Just In
Don't Miss
- News
Breaking news: ಕನ್ನಡ ಕಿರುತೆರೆ ನಟಿ ಚೇತನಾ ರಾಜ್ ನಿಧನ
- Lifestyle
Today Rashi Bhavishya: ಮಂಗಳವಾರದ ದಿನ ಭವಿಷ್ಯ: ಮೇಷ, ಮಿಥುನ, ಸಿಂಹ, ವೃಶ್ಚಿಕ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಉತ್ತಮ ಸಮಯ
- Sports
DC vs PBKS: ಕೊನೆಯ ನಿಮಿಷದಲ್ಲಿ ಸ್ಟ್ರೈಕ್ ಬದಲಿಸಿ ಗೋಲ್ಡನ್ ಡಕೌಟ್ ಆದ ಡೇವಿಡ್ ವಾರ್ನರ್
- Movies
ಹೆಣ್ ಮಕ್ಕಳ ದಿಲ್ ಕದ್ದ ಅಭಿನವ್: ಹ್ಯಾಂಡ್ಸಮ್ ಹುಡುಗನ ಕಲರ್ ಫುಲ್ ಜಗತ್ತು ಹೇಗಿದೆ?
- Finance
ಮೇ 16ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಆಕರ್ಷಕ ಬೆಲೆಯಲ್ಲಿ ಅತ್ಯಧಿಕ ಮೈಲೇಜ್ ಪ್ರೇರಿತ ಡಿ15 ಇವಿ ಸ್ಕೂಟರ್ ಬಿಡುಗಡೆಗೊಳಿಸಿದ ಬಿಗೌಸ್
- Education
Oil India Recruitment 2022 : 16 ನರ್ಸಿಂಗ್ ಟ್ಯೂಟರ್ ಮತ್ತು ಇತರೆ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಮೆರಿಕಾದಲ್ಲಿ 5G ನೆಟ್ವರ್ಕ್ನಿಂದ ವಿಮಾಯಾನ ಸ್ಥಗಿತ? ಕಾರಣ ಏನು?
ಜಗತ್ತಿನಲ್ಲಿ 5G ನೆಟ್ವರ್ಕ್ನ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಹೈಸ್ಪೀಡ್ ಇಂಟರ್ನೆಟ್ ವೇಗ ನೀಡುವ 5G ಯಿಂದ ಏನೆಲ್ಲಾ ಉಪಯೋಗ, ಪರಿಣಾಮ ಎಂದೆಲ್ಲಾ ಚರ್ಚೆ ನಡೆಯುತ್ತಿದೆ. ಭಾರತದಲ್ಲಿಯೂ ಕೂಡ 5G ನೆಟ್ವರ್ಕ್ ಪ್ರಾರಂಭಕ್ಕೆ ಸಾಕಷ್ಟು ಸಿದ್ದತೆ ನಡೆಯುತ್ತಿದೆ. ಆದರೆ ಇದೇ ಸಂದರ್ಭದಲ್ಲಿ 5G ನೆಟ್ವರ್ಕ್ನಿಂದ ಅಮೆರಿಕಾದ ವೈಮಾನಿಕ ಕ್ಷೇತ್ರದಲ್ಲಿ ಹೊಸ ಸವಾಲ ಎದುರಾಗಿದೆ. ಅಮೆರಿಕಾದಲ್ಲಿ 5G ಕಾರಣದಿಂದಾಗಿ ವಿಮಾನಯಾನವನ್ನು ಸ್ಥಗಿತಗೊಳಿಸಿದ ಘಟನೆ ಕೂಡ ವರದಿಯಾಗಿದೆ. ಅಲ್ಲದೆ ವಿಮಾನಯಾನ ಸಂಸ್ಥೆಗಳು 5G ನೆಟ್ವರ್ಕ್ ಬಗ್ಗೆ ಅಕ್ಷೇಪ ವ್ತಕ್ತಪಡಿಸಿವೆ.

