ಭಾರತದಲ್ಲಿ ಹಾನರ್‌ ಸಂಸ್ಥೆಯ ಎರಡು ಹೊಸ ಸ್ಮಾರ್ಟ್‌ವಾಚ್‌ ಲಾಂಚ್‌!

|

ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿರುವ ಹಾನರ್‌ ಸಂಸ್ಥೆ ತನ್ನ ವೈವಿಧ್ಯಮಯ ಸ್ಮಾರ್ಟ್‌ವಾಚ್‌ಗಳಿಂದಲೂ ಸೈ ಎನಿಸಿಕೊಂಡಿದೆ. ಈಗಾಗಲೇ ಹಲವು ವಿಧದ ಸ್ಮಾರ್ಟ್‌ವಾಚ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿರುವ ಹಾನರ್‌ ಸಂಸ್ಥೆ ಇದೀಗ ಎರಡು ಹೊಸ ಸ್ಮಾರ್ಟ್‌ವಾಚ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಎರಡು ಹೊಸ ವಾಚ್‌ಗಳು ಹೊಸ ವಿನ್ಯಾಸವನ್ನು ಹೊಂದಿದ್ದು, ಹಾನರ್ ವಾಚ್ ES ಮತ್ತು ಹಾನರ್ ವಾಚ್ GS ಪ್ರೊ ಎಂದು ಹೆಸರಿಸಲಾಗಿದೆ.

ಹಾನರ್‌

ಹೌದು, ಹಾನರ್‌ ಸಂಸ್ಥೆ ತನ್ನ ಹಾನರ್ ವಾಚ್ ES ಮತ್ತು ಹಾನರ್ ವಾಚ್ GS ಪ್ರೊ ವಾಚ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ ಹಾನರ್ ವಾಚ್ ES SP02 ಮಾನಿಟರ್, ಹಾರ್ಟ್‌ಬೀಟ್‌ ಅನ್ನು ಮಾನಿಟರ್ ಫಿಚರ್ಸ್‌ ಹೊಂದಿದೆ. ಇನ್ನು ಹಾನರ್‌ ವಾಚ್‌ GS ಪ್ರೊ SPO2 ಮಾನಿಟರ್‌ ಜೊತೆಗೆ ವಾಟರ್‌ ಪ್ರೂಪ್‌ ವ್ಯವಸ್ಥೆಯನ್ನು ಸಹ ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ಗಳ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹಾನರ್ ವಾಚ್ ES

ಹಾನರ್ ವಾಚ್ ES

ಹಾನರ್ ವಾಚ್ ಇಎಸ್ ಸ್ಮಾರ್ಟ್‌ವಾಚ್‌ 456x280 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿದೆ. ಇದು 1.64 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಜೊತೆಗೆ ಇದು ಆಯತಾಕಾರದ ಆಕಾರದ ಸ್ಕ್ರೀನ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್ ವಾಚ್ 200 ಕ್ಕೂ ಹೆಚ್ಚು ವಾಚ್ ಫೇಸ್‌ ಅನ್ನು ನೀಡುತ್ತದೆ. ಅಲ್ಲದೆ ಇದು Always performing ಹೊಂದಿರುತ್ತದೆ. ಹಾನರ್ ವಾಚ್ ಇಎಸ್‌ನಲ್ಲಿ ನೀವು 12 ಆನಿಮೇಟೆಡ್ ತಾಲೀಮು ಕೋರ್ಸ್‌ಗಳು, 44 ಆನಿಮೇಟೆಡ್ ವ್ಯಾಯಾಮ ಚಲನೆಗಳು ಮತ್ತು 95 ತಾಲೀಮು ಮೋಡ್‌ಗಳನ್ನು ಸಹ ನೀಡಲಾಗಿದೆ. ಈ ಸ್ಮಾರ್ಟ್ ವಾಚ್ ಕೇವಲ 30 ನಿಮಿಷಗಳಲ್ಲಿ 70% ಚಾರ್ಜ್‌ ಜೊತೆಗೆ ಸಿಂಗಲ್‌ ಚಾರ್ಜ್‌ನಲ್ಲಿ 10 ದಿನಗಳವರೆಗೆ ಇರುತ್ತದೆ ಎಂದು ಹೇಳಲಾಗಿದೆ. ಅಲ್ಲದೆ ಈ ವಾಚ್ SP02 ಮಾನಿಟರ್, ಹೃದಯ ಬಡಿತ ಮಾನಿಟರ್ ಮತ್ತು ಸ್ಲೀಪ್ ಮಾನಿಟರ್‌ನೊಂದಿಗೆ ಬರುತ್ತದೆ.

