ಅಗ್ಗದ ಬೆಲೆಯಲ್ಲಿ ಲಭ್ಯವಾಗುವ ಅತ್ಯುತ್ತಮ ವಾಯರ್‌ಲೆಸ್‌ ಹೆಡ್‌ಫೋನ್‌ಗಳು!

|

ಮ್ಯೂಸಿಕ್‌ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಬಿಡುವಿನ ವೇಳೆಯಲ್ಲಿ ತಮಗಿಷ್ಟದ ಹಾಡನ್ನು ಗುನುಗುತ್ತಾ ಕಾಲ ಕಳೆಯೋದು ಎಲ್ಲರ ಸಮಾನ್ಯ ಹವ್ಯಾಸ. ಅದರಲ್ಲೂ ಸ್ಮಾರ್ಟ್‌ಫೋನ್‌ ಪ್ರಿಯರು ಜೊತೆಗೊಂದು ಹೆಡ್‌ಫೋನ್‌ ಹೊಂದಲು ಬಯಸುತ್ತಾರೆ. ಹೆಡ್‌ಫೋನ್‌ ಮೂಲಕ ತಮ್ಮ ನೆಚ್ಚಿನ ಹಾಡನ್ನು ಕೇಳುತ್ತಾ ಕಾಲ ಕಳೆಯುತ್ತಾರೆ. ಇದೇ ಕಾರಣಕ್ಕೆ ಹಲವು ಪ್ರತಿಷ್ಟಿತ ಕಂಪೆನಿಗಳು ವಿವಿಧ ಮಾದರಿಯ ಹೆಡ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಇವುಗಳಲ್ಲಿ ವಾಯರ್‌ಲೆಸ್‌ ಹೆಡ್‌ಫೋನ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ.

ವಾಯರ್‌ಲೆಸ್‌

ಹೌದು, ವಾಯರ್‌ಲೆಸ್‌ ಹೆಡ್‌ಫೋನ್‌ಗಳು ಹೆಚ್ಚಿನ ಜನಪ್ರಿಯತೆ ಪಡೆದಿವೆ. ಬ್ಲೂಟೂತ್ ಹೆಡ್‌ಫೋನ್‌ಗಳು ಇಂದಿನ ಯುವಜನತೆಯ ಹಾಟ್‌ ಫೇವರಿಟ್‌ ಆಗಿವೆ. ಇನ್ನು ನೆಕ್‌ಬ್ಯಾಂಡ್ ಶೈಲಿಯ ಇಯರ್‌ಫೋನ್‌ಗಳು ಜನಪ್ರಿಯ ಆಯ್ಕೆಗಳಾಗಿವೆ. ಸದ್ಯ ಮಾರುಕಟ್ಟೆಯಲ್ಲಿ ಹಲವು ವಿಧದ ಬೆಲೆಯಲ್ಲಿ ಹೆಡ್‌ಫೋನ್‌ಗಳು ಖರೀದಿಗೆ ಲಭ್ಯವಿದೆ. ದುಬಾರಿ ಬೆಲೆಯಿಂದ ಅಗ್ಗದ ಬೆಲೆಯ ತನಕ ಅನೇಕ ಆಯ್ಕೆಗಳನ್ನು ಹೊಂದಿವೆ. ಹಾಗಾದ್ರೆ ಭಾರತದಲ್ಲಿ 10,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತಮ ವಾಯರ್‌ಲೆಸ್ ಹೆಡ್‌ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸೌಂಡ್‌ಕೋರ್ ಲೈಫ್ Q10

ಸೌಂಡ್‌ಕೋರ್ ಲೈಫ್ Q10

ಅಗ್ಗದ ಬೆಲೆಯಲ್ಲಿ ನೀವು ಖರೀದಿಸಬಹುದಾದ ವಾಯರ್‌ಲೆಸ್‌‌ ಹೆಡ್‌ಫೋನ್‌ಗಳಲ್ಲಿ ಸೌಂಡ್‌ಕೋರ್ ಲೈಫ್ ಕ್ಯೂ10 ಕೂಡ ಒಂದಾಗಿದೆ. ಈ ಹೆಡ್‌ಫೋನ್‌ ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 2,499 ರೂ.ಬೆಲೆಗೆ ಲಭ್ಯವಿದೆ. ಇನ್ನು ಸೌಂಡ್‌ಕೋರ್ ಲೈಫ್ Q10 ವಾಯರ್‌ಲೆಸ್‌ ಹೆಡ್‌ಫೋನ್‌ 40mm ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದು ಅತ್ಯುತ್ತಮ ಬಾಸ್ ಪ್ರತಿಕ್ರಿಯೆಗಳಲ್ಲಿ ಒಂದನ್ನು ನೀಡುತ್ತದೆ. ಈ ಹೆಡ್‌ಫೋನ್‌ಗಳು ಸಿಂಗಲ್‌ ಚಾರ್ಜ್‌ನಲ್ಲಿ 60 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಇನ್ನು ಸೌಂಡ್‌ಕೋರ್ ಲೈಫ್ ಕ್ಯೂ10 ಯುಎಸ್‌ಬಿ-ಸಿ ಪೋರ್ಟ್‌ನೊಂದಿಗೆ ಬರುತ್ತದೆ ಮತ್ತು ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಟ್ರಿಬಿಟ್ ಎಕ್ಸ್‌ಫ್ರೀ ಟ್ಯೂನ್

