ನಿಮ್ಮ ಫೋನ್‌ನಲ್ಲಿ ಡಿಲೀಟ್‌ ಆದ ಫೋಟೋಗಳನ್ನು ಮತ್ತೆ ಪಡೆಯಲು ಹೀಗೆ ಮಾಡಿ!

|

ಸ್ಮಾರ್ಟ್‌ಫೋನ್‌ನಲ್ಲಿ ಸೆರೆಹಿಡಿದ ನಿಮ್ಮ ಫೋಟೋಗಳು ಆಕಸ್ಮಿಕವಾಗಿ ಡಿಲೀಟ್‌ ಆದರೆ ಆಗುವ ನೋವು ಅಷ್ಟಿಷ್ಟಲ್ಲ. ನಿಮ್ಮ ಸವಿನೆನಪುಗಳನ್ನು ಮರುಕಳಿಸುವ ಫೋಟೋಗಳು ಡಿಲೀಟ್‌ ಆದಾಗ ಎಲ್ಲರಿಗೂ ಸಂಕಟ ಆಗೋದು ಖಂಡಿತ. ಒಂದು ವೇಳೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫೋಟೋ ಡಿಲೀಟ್‌ ಆದರೆ ಏನು ಮಾಡೋದು ಅನ್ನೊ ಚಿಂತೆ ಇದ್ದೆ ಇರುತ್ತದೆ. ಹಾಗಂತ ನೀವು ಚಿಂತಿಸಬೇಕಾದ ಅಗತ್ಯವಿಲ್ಲ. ಏಕೆಂದರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಕಸ್ಮಿಕವಾಗಿ ಡಿಲೀಟ್‌ ಆದ ಫೋಟೋಗಳನ್ನು ಮರಳಿಪಡೆಯಲು ಅವಕಾಶವಿದೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ನಲ್ಲಿ ಆಕಸ್ಮಿಕವಾಗಿ ಡಿಲೀಟ್‌ ಆದ ಫೋಟೋಗಳನ್ನು ಮರಳಿ ಪಡೆಯುವುದಕ್ಕೆ ಅವಕಾಶವಿದೆ. ನೀವು ಯಾರಿಗಾದರೂ ಕಳುಹಿಸದ್ದರೆ ಅದನ್ನು ಮರಳಿ ಪಡೆಯುವುದು ಸುಲಭ. ಆದರೆ ಯಾರಿಗೂ ಕಳುಹಿಸದೆ ನಿಮ್ಮ ಫೋನ್‌ನಲ್ಲಿ ಸ್ಟೋರೇಜ್‌ ಮಾಡಿದ್ದರೆ ಅದನ್ನು ಮರಳಿ ಪಡೆಯಲು ಕೆಲವು ಟ್ರಿಕ್ಸ್‌ ಫಾಲೋ ಮಾಡಬೇಕಾಗುತ್ತದೆ. ಗೂಗಲ್‌ ಡ್ರೈವ್‌ ಮತ್ತು ಐಕ್ಲೌಡ್‌ ಸ್ಟೋರೇಜ್‌ ಮೂಲಕ ನಿಮ್ಮ ಫೋಟೋಸ್‌ಗಳನ್ನು ಸೇವ್‌ ಮಾಡಬಹುದಾಗಿದೆ.ಹಾಗಾದ್ರೆ ನಿಮ್ಮಆಂಡ್ರಾಯ್ಡ್ ಅಥವಾ ಐಫೋನ್‌ನಲ್ಲಿ ಕಳೆದು ಹೋದ ಫೋಟೋಗಳನ್ನು ಹೇಗೆ ಪಡೆದುಕೊಳ್ಳುವುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಕ್ನಾಲಜಿ

