Just In
Don't Miss
- Finance
UAN ಸಂಖ್ಯೆ ಇಲ್ಲದೆ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
- News
ಕೊರೊನಾ ಕಥೆ: ಭಾರತದಲ್ಲಿ ಒಂದೇ ದಿನ 259170 ಮಂದಿಗೆ ಸೋಂಕು!
- Automobiles
ಆಕರ್ಷಕ ವಿನ್ಯಾಸದಲ್ಲಿ ಇಕ್ಯೂಬಿ ಎಲೆಕ್ಟ್ರಿಕ್ ಎಸ್ಯುವಿಯನ್ನು ಅನಾವರಣಗೊಳಿಸಿದ ಮರ್ಸಿಡಿಸ್ ಬೆಂಝ್
- Lifestyle
ಪ್ರತಿದಿನ ಲವಂಗ ಹಾಕಿದ ಬಿಸಿನೀರನ್ನು ಕುಡಿದರೆ ಸಿಗುವುದು ಈ ಆರೋಗ್ಯಕರ ಲಾಭಗಳು
- Sports
ಬ್ರಿಟನ್ನ ಕೆಂಪು ಪಟ್ಟಿಗೆ ಭಾರತ ಸೇರ್ಪಡೆ, WTC ಫೈನಲ್ಗೆ ತೊಡಕು?!
- Movies
ತಂದೆ-ತಾಯಿಯ ಮದುವೆ ರಹಸ್ಯ ಬಿಚ್ಚಿಟ್ಟ ನಟಿ ಕಂಗನಾ ರಣಾವತ್
- Education
International Labour Day 2021: ಮೇ 1ರಂದು ಕಾರ್ಮಿಕರ ದಿನವನ್ನಾಗಿ ಏಕೆ ಆಚರಿಸಲಾಗುತ್ತೆ ?
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹಾನರ್ 9A ಸ್ಮಾರ್ಟ್ಫೋನ್ ಬಿಡುಗಡೆ! ಐ ಕೇರ್ ಮೋಡ್ ಡಿಸ್ಪ್ಲೇ ವಿಶೇಷತೆ!
ಜನಪ್ರಿಯ ಸ್ಮಾರ್ಟ್ಫೋನ್ ತಯಾರಕರಲ್ಲಿ ಒಂದಾಗಿರುವ ಹಾನರ್ ಕಂಪೆನಿ ತನ್ನ ಹಾನರ್ 9A ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಟಿಯುವಿ ರೈನ್ಲ್ಯಾಂಡ್-ಪ್ರಮಾಣೀಕೃತ ಐ ಕೇರ್ ಮೋಡ್ ಅನ್ನು ಹೊಂದಿದೆ. ಇದರಿಂದ ಬಳಕೆದಾರರು ಫೋನ್ ಬಳಸುವಾಗ ಕಣ್ಣಿನ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಬೀರದಂತೆ ತಡೆಯುತ್ತದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ MT6762R SoC ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ V10 (Q) ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.

ಹೌದು, ಹಾನರ್ ಸಂಸ್ಥೆ ತನ್ನ ಹಾನರ್ 9A ಸ್ಮಾರ್ಟ್ಫೋನ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ ಹೊಸ ಮಾದರಿಯ ವಿನ್ಯಾಸವನ್ನು ಹೊಂದಿದ್ದು, 6.3 ಇಂಚಿನ ಡಿಸ್ಪ್ಲೇಯನ್ನ ಹೊಂದಿದೆ. ಅಲ್ಲದೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಅನ್ನು ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ಅಪ್ ಅನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್ಫೋನ್ ಯಾವೆಲ್ಲಾ ಫೀಚರ್ಸ್ಗಳನ್ನ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್ಪ್ಲೇ
ಹಾನರ್ 9A ಸ್ಮಾರ್ಟ್ಫೋನ್ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.3-ಇಂಚಿನ ಎಚ್ಡಿ + ಡಿಸ್ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್ಪ್ಲೇಯು ಫುಲ್ ವ್ಯೂ ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ ಇದು 278PPI ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. 20: 9 ರಚನೆಯ ಅನುಪಾತವನ್ನು ಹೊಂದಿದ್ದು, ಸ್ಕ್ರೀನ್-ಟು-ಬಾಡಿ 81.44% ಅನುಪಾತವನ್ನು ಹೊಂದಿದೆ.

