Just In
Don't Miss
- News
ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ; ಎಲ್ಲಾ ಆರೋಪಿಗಳ ಎನ್ ಕೌಂಟರ್
- Movies
ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಪುನೀತ್ ರಾಜ್ ಕುಮಾರ್ ವರ್ಕೌಟ್ ವಿಡಿಯೋ
- Lifestyle
ಶುಕ್ರವಾರವಾದ ದಿನ ಭವಿಷ್ಯ 6-12-2019
- Sports
ರನ್ ಬೆನ್ನತ್ತುವ ಪರೀಕ್ಷೆಗೆ ಭಾರತ ಸಿದ್ದ: ವಿರಾಟ್ ಕೊಹ್ಲಿ
- Automobiles
ಜನವರಿ 1ರಿಂದ ಟಾಟಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ
- Finance
ವಿಶ್ವದ ಬೃಹತ್ ಕಂಪನಿಗಳನ್ನು ಮುನ್ನಡೆಸುತ್ತಿರುವ ಟಾಪ್ 10 ಭಾರತೀಯರು
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
- Travel
ಭಾರತದಲ್ಲಿ ಖಗೋಳ ಛಾಯಾಚಿತ್ರಗ್ರಹಣ ಮಾಡಲು ಇಲ್ಲಿವೆ ಬೆಸ್ಟ್ ಸ್ಥಳಗಳು
ನಿಮ್ಮ ಅನಾರೋಗ್ಯಕ್ಕೆ ನೇರ ಕಾರಣ ಹೈಸ್ಪೀಡ್ ಇಂಟರ್ನೆಟ್!!
ಒಂದು ಒಳ್ಳೆಯದರ ಹಿಂದೆ ಇನ್ನೊಂದು ಕೆಟ್ಟದಿರುತ್ತದೆ ಎಂದು ಹೇಳಲಾಗುತ್ತದೆ. ಹಾಗೆಯೇ ಈ ತಂತ್ರಜ್ಞಾನ ಕೂಡ ತಾನು ಬೆಳೆದಂತೆ ಅದರ ಜೊತೆಜೊತೆಗೆ ಒಂದಷ್ಟು ಸಮಸ್ಯೆಗಳನ್ನು ಕೂಡ ಹೊತ್ತು ತರುತ್ತಿದೆ ಎಂಬುದು ದಿಟವಾದ ಸಂಗತಿ. ಏಕೆಂದರೆ, ದಿನದಿಂದ ದಿನಕ್ಕೆ ಅಂತರ್ಜಾಲದ ವೇಗ ಹೆಚ್ಚಾಗುತ್ತಿದೆ. ಅದನ್ನು ಬಳಕೆ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಈಗ ಎಲ್ಲರೂ ಆತಂಕಪಡಬೇಕಾದ ಮಾಹಿತಿಯೊಂದನ್ನು ಹೊಸ ಅಧ್ಯಯನವು ಹೊರಹಾಕಿದೆ.
ಹೌದು, ನೀವೇನಾದರೂ ಹೈ ಸ್ಪೀಡ್ ಇಂಟರ್ನೆಂಟ್ಅನ್ನು ಬಳಸುತ್ತಿದ್ದರೆ, ನಿಮ್ಮ ನಿದ್ದೆಯ ಅವಧಿ ಮತ್ತು ಅದರ ಗುಣಮಟ್ಟ ಹಾಳಾಗುತ್ತೆ ಎಂಬ ವಿಷಯವನ್ನು ಅಧ್ಯಯನವೊಂದು ಹೇಳುತ್ತಿದೆ. ಜರ್ನಲ್ ಆಫ್ ಎಕನಾಮಿಕ್ ಬಿಹೇವಿಯರ್ ಮತ್ತು ಆರ್ಗನೈಸೇಷನ್ ನಡೆಸಿರುವ ಅಧ್ಯಯನದ ಪ್ರಕಾರ ಡಿಎಸ್ಎಲ್ (ಡಿಜಿಟಲ್ ಸಬ್ ಸ್ಕ್ರೈಬರ್ ಲೈನ್) ಬಳಸುವವರು, ಡಿಎಸ್ಎಲ್ ಇಂಟರ್ನೆಟ್ ಬಳಸದೇ ಇರುವವರಿಗಿಂತ 25 ನಿಮಿಷ ಕಡಿಮೆ ನಿದ್ದೆಯನ್ನು ಮಾಡುತ್ತಾರೆ ಎಂದು ಹೇಳಲಾಗಿದೆ.
ಹೆಚ್ಚು ವೇಗದ ಅಂತರ್ಜಾಲ ಸಂಪರ್ಕ ಬಳಸುವುದರ ಪರಿಣಾಮದಿಂದಾಗಿ ಆ ವ್ಯಕ್ತಿಯ ನಿದ್ದೆಯ ಸಮಯವು ಕುಂಠಿತಗೊಳ್ಳುತ್ತದೆ ಮತ್ತು ನಿದ್ದೆಯ ತೃಪ್ತಿಯು ಅವರಿಗೆ ಲಭ್ಯವಾಗುವುದಿಲ್ಲ. ಏಕೆಂದರೆ ಅವರು ಮಾರನೆಯ ದಿನ ಬೆಳಿಗ್ಗೆ ಕುಟುಂಬ ಅಥವಾ ಕೆಲಸದ ಕಾರಣದಿಂದ ಬೇಗನೆ ಏಳುತ್ತಾರೆ ಎಂದಿರುವ ಅಧ್ಯಯನವೊಂದು ಎಲ್ಲರೂ ಯೋಚಿಸಬೇಕಾಗಿರುವ ಒಂದು ಸಂಗತಿಯೊಂದನ್ನು ಬಹಿರಂಗಪಡಿಸಿದೆ. ಇದು ಇಂದಿನ ಸ್ಮಾರ್ಟ್ಫೋನ್ ಬಳಕೆದಾರರನ್ನು ನೇರವಾಗಿ ಎಚ್ಚರಿಸುವಂತಿದೆ.

