ಭಾರತ ಸರ್ಕಾರದ ಸೂಚನೆಗೆ ವಾಟ್ಸಾಪ್‌ ನೀಡಿದ ಉತ್ತರ ಏನು ಗೊತ್ತಾ?

|

ಜನಪ್ರಿಯ ಇನ್ಸಟಂಟ್‌ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ ವಾಟ್ಸಾಪ್‌ ಹೊಸ ಸೇವಾ ನಿಯಮದ ವಿವಾದವನ್ನು ಎದುರಿಸುತ್ತಿದೆ. ಬಳಕೆದಾರರು ಗೌಪ್ಯತೆ ನೀತಿಯನ್ನು ಒಪ್ಪಿಕೊಳ್ಳಬೇಕು ಇಲ್ಲದಿದ್ದರೆ ಅವರ ಖಾತೆ ರದ್ದಾಗಲಿದೆ ಎಂಬ ವಾಟ್ಸಾಪ್‌ನ ಸಂದೇಶ ಈ ಎಲ್ಲಾ ರದ್ದಾಂತಕ್ಕೆ ಕಾರಣವಾಗಿದೆ. ಇನ್ನು ಭಾರತದಲ್ಲಿ ವಾಟ್ಸಾಪ್‌ ಅನ್ನು ಹೆಚ್ಚಿನ ಜನರು ಬಳಸುತ್ತಿದ್ದಾರೆ. ಇದೇ ಕಾರಣಕ್ಕೆ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ವಾಟ್ಸಾಪ್ ಗೆ ಸೇವಾ ನಿಯಮದಿಂದ ಹಿಂದೆ ಸರಿಯುವಂತೆ ಖಡಕ್‌ ಸೂಚನೆ ನೀಡಿತ್ತು. ಇದಕ್ಕೆ ವಾಟ್ಸಾಪ್‌ ಸರ್ಕಾರಕ್ಕೆ ಉತ್ತರವನ್ನು ನೀಡಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಹೊಸ ಗೌಪ್ಯತೆ ನೀತಿಯನ್ನು ಭಾರತದಲ್ಲಿ ಜಾರಿಗೊಳಸುವುದರಿಂದ ಹಿ0ದೆ ಸರಿಯಬೇಕು. ಹೊಸ ಗೌಪ್ಯತೆ ನೀತಿ "ಭಾರತೀಯ ನಾಗರಿಕರ ಆಯ್ಕೆ ಮತ್ತು ಸ್ವಾಯತ್ತತೆಗೆ ಉಂಟಾಗುವ ಪರಿಣಾಮಗಳ ಬಗ್ಗೆ ಗಂಭೀರ ಕಳವಳವನ್ನು ಉಂಟುಮಾಡುತ್ತದೆ" ಎಂದು ಸರ್ಕಾರ ವಾಟ್ಸಾಪ್‌ ಸಿಇಒ ವಿಲ್ ಕ್ಯಾಥ್‌ಕಾರ್ಟ್‌ಗೆ ಪತ್ರವೊಂದನ್ನು ಕಳುಹಿಸಿತ್ತು. ಇದಕ್ಕೆ ವಾಟ್ಸಾಪ್‌ ಇದೀಗ ಉತ್ತರವನ್ನು ನೀಡಿದೆ. ಹಾಗಾದ್ರೆ ವಾಟ್ಸಾಪ್‌ ಸರ್ಕಾರಕ್ಕೆ ನೀಡಿದ ಉತ್ತರವೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್

ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್‌ ಅಂತಿಮವಾಗಿ ಭಾರತ ಸರ್ಕಾರಕ್ಕೆ ಉತ್ತರವನ್ನು ನೀಡಿದೆ. ಸರ್ಕಾರಕ್ಕೆ ನೀಡಿದ ಮಾಹಿತಿಯಲ್ಲಿ ನಾವು ಈ ಹೊಸ ಅಪ್‌ಡೇಟ್ ಮೂಲಕ ಫೇಸ್‌ಬುಕ್‌ನೊಂದಿಗೆ ಡೇಟಾವನ್ನು ಹಂಚಿಕೊಳ್ಳುವ ನಮ್ಮ ಸಾಮರ್ಥ್ಯವನ್ನು ವಿಸ್ತರಿಸುವುದಿಲ್ಲ. ವ್ಯವಹಾರಗಳೊಂದಿಗೆ ತೊಡಗಿಸಿಕೊಳ್ಳಲು ಪಾರದರ್ಶಕತೆ ಮತ್ತು ಹೊಸ ಆಯ್ಕೆಗಳನ್ನು ಒದಗಿಸುವುದು ನಮ್ಮ ಉದ್ದೇಶ, ಇದರಿಂದ ಅವರು ತಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸಬಹುದು ಮತ್ತು ಬೆಳೆಯಬಹುದು ಎಂದು ಹೇಳಿದೆ.