ಪ್ರೊಸೆಸರ್
ಇನ್ನು ಈ ಸ್ಮಾರ್ಟ್ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ MT6762R SoC ಪ್ರೊಸೆಸರ್ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್ 10 ನಲ್ಲಿ ಮ್ಯಾಜಿಕ್ UI3.1 ಜೊತೆಗೆ ಕಾರ್ಯನಿರ್ವಹಿಸುತ್ತದೆ. ಇದರ ಜೊತೆಗೆ 3GB RAM ಮತ್ತು 64GB ಸಾಮರ್ಥ್ಯದ ಆಂತರಿಕ ಸಂಗ್ರಹ ಸಾಮರ್ಥ್ಯವನ್ನ ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಕ್ಯಾಮೆರಾ ವಿನ್ಯಾಸ
ಹಾನರ್ 9A ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ f/ 2.0 ಲೆನ್ಸ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇನ್ನು ಕ್ಯಾಮೆರಾ ಫೀಚರ್ಸ್ಗಳಲ್ಲಿ ಡಿಜಿಟಲ್ ಜೂಮ್, ಆಟೋ ಫ್ಲ್ಯಾಶ್, ಫೇಸ್ ಡಿಟೆಕ್ಷನ್, ಟಚ್ ದಿ ಫೋಕಸ್, ಫೀಚರ್ಸ್ಗಳನ್ನ ಹೊಂದಿದೆ.

ಬ್ಯಾಟರಿ ಮತ್ತು ಇತರೆ
ಇನ್ನು ಈ ಸ್ಮಾರ್ಟ್ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ಅಪ್ ಅನ್ನು ಹೊಂದಿದ್ದು, ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, ವೈ-ಫೈ, ಬ್ಲೂಟೂತ್ v5.0, GPS, FM ರೇಡಿಯೋ, ಮೈಕ್ರೋ-USB, ಮತ್ತು 3.5mm ಹೆಡ್ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಹಾನರ್ 9a ಸ್ಮಾರ್ಟ್ಫೋನ್ ಬೆಲೆ 9,999 ರೂ, ಆಗಿದ್ದು, ಹಾನರ್ 9a ಮಿಡ್ನೈಟ್ ಬ್ಲ್ಯಾಕ್ ಮತ್ತು ಫ್ಯಾಂಟಮ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಸದ್ಯ ಈ ಸ್ಮಾರ್ಟ್ಫೋನ್ ಅಮೆಜಾನ್ ಮೂಲಕ ಖರೀದಿಸಬಹುದಾಗಿದೆ. ಇನ್ನು ಹಾನರ್ 9a ಸ್ಮಾರ್ಟ್ಫೋನ್ ಆಗಸ್ಟ್ 6 ರಿಂದ ಬೆಳಿಗ್ಗೆ 11 ರಿಂದ ಲಭ್ಯವಾಗಲಿದೆ. ಅಲ್ಲದೆ ಹಾನರ್ 9a ನಲ್ಲಿ ಲಾಂಚ್ ಆಫರ್ಗಳು 1,000,ರೂ. ರಿಯಾಯಿತಿ ದೊರೆಯಲಿದೆ. ಎಚ್ಡಿಎಫ್ಸಿ ಬ್ಯಾಂಕ್ ಗ್ರಾಹಕರಿಗೆ ಹಾನರ್ 9a ಮೇಲೆ ಹೆಚ್ಚುವರಿ 10% ರಿಯಾಯಿತಿ ಸಹ ಇರುತ್ತದೆ. ಇದಲ್ಲದೆ, ಆರು ತಿಂಗಳವರೆಗೆ ನೋ ಕಾಸ್ಟ್ ಇಎಂಐ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999