ಪ್ರಸ್ತುತ ಟೆಕ್ನಾಲಜಿ ಸಾಕಷ್ಟು ಅಪ್ಡೇಟ್‌ ಆಗಿರುವುದರಿಂದ ನಿಮ್ಮ ಫೋಟೋಗಳು ಡಿಲಿಟ್‌ ಆದರೂ ಮರಳಿ ಪಡೆಯಲು ಅವಕಾಶವಿದೆ. ಇದಕ್ಕಾಗಿ ನೀವು ನಿಮ್ಮ ಅಮೂಲ್ಯ ಚಿತ್ರಗಳು ಮತ್ತು ವೀಡಿಯೊಗಳನ್ನು ಕಳೆದುಕೊಳ್ಳುವ ಬಗ್ಗೆ ಚಿಂತಿಸಬೇಕಾಗಿಲ್ಲ. ಫೋಟೋಗಳು ಡಿಲೀಟ್‌ ಆದರೂ ಶಾಶ್ವತವಾಗಿ ಉಳಿಸಿಕೊಳ್ಳಬೇಕಾದರೆ ಕ್ಲೌಡ್ ಸ್ಟೋರೇಜ್‌ಗಳಲ್ಲಿ ಉಳಿಸುವುದು ಉತ್ತಮ. ಐಕ್ಲೋಡ್‌, ಗೂಗಲ್‌ ಡ್ರೈವ್‌, ಗೂಗಲ್ ಫೋಟೋಸ್‌ ನಲ್ಲಿ ಸೇವ್‌ ಮಾಡಿದ್ದರೆ ಮೊಬೈಲ್‌ನಲ್ಲಿ ಫೋಟೋ ಡಿಲೀಟ್‌ ಆದರೂ ಡ್ರೈವ್‌ಗಳಲ್ಲಿ ಫೋಟೋ ದೊರೆಯಲಿದೆ.

ಆಕಸ್ಮಿಕವಾಗಿ ಡಿಲೀಟ್‌ ಆದ ಫೋಟೋಗಳನ್ನು ಮರಳಿ ಪಡಯುವುದು ಹೇಗೆ?

ಆಕಸ್ಮಿಕವಾಗಿ ಡಿಲೀಟ್‌ ಆದ ಫೋಟೋಗಳನ್ನು ಮರಳಿ ಪಡಯುವುದು ಹೇಗೆ?

ಐಫೋನ್‌ನಲ್ಲಿ ಡಿಲೀಟ್‌ ಆದ ಫೋಟೋ ಮರಳಿ ಪಡೆಯಲು ಐಕ್ಲೌಡ್‌ ಸಹಾಯಕವಾಗಲಿದೆ. ಇದಕ್ಕಾಗಿ ನೀವು ಫೋಟೋಗಳ ಅಪ್ಲಿಕೇಶನ್‌ಗೆ ಹೋಗಿ ಮತ್ತು ಆಲ್ಬಮ್ ಟ್ಯಾಬ್‌ಗೆ ಹೋಗಿ, ತದನಂತರ 'Recently Deleted' ಆಲ್ಬಮ್ ವಿಭಾಗವನ್ನು ಫೈಲ್ ಮಾಡಲು ಕೆಳಗೆ ಸ್ಕ್ರಾಲ್ ಮಾಡಿ. ನೀವು ರಿ ಸ್ಟೋರ್‌ ಮಾಡಲು ಬಯಸುವ ಫೋಟೋಗಳು ಅಥವಾ ವೀಡಿಯೊಗಳನ್ನು ಆಯ್ಕೆ ಮಾಡಿ, ನಂತರ 'ರಿಕವರ್' ಕ್ಲಿಕ್ ಮಾಡಿ.

