Just In
- 2 hrs ago
ಮೊಟೊ G62 5G ಫಸ್ಟ್ ಲುಕ್: ಬಜೆಟ್ ಬೆಲೆಯಲ್ಲಿ ಆಕರ್ಷಕ 5G ಸ್ಮಾರ್ಟ್ಫೋನ್!
- 12 hrs ago
ನಾಯ್ಸ್ ಸಂಸ್ಥೆಯಿಂದ ಹೊಸ ಸ್ಮಾರ್ಟ್ವಾಚ್ ಲಾಂಚ್! 7 ದಿನಗಳ ಬ್ಯಾಟರಿ ಬ್ಯಾಕಪ್!
- 18 hrs ago
ಶೀಘ್ರದಲ್ಲೇ ವಾಟ್ಸಾಪ್ ಸೇರಲಿದೆ ಡಿಲೀಟ್ ಮೆಸೇಜ್ ರಿಕವರಿ ಆಯ್ಕೆ!
- 19 hrs ago
ಭಾರತದಲ್ಲಿ 5G ಪ್ರಾರಂಭಕ್ಕೂ ಮುನ್ನವೇ ಅಚ್ಚರಿ ಮೂಡಿಸಿದ ಓಕ್ಲಾ ವರದಿ!
Don't Miss
- News
ರಾಜಕೀಯ ವಿದ್ಯಮಾನಗಳು: ತಿರುಪತಿಯಲ್ಲಿ ಬೊಮ್ಮಾಯಿ-ಬಿಎಸ್ವೈ ಸಂಜೆ ಮೀಟಿಂಗ್!
- Movies
'ಕೂಲ್ ಡ್ರಿಂಕ್ಸ್ ಬೇಡ.. ಎಳನೀರು ಇದ್ದರೆ ಚೆನ್ನಾಗಿರುತ್ತದೆ' ಎಂದಿದ್ದ ಅಪ್ಪು
- Sports
NZ vs WI: ಅಲ್ಪ ಮೊತ್ತಕ್ಕೆ ಆಲ್ಔಟ್ ಆಗಿ ವಿಂಡೀಸ್ ವಿರುದ್ಧ ಹೀನಾಯವಾಗಿ ಸೋತ ವಿಲಿಯಮ್ಸನ್ ಬಳಗ
- Travel
ಕೊಡಗಿನ ಪವಿತ್ರ ಸ್ಥಳ ತಲಕಾವೇರಿಗೆ ಒಮ್ಮೆ ಭೇಟಿ ಕೊಡಿ
- Lifestyle
ಆಗಸ್ಟ್ 21ರವರೆಗೆ ಬುಧ-ಆದಿತ್ಯ ಯೋಗ: ಈ 4 ರಾಶಿಯವರು ಈ ಅವಧಿಯಲ್ಲಿ ಮಾಡಿದ ಕಾರ್ಯಕ್ಕೆ ಯಶಸ್ಸು ಖಚಿತ
- Automobiles
ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಉನ್ನತೀಕರಣಗೊಂಡ ಸ್ಕೋಡಾ ಕುಶಾಕ್ ಆಕ್ಟಿವ್
- Finance
ಆಗಸ್ಟ್ 18: ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು
- Education
How To Become IAS Officer : ಐಎಎಸ್ ಅಧಿಕಾರಿಯಾಗುವುದು ಹೇಗೆ ?
ಇನ್ಸ್ಟಾಗ್ರಾಮ್ನಲ್ಲಿ ಬೇರೆಯವರ ಲಾಸ್ಟ್ ಸೀನ್ ನೋಡುವುದು ಹೇಗೆ?
ಮೆಟಾ ಒಡೆತನದ ಇನ್ಸ್ಟಾಗ್ರಾಮ್ ಜನಪ್ರಿಯ ಫೋಟೋ ಶೇರಿಂಗ್ ಅಪ್ಲಿಕೇಶನ್ ಎನಿಸಿಕೊಂಡಿದೆ. ತನ್ನ ಆಕರ್ಷಕ ಫೀಚರ್ಸ್ಗಳಿಂದ ಬಳಕೆದಾರರ ನೆಚ್ಚಿನ ವೀಡಿಯೊ ಶೇರಿಂಗ್ ಅಪ್ಲಿಕೇಶನ್ ಆಗಿ ಗುರುತಿಸಿಕೊಂಡಿದೆ. ಇನ್ನು ಇನ್ಸ್ಟಾಗ್ರಾಮ್ ಅಪ್ಲಿಕೇಶನ್ ತನ್ನ ಪ್ಲಾಟ್ಫಾರ್ಮ್ ಅನೇಕ ಫೀಚರ್ಸ್ಗಳನ್ನು ಪರಿಚಯಿಸಿದೆ. ಜೊತೆಗೆ ಬಳಕೆದಾರರ ಅನುಕೂಲಕ್ಕಾಗಿ ಹಲವು ಪ್ರೈವೆಸಿ ಫೀಚರ್ಸ್ಗಳನ್ನು ಪರಿಚಯಿಸಿದೆ. ಪ್ರಸ್ತುತ ಇನ್ಸ್ಟಾಗ್ರಾಮ್ ಅಪ್ಲಿಕೇಶನ್ ಶಾಪಿಂಗ್ ಹಬ್, ಶಾರ್ಟ್-ವೀಡಿಯೊ ಪ್ಲಾಟ್ಪಾರ್ಮ್ ಆಗಿ ಕೂಡ ಗುರುತಿಸಿಕೊಂಡಿದೆ.