ಹೌದು, 5G ನೆಟ್ವರ್ಕ್ ಕಾರಣದಿಂದಾಗಿ ಅಮೆರಿಕಾದ ವಿಮಾನಯಾನ ಕ್ಷೇತ್ರದಲ್ಲಿ ಸಾಕಷ್ಟು ತೊಂದರೆಗಳು ಸೃಷ್ಟಿಯಾಗಿವೆ. 5G ನೆಟ್ವರ್ಕ್ ಸೃಷ್ಟಿಸಿರುವ ಹೊಸ ಸಮಸ್ಯೆಯಿಂದಾಗಿ ವಿಮಾನಗಳು ಹಾರಾಟ ನಡೆಸುವುದು ಕಷ್ಟ ಸಾಧ್ಯ ಎಂದು ಅನೇಕ ಕಂಪೆನಿಗಳು ವಿಮಾನಯಾನವನ್ನು ರದ್ದುಮಾಡಿವೆ. ಈಗಾಗಲೇ ಡಜನ್ಗಟ್ಟಲೆ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೆ ಹಾರಾಟದ ಸಮಯವನ್ನು ರಿಶೆಡ್ಯೂಲ್ ಮಾಡಲಾಗಿದೆ. ಏರ್ ಇಂಡಿಯ್ ಏರ್ಲೈನ್ಸ್ ಕೂಡ ಅಮೆರಿಕಾದಲ್ಲಿ ನೆನ್ನೆ ತನ್ನ ಹಾರಾಟವನ್ನು ರದ್ದುಗೊಳಿಸಿದೆ. ಹಾಗಾದ್ರೆ 5G ಯಿಂದ ವಿಮಾನಯಾನಕ್ಕೆ ತೊಂದರೆ ಆಗುತ್ತಾ? ಅಮೆರಿಕಾದಲ್ಲಿ ಉಂಟಾಗಿರುವ ಸಮಸ್ಯೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆರಿಕಾದಲ್ಲಿ 5G ರೂಲ್ ಔಟ್ ಮಾಡುವುದಕ್ಕೆ ಎಲ್ಲಾ ರೀತಿಯ ಸಿದ್ದತೆ ನಡೆದಿದೆ. ಇದಕ್ಕಾಗಿ ಅಮರಿಕಾದ ಜನಪ್ರಿಯ ಟೆಲಿಕಾಂ ಕಂಪೆನಿಗಳಾದ AT&T ಮತ್ತು ವೆರಿಝೋನ್ ಕಮ್ಯುನಿಕೇಷನ್ಸ್ ದೇಶದಲ್ಲಿ ಸಿ ಬ್ಯಾಂಡ್ 5G ವಾಯರ್ಲೆಸ್ ಸರ್ವಿಸ್ ಪ್ರಾರಂಭಿಸಲು ಮುಂದಾಗಿವೆ. ಆದರೆ ದೇಶದಲ್ಲಿ 5G ಸೇವೆ ಶುರುವಾಗುವ ಮುನ್ನವೇ ವಿಮಾನಯಾನ ಕ್ಷೇತ್ರಕ್ಕೆ ಹೊಸ ಸಮಸ್ಯೆ ಎದುಆರಗಿದೆ. ಈ 5G ನೆಟ್ವರ್ಕ್ನಿಂದಾಗಿ ವಿಮಾನ ಮತ್ತು ಹೆಲಿಕಾಪ್ಟರ್ಗಳಲ್ಲಿರುವ ಅಲ್ಟಿಮೀಟರ್ಗಳಿಗೆ ಸಮಸ್ಯೆ ಎದುರಾಗಲಿದೆ ಎನ್ನಲಾಗಿದೆ. ಇದರಿಂದ ವಿಮಾನವನ್ನು ಲ್ಯಾಂಡಿಂಗ್ ಮಾಡುವಾಗ ಸಮಸ್ಯೆ ಎದುರಾಗಲಿದೆ. ಇದರಿಂದ ಸಾಕಷ್ಟು ಅಪಘಾತಗಳು ಉಂಟಾಗುವ ಸಾದ್ಯತೆ ಇದೆ ಎಂದು ಏರ್ಲೈನ್ಸ್ ಸಂಸ್ಥೆಗಳು ಹೇಳುತ್ತಿವೆ.

