ಭಾರತದಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತಮ 55 ಇಂಚಿನ ಸ್ಮಾರ್ಟ್‌ಟಿವಿಗಳು!

|

ಕಳೆದ ಕೆಲವು ವರ್ಷಗಳಲ್ಲಿ ಟಿವಿ ಮಾರುಕಟ್ಟೆ ಸಾಕಷ್ಟು ಬದಲಾವಣೆಯನ್ನು ಕಂಡಿದೆ. ಹೊಸ ಟೆಕ್ನಾಲಜಿ ಆಧಾರಿತ ಸ್ಮಾರ್ಟ್‌ಟಿವಿಗಳು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿವೆ. ಆಕರ್ಷಕ ವಿನ್ಯಾಸ, ಹೆಚ್ಚುವರಿ ಗಾತ್ರಗಳ ಕಾರಣಕ್ಕೆ ಸ್ಮಾರ್ಟ್‌ಟಿವಿಗಳು ಗ್ರಾಹಕರನ್ನು ಸೆಳೆಯುತ್ತಿವೆ. ಸದ್ಯ ಮಾರುಕಟ್ಟೆಯಲ್ಲಿ 55 ಇಂಚಿನ ಸ್ಮಾರ್ಟ್‌ಟಿವಿಗಳು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. ಹೆಚ್ಚಿನ ಗಾತ್ರದ ಜೊತೆಗೆ ಅನೇಕ ಅಪ್ಲಿಕೇಶನ್‌ಗಳಿಗೆ ಪೂರಕವಾಗಿರುವುದರಿಂದ ಭಾರಿ ಬೇಡಿಕೆ ಪಡೆದುಕೊಂಡಿವೆ.

ಸ್ಮಾರ್ಟ್‌ಟಿವಿ

ಹೌದು, ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ 55 ಇಂಚಿನ ಸ್ಮಾರ್ಟ್‌ಟಿವಿಗಳಿಗೆ ತನ್ನದೇ ಆದ ಬೇಡಿಕೆ ಇದೆ. ಅನೇಕ ಅಪ್ಲಿಕೇಶನ್‌ಗಳು, ಗೇಮ್‌ಗಳು, ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ನೀಡುವ ಕಾರಣಕ್ಕೆ ಜನರು ಈ ಸ್ಮಾರ್ಟ್‌ಟಿವಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಪ್ರಮುಖ ಸ್ಮಾರ್ಟ್‌ಟಿವಿ ಬ್ರಾಂಡ್‌ಗಳಾದ ಒನ್‌ಪ್ಲಸ್‌, ರೆಡ್‌ಮಿ, ವಿಯು 55 ಇಂಚಿನ ಅನೇಕ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿವೆ. ಹಾಗಾದ್ರೆ ಈ ತಿಂಗಳಿನಲ್ಲಿ ನೀವು ಖರೀದಿಸಬಹುದಾದ ಟಾಪ್ 55 ಇಂಚಿನ ಸ್ಮಾರ್ಟ್ ಟಿವಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

