ಅಗ್ಗದ ಐಫೋನ್ ಖರೀದಿಸುವ ಭರದಲ್ಲಿ ಈತನಿಗೆ ಸಿಕ್ಕಿದ್ದೇನು ಗೊತ್ತಾ?

|

ಇತ್ತೀಚಿನ ದಿನಗಳಲ್ಲಿ ಇ-ಕಾಮರ್ಸ್‌ ಸೈಟ್‌ಗಳಲ್ಲಿ ಆರ್ಡರ್‌ ಮಾಡಿದ ವಸ್ತು ಬದಲಿಗೆ ಬೇರೆಯದೆ ವಸ್ತು ಪಡೆದು ಮೋಸ ಹೋದ ಘಟನೆಗಳು ಸಾಕಷ್ಟು ನಡೆದಿವೆ. ಅದರಲ್ಲೂ ಐಫೋನ್‌ಗಳನ್ನು ಬುಕ್‌ ಮಾಡಿದಾಗ ಐಫೋನ್‌ ಬದಲಿಗೆ ಐಫೋನ್‌ ಗಾತ್ರದ ಸೋಫ್‌, ನಕಲಿ ಐಫೋನ್‌ಗಳನ್ನ ಕೊಟ್ಟು ಯಾಮಾರಿಸಿರುವುದು ಉಂಟೂ. ಇಂತಹದ್ದೆ ಘಟನೆ ಇದೀಗ ಮತ್ತೇ ವರದಿ ಆಗಿದೆ. ಆದರೆ ಇಲ್ಲಿ ಐಫೋನ್‌ ಬದಲಿಗೆ ಏನು ದೊರೆತಿದೆ ಅನ್ನೊದೆ ಇಂಟ್ರೆಸ್ಟಿಂಗ್‌ ವಿಚಾರ.

ಕಾಮರ್ಸ್

ಹೌದು, ಜನರು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಂದ ಸಾಕಷ್ಟು ಭಾರಿ ಮೋಸ ಹೋಗುತ್ತಿರೋದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯ. ಆದರೆ ಥಾಯ್ಲೆಂಡ್‌ನಲ್ಲಿ ನಡೆದಿರುವ ಘಟನೆ ನಿಮ್ಮೆಲ್ಲರನ್ನು ಹುಬ್ಬೆರುವಂತೆ ಮಾಡಿಬಿಡುತ್ತೆ. ಯಾಕಂದ್ರೆ ಈ ಪರಿ ಗಾತ್ರದ ಐಫೋನ್‌ ನೀವು ನೋಡಿರುವುದಕ್ಕೆ ಸಾಧ್ಯವೇ ಇಲ್ಲ. ಸ್ವತಃ ಆಫಲ್‌ ಕಂಪೆನಿ ಕೂಡ ನೋಡಿ ಶಾಕ್‌ಗೆ ಒಳಗಾದರೂ ಅಚ್ಚರಿಯಿಲ್ಲ. ಅಷ್ಟಕ್ಕೂ ಈ ಘಟನೆ ನಡೆದಿರೋದು ಥಾಯ್ಲೆಂಡ್‌ನಲ್ಲಿ, ಇಲ್ಲಿ ಥಾಯ್ ಎಂಬ ಯುವಕನಿಗೆ ಐಫೋನ್‌ ಬದಲಿಗೆ ಐಫೋನ್‌ ಮಾದರಿಯ ಟೇಬಲ್‌ ಅನ್ನು ನೀಡಲಾಗಿದೆ. ಹಾಗಾದ್ರೆ ಇಲ್ಲಿ ನಿಜಕೂ ಆಗಿದ್ದೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಥಾಯ್ಲೆಂಡ್‌ನಲ್ಲಿ

ಥಾಯ್ಲೆಂಡ್‌ನಲ್ಲಿ ಥಾಯ್‌ ಎಂಬ ಯುವಕ ಇ-ಕಾಮರ್ಸ್‌ ಸೈಟ್‌ನಲ್ಲಿ ಕಡಿಮೆ ಬೆಲೆಯಲ್ಲಿ ಐಫೋನ್‌ ಖರೀದಿಸಲು ಹುಡುಕಾಡಿದ್ದಾನೆ. ಐಫೋನ್‌ ಮದರಿಯ ಜಾಹಿರಾತು ಕಂಡ ಕ್ಷಣ ಹೆಚ್ಚಿನ ಮಾಹಿತಿ ಓದದೇ ಆರ್ಡರ್‌ ಮಾಡಿದ್ದಾನೆ. ಅರ್ಡರ್‌ ಮಡಿದ ಪ್ರಾಡಕ್ಟ್‌ ಮನೆಗೆ ಬಂದಾಗ ಅದರ ಗಾತ್ರ ನೋಡಿ ಬಾಲಕನೇ ಶಾಕ್‌ ಆಗಿದ್ದಾನೆ. ಏಕೆಂದರೆ ಅಷ್ಟು ಗಾತ್ರದ ಐಫೋನ್‌ ನಿಜಕ್ಕೂ ಇದೆಯಾ ಅನ್ನೊದೇ ಅವನ ಕುತೂಹಲವಾಗಿತ್ತು. ಆದರೆ ಅಲ್ಲಿ ಅಸಲಿಗೆ ಐಫೋನ್‌ ಬದಲಿಗೆ ಬಂದಿದ್ದು, ಐಫೋನ್‌ ಮಾದರಿಯ ಟೇಬಲ್‌ ಅನ್ನೊದು ನಂತರ ತಿಳಿದಿದೆ.