ಹೌದು, ಇನ್ಸ್ಟಾಗ್ರಾಮ್ ಇಂದು ತನ್ನ ರೀಲ್ಸ್ ಹಾಗೂ ಫೋಟೋ ಶೇರಿಂಗ್ನಿಂದಾಗಿ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಇದಲ್ಲದೆ ಸಂದೇಶಗಳನ್ನು ವಿನಿಮಯ ಮಾಡುವುದಕ್ಕೆ ಕೂಡ ಇನ್ಸ್ಟಾಗ್ರಾಮ್ನಲ್ಲಿ ಅವಕಾಶವಿದೆ. ಇನ್ಸ್ಟಾಗ್ರಾಮ್ನಲ್ಲಿರುವ ಡೈರೆಕ್ಟ್ ಮೆಸೇಜ್ ಫೀಚರ್ಸ್ ಮೂಲಕ ನೀವು ಯಾರೊಂದಿಗಾದರೂ ಚಾಟ್ ಮಾಡುವುದಕ್ಕೆ ಅವಕಾಶವಿದೆ. ಇದರಿಂದ ನೀವು ಚಾಟ್ ಮಾಡುವ ಬಳಕೆದಾರರು ಆನ್ಲೈನ್ನಲ್ಲಿ ಆಕ್ಟಿವ್ ಆಗಿದ್ದಾರಾ ಇಲ್ಲವೇ ಅನ್ನೊದನ್ನು ತಿಳಿಯುವುದಕ್ಕೆ ಕೂಡ ಸಾಧ್ಯವಾಗಲಿದೆ.

ಇನ್ಸ್ಟಾಗ್ರಾಮ್ ಅಪ್ಲಿಕೇಶನ್ನಲ್ಲಿ ನೀವು ಚಾಟ್ ಮಾಡುವಾಗ ಅವರು ಯಾವಾಗ ಸಕ್ರಿಯರಾಗಿದ್ದರು ಎಂಬುದನ್ನು ಸಹ ನಿಮಗೆ ತಿಳಿಯಲು ಅವಕಾಶ ನೀಡಲಿದೆ. ಇದಲ್ಲದೆ ನೀವು ಕೂಡ ನಿಮ್ಮ ಲಾಸ್ಟ್ ಸೀನ್ ಕಾಣದಂತೆ ಹೈಡ್ ಮಾಡುವುದಕ್ಕೆ ಕೂಡ ಸಾಧ್ಯವಾಗಲಿದೆ. ನಿಮ್ಮ ಪ್ರೊಫೈಲ್ ಅನ್ನು ಕೂಡ ಹೈಡ್ ಮಾಡಬಹುದಾಗಿದೆ. ಹಾಗಾದ್ರೆ ಇನ್ಸ್ಟಾಗ್ರಾಮ್ನಲ್ಲಿ ಬೇರೆಯವರ ಲಾಸ್ಟ್ ಸೀನ್ ನೋಡುವುದು ಹೇಗೆ? ನಿಮ್ಮ ಲಾಸ್ಟ್ ಸೀನ್ ಅನ್ನು ಹೈಡ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್ಸ್ಟಾಗ್ರಾಮ್ ಅಪ್ಲಿಕೇಶನ್ನಲ್ಲಿ ಲಾಸ್ಟ್ ಸೀನ್ ಫೀಚರ್ಸ್ ವಾಟ್ಸಾಪ್ ಮಾದರಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಆದರೂ ಕೂಡ ನೀವು ಬೇರೆಯವರ ಲಾಸ್ಟ್ ಸೀನ್ ಅನ್ನು ನೋಡುವುದಕ್ಕೆ ಅವಕಾಶವಿದೆ. ಹಾಗಂತ ನೀವು ಸ್ಟೇಟಸ್ ನೋಡುವುದಕ್ಕೆ ಇಬ್ಬರೂ ಒಬ್ಬರನ್ನೊಬ್ಬರು ಅನುಸರಿಸುತ್ತಾರೆಯೇ ಎಂಬುದರ ಮೇಲೆ ಅವಲಂಬಿತವಾಗಿರುವುದಿಲ್ಲ. ಆದರೆ ಎರಡೂ ಕಡೆಯವರು ಪರಸ್ಪರ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವಾಗ ಮಾತ್ರ ಲಾಸ್ಟ್ ಸೀನ್ ನೋಡುವುದಕ್ಕೆ ಸಾದ್ಯವಾಗಲಿದೆ.