ಟ್ರಿಬಿಟ್ ಎಕ್ಸ್‌ಫ್ರೀ ಟ್ಯೂನ್

ಟ್ರಿಬಿಟ್ ಎಕ್ಸ್‌ಫ್ರೀ ಟ್ಯೂನ್ ಹೆಡ್‌ಫೋನ್‌ ಅಮೆಜಾನ್‌ನಲ್ಲಿ 3,099 ರೂಗಳಿಗೆ ಖರೀದಿಸಲು ಲಭ್ಯವಿದೆ. ಈ ಹೆಡ್‌ಫೋನ್‌ ಸಿಂಗಲ್‌ ಚಾರ್ಜ್‌ನಲ್ಲಿ 40 ಗಂಟೆಗಳವರೆಗೆ ಬ್ಯಾಟರಿ ಅವಧಿಯನ್ನು ನೀಡಲಿದೆ. ಇದು ಉತ್ತಮ ಸೌಂಡ್‌ಸ್ಟೇಜ್, ಬೂಮಿ ಬಾಸ್, ಡಿಸೆಂಟ್ ಸೌಂಡ್ ಬೇರ್ಪಡಿಕೆ ಮತ್ತು ಕ್ರಿಸ್ಟಲ್‌ ಕ್ಲಿಯರ್‌ ಹೈಸ್ ಮತ್ತು ಮಿಡ್‌ಗಳನ್ನು ನೀಡಲಿದೆ. ಈ ಹೆಡ್‌ಫೋನ್‌ಗಳು ಇತರ ಡಿವೈಸ್‌ಗಳಿಗಿಂತ ಉತ್ತಮವಾದ ಧ್ವನಿಯನ್ನು ನೀಡುತ್ತದೆ. ಜೊತೆಗೆ ನಿಷ್ಕ್ರಿಯ ಶಬ್ದ ರದ್ದತಿ ಕಾರ್ಯನಿರ್ವಹಿಸುತ್ತದೆ.

ಸೋನಿ WH-CH710N

ಸೋನಿ WH-CH710N

ಅಮೆಜಾನ್‌ನಲ್ಲಿ ಕಡಿಮೆ ಬೆಲೆಗೆ ಲಭ್ಯವಿರುವ ಆಕರ್ಷಕ ಹೆಡ್‌ಫೋನ್‌ಗಳಲ್ಲಿ ಸೋನಿ WH-CH710N ಕೂಡ ಒಂದಾಗಿದೆ. ಈ ಹೆಡ್‌ಫೋನ್‌ ಪ್ರಸ್ತುತ ಅಮೆಜಾನ್‌ ನಲ್ಲಿ 8,990 ರೂ.ಬೆಲೆ ಹೊಂದಿದೆ. ಇನ್ನು ಈ ಡಿವೈಸ್‌ 35 ಗಂಟೆಗಳವರೆಗೆ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಈ ಹೆಡ್‌ಫೋನ್‌ 30mm ಆಡಿಯೋ ಡ್ರೈವರ್‌ಗಳನ್ನು ಹೊಂದಿದ್ದು, ಗೂಗಲ್ ಅಸಿಸ್ಟೆಂಟ್‌ ಅನ್ನು ಬೆಂಬಲಿಸಲಿದೆ. ಜೊತಗೆ ಈ ಹೆಡ್‌ಫೋನನ್‌ ಡ್ಯುಯಲ್ ನಾಯ್ಸ್ ಸೆನ್ಸರ್ ಟೆಕ್ನಾಲಜಿಯನ್ನು ಹೊಂದಿದ್ದು, ಬ್ಯಾಕ್‌ಗ್ರೌಂಡ್‌ ನಾಯ್ಸ ಅನ್ನು ಕಡಿಮೆ ಮಾಡಲಿದೆ.