ಏನಿದು ಎಚ್ಚರಿಕೆಯ ಅಧ್ಯಯನ?
ಇಟಲಿಯ ಬೊಕ್ಕೊನಿ ವಿಶ್ವವಿದ್ಯಾಲಯ ನಡೆಸಿರುವ ಅಧ್ಯಯನ ಮತ್ತು ಯುಎಸ್ ನ ಪಿಟ್ಸ್ಬರ್ಗ್ ವಿಶ್ವವಿದ್ಯಾಲಯ ಹೇಳುವಂತೆ ಹೆಚ್ಚು ವೇಗದ ಅಂತರ್ಜಾಲ ಸಂಪರ್ಕ ಬಳಸುವುದರ ಪರಿಣಾಮದಿಂದಾಗಿ ಆ ವ್ಯಕ್ತಿಯ ನಿದ್ದೆಯ ಸಮಯವು ಕುಂಠಿತಗೊಳ್ಳುತ್ತದೆ ಮತ್ತು ನಿದ್ದೆಯ ತೃಪ್ತಿಯು ಅವರಿಗೆ ಲಭ್ಯವಾಗುವುದಿಲ್ಲ ಎಂದು ಹೇಳಿದೆ. ಇದು ಅನಾರೋಗ್ಯಕ್ಕೆ ಕಾರಣವಾಗಿದೆ.

ಒಟ್ಟಾರೆ ನಿದ್ದೆಯ ಮೇಲೆ ಕೆಟ್ಟ ಪರಿಣಾಮ
ಡಿಜಿಟಲ್ ಸಾಧನಗಳ ಬಳಕೆಯ ಅಭ್ಯಾಸವು ನಿದ್ದೆಯ ಸಮಯದ ಮೇಲೆ ಮತ್ತು ಒಟ್ಟಾರೆ ನಿದ್ದೆಯ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ ಮತ್ತು ಇದು ಮನುಷ್ಯನ ಒಟ್ಟಾರೆ ಆರೋಗ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ. ಅದರಲ್ಲೂ 13 ರಿಂದ 30 ವರ್ಷ ವಯಸ್ಸಿನವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತಿದೆ ಎಂಬುದು ಅಧ್ಯಯನಕಾರರು ಹೇಳಿದ್ದಾರೆ.

