Just In
Don't Miss
- Finance
ಜೂನ್ 25: ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟು?
- Sports
IRE vs IND ಟಿ20 ಸರಣಿ: ಸ್ಕೋರ್ಬೋರ್ಡ್ನಲ್ಲಿ ರನ್ ಹೆಚ್ಚಿಸುವ ಸಾಮರ್ಥ್ಯ ಈತನಿಗಿದೆ; ರವಿಶಾಸ್ತ್ರಿ
- News
ಶಿವಸೇನೆ 16 ಬಂಡಾಯ ಶಾಸಕರಿಗೆ ಉಪ ಸಭಾಪತಿ ನೋಟಿಸ್!
- Education
CLAT 2022 Result : ಕ್ಲಾಟ್ ಪರೀಕ್ಷೆಯ ಫಲಿತಾಂಶ ಪ್ರಕಟ
- Automobiles
ಬಜಾಜ್ ಪಲ್ಸರ್ ಎನ್250 ಮತ್ತು ಎಫ್250 ಮಾದರಿಗಳಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ವರ್ಷನ್ ಬಿಡುಗಡೆ
- Lifestyle
ಬ್ಯೂಟಿ ಟಿಪ್ಸ್: ಮಳೆಗಾಲದಲ್ಲೂ ಸನ್ಸ್ಕ್ರೀನ್ ಬಳಸಬೇಕಾ?
- Movies
ಕಾರ್ತಿಕ್ ಆರ್ಯನ್ಗೆ ಕೋಟಿಗಟ್ಟಲೆ ಮೌಲ್ಯದ ಕಾರು ಉಡುಗೊರೆ ನೀಡಿದ ನಿರ್ಮಾಪಕ!
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಆಂಡ್ರಾಯ್ಡ್ ಫೋನ್ನಲ್ಲಿರುವ ಈ ಐಕಾನ್ಗಳ ಬಗ್ಗೆ ನಿಮಗೆಷ್ಟು ತಿಳಿದಿದೆ?
ಇದು ಸ್ಮಾರ್ಟ್ಫೋನ್ ಜಮಾನ. ಸ್ಮಾರ್ಟ್ಫೋನ್ ಇಲ್ಲದೆ ಮನೆಯಿಂದ ಹೊರಗೆ ಹೋಗುವುದು ಕೂಡ ಕಷ್ಟ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇದೇ ಕಾರಣಕ್ಕೆ ಹಲವು ಜನಪ್ರಿಯ ಸ್ಮಾರ್ಟ್ಫೋನ್ ಕಂಪೆನಿಗಳು ವಿಶೇಷ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಾ ಬಂದಿವೆ. ಇನ್ನು ಸ್ಮಾರ್ಟ್ಫೋನ್ ಖರೀದಿಸುವಾಗ ಕೆಲವು ವಿಚಾರಗಳನ್ನು ನಾವು ಪ್ರಮುಖವಾಗಿ ಗಮನಿಸುತ್ತೇವೆ. ಸ್ಮಾರ್ಟ್ಫೋನ್ನ ಕ್ಯಾಮೆರಾ, ಡಿಸ್ಪ್ಲೇ ವಿಶೇಷತೆಯನ್ನು ಗಮನಿಸುವುದು ಸಾಮಾನ್ಯವಾಗಿದೆ.

ಹೌದು, ಹೊಸ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಖರೀದಿಸಿದಾಗ ಹಲವು ಅಂಶಗಳು ಪ್ರಮುಖವಾಗುತ್ತವೆ. ಇನ್ನು ಸ್ಮಾರ್ಟ್ಫೋನ್ನಲ್ಲಿರುವ ಕೆಲವು ಐಕಾನ್ಗಳ ಬಗ್ಗೆ ನಮಗೆ ತಿಳಿದಿರುವುದು ಇಲ್ಲ. ಇಂತಹ ಐಕಾನ್ಗಳನ್ನು ಹೆಚ್ಚಿನ ಜನರನ್ನು ಬಳಸುವುದಕ್ಕೆ ಕೂಡ ಹೋಗೋದಿಲ್ಲ. ಆದರೆ ಕೆಲವು ಐಕಾನ್ಗಳು ನಿಮಗೆ ಸಾಕಷ್ಟು ಉಪಯುಕ್ತವಾಗಿರುತ್ತವೆ. ಹಾಗಾದ್ರೆ ಆಂಡ್ರಾಯ್ಡ್ ಫೋನ್ಗಳಲ್ಲಿ ಲಭ್ಯವಿರುವ ಕೆಲವು ಐಕಾನ್ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮೈಕ್
ನೀವು ಆಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿ ಮೈಕ್ ಐಕಾನ್ ಇದ್ದೆ ಇರುತ್ತದೆ. ಈ ಐಕಾನ್ ಮೈಕ್ರೊಫೋನ್ ಆಗಿದ್ದು, ಮೈಕ್ರೊಫೋನ್ ಅನ್ನು ಟ್ಯಾಪ್ ಮಾಡುವ ಮೂಲಕ ನಿಮ್ಮ ವಾಯ್ಸ್ನಲ್ಲಿಯೇ ಸರ್ಚ್ ಮಾಡಲು ಸಹಾಯ ಮಾಡಲಿದೆ. ಮೈಕ್ರೋಫೋನ್ನಲ್ಲಿ ನೀವು ಹೇಳಿದ ಅಪ್ಲಿಕೇಶನ್ ಅನ್ನು ತೆರೆಯುವ ಹಾಗೂ ವೀಡಿಯೋವನ್ನು ಪ್ಲೇ ಮಾಡುವ ಕೆಲಸವನ್ನು ಮಾಡಬಹುದಾಗಿದೆ.