ಇನ್ಸ್ಟಾಗ್ರಾಮ್ನಲ್ಲಿ ಲಾಸ್ಟ್ ಸೀನ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
* ಮೊದಲಿಗೆ ಇನ್ಸ್ಟಾಗ್ರಾಮ್ ಅಪ್ಲಿಕೇಶನ್ ತೆರೆಯಿರಿ
* ನಂತರ ಮೇಲಿನ ಬಲ ಮೂಲೆಯಲ್ಲಿರುವ ಪೇಪರ್ ಐಕಾನ್ ಮೇಲೆ ಟ್ಯಾಪ್ ಮಾಡಿ
* ಇದು ಇನ್ಸ್ಟಾಗ್ರಾಮ್ನ ಡಿಎಂ ವಿಭಾಗವಾಗಿದ್ದು, ಇದರಲ್ಲಿ ನೀವು ಚಾಟ್ ಮಾಡಿದವರ ಲಾಸ್ಟ್ ಸೀನ್ ಅನ್ನು ನೋಡಬಹುದಾಗಿದೆ.
ಒಂದು ವೇಳೆ ನೀವು ನಿಮ್ಮ ಲಾಸ್ಟ್ ಸೀನ್ ಆಕ್ಟಿವಿಟಿಯನ್ನು ಬೇರೆಯವರು ನೋಡದಂತೆ ಮಾಡಲು ಬಯಸಿದರೆ ಲಾಸ್ಟ್ ಸೀನ್ ಹೈಡ್ ಮಾಡುವುದಕ್ಕೆ ಅವಕಾಶವಿದೆ. ಇದಕ್ಕಾಗಿ ನೀವು ನಿಮ್ಮ ಪ್ರೊಫೈಲ್ ಟ್ಯಾಬ್ಗೆ ಹೋಗಬೇಕು, ಇದರಲ್ಲಿ ಕಾಗ್ವೀಲ್ ಐಕಾನ್ ಅನ್ನು ಟ್ಯಾಪ್ ಮಾಡಿ ಮತ್ತು ಆಯ್ಕೆಗಳ ಸ್ಕ್ರೀನ್ಗೆ ಹೋಗಬೇಕಾಗುತ್ತದೆ. ಈ ಟ್ಯಾಬ್ ಒಳಗೆ, ಸೆಟ್ಟಿಂಗ್ಗಳಿಗೆ ಕೆಳಗೆ ಸ್ಕ್ರಾಲ್ ಮಾಡಿ ಮತ್ತು "ಶೋ ಆಕ್ಟಿವಿಟಿ ಸ್ಟೇಟಸ್" ಆಯ್ಕೆಯನ್ನು ಆಫ್ ಮಾಡಬೇಕಾಗುತ್ತದೆ. ಈ ಆಯ್ಕೆಯನ್ನು ಆಫ್ ಮಾಡುವ ಮೂಲಕ ನಿಮ್ಮ ಲಾಸ್ಟ್ ಸೀನ್ ಯಾರಿಗೂ ಕಾಣದಂತೆ ಮಾಡಬಹುದಾಗಿದೆ.

ಇದಲ್ಲದೆ ಇನ್ಸ್ಟಾಗ್ರಾಮ್ನಲ್ಲಿ ನಿಮ್ಮ ಸಂಭಾಷಣೆಗಳನ್ನು ಯಾರೂ ನೋಡದಂತೆ ಹೈಡ್ ಮಾಡುವುದಕ್ಕೆ ಅವಕಾಶವಿದೆ. ಇದರಿಂದ ನಿಮ್ಮ ಪರ್ಸನಲ್ ಚಾಟ್ ಅನ್ನು ಮರೆಯಾಗಿಡಬಹುದಾಗಿದೆ. ಇದಲ್ಲದೆ ಇತರ ಡಿಎಂಗಳಿಗೆ ಪ್ರವೇಶವನ್ನು ಪಡೆದರೂ ಸಹ, ನಿರ್ದಿಷ್ಟ ಚಾಟ್ಗಳನ್ನು ಮರೆಮಾಡಲು ನೀವು ಆಯ್ಕೆ ಮಾಡಬಹುದು.

ಇನ್ಸ್ಟಾಗ್ರಾಮ್ನಲ್ಲಿ ಚಾಟ್ಗಳನ್ನು ಹೈಡ್ ಮಾಡುವುದು ಹೇಗೆ?