ಇದಲ್ಲದೆ ಐಕ್ಲೌಡ್‌ನಿಂದ ಫೋಟೋಗಳನ್ನು ಮರಳಿ ಪಡೆಯಲು ಡೆಸ್ಕ್‌ಟಾಪ್ ಬ್ರೌಸರ್ ಅಥವಾ ಮೊಬೈಲ್ ಬ್ರೌಸರ್‌ನಲ್ಲಿ iCloud.com/Photos ಗೆ ಹೋಗಿ ಸರ್ಚ್‌ ಮಾಡಬೇಕಾಗುತ್ತದೆ. ಐಕ್ಲೌಡ್ ಫೋಟೋಗಳಿಗೆ ನಿಮ್ಮ Apple ID ಯೊಂದಿಗೆ ಲಾಗಿನ್ ಮಾಡಿದರೆ ನಿಮಗೆ ಸೈಡ್‌ಬಾರ್ ಕಾಣಲಿದೆ. ಇದರಲ್ಲಿ ನೀವು 'Recently Deleted' ಫೋಲ್ಡರ್ ಅನ್ನು ನೋಡುತ್ತೀರಿ. ಇದನ್ನು ತೆರೆಯಿರಿ ಮತ್ತು ಡೇಟ್‌ ವೈಸ್‌ ಪ್ರಕಾರ ಮೀಡಿಯಾ ಫೈಲ್‌ಗಳನ್ನು ನೀವು ಕಾಣಬಹುದಾಗಿದೆ. ಇದರಲ್ಲಿ ನೀವು ಫೋಟೋಗಳನ್ನು ಆಯ್ಕೆಮಾಡಿ. ನಂತರ ರಿಸ್ಟೋರ್‌ ಮಾಡಿರಿ.

Google ಫೋಟೋಸ್‌ನಲ್ಲಿ ಡಿಲೀಟ್‌ ಆದ ಫೋಟೋಗಳನ್ನು ಮರಳಿ ಪಡೆಯುವುದು ಹೇಗೆ?

Google ಫೋಟೋಸ್‌ನಲ್ಲಿ ಡಿಲೀಟ್‌ ಆದ ಫೋಟೋಗಳನ್ನು ಮರಳಿ ಪಡೆಯುವುದು ಹೇಗೆ?

ನಿಮ್ಮ ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಗೂಗಲ್‌ ಫೋಟೋಸ್‌ ಅನ್ನು ತೆರೆಯಿರಿ. ನಂತರ ಮೇನ್‌ ಪೇಜ್‌ನಲ್ಲಿ ಕೆಳಗಿನ ಬಲಭಾಗದಲ್ಲಿರುವ 'ಲೈಬ್ರರಿ' ಬಟನ್ ಅನ್ನು ಟ್ಯಾಪ್‌ ಮಾಡಿದರೆ 'ಟ್ರಾಶ್‌' ಎಂಬ ವಿಭಾಗವನ್ನು ಸರ್ಚ್‌ ಮಾಡಬೇಕಾಗುತ್ತದೆ. ಇದರಲ್ಲಿ ನಿಮ್ಮ ಡಿಲೀಟ್‌ ಮಾಡಿರುವ ಎಲ್ಲಾ ಫೈಲ್‌ಗಳನ್ನು ಕಾಣಬಹುದಾಗಿದೆ. ಇಲ್ಲಿ ನಿಮಗೆ ಬೇಕಾದ ಫೋಟೋ ಮತ್ತು ವೀಡಿಯೋ ಫೈಲ್‌ಗಳ ಥಂಬ್‌ನೇಲ್‌ಗಳ ಮೇಲೆ ಲಾಂಗ್‌ ಪ್ರೆಸ್‌ ಮಾಡಿರಿ ನಂತರ ರಿಸ್ಟೋರ್‌ ಬಟನ್‌ ಅನ್ನು ಆಯ್ಕೆ ಮಾಡಿದರೆ ಫೋಟೋ ರಿಸ್ಟೋರ್‌ ಆಗಲಿದೆ. ಇಲ್ಲಿ ಗಮನಿಸಬೇಕಾದ ವಿಚಾರವೆನೆಂದರೆ ಗೂಗಲ್‌ ಫೋಟೋಸ್‌ ನಿಮ್ಮ ಟ್ರಾಶ್‌ ಫೋಲ್ಡರ್‌ನಲ್ಲಿ 1.5GB ವರೆಗೆ ಡೇಟಾವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಹೆಚ್ಚಿನ ಫೈಲ್‌ ಬಂದು ಸೇರಿದರೆ ಫೈಲ್‌ಗಳನ್ನು ಶಾಶ್ವತವಾಗಿ ಡಿಲೀಟ್‌ ಮಾಡಲಿದೆ. ಆದರಿಂದ ನೀವು ಆಗಾಗ ಗೂಗಲ್‌ ಫೋಟೋಸ್‌ ಟ್ರಾಶ್‌ ಅನ್ನು ಕ್ಲಿಯರ್‌ ಮಾಡುವುದು ಸೂಕ್ತವಾಗಿದೆ.