ಇದೇ ಕಾರಣಕ್ಕೆ ಅಮರಿಕಾದಲ್ಲಿ 5G ಮೊಬೈಲ್ ಸೇವೆಗಳ ನಿಯೋಜನೆಯ ಬಗ್ಗೆ ಏರ್ಲೈನ್ಗಳು ಮತ್ತು ಟೆಲಿಕಾಂ ಕಂಪನಿಗಳ ನಡುವೆ ವಿವಾದ ಶುರುವಾಗಿದೆ. ಯುಎಸ್ ಏರ್ಲೈನ್ಸ್ ಮತ್ತು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ 5G ಯಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡಿವೆ. ಇದರಿಂದ ಅಮೆರಿಕಾದ ವಿಮಾನಯಾನ ಕ್ಷೇತ್ರದಲ್ಲಿ ಅಲ್ಲೊಲ ಕಲ್ಲೊಲ ಸೃಷ್ಟಿಯಾಗಿದೆ. ಇದರ ನಡುವೆ ಇದೀಗ ಯುಎಸ್ ಏರ್ಪೋರ್ಟ್ ಪ್ರದೇಶದಲ್ಲಿ 5G ಬ್ಯಾಂಡ್ ಅನ್ನು ಅಳವಡಿಸಬಾರದು ಎನ್ನುವ ಕೂಗ ಎದ್ದಿದೆ. ಈಗಾಗಲೇ ಏಷ್ಯಾ ಮತ್ತು ಮಧ್ಯಪ್ರಾಚ್ಯ ಹಾಗೂ ಯುರೋಪ್ನಲ್ಲಿನ ಹಲವಾರು ವಿಮಾನಯಾನ ಸಂಸ್ಥೆಗಳು ಅಮೆರಿಕಾಗೆ ತೆರಳುವ ವಿಮಾನಗಳನ್ನು ರದ್ದುಗೊಳಿಸುತ್ತಿದ್ದೇವೆ ಎಂದು ಹೇಳಿವೆ.

ವಿಮಾನಯಾನ ಸಂಸ್ಥೆಗಳು ಏಕೆ ಭಯಪಡುತ್ತವೆ?
5G ನೆಟ್ವರ್ಕ್ಗಳಿಗೆ ಬಳಸಲಾಗುವ C-ಬ್ಯಾಂಡ್ ಪ್ರಿಕ್ವೆನ್ಸಿಗಳು ವಿಮಾನಗಳ ಆಲ್ಟಿಮೀಟರ್ಗಳ ಮೇಲೆ ಪ್ರಭಾವ ಬೀರುವ ಸಾದ್ಯತೆ ಇದೆ. ಇದರಿಂದ ವಿಮಾನ ಅಪಘಾತಗಳು ಸಂಭವಿಸಲಿದೆ ಎನ್ನಲಾಗಿದೆ. 5G ತರಂಗಗಳಿಂದ ವಿಮಾನಯಾನದ ರೆಡಾರ್ಗಳಿಗೆ ತಪ್ಪು ಸಂದೇಶ ನೀಡಲಿವದ್ದು, ಇದರಿಂದ ವಿಮಾನ ಲ್ಯಾಂಡಿಂಗ್ ಸಮಸ್ಯೆಗಳು ಎದುರಾಗಲಿವೆ. ಇವುಗಳಿಂದ ದೊಡ್ಡ ಅಪಘಾತಗಳು ಸಂಭವಿಸಲಿವೆ. ಇಂತಹ ಅಲ್ಟಿಮೀಟರ್ಗಳು 4.2-4.4GHz ನಡುವೆ ಕೆಲಸ ನಡೆಸಲಿವೆ. ಅಮೆರಿಕಾದಲ್ಲಿ AT&T ಮತ್ತು ವೆರಿಝೋನ್ ಕಮ್ಯುನಿಕೇಷನ್ಸ್ ಲೈಸೆನ್ಸ್ ಪಡೆದಿರುವ 5G ಸಿ ಬ್ಯಾಂಡ್ ನೆಟ್ವರ್ಕ್ 3.7 ಮತ್ತು 3.98 GHz ನಡುವೆ ಕೆಲಸ ಮಾಡಲಿವೆ. ವಿಮಾನದ ಅಲ್ಟಿಮೀಟರ್ ಹಾಗೂ 5G ಬ್ಯಾಂಡ್ನ GHz ಅಂತರ ಹತ್ತಿರದಲ್ಲಿರುವುದರಿಂದ ವಿಮಾನದ ಅಲ್ಟಿಮೀಟರ್ ನಲ್ಲಿ ಸಮಸ್ಯೆಯಾಗಲಿದೆ ಅನ್ನೊದು ಏರ್ಲೈನ್ಸ್ಗಳ ವಾದವಾಗಿದೆ.

