ಗೂಗಲ್‌ ಮ್ಯಾಪ್‌ನ ಈ ಫೀಚರ್ಸ್‌ ಬಳಕೆದಾರರಿಗೆ ಸಾಕಷ್ಟು ಉಪಕಾರಿಯಾಗಲಿದೆ!

|

ಗೂಗಲ್‌ ಪರಿಚಯಿಸಿರುವ ಜನಪ್ರಿಯ ಸೇವೆಗಳಲ್ಲಿ ಗೂಗಲ್‌ ಮ್ಯಾಪ್‌ ಕೂಡ ಒಂದಾಗಿದೆ. ನಿವು ಯಾವುದೇ ಸ್ಥಳಕ್ಕೆ ತಲುಪಬೇಕಾದರೂ ಹೋಗಬೇಕಾದ ಮಾರ್ಗವನ್ನು ಗೂಗಲ್‌ ಮ್ಯಾಪ್‌ ಮೂಲಕ ತಿಳಿದುಕೊಳ್ಳಬಹುದಾಗಿದೆ. ಇದೇ ಕಾರಣಕ್ಕೆ ಗೂಗಲ್ ಮ್ಯಾಪ್‌ ವಿಶ್ವದ ಅತ್ಯುತ್ತಮ ನ್ಯಾವಿಗೇಷನ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಇನ್ನು ಗೂಗಲ್‌ಮ್ಯಾಪ್‌ ತನ್ನ ಬಳಕೆದಾರರಿಗೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದ್ದು, ಬಳಕೆದಾರರಿಗೆ ಯಾವುದೇ ಸ್ಥಳಕ್ಕಾದರೂ ಸುಲಭವಾಗಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.

ಗೂಗಲ್‌

ಹೌದು, ಗೂಗಲ್‌ ಮ್ಯಾಪ್‌ ಬಳಕೆದಾರರಿಗೆ ಪ್ರಯಾಣಿಸುವ ಸ್ಥಳದ ಮಾರ್ಗದರ್ಶನ ನೀಡಲಿದೆ. ಆದರೆ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಟ್ರ್ಯಾಕ್ ಮಾಡುವ ಮೂಲಕ ಅವರ ದೈನಂದಿನ ಪ್ರಯಾಣವನ್ನು ಅಚ್ಚುಕಟ್ಟಾಗಿ ಯೋಜಿಸುತ್ತದೆ. ಇನ್ನು ಇತ್ತೀಚೆಗೆ ಗೂಗಲ್‌ ಮ್ಯಾಪ್‌ ಅಪ್ಲಿಕೇಶನ್‌ಗೆ ಹಲವು ಹೊಸ ಫೀಚರ್ಸ್‌ಗಳನ್ನು ಸೇರಿಸಲಾಗಿದ್ದು, ಬಳಕೆದಾರರಿಗೆ ಸಾಕಷ್ಟು ಉಪಯುಕ್ತವಾಗಿದೆ. ಇದರಲ್ಲಿ ನಿಮ್ಮ ಲೊಕೇಶನ್‌ ಅನ್ನು ರಿಯಲ್‌ ಟೈಂನಲ್ಲಿ ನಿಮ್ಮ ಸ್ನೇಹಿತರಿಗೆ ಶೇರ್‌ ಮಾಡಲು ಗೂಘಲ್‌ ಮ್ಯಾಪ್‌ ಅನುಮತಿಸಲಿದೆ. ಹಾಗಾದ್ರೆ ಗೂಗಲ್‌ ಮ್ಯಾಪ್‌ ಮೂಲಕ ನಿಮ್ಮ ಲೊಕೇಶನ್‌ ಅನ್ನು ಶೇರ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಮ್ಯಾಪ್‌