ಆಪಲ್‌ ಐಕ್ಲೌಡ್‌ನಲ್ಲಿ ಆಟೋಮ್ಯಾಟಿಕ್‌ ಬ್ಯಾಕಪ್ ಸೆಟ್‌ ಮಾಡುವುದು ಹೇಗೆ?

ಆಪಲ್‌ ಐಕ್ಲೌಡ್‌ನಲ್ಲಿ ಆಟೋಮ್ಯಾಟಿಕ್‌ ಬ್ಯಾಕಪ್ ಸೆಟ್‌ ಮಾಡುವುದು ಹೇಗೆ?

ಐಫೋನ್‌ನಲ್ಲಿ ನಿಮ್ಮ ಫೋಟೋಗಳನ್ನು ಐಕ್ಲೌಡ್‌ನಲ್ಲಿ ಆಟೋಮ್ಯಾಟಿಕ್‌ ಬ್ಯಾಕಪ್‌ ಮಾಡುವ ಮೂಲಕ ಫೋಟೋ ಸೇವ್‌ ಮಾಡಬಹುದು. ಇದು ನಿಮ್ಮ ಎಲ್ಲಾ ಮೀಡಿಯಾ ಫೈಲ್‌ಗಳನ್ನು ಬ್ಯಾಕಪ್ ಮಾಡಲಿದೆ. ಅಲ್ಲದೆ ನಿಮ್ಮ ಆಪಲ್‌ ID ಯೊಂದಿಗೆ ಲಾಗ್ ಇನ್ ಆಗುವ ಯಾವುದೇ Apple ಡಿವೈಸ್‌ಗಳಲ್ಲೂ ಈ ಫೋಟೋಗಳನ್ನು ನೋಡುವುದಕ್ಕೆ ಸಾಧ್ಯವಾಗಲಿದೆ. ಇನ್ನು ಬ್ಯಾಕಪ್ ಸ್ಪೇಸ್‌ ಅನ್ನು ಪಡೆಯಲು ನೀವು iCloud ಸ್ಟೋರೇಜ್‌ಗಾಗಿ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಐಕ್ಲೌಡ್ ಬಳಕೆದಾರರಿಗೆ ಆಪಲ್ ಕೇವಲ 5GB ಉಚಿತ ಜಾಗವನ್ನು ನೀಡುತ್ತದೆ. ಆದ್ದರಿಂದ ನಿಮಗೆ ಹೆಚ್ಚಿನ ಐಕ್ಲೌಡ್‌ ಸ್ಟೋರೇಜ್ ಬೇಕಿದ್ದರೆ ಚಂದಾದಾರಿಕೆಯನ್ನು ಪಡೆಯಬೆಕಾಗುತ್ತದೆ.

ಗೂಗಲ್‌ ಫೋಟೋಸ್‌ನಲ್ಲಿ ಆಟೋಮ್ಯಾಟಿಕ್‌ ಬ್ಯಾಕಪ್ ಸೆಟ್‌ ಮಾಡುವುದು ಹೇಗೆ?