ನೇರವಾಗಿ ಡಿಎಸ್ಎಲ್ ಕಾರಣ
ಡಿಎಸ್ಎಲ್ (ಡಿಜಿಟಲ್ ಸಬ್ ಸ್ಕ್ರೈಬರ್ ಲೈನ್) ಎಂಬುದುಮನೆಗಳಿಗೆ ಮತ್ತು ಸಣ್ಣ ಬ್ಯುಸಿನೆಸ್ ಜಾಗಗಳಿಗೆ ಇಂಟರ್ನೆಟ್ ಸೌಲಭ್ಯ ಕಲ್ಪಿಸುವ ಒಂದು ತಂತ್ರಜ್ಞಾನವಾಗಿದೆ. ಇದನ್ನು ಹೆಚ್ಚಾಗಿ ಬಳಸುವವರು ರಾತ್ರಿ ಬೇಗ ನಿದ್ದೆ ಮಾಡುತ್ತಿಲ್ಲ. ಏಕೆಂದರೆ ಅವರು ಮಾರನೆಯ ದಿನ ಬೆಳಿಗ್ಗೆ ಕುಟುಂಬ ಅಥವಾ ಕೆಲಸದ ಕಾರಣದಿಂದ ಬೇಗನೆ ಏಳುತ್ತಾರೆ ಎಂದು ಅಧ್ಯಯನವು ಹೇಳಿದೆ.

ಅನಾರೋಗ್ಯಕ್ಕೆ ನೇರ ಕಾರಣ.
ಮೊಬೈಲ್ ನೋಡುವುದು, ಟಿವಿ ನೋಡುವುದು, ಕಂಪ್ಯೂಟರ್ ಗೇಮ್ಸ್ ಇತ್ಯಾದಿಗಳನ್ನು ಹೈ ಸ್ಪೀಡ್ ಇಂಟರ್ನೆಂಟ್ ಬಳಸಿ ಇವರು ಮಾಡುತ್ತಾರೆ ಮತ್ತು ನಿದ್ದೆಯನ್ನು ಹಾಳು ಮಾಡಿಕೊಳ್ಳುತ್ತಾರೆ. ಹೀಗೆ ನಿದ್ದೆಯಲ್ಲಿ ಅತೃಪ್ತಿಯನ್ನು ಅನುಭವಿಸುವುದು ಹಲವು ಅನಾರೋಗ್ಯಕೆ ಕಾರಣವಾಗಲಿದೆ. ಇದು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಸಹ ಎದುರಾಗುತ್ತಿದೆ ಎಂದು ಹೇಳಲಾಗಿದೆ.

ಪ್ರೊಫೆಸರ್ ಓರ್ವರು ಹೇಳಿರುವುದೇನು?
ದಿನವಿಡೀ ಹೆಚ್ಚು ಸ್ಪೀಡ್ ಇರುವ ಇಂಟರ್ನೆಟ್ ಬಳಕೆ ಮಾಡುವುದು ಅಥವಾ ಮಲಗಿಕೊಂಡು ಕೂಡ ಅಂತರ್ಜಾಲವನ್ನು ಬಳಸುತ್ತಲೇ ಇರುವುದು ಕೆಲವರಿಗೆ ಅಭ್ಯಾಸವಾಗಿ ಬಿಟ್ಟಿದೆ. ಇದರಿಂದ ಅವರು ನಿದ್ದೆಯನ್ನು ತಪ್ಪಿಸಿಕೊಂಡು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಬೊಕ್ಕೊನಿ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿರುವ ಪ್ರ್ಯಾನ್ಸಿಸ್ಕೋ ಬಿಲ್ಲಾರಿ ಕೂಡ ಸಮರ್ಥಿಸಿಕೊಂಡಿದ್ದಾರೆ
-
29,999
-
14,999
-
28,999
-
37,430
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
37,430
-
15,999
-
25,999
-
46,354
-
19,999
-
17,999
-
9,999
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090
-
15,500