ಇನ್ನು ಗೂಗಲ್‌ ಮ್ಯಾಪ್‌ ಮೂಲಕ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೆ ಲೊಕೇಶನ್‌ ಶೇರ್‌ ಮಾಡುವ ಅವಕಾಶವನ್ನು ನೀಡಿದೆ. ರಿಯಲ್‌ ಟೈಂ ಲೊಕೇಶನ್‌ ಶೇರ್‌ ಮಾಡಲು ಸ್ಮಾರ್ಟ್‌ಫೋನ್ ನಲ್ಲಿ ಗೂಗಲ್‌ ಮ್ಯಾಪ್‌ ಅನ್ನು ಬಳಸಬಹುದಾಗಿದೆ. ಡೆಸ್ಕ್‌ಟಾಪ್ ಬ್ರೌಸರ್‌ನಲ್ಲಿ ಗೂಗಲ್‌ ಮ್ಯಾಪ್‌ ನಿಂದ ಲೊಕೇಶನ್‌ ಶೇರ್‌ ಮಾಡಲು ಮಾಹಿತಿಯನ್ನು ಹಂಚಿಕೊಳ್ಳಲು ಆಯ್ಕೆಮಾಡಿದ ಸ್ನೇಹಿತರ ಲೈವ್ ಲೊಕೇಶನ್‌ ಮಾತ್ರ ವೀಕ್ಷಿಸಲು ನಿಮಗೆ ಅನುಮತಿಸುತ್ತದೆ. ಇನ್ನು ನೀವು ಗೂಗಲ್‌ ಮ್ಯಾಪ್‌ ಬಳಸಿ ಲೊಕೇಶನ್‌ ಶೇರ್‌ ಮಾಡುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಗೂಗಲ್‌ ಮ್ಯಾಪ್‌ ಬಳಸಿಕೊಂಡು ನಿಮ್ಮ ಲೊಕೇಶನ್‌ ಶೇರ್‌ ಮಾಡುವುದು ಸ್ಥಳವನ್ನು ಹೇಗೆ?

ಗೂಗಲ್‌ ಮ್ಯಾಪ್‌ ಬಳಸಿಕೊಂಡು ನಿಮ್ಮ ಲೊಕೇಶನ್‌ ಶೇರ್‌ ಮಾಡುವುದು ಸ್ಥಳವನ್ನು ಹೇಗೆ?

ಹಂತ:1 ಗೂಗಲ್‌ ಮ್ಯಾಪ್‌ ತೆರೆಯಿರಿ ಸ್ಕ್ರೀನ್‌ ಮೇಲಿನ ಬಲಭಾಗದಲ್ಲಿರುವ ಪ್ರೊಫೈಲ್ ಚಿತ್ರದ ಐಕಾನ್ ಅನ್ನು ಟ್ಯಾಪ್ ಮಾಡಿ.
ಹಂತ:2 ಇದರಲ್ಲಿ ಲೊಕೇಶನ್‌ ಶೇರ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:3 ಇದೀಗ ನಿಮ್ಮ ಲೊಕೇಶನ್‌ ಶೇರ್‌ ಮಾಡಲು ನೀವು ಬಯಸುವ ಸಮಯದ ಅವಧಿಯನ್ನು ಆಯ್ಕೆಮಾಡಿ. ನೀವು 1 ಗಂಟೆಯಿಂದ 12 ಗಂಟೆ ಅಥವಾ ಒಂದು ದಿನದ ನಡುವಿನ ಸಮಯದ ಅವಧಿಯನ್ನು ಆಯ್ಕೆ ಮಾಡಬಹುದು. ಸಮಯ ಆಯ್ಕೆಮಾಡದಿದ್ದರೆ ನೀವು ಸ್ಟಾಪ್‌ ಮಾಡುವ ತನಕ ಮುಂದುವರೆಯಲಿದೆ.
ಹಂತ:4 ನಂತರ ನಿಮ್ಮ ಸ್ಥಳವನ್ನು ನೀವು ಹಂಚಿಕೊಳ್ಳಬಹುದಾದ ಜನರ ಪಟ್ಟಿಯನ್ನು ನೋಡಲು ಬಲಕ್ಕೆ ಸ್ಕ್ರಾಲ್ ಮಾಡಿ. ನಂತರ ಮೋರ್‌ ಬಟನ್ ಅನ್ನು ಟ್ಯಾಪ್ ಮಾಡಿ.
ಹಂತ:5 ಇದರಲ್ಲಿ ನಿಮ್ಮ ಲೈವ್ ಸ್ಥಳವನ್ನು ನೀವು ಯಾರೊಂದಿಗೆ ಹಂಚಿಕೊಳ್ಳಲು ಬಯಸುತ್ತೀರಿ ಎಂಬುದನ್ನು ಆಯ್ಕೆಮಾಡಿ. ನಂತರ ಶೇರ್‌ ಟ್ಯಾಪ್ ಮಾಡಿ.
ಹಂತ:6 ಒಮ್ಮೆ ನೀವು ಸುರಕ್ಷಿತವಾಗಿ ನಿಮ್ಮ ಗಮ್ಯಸ್ಥಾನವನ್ನು ತಲುಪಿದ ನಂತರ, ನಿಮ್ಮ ಲೈವ್ ಲೊಕೇಶನ್‌ ಶೇರ್‌ ಮಾಡಿಕೊಳ್ಳದಂತೆ ಗೂಗಲ್‌ ಮ್ಯಾಪ್‌ ಸ್ಟಾಪ್‌ ಮಾಡಲು ನೀವು ನಿಮ್ಮ ಲೊಕೇಶನ್‌ ಶೇರ್‌ ಸ್ಟಾಪ್‌ ಆಯ್ಕೆಯನ್ನು ಆರಿಸಿಕೊಳ್ಳಬಹುದು.