5G ಇರುವ ದೇಶಗಳಲ್ಲಿ ಈ ಸಮಸ್ಯೆ ಇದೆಯಾ?
ಈಗಾಗಲೇ ಯುರೋಪಿಯನ್ ಯೂನಿಯನ್, ದಕ್ಷಿಣ ಕೋರಿಯಾ, ಚೀನಾ, ಜಪಾನ್ ಸೇರಿದಂತೆ ವಿಶ್ವದ 40ಕ್ಕೂ ಅಧಿಕ ದೇಶಗಳಲ್ಲಿ 5G ನೆಟ್ವರ್ಕ್ ಲಭ್ಯವಿದೆ. ಈ ದೇಶಗಳಲ್ಲಿ ವಿಮಾನಯಾನ ನಡೆಸಲು 5Gಯಿಂದ ಯಾವುದೇ ಸಮಸ್ಯೆ ಸೃಷ್ಟಿಯಾಗಿಲ್ಲ. ಯಾವುದೇ ದೇಶದಲ್ಲೂ 5Gಯಿಂದ ವಿಮಾನಗಳಿಗೆ ಅಪಘಾತವಾಗಿಲ್ಲ. ಆದರೆ ಅಮೆರಿಕಾದಲ್ಲಿ ಹರಾಜಿಗಿರುವ 5Gಫ್ರಿಕ್ವೆನ್ಸಿಗಿಂತ ಇತರೆ ದೇಶದಲ್ಲಿರುವ 5G ಫ್ರಿಕ್ವೆನ್ಸಿ ಕಡಿಮೆ ಇದೆ. ಇದೇ ಕಾರಣಕ್ಕೆ ಬೇರೆ ದೇಶಗಳಲ್ಲಿ ಯಾವುದೇ ಸಮಸ್ಯೆಯಿಲ್ಲ. ಆದರೆ ಅಮೆರಿಕಾದಲ್ಲಿ 5G ಫ್ರಿಕ್ವೆನ್ಸಿ ಹೆಚ್ಚಾಗಿರುವುದರಿಂದ ವಿಮಾನಯಾನಕ್ಕೆ ಸಮಸ್ಯೆಯಾಗಲಿದೆ ಎನ್ನಲಾಗಿದೆ.

ಇದಕ್ಕೆ ಪರಿಹಾರ ಏನು?
ಸದ್ಯ ಅಮೆರಿಕಾದಲ್ಲಿ ಸೃಷ್ಟಿಯಾಗಿರುವ ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಏರ್ಪೋರ್ಟ್ ನ ಸುತ್ತಮುತ್ತಾ ನಾಲ್ಕು ಕಿಲೋಮೀಟರ್ ತನಕ 5G ಸಿ ಬ್ಯಾಂಡ್ ಅಳವಡಿಸಲದಿರಲು ನಿರ್ಧರಿಸಲಾಗಿದೆ. ಈ ನಿರ್ಧಾರವನ್ನು ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಕೂಡ ಸ್ವಾಗತಿಸಿದ್ದಾರೆ. ಆದರೆ ಇದು ತಾತ್ಕಾಲಿಕ ನಿರ್ಧಾರವಾಗಿದ್ದು ಮುಂದಿನ ದಿನಗಳಲ್ಲಿ ಏರ್ಪೋರ್ಟ್ನಲ್ಲಿಯೂ 5G ಲಭ್ಯವಾಗಲಿದೆ ಎನ್ನುವ ಮಾತನ್ನು ಅಲ್ಲಿನ ಟೆಲಿಕಾಂ ಕಂಪೆನಿಗಳು ಹೇಳಿಕೊಂಡಿವೆ.ಈ ಕಾರಣದಿಂದ ಅಮೆರಿಕಾದಲ್ಲಿ ವಿಮಾನಯಾನ ಮತ್ತೆ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿವಾದ ಏನಾಗಲಿದೆ ಅನ್ನೊದನ್ನ ಕಾದು ನೋಡಬೇಕಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999