Mi 55 ಇಂಚು 4K ಅಲ್ಟ್ರಾ HD ಆಂಡ್ರಾಯ್ಡ್ ಸ್ಮಾರ್ಟ್ LED ಟಿವಿ

Mi 55 ಇಂಚು 4K ಅಲ್ಟ್ರಾ HD ಆಂಡ್ರಾಯ್ಡ್ ಸ್ಮಾರ್ಟ್ LED ಟಿವಿ

Mi 55 ಇಂಚು 4K ಅಲ್ಟ್ರಾ HD ಆಂಡ್ರಾಯ್ಡ್‌ ಸ್ಮಾರ್ಟ್‌ LED TV ಅಮೆಜಾನ್‌ನಲ್ಲಿ 44,999 ರೂ. ಬೆಲೆಗೆ ಲಭ್ಯವಾಗಲಿದೆ. ಜೊತೆಗೆ ICICI ಬ್ಯಾಂಕ್ ಕಾರ್ಡ್ ವಹಿವಾಟಿನ ಮೇಲೆ 3,000 ರೂ.ಗಳ ಡಿಸ್ಕೌಂಟ್‌ ಕೂಡ ದೊರೆಯಲಿದೆ. ಇನ್ನು ಈ ಸ್ಮಾರ್ಟ್‌ಟಿವಿ 3840x2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 4K ಅಲ್ಟ್ರಾ HD ಸ್ಕ್ರೀನ್‌ ಹೊಂದಿದೆ. ಹಾಗೆಯೇ Mi ಸ್ಮಾರ್ಟ್ ಟಿವಿ 20 ವ್ಯಾಟ್‌ಗಳ ಔಟ್‌ಪುಟ್ ಡಾಲ್ಬಿ ಆಡಿಯೊ + DTS HD ಯೊಂದಿಗೆ ಬರುತ್ತದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ವೈಫೈ, ಆಂಡ್ರಾಯ್ಡ್‌ TV 9.0, ಗೂಗಲ್‌ ಅಸಿಸ್ಟೆಂಟ್‌, ನೆಟ್‌ಫ್ಲಿಕ್ಸ್‌ ಅಪ್ಲಿಕೇಶನ್‌ಗಳಿಗೆ ಬೆಂಬಲವನ್ನು ನೀಡಲಿದೆ. ಜೊತೆಗೆ ಪ್ರೈಮ್ ವಿಡಿಯೋ, ಡಿಸ್ನಿ+ಹಾಟ್‌ಸ್ಟಾರ್ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡಲಿದೆ.

ಒನ್‌ಪ್ಲಸ್‌ 55 ಇಂಚು U ಸರಣಿ

ಒನ್‌ಪ್ಲಸ್‌ 55 ಇಂಚು U ಸರಣಿ

ಒನ್‌ಪ್ಲಸ್‌ 55ಇಂಚು U ಸರಣಿಯ 4K LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ನಿಮಗೆ 48,999ರೂ.ಬೆಲೆಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿ ನೆಟ್‌ಫ್ಲಿಕ್ಸ್‌, ಪ್ರೈಮ್‌ ವೀಡಿಯೊ, Zee5, ಆಕ್ಸಿಜನ್‌ ಪ್ಲೇ, ಇರೋಸ್‌ ನೌ, ಜಿಯೋ ಸಿನಿಮಾ, SonyLiv, ಯೂಟ್ಯೂಬ್‌, ಹಂಗಾಮಾ ಮತ್ತು ಹಾಟ್‌ಸ್ಟಾರ್‌ ಅಪ್ಲಿಕೇಶನ್‌ಗೆ ಪ್ರವೇಶ ಸಿಗಲಿದೆ. ಇದು ಗೂಗಲ್ ಅಸಿಸ್ಟೆಂಟ್, ಕಿಡ್ಸ್ ಮೋಡ್, ಗೇಮ್ ಮೋಡ್, ಆಂಡ್ರಾಯ್ಡ್ ಟಿವಿ 10 ಮತ್ತು ಹ್ಯಾಂಡ್ಸ್-ಫ್ರೀ ವಾಯ್ಸ್‌ ಕಂಟ್ರೋಲ್‌ ಫೀಚರ್ಸ್‌ ಅನ್ನು ಒಳಗೊಂಡಿದೆ.

ರೆಡ್ಮಿ 55 ಇಂಚು 4K ಅಲ್ಟ್ರಾ HD ಆಂಡ್ರಾಯ್ಡ್ ಸ್ಮಾರ್ಟ್ LED ಟಿವಿ

ರೆಡ್ಮಿ 55 ಇಂಚು 4K ಅಲ್ಟ್ರಾ HD ಆಂಡ್ರಾಯ್ಡ್ ಸ್ಮಾರ್ಟ್ LED ಟಿವಿ

ರೆಡ್ಮಿ 55 ಇಂಚು 4K ಅಲ್ಟ್ರಾ HD ಆಂಡ್ರಾಯ್ಡ್ ಸ್ಮಾರ್ಟ್ LED ಟಿವಿ 45,999 ರೂಗಳಲ್ಲಿ ಲಭ್ಯವಾಗಲಿದೆ. ಇದು ಬ್ಲೂಟೂತ್ 5.0, 30 ವ್ಯಾಟ್ಸ್ ಔಟ್‌ಪುಟ್ ಡಾಲ್ಬಿ ಆಡಿಯೋ, ಆಂಡ್ರಾಯ್ಡ್ ಟಿವಿ 10 ಅನ್ನು ಬೆಂಬಲಿಸಲಿದೆ. ಅಲ್ಲದೆ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್‌ ಅಪ್ಲಿಕೇಶನ್‌ಗಳನ್ನು ಬೆಂಬಲಿಸಲಿದೆ. ಜೊತೆಗೆ ICICI ಬ್ಯಾಂಕ್ ಕಾರ್ಡ್ ವಹಿವಾಟಿನ ಮೇಲೆ 3000ರೂ. ತ್ವರಿತ ರಿಯಾಯಿತಿಯನ್ನು ಪಡೆಯಬಹುದು.