ಹೀಗೆ ಮೇಲಿನ ಕ್ರಮಗಳನ್ನು ಅನುಸರಿಸುವ ಮೂಲಕ ಗೂಗಲ್‌ ಮ್ಯಾಪ್‌ನಲ್ಲಿ ಲೊಕೇಶನ್‌ ಶೇರ್‌ ಮಾಡಬಹುದಾಗಿದೆ.

ಗೂಗಲ್‌

ಇದಲ್ಲದೆ ಗೂಗಲ್‌ ಮ್ಯಾಪ್‌ ತನ್ನ ಬಳಕೆದಾರರು ಹೋಗಬೇಕಾದ ಸ್ಥಳವನ್ನು ವೇಗವಾಗಿ ತಲುಪಲು ಸಹಾಯ ಮಾಡುವ ಹೊಸ ಫಿಚರ್ಸ್‌ ಪರಿಚಯಿಸಿದೆ. ಇದಕ್ಕಾಗಿ ಪರಿಸರ ಸ್ನೇಹಿ ರೂಟಿಂಗ್ ಆಯ್ಕೆಯನ್ನು ಹೊರತಂದಿದೆ. ಇದರ ಜೊತೆಗೆ, ಸೈಕ್ಲಿಸ್ಟ್‌ಗಳಿಗೆ ಲೈವ್ ನ್ಯಾವಿಗೇಷನ್ ಅನ್ನು ಶೇರ್‌ ಮಾಡುವ ಅವಕಾಶವನ್ನು ಸಹ ಘೋಷಣೆ ಮಾಡಿದೆ. ಈ ಫೀಚರ್ಸ್‌ ಬಳಕೆದಾರರು ತಮ್ಮ ಸ್ಕ್ರೀನ್‌ ಅನ್ನು ಆನ್ ಮಾಡದೆಯೇ ತಮ್ಮ ಮಾರ್ಗದ ಕುರಿತು ಪ್ರಮುಖ ವಿವರಗಳನ್ನು ನೋಡಲು ಅವಕಾಶ ನೀಡಲಿದೆ. ಇದರೊಂದಿಗೆ, ಗೂಗಲ್ ಮ್ಯಾಪ್‌ನಲ್ಲಿ ಬೈಕ್ ಮತ್ತು ಸ್ಕೂಟರ್ ಶೇರ್‌ ಮಾಹಿತಿಯನ್ನು ಸಹ ಹೊರತಂದಿದೆ. ಈ ಫೀಚರ್ಸ್‌ ಜಗತ್ತಿನಾದ್ಯಂತ 300 ನಗರಗಳಲ್ಲಿನ ಜನರಿಗೆ ಒಂದು ನಿರ್ದಿಷ್ಟ ಸಮಯದಲ್ಲಿ ನಿಲ್ದಾಣದಲ್ಲಿ ಲಭ್ಯವಿರುವ ವಾಹನಗಳ ಸಂಖ್ಯೆಯನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ.

Most Read Articles
Best Mobiles in India

English summary
Here's how to share your real-time location using Google Maps.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X