ಹಂತ:1 ಮೊದಲಿಗೆ ಇನ್ಸ್ಟಾಗ್ರಾಮ್ ಅಪ್ಲಿಕೇಶನ್ ತೆರೆಯಿರಿ ಮತ್ತು ಚಾಟ್ಗಳಿಗೆ ಹೋಗಿ
ಹಂತ:2 ನೀವು ಹೈಡ್ ಮಾಡಲು ಬಯಸುವ ಚಾಟ್ ಅನ್ನು ತೆರೆಯಿರಿ
ಹಂತ:3 ಚಾಟ್ ಅನ್ನು ಹೈಡ್ ಮಾಡಲು ವ್ಯಾನಿಶ್ ಮೋಡ್ ಅನ್ನು ಸಕ್ರಿಯಗೊಳಿಸಲು ಮೇಲಕ್ಕೆ ಸ್ವೈಪ್ ಮಾಡಿ
ಹಂತ:4 ಇದೀಗ ನೀವು ನಿಮ್ಮ ಸಂಭಾಷಣೆಯನ್ನು ಮುಂದುವರಿಸಬಹುದು.
ಮೆಸೇಜ್ ಸ್ವೀಕರಿಸುವವರು ನಿಮ್ಮ ಪಠ್ಯವನ್ನು ಓದಿದ ನಂತರ ಅವರು ಡಿಸ್ಅಪಿಯರ್ ಆಗಲಿದ್ದಾರೆ. ನೀವು GIF ಗಳು, ಚಿತ್ರಗಳು ಮತ್ತು ವೀಡಿಯೊಗಳನ್ನು ಈ ಮೋಡ್ನಲ್ಲಿ ಹಂಚಿಕೊಳ್ಳಬಹುದಾಗಿದೆ. ಇದಲ್ಲದೆ ವ್ಯಾನಿಶ್ ಮೋಡ್ ಅನ್ನು ಮತ್ತೆ ಸ್ವೈಪ್ ಮಾಡುವ ಮೂಲಕ ನೀವು ಈ ಮೋಡ್ ಅನ್ನು ಆಫ್ ಮಾಡಬಹುದು.

ಇನ್ಸ್ಟಾಗ್ರಾಮ್ನಲ್ಲಿ ಲೈಕ್ಸ್ ಮತ್ತು ವ್ಯೂ ಕೌಂಟ್ಸ್ ಹೈಡ್ ಮಾಡುವುದು ಹೇಗೆ?
ಇನ್ಸ್ಟಾಗ್ರಾಮ್ ತನ್ನ ಬಳಕೆದಾರರಿಗೆ ತಮ್ಮ ಫೀಡ್ನಲ್ಲಿ ಗೋಚರಿಸುವ ಪೋಸ್ಟ್ಗಳ ಮೇಲೆ ಲೈಕ್ ಮತ್ತು ವೀಕ್ಷಣೆ ಎಣಿಕೆಗಳನ್ನು ಮರೆಮಾಡುವ ಆಯ್ಕೆಯನ್ನು ಒದಗಿಸಿದೆ. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ಮೊದಲಿಗೆ ಇನ್ಸ್ಟಾಗ್ರಾಮ್ನಲ್ಲಿ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಟ್ಯಾಪ್ ಮಾಡಿ.
ಹಂತ:2 ನಂತರ ಮೇಲಿನ ಬಲಭಾಗದಲ್ಲಿರುವ ಮೋರ್ ಆಯ್ಕೆಗಳನ್ನು ಟ್ಯಾಪ್ ಮಾಡಿ, ಸೆಟ್ಟಿಂಗ್ಸ್ ಟ್ಯಾಪ್ ಮಾಡಿ.
ಹಂತ:3 ಇದಾದ ಮೇಲೆ ಪ್ರೈವೆಸಿ ಮೇಲೆ ಕ್ಲಿಕ್ ಮಾಡಿ ನಂತರ ಪೋಸ್ಟ್ಗಳ ಮೇಲೆ ಟ್ಯಾಪ್ ಮಾಡಿ.
ಹಂತ:4 ಸ್ವಿಚ್ ಆಫ್ ಅಥವಾ ಸ್ವಿಚ್ ಆನ್ ಟ್ಯಾಪ್ ಮಾಡಿ, ಇದನ್ನು ಆನ್ ಅಥವಾ ಆಫ್ ಮಾಡಿದ ನಂತರ ಲೈಕ್ಸ್ ಮತ್ತು ವ್ಯೂ ಕೌಂಟ್ಗಳನ್ನು ಹೈಡ್ ಮಾಡುವ ಆಯ್ಕೆ ಕಾಣಲಿದೆ. ಇದರ ಮೂಲಕ ಲೈಕ್ಸ್ ಕೌಂಟ್ ಹೈಡ್ ಮಾಡಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086