ನಿಮ್ಮ ಆಧಾರ್‌ಗೆ ಲಿಂಕ್‌ ಆಗಿರುವ ಫೋನ್ ನಂಬರ್‌ಗಳನ್ನು ಪರಿಶೀಲಿಸುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ಆಧಾರ್‌ ಸಂಖ್ಯೆ ಇಲ್ಲದೆ ಯಾವುದೇ ಸಿಮ್‌ ಕಾರ್ಡ್‌ ಅನ್ನು ಖರೀದಿಸಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಪ್ರತಿಯೊಬ್ಬರೂ ತಮ್ಮ ಆಧಾರ್‌ ಸಂಖ್ಯೆಯನ್ನು ನೀಡಿ ಸಿಮ್‌ ಖರೀದಿಸುತ್ತಾರೆ. ಇನ್ನು ಟೆಲಿಕಾಂ ಕಂಪೆನಿಗಳು ನೀಡುವ ಆಕರ್ಷಕ ಪ್ಲ್ಯಾನ್‌ಗಳ ಕಾರಣದಿಂದಾಗಿ ಕೆಲವರು ಹಲವು ಸಿಮ್‌ಗಳನ್ನು ಖರೀದಿಸಿರುತ್ತಾರೆ. ಕೆಲವರಿಗೆ ತಮ್ಮ ಹೆಸರಿನಲ್ಲಿ ಯಾವೆಲ್ಲಾ ಮೊಬೈಲ್‌ ನಂಬರ್‌ಗಳು ಆಕ್ಟಿವ್‌ ಆಗಿವೆ ಅನ್ನೊದು ಗೊತ್ತೇ ಇರುವುದಿಲ್ಲ.

ಆಧಾರ್

ಹೌದು, ನಿಮ್ಮ ಆಧಾರ್ ಸಂಖ್ಯೆಯಲ್ಲಿ ನೋಂದಾಯಿಸಲಾದ ಎಲ್ಲಾ ಮೊಬೈಲ್ ಸಂಖ್ಯೆಗಳನ್ನು ನೀವು ಈಗ ಪರಿಶೀಲಿಸಬಹುದು. ಇದಕ್ಕಾಗಿ ನೀವು ದೂರಸಂಪರ್ಕ ಇಲಾಖೆಯ (ಡಿಒಟಿ) ಹೊಸ ವೆಬ್‌ಸೈಟ್‌ ಪೇಜ್‌ಗೆ ಬೇಟಿ ನೀಡಬೇಕಾಗುತ್ತದೆ. ಡಿಒಟಿ ಇತ್ತೀಚೆಗೆ ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್‌ಮೆಂಟ್ ಮತ್ತು ಕನ್ಸ್ಯೂಮರ್ ಪ್ರೊಟೆಕ್ಷನ್ (TAFCOP) ಗಾಗಿ ಈ ಹೊಸ ವೆಬ್‌ಸೈಟ್ ಪರಿಚಯಿಸಿದೆ. ಇದರ ಮೂಲಕ ಬಳಕೆದಾರರು ತಮ್ಮ ಆಧಾರ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡಲಾದ ಫೋನ್ ಸಂಖ್ಯೆಗಳನ್ನು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ. ಹಾಗಾದ್ರೆ ನಿಮ್ಮ ಆಧಾರ್‌ ಸಂಖ್ಯೆಯಲ್ಲಿ ಎಷ್ಟು ಮೊಬೈಲ್‌ ನಂಬರ್‌ಗಳಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಲಿಕಾಂ

ಗ್ರಾಹಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಸಿಮ್‌ ಕಾರ್ಡ್‌ಗಳನ್ನು ಖರೀದಿಸಿರುತ್ತಾರೆ. ಕೆಲವೊಮ್ಮೆ ಟೆಲಿಕಾಂ ಆಫರ್‌ಗಳಿಗಾಗಿ ಸಿಮ್‌ ಖರೀದಿಸಿರುತ್ತಾರೆ. ಹೀಗೆ ತಾವು ಎಷ್ಟು ಸಿಮ್‌ ಕಾರ್ಡ್‌ ಖರೀದಿ ಮಾಡಿದ್ದೇವೆ ಅನ್ನೊದನ್ನ ಮರೆತು ಬಿಟ್ಟಿರುತ್ತಾರೆ. ಇದಕ್ಕಾಗಿ ಇದೀಗ ದೂರಸಂಪರ್ಕ ಇಲಾಖೆ TAFCOP ವೆಬ್‌ಸೈಟ್‌ ಮೂಲಕ ನಿಮ್ಮ ಆಧಾರ್‌ ಸಂಖ್ಯೆ ಮೂಲಕ ನಿಮ್ಮ ಹೆಸರಿನಲ್ಲಿ ಕೆಲಸ ಮಾಡುವ ಮೊಬೈಲ್ ಸಂಪರ್ಕಗಳ ಸಂಖ್ಯೆಯನ್ನು ಪರೀಕ್ಷಿಸಲು ಅನುವು ಮಾಡಿಕೊಡಲಿದೆ. ಅಲ್ಲದೆ ಗ್ರಾಹಕರ ಹೆಚ್ಚುವರಿ ಮೊಬೈಲ್ ಸಂಪರ್ಕಗಳನ್ನು ಯಾವುದಾದರೂ ಇದ್ದರೆ ಅದನ್ನು ಕ್ರಮಬದ್ಧಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಈ ವೆಬ್‌ಸೈಟ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

