಗಳು ಲಭ್ಯವಿರುವುದರಿಂದ ಸ್ಮಾರ್ಟ್‌ಫೋನ್‌ಗಳು ಅಪ್ಲಿಕೇಶನ್‌ಗಳಿಂದ ತುಂಬಿಹೋಗಿವೆ. ಇದೇ ಕಾರಣಕ್ಕೆ ಕೆಲವು ಸಮಯದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ ಸ್ಲೋ ಆಗುವ ಸಾಧ್ಯತೆ ಕೂಡ ಇದೆ.

ಸ್ಮಾರ್ಟ್‌ಫೋನ್‌

ಹೌದು, ನಿಮ್ಮ ಸ್ಮಾರ್ಟ್‌ಫೋನ್‌ ಸ್ಲೋ ಆಗಿ ವರ್ಕ್‌ ಆಗುತ್ತಿದ್ದರೆ ಅದನ್ನು ಪರಿಹರಿಸಲು ಹಲವು ಅವಕಾಶವಿದೆ. ಇದಕ್ಕಾಗಿ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಅನಗತ್ಯ ಅಪ್ಲಿಕೇಶನ್‌ಗಳನ್ನು ಡಿಲೀಟ್‌ ಮಾಡಬೇಕಾಗುತ್ತದೆ. ಅಲ್ಲದೆ ಹೊಸ ಅಪ್ಡೇಟ್‌ಗಳನ್ನು ಮಾಡುವ ಮೂಲಕ ನಿಮ್ಮ ಹಳೆಯ ಆಂಡ್ರಾಯ್ಡ್‌ ಫೋನ್‌ ವೇಗವಾಗಿ ರನ್ ಆಗುವಂತೆ ಮಾಡಬಹುದಾಗಿದೆ. ಹಾಗಾದ್ರೆ ನಿಮ್ಮ ಸ್ಮಾರ್ಟ್‌ಫೋನ್‌ ವೇಗವಾಗಿ ರನ್‌ ಆಗುವಂತೆ ಮಾಡುವುದಕ್ಕೆ ಏನು ಮಾಡಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅನಗತ್ಯ ಅಪ್ಲಿಕೇಶನ್‌ಗಳನ್ನು ಡಿಲೀಟ್‌ ಮಾಡಿ

ಅನಗತ್ಯ ಅಪ್ಲಿಕೇಶನ್‌ಗಳನ್ನು ಡಿಲೀಟ್‌ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್‌ ಸ್ಪೋ ಆಗಿ ಕಾರ್ಯನಿರ್ವಹಿಸುವುದಕ್ಕೆ ಮುಖ್ಯ ಕಾರಣ ಅನಗತ್ಯ ಅಪ್ಲಿಕೇಶನ್‌ ಸಂಖ್ಯೆ. ಪ್ಲೇ ಸ್ಟೋರ್‌ನಲ್ಲಿ ಸಿಕ್ಕಿ ಸಿಕ್ಕ ಎಲ್ಲಾ ಅಪ್ಲಿಕೇಶನ್‌ಗಳನ್ನ ಡೌನ್‌ಲೋಡ್‌ ಮಾಡುವವರು ಇದ್ದಾರೆ. ಇಂತಹ ಅಪ್ಲಿಕೇಶನ್‌ಗಳಿಂದ ನಿಮಗೆ ಯಾವುದೇ ಲಾಭವಿಲ್ಲ. ಆದರಿಂದ ನಿಮ್ಮ ಫೋನ್‌ನಲ್ಲಿರುವ ಅನಗತ್ಯ ಅಪ್ಲಿಕೇಶನ್‌ಗಳನ್ನು ಡಿಲೀಟ್‌ ಮಾಡಿರಿ. ಇದರಿಂದ ನಿಮ್ಮಫೋನ್‌ ಸ್ಟೋರೇಜ್‌ ಸ್ಪೇಸ್‌ ಉಳಿಯಲಿದೆ.