ಶೇರ್
ಶೇರ್ ಐಕಾನ್ ಹೆಸರೇ ಸೂಚಿಸುವಂತೆ ಇದು ನಿಮ್ಮ ಫೈಲ್ ಮತ್ತು ವೀಡಿಯೋ, ಫೋಟೋಗಳನ್ನು ಶೇರ್ ಮಾಡುವುದಕ್ಕೆ ಅವಕಾಶ ನೀಡಲಿದೆ. ನಿಮ್ಮ ಫೋನ್ನಲ್ಲಿರುವ ಫೋಟೋ, ವೀಡಿಯೊ ಅಥವಾ ವೆಬ್ಸೈಟ್ನಲ್ಲಿನ ಪೇಜ್ ಅನ್ನು ಶೇರ್ ಮಾಡುವುದಕ್ಕೆ ಈ ಐಕಾನ್ ಅನ್ನು ಬಳಸಬಹುದು.

ಮೆನು
ಮೆನು ಐಕಾನ್ ಸ್ಮಾರ್ಟ್ಫೋನ್ನ ಮೆನುವನ್ನು ನೋಡಲು ಅವಕಾಶ ನೀಡಲಿದೆ. ಮೂರು ಸಾಲುಗಳು ಐಕಾನ್ ಮೆನು ಆಗಿದ್ದು, ಇದನ್ನು ಟ್ಯಾಪ್ ಮಾಡುವ ಮೂಲಕ ಸ್ಮಾರ್ಟ್ಫೋನ್ ಒಳಗೆ ಪ್ರವೇಶಿಸಬಹುದಾಗಿದೆ.

ವೈ-ಫೈ
ವೈಫೈ ಇದರ ಬಗ್ಗೆ ಎಲ್ಲರಿಗೂ ತಿಳಿದೆ ಇದೆ. ಈ ಐಕಾನ್ ಮೇಲೆ ಟ್ಯಾಪ್ ಮಾಡುವ ಮೂಲಕ ವೈಫೈ ಇಂಟರ್ನೆಟ್ ಅನ್ನು ಕನೆಕ್ಟ್ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ.

ಮೊಬೈಲ್ ಡೇಟಾ
ಮೊಬೈಲ್ ಡೇಟಾ ಐಕಾನ್ ಮೂಲಕ ನಿಮ್ಮ ಮೊಬೈಲ್ನಲ್ಲಿ ಇಂಟರ್ನೆಟ್ ಸಕ್ರಿಯಗೊಳಿಸುವುದಕ್ಕೆ ಸಾಧ್ಯವಾಗಲಿದೆ. ನೆಟ್ವರ್ಕ್ನಲ್ಲಿ ನೀವು ಎಲ್ಲಿದ್ದರೂ ಮೊಬೈಲ್ ಡೇಟಾ ನಿಮಗೆ ಇಂಟರ್ನೆಟ್ ನೀಡುತ್ತದೆ.

ಬ್ಲೂಟೂತ್
ಬ್ಲೂಟೂತ್ ಐಕಾನ್ ನಿಮಗೆ ವಾಯರ್ಲೆಸ್ ಹೆಡ್ಫೋನ್ಗಳನ್ನು ಕನೆಕ್ಟ್ ಮಾಡುವುದಕ್ಕೆ ಅವಕಾಶ ನೀಡಲಿದೆ. ಇದಲ್ಲದೆ ವಾಯರ್ಲೆಸ್ ಡಿವೈಸ್ಗಳನ್ನು ಕನೆಕ್ಟ್ ಮಾಡುವುದಕ್ಕೆ ಬ್ಲೂಟೂತ್ ಅನ್ನು ಬಳಸಬಹುದು.

ಕ್ಯಾಮೆರಾ
ಕ್ಯಾಮೆರಾ ಐಕಾನ್ ಅನ್ನು ಟ್ಯಾಪ್ ಮಾಡಿದರೆ ನಿಮ್ಮ ಫೋನ್ ಕ್ಯಾಮೆರಾವನ್ನು ತೆರೆಯಬಹುದು. ಇದರ ಮೂಲಕ ನಿಮಗಿಷ್ಟವಾದ ಫೋಟೋ ಕ್ಲಿಕ್ಕಿಸುವುದಕ್ಕೆ ಸಾಧ್ಯವಾಗಲಿದೆ.

ಸೆಟ್ಟಿಂಗ್ಸ್
ಸೆಟ್ಟಿಂಗ್ಸ್ ಐಕಾನ್ ಟ್ಯಾಪ್ ಮಾಡಿದರೆ ನಿಮ್ಮ ಫೋನಿನ ಸೆಟ್ಟಿಂಗ್ಸ್ ತೆರೆಯಲಿದೆ. ಇದರ ಮೂಲಕ ನಿಮ್ಮ ಫೋನ್ ಸೆಟ್ಟಿಂಗ್ಸ್ ಆಯ್ಕೆಗಳನ್ನು ಕಾಣಬಹುದಾಗಿದೆ.

ಮೋರ್
ಮೋರ್ ಐಕಾನ್ ಮೂಲಕ ನಿಮ್ಮ ಫೋನ್ನಲ್ಲಿರುವ ಹೆಚ್ಚಿನ ಆಯ್ಕೆಗಳ ವಿವರವನ್ನು ತಿಳಿಯಲು ಸಾಧ್ಯವಾಗಲಿದೆ. ನಿಮ್ಮ ಫೋನ್ನಲ್ಲಿ ನಿಮಗೆ ತಿಳಿಯದೆ ಇರುವ ಹೆಚ್ಚಿನ ವಿವರಗಳನ್ನು ಮೋರ್ ಟ್ಯಾಪ್ ಮಾಡುವ ಮೂಲಕ ತಿಳಿಯಬಹುದು.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999