ಅಮೆಜಾನ್ ಸೇಲ್‌ನಲ್ಲಿ ಬಜೆಟ್‌ ಬೆಲೆಗೆ ಲಭ್ಯವಾಗುವ ವಾಯರ್‌ಲೆಸ್‌ ಇಯರ್‌ಫೋನ್‌ಗಳು!

|

ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ತಾಣ ಅಮೆಜಾನ್‌ ತನ್ನ ಗ್ರಾಹಕರಿಗಾಗಿ ವಿಶೇಷ ಸೇಲ್‌ಗಳನ್ನು ಆಯೋಜಿಸುತ್ತಲೇ ಬಂದಿದೆ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ವಿಶೇಷ ಸೇಲ್‌ಗಳನ್ನು ಆಯೋಜಿಸಿ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ. ಇದೀಗ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಮೂಲಕ ಮತ್ತೊಮ್ಮೆ ಬಿಗ್‌ ಆಫರ್‌ಗಳನ್ನು ಹೊತ್ತು ತಂದಿದೆ. ಇನ್ನು ಈ ಬಾರಿಯ ಅಮೆಜಾನ್ ಸೇಲ್‌ ಇದೇ ಅಕ್ಟೋಬರ್ 3ರಿಂದ ಪ್ರಾರಂಭವಾಗಲಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಮಾತ್ರವಲ್ಲ ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ಗಳನ್ನು ಸಹ ಆಫರ್‌ನಲ್ಲಿ ಖರೀದಿಸಬಹುದಾಗಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಆನ್‌ಲೈನ್‌ ಶಾಪಿಂಗ್‌ ಪ್ರಿಯರಿಗೆ ಹಬ್ಬವಿದ್ದಂತೆ. ನೀವು ಬಯಸಿದ ಗ್ಯಾಜೆಟ್ಸ್‌ ಗಳನ್ನ ಹೆಚ್ಚಿನ ರಿಯಾಯಿತಿ ದರದಲ್ಲಿ ಖರೀದಿಸಲು ಇದೊಂದು ಸುವರ್ಣಾವಕಾಶ. ಇನ್ನು ಈ ಬಾರಿಯ ಸೇಲ್‌ನಲ್ಲಿ ಹೆಚ್ಚಿನ ಗ್ಯಾಜೆಟ್ಸ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ಘೋಷಿಸಲಾಗಿದೆ. ಈ ಪೈಕಿ ವಾಯರ್‌ಲೆಸ್‌ ಇಯರ್‌ಫೋನ್‌ಗಳಿಗೆ 80% ರಿಯಾಯಿತಿ ದೊರೆಯಲಿದೆ. ಹಾಗಾದ್ರೆ ಈ ಬಾರಿಯ ಸೇಲ್‌ನಲ್ಲಿ ಮ್ಯೂಸಿಕ್‌ ಪ್ರಿಯರು ಯಾವೆಲ್ಲಾ ಇಯರ್‌ಫೋನ್‌ಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಜಬ್ರಾ ಎಲೈಟ್ 65t

ಜಬ್ರಾ ಎಲೈಟ್ 65t

ಜಬ್ರಾ ಎಲೈಟ್ 65t ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್ ಅಮೆಜಾನ್‌ ಸೇಲ್‌ನಲ್ಲಿ ವಿಶೇಷ ರಿಯಾಯಿತಿ ಪಡೆದುಕೊಂಡಿದೆ. ಈ ಇಯರ್‌ಫೋನ್ ಬಿಡುಗಡೆ ಆಗಿದ್ದಾಗ 12,999ರೂ ಬೆಲೆ ಹೊಂದಿತ್ತು. ಆದರೆ ಇದೀಗ ಅಮೆಜಾನ್‌ ಸೇಲ್‌ನಲ್ಲಿ ಕೇವಲ 4999ರೂ.ಗಳಿಗೆ ಲಭ್ಯವಿದೆ. ಇನ್ನು ಈ ಇಯರ್‌ಫೋನ್‌ ಐಪಿ 56 ಧೂಳು ಮತ್ತು ನೀರಿನ ಪ್ರತಿರೋಧವನ್ನು ಹೊಂದಿದ್ದು, ಜಿಮ್‌ ಬಳಕೆದಾರರಿಗೆ ಉತ್ತಮ ಇಯರ್‌ಫೋನ್‌ ಆಗಿದೆ. ಇದು ಬ್ಲೂಟೂತ್ 5.0 ಬೆಂಬಲಿಸಲಿದ್ದು, ಚಾರ್ಜಿಂಗ್ ಕೇಸ್‌ನೊಂದಿಗೆ 15 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದೆ.