ಹಾನರ್ ವಾಚ್ GS ಪ್ರೊ

ಹಾನರ್ ವಾಚ್ GS ಪ್ರೊ

ಹಾನರ್ ವಾಚ್ ಜಿಎಸ್ ಪ್ರೊ ಒರಟಾದ ಫಿನಿಶ್ ಹೊಂದಿದೆ. ಇದು 14 ರೀತಿಯ MIL-STD-810G ಪರೀಕ್ಷೆಗಳನ್ನು ಪಾಸು ಮಾಡಿದೆ ಎಂದು ಹೇಳಲಾಗಿದೆ. ಇನ್ನು ಈ ಸ್ಮಾರ್ಟ್ ವಾಚ್ ತಾಪಮಾನ-ಆರ್ದ್ರತೆ-ಎತ್ತರದ ಪ್ರತಿರೋಧ, ಉಪ್ಪು ಸಿಂಪಡಿಸುವಿಕೆ, ಮರಳು ಪ್ರತಿರೋಧ ಮತ್ತು ತೇವಾಂಶವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ವಾಚ್ ಜಿಎಸ್ ಪ್ರೊ ಸಿಂಗಲ್‌ ಚಾರ್ಜ್‌ನಲ್ಲಿ 25 ದಿನಗಳವರೆಗೆ ಬ್ಯಾಟರಿ ಅವಧಿಯ್ನು ನೀಡಲಿದೆ ಎಂದು ಹಾನರ್ ಹೇಳಿದೆ. ಇದು ಜಿಪಿಎಸ್ ರೂಟ್ ಬ್ಯಾಕ್ ಫೀಚರ್ಸ್‌ ಅನ್ನು ಹೊಂದಿದ್ದು, ಇದು ನಿಮ್ಮ ಪ್ರಯಾಣವನ್ನು ನೀವು ಎಲ್ಲಿಂದ ಪ್ರಾರಂಭಿಸಿದ್ದೀರಿ ಎಂಬುದನ್ನು ತೋರಿಸುತ್ತದೆ. ಜೊತೆಗೆ ಇದು 100 ಕ್ಕೂ ಹೆಚ್ಚು ತಾಲೀಮು ಮೋಡ್‌ಗಳು, ಅನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಹಾನರ್ ವಾಚ್ ES ಬೆಲೆ, 7,499 ರೂ, ಆಗಿದ್ದು ಇದು ಅಕ್ಟೋಬರ್ 17 ರಿಂದ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸಮಯದಲ್ಲಿ ಮಾರಾಟವಾಗಲಿದೆ. ಎಚ್‌ಡಿಎಫ್‌ಸಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳಲ್ಲಿ ನೋ ಕಾಸ್ಟ್‌ EMI ಆಯ್ಕೆಯಲ್ಲಿ 10% ತ್ವರಿತ ರಿಯಾಯಿತಿಯನ್ನು ಸಹ ಹೊಂದಿದೆ. ಇನ್ನು ಹಾನರ್ ವಾಚ್ GS ಪ್ರೊ 17,999 ಬೆಲೆಯನ್ನು ಹೊಂದಿದೆ. ಇದು ಅಕ್ಟೋಬರ್ 16 ರಂದು ಪ್ರಾರಂಭವಾಗಲಿರುವ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್‌ನಲ್ಲಿ ಮಾರಾಟವಾಗಲಿದೆ.

Most Read Articles
Best Mobiles in India

English summary
Honor has launched two new smartwatches in India. Honor Watch ES is the more regular offering while the Honor Watch GS Pro is designed for outdoor activities.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X