ವೆಬ್‌ಸೈಟ್‌

ಆದಾಗ್ಯೂ, ಗ್ರಾಹಕ ಸ್ವಾಧೀನ ಫಾರ್ಮ್ (CAF) ಅನ್ನು ನಿರ್ವಹಿಸುವ ಪ್ರಾಥಮಿಕ ಜವಾಬ್ದಾರಿ ಸೇವಾ ಪೂರೈಕೆದಾರರ ಮೇಲಿದೆ, "ಎಂದು TAFCOP ತನ್ನ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ. ಈ ವೆಬ್‌ಸೈಟ್‌ ಅನ್ನು ತೆರೆಯಿರಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡಿ ಮತ್ತು ನೀವು OTP ನಮೂದಿಸಿದ ತಕ್ಷಣ ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಖರೀದಿಸಿದ ಎಲ್ಲಾ ಸಿಮ್ ಕಾರ್ಡ್‌ಗಳ ಮೊಬೈಲ್ ಸಂಖ್ಯೆಗಳು ನಿಮಗೆ ತಿಳಿಯುತ್ತದೆ. ಅವುಗಳಲ್ಲಿ ಯಾವುದನ್ನಾದರೂ ನೀವು ನಿಷೇಧಿಸಬಹುದು. ವೆಬ್‌ಸೈಟ್ ಪ್ರಸ್ತುತ ಆಂಧ್ರಪ್ರದೇಶ ಮತ್ತು ತೆಲಂಗಾಣ ಗ್ರಾಹಕರಿಗೆ ಮಾತ್ರ ಕಾರ್ಯನಿರ್ವಹಿಸುತ್ತಿದೆ, ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲಾದ ಫೋನ್ ಸಂಖ್ಯೆಗಳನ್ನು ಪರಿಶೀಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿರಿ.

ಆಧಾರ್ ಸಂಖ್ಯೆಯೊಂದಿಗೆ ನೋಂದಾಯಿಸಲಾದ ಫೋನ್ ಸಂಖ್ಯೆಗಳನ್ನು ಪರಿಶೀಲಿಸುವುದು ಹೇಗೆ?

ಆಧಾರ್ ಸಂಖ್ಯೆಯೊಂದಿಗೆ ನೋಂದಾಯಿಸಲಾದ ಫೋನ್ ಸಂಖ್ಯೆಗಳನ್ನು ಪರಿಶೀಲಿಸುವುದು ಹೇಗೆ?

ಹಂತ 1: ವಂಚನೆ ನಿರ್ವಹಣೆ ಮತ್ತು ಗ್ರಾಹಕ ರಕ್ಷಣೆ ವೆಬ್‌ಸೈಟ್‌ಗಾಗಿ ಟೆಲಿಕಾಂ ಅನಾಲಿಟಿಕ್ಸ್‌ಗೆ ಹೋಗಿ

ಹಂತ 2: ಕೊಟ್ಟಿರುವ ಜಾಗದಲ್ಲಿ 10 ಅಂಕಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ

ಹಂತ 3: 'OTP ವಿನಂತಿಸಿ' ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಹಂತ 4: ಮುಂದೆ, ನೀವು ಸ್ವೀಕರಿಸಿದ OTP ಸಂಖ್ಯೆಯನ್ನು ಫೋನ್ ಸಂಖ್ಯೆಯಲ್ಲಿ ನಮೂದಿಸಿ

ಹಂತ 5: ವೆಬ್‌ಸೈಟ್ ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲಾದ ಎಲ್ಲಾ ಮೊಬೈಲ್ ಸಂಖ್ಯೆಗಳನ್ನು ತೋರಿಸುತ್ತದೆ

ಅಗತ್ಯವಿದ್ದರೆ, ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ ನೀವು ಇನ್ನು ಮುಂದೆ ಬಳಕೆಯಲ್ಲಿಲ್ಲದ ಫೋನ್ ಸಂಖ್ಯೆಗಳನ್ನು ವರದಿ ಮಾಡಬಹುದು ಮತ್ತು ನಿರ್ಬಂಧಿಸಬಹುದು.

Most Read Articles
Best Mobiles in India

English summary
Now you can check all mobile numbers registered with your Aadhaar number.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X