ಸ್ಟೋರೇಜ್‌ ಸ್ಪೇಸ್‌ ಫ್ರೀ

ಸ್ಟೋರೇಜ್‌ ಸ್ಪೇಸ್‌ ಫ್ರೀ

ನಿಮ್ಮ ಸ್ಮಾರ್ಟ್‌ಫೋನ್‌ ಸ್ಟೋರೇಜ್‌ ಸ್ಪೇಸ್‌ ಫ್ರೀಯಾಗಿಡುವಂತೆ ನೋಡಿಕೊಳ್ಳಬೇಕು. ಸ್ಟೋರೇಜ್‌ ಸ್ಪೇಸ್‌ ತುಂಬಿದಂತೆ ನಿಮ್ಮ ಸ್ಮಾರ್ಟ್‌ಫೋನ್‌ ವೇಗ ಕಡಿಮೆಯಾಗಲಿದೆ. ಒಂದು ವೇಳೆ ನಿಮ್ಮ ಸ್ಟೋರೇಜ್‌ನಲ್ಲಿರುವ ಮೀಡಿಯಾ ಫೈಲ್‌ಗಳು ಬಹುಮುಖ್ಯ ಎನಿಸಿದರೆ ಅವುಗಳನ್ನು ಗೂಗಲ್‌ ಡ್ರೈವ್‌ನಲ್ಲಿ ಅಪ್‌ಲೋಡ್ ಮಾಡಿ. ನಂತರ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸ್ಟೋರೇಜ್‌ ಕ್ಲಿಯರ್‌ ಮಾಡಿ.

ಹೋಮ್‌ ಸ್ಕ್ರೀನ್‌ ಸೆಟ್ಟಿಂಗ್ಸ್‌ ಬದಲಾಯಿಸಿ

ಹೋಮ್‌ ಸ್ಕ್ರೀನ್‌ ಸೆಟ್ಟಿಂಗ್ಸ್‌ ಬದಲಾಯಿಸಿ

ನಿಮ್ಮ ಹೋಮ್‌ ಸ್ಕ್ರೀನ್‌ ನಲ್ಲಿರುವ ಅಪ್ಲಿಕೇಶನ್‌ಗಳು ಅಸ್ತವ್ಯಸ್ತವಾಗಿದ್ದರೆ ಗೊಂದಲಕ್ಕೆ ಕಾರಣವಾಗಲಿದೆ. ಇದರಿಂದ ಬೇರೆ ಬೆರೆ ಅಪ್ಲಿಕೇಶನ್‌ಗಳನ್ನು ಒಂದೇ ಸಮಯದಲ್ಲಿ ಒಪನ್‌ ಅಗಿ ಫೋನ್‌ ಹ್ಯಾಂಗ್‌ ಅಗಲಿದೆ. ಆದರಿಂದ ನಿಮ್ಮ ಹೋಮ್‌ ಸ್ಕ್ರೀನ್‌ ಸೆಟ್ಟಿಂಗ್ಸ್‌ ಅನ್ನು ಆಗಾಗ ಬದಲಾಯಿಸುವುದು ಉತ್ತಮ. ಅಲ್ಲದೆ ಸ್ಕ್ರೀನ್‌ ಮೇಲಿನಿಂದ ಸ್ಲೈಡ್ ಮಾಡುವ ಬದಲು ಹೋಮ್ ಸ್ಕ್ರೀನ್‌ನಲ್ಲಿ ಸ್ವೈಪ್ ಮಾಡುವ ಮೂಲಕ ಅಧಿಸೂಚನೆಗಳನ್ನು ವೀಕ್ಷಿಸುವಂತಹ ವಿಷಯಗಳಿಗಾಗಿ ನೀವು ಆಯ್ಕೆಗಳನ್ನು ಕಾಣಬಹುದು.