ವಾಟ್ಸಾಪ್

ಇದಲ್ಲದೆ ವಾಟ್ಸಾಪ್ ಯಾವಾಗಲೂ ವೈಯಕ್ತಿಕ ಸಂದೇಶಗಳನ್ನು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನೊಂದಿಗೆ ರಕ್ಷಿಸುತ್ತದೆ. ಇದರಿಂದ ವಾಟ್ಸಾಪ್ ಅಥವಾ ಫೇಸ್‌ಬುಕ್ ಎರಡೂ ಕೂಡ ಈ ಸಂದೇಶಗಳನ್ನು ನೋಡಲು ಸಾಧ್ಯವಿಲ್ಲ. ಈಗಾಗಲೇ ಬಳಕೆದಾರರು ತಪ್ಪು ಮಾಹಿತಿಯನ್ನು ತಿಳಿದುಕೊಂಡಿದ್ದು ಇದನ್ನು ಪರಿಹರಿಸಲು ನಾವು ಕೆಲಸ ಮಾಡುತ್ತಿದ್ದೇವೆ. ಜೊತೆಗೆ ಬಳಕೆದಾರರ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಲಭ್ಯವಿರುತ್ತೇವೆ ಎಂದಿದೆ. ಇನ್ನು ವಾಟ್ಸಾಪ್ ಗೌಪ್ಯತೆ ನೀತಿ ವಿವಾದದ ಮಧ್ಯೆ, ಸಿಗ್ನಲ್ ಮತ್ತು ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್‌ಗಳು ಸಹ ವ್ಯಾಪಕ ಜನಪ್ರಿಯತೆಯನ್ನು ಗಳಿಸುತ್ತಿರೋದು ಕೂಡ ವಾಟ್ಸಾಪ್‌ಗೆ ನುಂಗಲಾರದ ತುತ್ತಾಗಿದೆ.

ವಾಟ್ಸಾಪ್‌

ಇನ್ನು ಈಗಾಗಲೇ ವಾಟ್ಸಾಪ್‌ಗೆ ನೋ ಎಂದು ಸಿಗ್ನಲ್‌ ಆಪ್‌ನತ್ತ ಮುಖ ಮಾಡುತ್ತಿರುವ ಬಳಕೆದಾರರಿಗೆ ವಾಟ್ಸಾಪ್‌ ಮನವಿ ಮಾಡಿಕೊಲ್ಳುತ್ತಿದೆ. ಈಗಾಗಲೇ ಬಳಕೆದಾರರಿಗೆ ಮಾಹಿತಿ ನೀಡುವ ಸಲುವಾಗಿ ತನ್ನದೇ ಆದ ಸ್ಟೇಟಸ್‌ ಮೂಲಕ ಪ್ರಚಾರ ಮಾಡುತ್ತಿದೆ. ಅಲ್ಲದೆ ಹೊಸ ಸೇವಾ ನಿಯಮವನ್ನು ಸ್ವೀಕರಿಸುವ ಗಡುವನ್ನು ಮೇ 15 ಕ್ಕೆ ವಿಸ್ತರಿಸಿದೆ. ಈ ಮೂಲಕ ಇನ್ನಷ್ಟು ದಿನ ಬಳಕೆದಾರರಿಗೆ ಹೊಸ ಸೇವಾ ನಿಯಮದ ಬಗ್ಗೆ ಮನವರಿಕೆ ಮಾಡಿಕೊಡಲು ಮುಂದಾಗಿದೆ.

Most Read Articles
Best Mobiles in India

English summary
Here's WhatsApp's reply to Indian government.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X