ರಿಯಲ್‌ಮಿ ಬಡ್ಸ್ ಏರ್ 2

ರಿಯಲ್‌ಮಿ ಬಡ್ಸ್ ಏರ್ 2

ರಿಯಲ್‌ಮಿ ಬಡ್ಸ್‌ ಏರ್ 2 ಕೂಡ ವಿಶೇಷ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ. ಪ್ರಸ್ತುತ ಅಮೆಜಾನ್‌ನಲ್ಲಿ ಈ ಇಯರ್‌ಫೋನ್‌ 4290ರೂ.ಗಳಿಗೆ ಲಭ್ಯವಿದೆ. ಇನ್ನು ಈ ಇಯರ್‌ಫೋನ್‌ಗಳು 10 ಎಂಎಂ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದು ಬ್ಲೂಟೂತ್ 5.2 ಕನೆಕ್ಟಿವಿಟಿಯನ್ನು ಬೆಂಬಲಿಸಲಿದ್ದು, ANC ಬೆಂಬಲವನ್ನು ಸಹ ಪಡೆದುಕೊಂಡಿದೆ. ಇದು ಎಎನ್‌ಸಿ ಆಫ್‌ನೊಂದಿಗೆ 5 ಗಂಟೆಗಳ ಬ್ಯಾಟರಿ ಅವಧಿಯನ್ನು ಮತ್ತು 4 ಗಂಟೆಗಳ ಬ್ಯಾಟರಿ ಅವಧಿಯನ್ನು ಎಎನ್‌ಸಿ ಒಂದರಲ್ಲಿ ನೀಡಲಿದೆ. ಇದು SBC ಮತ್ತು AAC ಕೋಡೆಕ್‌ಗಳನ್ನು ಬೆಂಬಲಿಸಲಿದೆ.

ಒಪ್ಪೋ ಎನ್ಕೋ W51

ಒಪ್ಪೋ ಎನ್ಕೋ W51

ಒಪ್ಪೋ ಎನ್ಕೋ W51 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ಗಳಲ್ಲಿ ಒಂದಾಗಿದೆ. ಇದು ಬ್ಲೂಟೂತ್ 5.0 ನೊಂದಿಗೆ 7 ಎಂಎಂ ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಈ ಇಯರ್‌ಫೋನ್‌ ANCಯನ್ನು ಕೂಡ ಬೆಂಬಲಿಸಲಿದೆ. ಈ ಇಯರ್‌ಫೋನ್‌ IP54 ರೇಟ್ ಹೊಂದಿದ್ದು, ವಾಟರ್‌ ಪ್ರೂಫ್‌ ಆಗಿದೆ. ಇದು ವಾಯರ್‌ಲೆಸ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಇಯರ್‌ಬಡ್ 25mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಆದರೆ ಚಾರ್ಜಿಂಗ್‌ ಕೇಸ್ 480mAh ಬ್ಯಾಟರಿಯನ್ನು ಒಳಗೊಂಡಿದೆ. ಒಟ್ಟಾರೆ 24 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಪ್ರಸ್ತುತ ಇದರ ಬೆಲೆ 4990ರೂ ಹೊಂದಿದೆ. ಅಮೆಜಾನ್‌ ಸೇಲ್‌ನಲ್ಲಿ ಇದರ ಬೆಲೆ ಇನ್ನಷ್ಟು ಕಡಿಮೆ ಆಗಲಿದೆ.

ಒನ್‌ಪ್ಲಸ್ ಬಡ್ಸ್ Z

ಒನ್‌ಪ್ಲಸ್ ಬಡ್ಸ್ Z

ಒನ್‌ಪ್ಲಸ್ ಬಡ್ಸ್ Z ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಕೇವಲ 2999ರೂ ಬೆಲೆಗೆ ಸಿಗಲಿದೆ. ಇದು 10mm ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದ್ದು, ಉತ್ತಮ ಸೌಂಡ್‌ ಸಿಸ್ಟಂ ಅನ್ನು ಹೊಂದಿದೆ. ಜೊತೆಗೆ ಈ ವಾಇಯರ್‌ಲೆಸ್‌ ಇಯರ್‌ಫೋನ್‌ ಬ್ಲೂಟೂತ್ 5.0 ಬೆಂಬಲವನ್ನು ಹೊಂದಿದೆ. ಇದು ಕಿವಿಯೊಳಗಿನ ಪತ್ತೆ ಮತ್ತು IP55 ಧೂಳು/ನೀರಿನ ಪ್ರತಿರೋಧದಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಇಯರ್‌ಫೋನ್‌ 5 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದ್ದು, ಚಾರ್ಜಿಂಗ್‌ ಕೇಸ್‌ನೊಂದಿಗೆ 15 ಗಂಟೆಗಳವರೆಗೆ ಬಾಳಿಕೆ ಬರಲಿದೆ.

Most Read Articles
Best Mobiles in India

English summary
Amazon Great Indian Festival starts on October 3. Like every year, the sale will bring a host of discount offers on headphones and speakers.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X