ಆಗಾಗ ಅಪ್‌ಡೇಟ್‌ ಮಾಡುತ್ತಿರಿ

ಆಗಾಗ ಅಪ್‌ಡೇಟ್‌ ಮಾಡುತ್ತಿರಿ

ಸ್ಮಾರ್ಟ್‌ಫೋನ್‌ನಲ್ಲಿರುವ ಓಎಸ್‌ ಮೇಲಿಂದ ಮೇಲೆ ಅಪ್‌ಡೇಟ್ ಬೇಡುತ್ತಿರುತ್ತದೆ. ಅಪ್‌ಡೇಟ್ ಕೇಳಿದಾಗ ಅಪ್‌ಡೇಟ್ ಮಾಡಿಕೊಳ್ಳಿರಿ ಇದು ಸ್ಮಾರ್ಟ್‌ಫೋನ್ ವೇಗವನ್ನು ಉತ್ತಮ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ ಜೊತೆಗೆ ಹೊಸ ಫೀಚರ್ಸ್‌ಗಳಿದ್ದರೇ ಅವುಗಳು ಸಹ ಲಭ್ಯವಾಗುತ್ತವೆ. ಈ ಹಂತಗಳನ್ನು ಬಳಿಸಿ ಸೆಟ್ಟಿಂಗ್ > ಸಿಸ್ಟಮ್ > ಅಬೌಂಟ್ ಫೋನ್ > ಸಿಸ್ಟಮ್ ಅಪ್‌ಡೇಟ್.

ಬ್ಯಾಕ್‌ಗ್ರೌಂಡ್‌ ಆಪ್ಸ್‌ಗಳು

ಬ್ಯಾಕ್‌ಗ್ರೌಂಡ್‌ ಆಪ್ಸ್‌ಗಳು

ಸ್ಮಾರ್ಟ್‌ಫೋನ್‌ನಲ್ಲಿ ಅನೇಕ ಆಪ್ಸ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡಿರುತ್ತಾರೆ. ಅವುಗಳಲ್ಲಿ ಕೆಲವು ಆಪ್ಸ್‌ಗಳನ್ನು ಬಳಕೆ ಮಾಡಿ ಮಿನಿಮೈಸ್‌ ಮಾಡಿರುತ್ತಾರೆ. ಆದ್ರೆ ಅವುಗಳು ಬ್ಯಾಕ್‌ಗ್ರೌಂಡ್‌ನಲ್ಲಿ ರನ್ನ ಆಗುತ್ತಿರುತ್ತವೆ. ಈ ಬ್ಯಾಕ್‌ಗ್ರೌಂಡ್‌ ರನ್ನ ಆಗುವ ಆಪ್ಸ್‌ಗಳಿಗೆ ಬ್ರೇಕ್‌ ಹಾಕುವುದರಿಂದಲೂ ಸಹ ಸ್ಮಾರ್ಟ್‌ಫೋನ್ ಕಾರ್ಯವೈಖರಿ ವೇಗ ಪಡೆದುಕೊಳ್ಳುತ್ತದೆ.

ಆಟೋ ಸಿಂಕ್

ಆಟೋ ಸಿಂಕ್

ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಆಟೋ ಸಿಂಕ್ ಆಯ್ಕೆಯು ಸಕ್ರಿಯವಾಗಿರುತ್ತದೆ. ಇದು ಸಹ ಫೋನಿನ ವೇಗದ ಕುಂಠಿತಕ್ಕೆ ಕಾರಣವಾಗುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಬಳಕೆದಾರರು ಆಟೋ ಸಿಂಕ್ ಆಯ್ಕೆಯನ್ನು ಸ್ಟಾಪ್‌ ಮಾಡುವುದು ಒಳಿತು. ಸ್ಮಾರ್ಟ್‌ಫೋನ್‌ ಸೆಟ್ಟಿಂಗ್‌ನಲ್ಲಿ ಆಟೋ ಸಿಂಕ್ ಆಯ್ಕೆ ಸ್ಟಾಪ್‌ ಮಾಡಬಹುದಾಗಿದೆ.

Most Read Articles
Best Mobiles in India

Read more about:
English summary
Here's How to make your old Android phone run faster.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X