Vu 55 ಇಂಚು ಸಿನಿಮಾ ಟಿವಿ ಆಕ್ಷನ್ ಸರಣಿ

Vu 55 ಇಂಚು ಸಿನಿಮಾ ಟಿವಿ ಆಕ್ಷನ್ ಸರಣಿ

Vu 55 ಇಂಚು ಸಿನಿಮಾ TV ಆಕ್ಷನ್ ಸೀರೀಸ್ 4K Ultra HD LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ 46,999ರೂ.ಬೆಲೆ ಹೊಂದಿದೆ. ಇನ್ನು ಸಿಟಿಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ 10% ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಈ ಸ್ಮಾರ್ಟ್‌ಟಿವಿ ಕೂಡ Netflix, ಜೀ5, ಸೋನಿಲೈವ್‌, ಪ್ರೈಮ್‌ ವೀಡಿಯೊ,Ms, ಗೂಗಲ್‌ ಮೂವೀಸ್‌ ಮತ್ತು ಟಿವಿ, ಹಾಟ್‌ಸ್ಟಾರ್‌, ಗೂಗಲ್‌ ಮ್ಯೂಸಿಕ್‌, ಯೂಟ್ಯೂಬ್‌ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡಲಿದೆ.

ಅಮೆಜಾನ್‌ ಬೇಸಿಕ್ಸ್‌ 55 ಇಂಚು 4K ಅಲ್ಟ್ರಾ HD ಸ್ಮಾರ್ಟ್ LED ಫೈರ್ ಟಿವಿ

ಅಮೆಜಾನ್‌ ಬೇಸಿಕ್ಸ್‌ 55 ಇಂಚು 4K ಅಲ್ಟ್ರಾ HD ಸ್ಮಾರ್ಟ್ LED ಫೈರ್ ಟಿವಿ

ಅಮೆಜಾನ್‌ ಬೇಸಿಕ್ಸ್‌ 55 ಇಂಚು 4K ಅಲ್ಟ್ರಾ HD ಸ್ಮಾರ್ಟ್ LED ಫೈರ್ ಟಿವಿ ಹಲವಾರು ಬ್ಯಾಂಕ್ ಆಫರ್‌ಗಳ ಮೂಲಕ ನಿಮಗೆ ಕೇವಲ 44,999 ರೂ.ಗಳಿಗೆ ಲಭ್ಯವಾಗಲಿದೆ. ಇದಲ್ಲದೆ ನೀವು ಸಿಟಿಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಮತ್ತು ಡೆಬಿಟ್ ಕಾರ್ಡ್‌ಗಳೊಂದಿಗೆ 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಇನ್ನು ಈ ಸ್ಮಾರ್ಟ್ ಟಿವಿಯು ಬಿಲ್ಟ್-ಇನ್ ಅಲೆಕ್ಸಾ ಮತ್ತು ಅಲೆಕ್ಸಾ ವಾಯ್ಸ್ ಕಂಟ್ರೋಲ್‌ ಅನ್ನು ಹೊಂದಿದೆ. ಜೊತೆಗೆ ಇನ್‌ಬಿಲ್ಟ್ 20 ವ್ಯಾಟ್ಸ್ ಪವರ್‌ಫುಲ್ ಸ್ಪೀಕರ್‌ಗಳು, ಡಾಲ್ಬಿ ಅಟ್ಮೋಸ್, ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಡಿಸ್ನಿ + ಹಾಟ್‌ಸ್ಟಾರ್, ಯೂಟ್ಯೂಬ್, ಆಪಲ್ ಟಿವಿ ಮತ್ತು ಫೈರ್ ಓಎಸ್ ಸ್ಟೋರ್‌ನಿಂದ 5000+ ಅಪ್ಲಿಕೇಶನ್‌ಗಳನ್ನು ಬೆಂಬಲಿಸಲಿದೆ.

Most Read Articles
Best Mobiles in India

English summary
Here is a list of top 55-inch smart TV from different brands that you can consider buying this November.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X