ಟ್ರಿಬಿಟ್ ಕ್ವೈಟ್‌ಪ್ಲಸ್ 72

ಟ್ರಿಬಿಟ್ ಕ್ವೈಟ್‌ಪ್ಲಸ್ 72

ಟ್ರಿಬಿಟ್ ಕ್ವೈಟ್‌ಪ್ಲಸ್ 72 ವಾಯರ್‌ಲೆಸ್‌ ಹೆಡ್‌ಫೋನ್‌ ANC ಅನ್ನು ಅನುಭವಿಸಲು ಬಯಸುವ ಆಯ್ಕೆದಾರರಿಗೆ ಉತ್ತಮ ಆಯ್ಕೆಯಾಗಿದೆ. ಬಾಸ್ ಹೆವಿ ಸೌಂಡ್ ಸಿಗ್ನೇಚರ್ ಅನ್ನು ಇಷ್ಟಪಡುವ ಬಳಕೆದಾರರಿಗೂ ಸೂಕ್ತವಾಗಿದೆ. ಇನ್ನು ಅಮೆಜಾನ್‌ನಲ್ಲಿ ಈ ಹೆಡ್‌ಫೋನ್‌ ಪ್ರಸ್ತುತ 5,129 ರೂ.ಬೆಲೆ ಹೊಂದಿದೆ. ಈ ಡಿವೈಸ್‌ 32dB ವರೆಗೆ ನಾಯ್ಸ್‌ ಕ್ಯಾನ್ಸಲೇಶನ್‌ ಎಫೆಕ್ಟ್‌ ಅನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದು 40mm ಆಡಿಯೋ ಡ್ರೈವರ್‌ಗಳನ್ನು ಹೊಂದಿದ್ದು, ಬಾಸ್ ಫ್ರಿಕ್ವೆನ್ಸಿ ಕಡೆಗೆ ಹೆಚ್ಚುವರಿ ಪಂಚ್‌ನೊಂದಿಗೆ ಉತ್ತಮ ಧ್ವನಿಯನ್ನು ನೀಡುತ್ತದೆ. ಜೊತೆಗೆ ಈ ಡಿವೈಸ್‌ ANC ಆಫ್‌ನೊಂದಿಗೆ 30 ಗಂಟೆಗಳವರೆಗೆ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

JBL ಲೈವ್ 650BTNC

JBL ಲೈವ್ 650BTNC

JBL ಲೈವ್ 650BTNC ಹೆಡ್‌ಫೋನ್‌ ಪ್ರಸ್ತುತ ಅಮೆಜಾನ್‌ ಸೈಟ್‌ನಲ್ಲಿ 8,599ರೂ.ಗಳಿಗೆ ಖರೀದಿಸಲು ಲಭ್ಯವಿದೆ. ANC ಹೆಡ್‌ಫೋನ್‌ಗಳನ್ನು ಹುಡುಕುತ್ತಿರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಇನ್ನು ಈ ವಾಯರ್‌ಲೆಸ್ ಹೆಡ್‌ಫೋನ್‌ಗಳು 40mm ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿದೆ. ಈ ಹೆಡ್‌ಫೋನ್ ಡ್ಯುಯಲ್ ಪೇರಿಂಗ್ ಅನ್ನು ಬೆಂಬಲಿಸುತ್ತದೆ. ಜೊತೆಗೆ ಬ್ಲೂಟೂತ್ ಡಿವೈಸ್‌ನಿಂದ ಇನ್ನೊಂದಕ್ಕೆ ಸುಲಭವಾಗಿ ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ಅಮೆಜಾನ್ ಅಲೆಕ್ಸಾ ಅಥವಾ ಗೂಗಲ್ ಅಸಿಸ್ಟೆಂಟ್ ಅನ್ನು ಸಕ್ರಿಯಗೊಳಿಸಲು ಬಳಕೆದಾರರು ಇಯರ್ ಕಪ್ ಅನ್ನು ಟ್ಯಾಪ್ ಮಾಡಬಹುದಾಗಿದೆ. ಬಳಕೆದಾರರು ಇದನ್ನು ಸೆಟ್‌ ಮಾಡಲು JBL ಅಪ್ಲಿಕೇಶನ್ ಅನ್ನು ಬಳಸಬೇಕಾಗುತ್ತದೆ. ಇನ್ನು JBL ಹೆಡ್‌ಫೋನ್‌ಗಳು ನಾಯ್ಸ್‌ ಕ್ಯಾನ್ಸಲೇಶನ್‌ ಮೂಲಕ 20 ಗಂಟೆಗಳವರೆಗೆ ಅಥವಾ ಆಕ್ಟಿವ್‌ ನಾಯ್ಸ್‌ ಹೊಂದಿದ್ದರೆ 30 ಗಂಟೆಗಳವರೆಗೆ ಬ್ಯಾಟರಿ ಅವಧಿಯನ್ನು ನೀಡುತ್ತದೆ.

Most Read Articles
Best Mobiles in India

English summary
Here's the best wireless headphones under Rs 10,000 in india.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X