ಗೂಗಲ್‌ ಫೋಟೋಸ್‌ನಲ್ಲಿ ಆಟೋಮ್ಯಾಟಿಕ್‌ ಬ್ಯಾಕಪ್ ಸೆಟ್‌ ಮಾಡುವುದು ಹೇಗೆ?

ನಿಮ್ಮ ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ನೀವು ಯಾವುದೇ ಫೋಟೋ, ವಿಡಿಯೋಗಳನ್ನು ಗೂಗಲ್‌ ಫೋಟೋಸ್‌ಗೆ ಬ್ಯಾಕಪ್‌ ಮಾಡಿದರೆ ಮೊಬೈಲ್‌ನಲ್ಲಿ ಡಿಲಿಟ್‌ ಆದರು ಮರಳಿ ಪಡೆಯಹುದಾಗಿದೆ. ನಿಮ್ಮ Google ID ಯೊಂದಿಗೆ ನೀವು ಸೈನ್ ಇನ್ ಆಗಿರುವ ಯಾವುದೇ ಗೂಗಲ್‌ ಫೋಟೋಸ್‌ನಲ್ಲಿ ಈ ಫೋಟೋಗಳನ್ನು ಪಡೆಯಬಹುದಾಗಿದೆ. ಇದಕ್ಕಾಗಿ ನೀವು ಗೂಗಲ್‌ ಫೋಟೋಸ್‌ ಅಪ್ಲಿಕೇಶನ್‌ ಮೇಲಿನ ಬಲಭಾಗದಲ್ಲಿರುವ ನಿಮ್ಮ ಖಾತೆಯ ಪ್ರೊಫೈಲ್ ಅನ್ನು ಟ್ಯಾಪ್ ಮಾಡಿ. ನಂತರ ಬ್ಯಾಕಪ್ ಮತ್ತು ಸಿಂಕ್ ಆಯ್ಕೆಯನ್ನು ಆರಿಸಿ ಮತ್ತು ಪರದೆಯಲ್ಲಿ ಸೇವೆಯನ್ನು ಆನ್ ಮಾಡಿ.

ಗೂಗಲ್‌ ಫೋಟೋಸ್‌ ಅಥವಾ ಆಪಲ್‌ ಐಕ್ಲೌಡ್‌ನಂತಹ ಕ್ಲೌಡ್-ಆಧಾರಿತ ಸೇವೆಯಿಂದ ನಿಮ್ಮ ಡಿವೈಸ್‌ಗಳನ್ನು ಒಮ್ಮೆ ಬ್ಯಾಕಪ್ ಮಾಡಿದರೆ, ನಿಮ್ಮ ಡೇಟಾ ಸಾಮಾನ್ಯವಾಗಿ ಸುರಕ್ಷಿತವಾಗಿರುತ್ತದೆ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್‌ ಕಳೆದುಕೊಂಡರೆ, ಇಲ್ಲವೇ ಫೋನ್‌ನಲ್ಲಿ ಫೋಟೋಗಳು ಆಕಸ್ಮಿಕವಾಗಿ ಡಿಲೀಟ್‌ ಆದರೆ ಎರಡೂ ಕ್ಲೌಡ್‌ ಸೇವೆಗಳಲ್ಲೂ ನಿಮ್ಮ ಡಿಲೀಟ್‌ ಮೀಡಿಯಾ ಫೈಲ್‌ಗಳನ್ನು 30 ದಿನಗಳವರೆಗೆ (iCloud) ಅಥವಾ 60 ದಿನಗಳವರೆಗೆ (Google ಫೋಟೋಸ್‌) ಹೊಂದಿರುತ್ತವೆ. ಈ ದಿನಗಳ ನಡುವೆ ಅವುಗಳನ್ನು ಮತ್ತೆ ರಿಸ್ಟೋರ್‌ ಮಾಡಬಹುದಾಗಿದೆ.

Most Read Articles
Best Mobiles in India

English summary
Here's how you can never lose your precious photos and videos again, and recover them easily if you accidentally do delete them.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X