ಕಾಮರ್ಸ್‌

ಹಾಗಂತ ಇಲ್ಲಿ ಇ-ಕಾಮರ್ಸ್‌ ಸೈಟ್‌ನವರೂ ಮೋಸ ಮಾಡಿಲ್ಲ. ಬದಲಿಗೆ ಯುವಕನೇ ಮಾಡಿಕೊಂಡ ಎಡವಟ್ಟು ಇದೆಲ್ಲಕ್ಕೂ ಕಾರಣವಾಗಿದೆ. ರಿಯಂಟಲ್ ಡೈಲಿ ಮಲೇಷ್ಯಾದ ಪ್ರಕಾರ, ಥಾಯ್ಲೆಂಡ್‌ನ ಈ ಬಾಲಕ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಅಗ್ಗದ ಬೆಲೆಗೆ ಐಫೋನ್‌ ಖರೀದಿಸುವ ಭರದಲ್ಲಿ ವಿವರಗಳನ್ನು ಪರಿಶೀಲಿಸದೆ ಮತ್ತು ವಿವರಣೆಯನ್ನು ಓದದೆ, ಐಫೋನ್‌ ಮಾದರಿಯ ಚಿತ್ರ ಕಂಡಾಕ್ಷಣ "ಆರ್ಡರ್‌" ಮಾಡಿದ್ದಾನೆ ಆದರೆ ಅದು ಅಸಲಿಗೆ ಐಫೋನ್‌ ಅಲ್ಲ. ಅದು ಐಫೋನ್ ಆಕಾರದ ಕಾಫಿ ಟೇಬಲ್ ಆಗಿದ್ದು, ಅದರ ಬಗ್ಗೆ ವಿವರಣೆಯನ್ನು ಸಹ ನೀಡಲಾಗಿದೆ.

ಐಫೋನ್‌

ಇನ್ನು ಈ ಐಫೋನ್‌ ಟೇಬಲ್‌ ತುಂಬಾ ಕಡಿಮೆ ಬೆಲೆಯನ್ನು ಹೊಂದಿದೆ. ಐಫೋನ್‌ ಮಾದರಿಯಲ್ಲಿಯೇ ಇದಿದ್ದರಿಂದ ಆ ಬಾಲಕ ಐಫೋನ್‌ ಎಂಡುಕೊಂಡು ಖರೀದಿ ಮಾಡಿದ್ದಾನೆ. ಸದ್ಯ ಈ ದೈತ್ಯಾಕಾರದ ಐಫೋನ್‌ ಮಾದರಿಯ ಟೇಬಲ್‌ನ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿವೆ. ಆದರೂ ಬಾಲಕ ಮಾತ್ರ ಟೇಬಲ್‌ ಖರೀದಿಯಲ್ಲೇ ಸಂತೋಷ ಪಟ್ಟಿದ್ದಾನೆ. ಇನ್ನೂ ಈ ಕಾಫಿ ಟೇಬಲ್ ಐಫೋನ್ 6 ಎಸ್‌ನಂತೆ ಕಾಣುತ್ತದೆ ಆದರೆ ಗಾತ್ರದಲ್ಲಿ ತುಂಬಾ ದೊಡ್ಡದಾಗಿದೆ. ಇದು ಕಪ್ಪು ಬಣ್ಣದಲ್ಲಿರುವ ಸ್ಕ್ರೀನ್, ಟಚ್-ಐಡಿ ಮತ್ತು ನಕಲಿ ಮೈಕ್ ಅನ್ನು ಹೊಂದಿದೆ. ಪ್ರಸಿದ್ಧ ರೋಸ್ ಚಿನ್ನದ ಬಣ್ಣದಲ್ಲಿ ನಾಲ್ಕು ಕಾಲುಗಳನ್ನು ಬಿಳಿ ಬಣ್ಣದಲ್ಲಿ ಟೇಬಲ್ ನಲ್ಲಿ ಕಾಣಬಹುದು.

Most Read Articles
Best Mobiles in India

English summary
Teen ordered an iPhone but received an iPhone-shaped table.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X