ಹಾನರ್ ಮ್ಯಾಜಿಕ್ ಇಯರ್‌ಬಡ್ಸ್ ಬಿಡುಗಡೆ!..ಅಧಿಕ ಬ್ಯಾಟರಿ ಲೈಫ್!

|

ಜನಪ್ರಿಯ ಹಾನರ್ ಸಂಸ್ಥೆಯು ಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ತನ್ನದೇ ಟ್ರೆಂಡ್‌ ಸೃಷ್ಠಿಸಿದೆ. ಇತ್ತೀಚಿಗಷ್ಟೆ ಸ್ಮಾರ್ಟ್‌ಫೋನ್ ಆಕ್ಸಸರಿಗಳತ್ತ ಹೆಚ್ಚಿನ ಒಲವನ್ನು ಹರಿಸಿರುವ ಸಂಸ್ಥೆಯು ಇದೀಗ ಹೊಸದಾಗಿ ಇಯರ್‌ಬಡ್ಸ್‌ ಬಿಡುಗಡೆ ಮಾಡಿದೆ. ಹಾನರ್‌ನ ನೂತನ ಇಯರ್‌ಬಡ್ಸ್‌ ಹೈಬ್ರಿಡ್ ನಾಯಿಸ್‌ ಕ್ಯಾನ್ಸಲೇಶನ್ ಫೀಚರ್ಸ್‌ ಪಡೆದಿರುವುದು ಪ್ರಮುಖ ಪ್ಲಸ್‌ ಪಾಯಿಂಟ್ ಆಗಿದೆ.

ಹಾನರ್ ಕಂಪನಿ

ಹೌದು, ಹಾನರ್ ಕಂಪನಿಯು ಈಗ ಹೊಸದಾಗಿ ಹಾನರ್ ಮ್ಯಾಜಿಕ್ ಇಯರ್‌ಬಡ್ಸ್ ಅನ್ನು ಲಾಂಚ್ ಮಾಡಿದೆ. ಈ ಇಯರ್‌ಬಡ್ಸ್‌ ಸಾಕಷ್ಟು ಅಪ್‌ಡೇಟ್ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ದೀರ್ಘ ಬಾಳಿಕೆಯ ಬ್ಯಾಟರಿ ಲೈಫ್‌ ಅನ್ನು ಪಡೆದಿದೆ. ಕಂಫರ್ಟ್‌ ರಚನೆಯೊಂದಿಗೆ EMUI 10 ಬೆಂಬಲಿತವಾಗಿರುವ ಈ ಬಡ್ಸ್‌ಗಳು ನೋಡಲು ಆಕರ್ಷಕವಾಗಿದ್ದು, ಪರ್ಲ್ ವೈಟ್ ಮತ್ತು ರಾಬಿನ್ ಎಗ್ ಬ್ಲೂ ಬಣ್ಣಗಳ ಆಯ್ಕೆಗಳನ್ನು ಹೊಂದಿದೆ.

ಮ್ಯಾಜಿಕ್ ಇಯರ್‌ಬಡ್ಸ್‌

ಹಾನರ್ ಮ್ಯಾಜಿಕ್ ಇಯರ್‌ಬಡ್ಸ್‌ 10mm ಆಡಿಯೋ ಡ್ರೈವರ್ಸ್‌ಗಳನ್ನು ಹೊಂದಿದ್ದು, ಅತ್ಯುತ್ತಮ ಸೌಂಡ್ ಹೊರಹಾಕಲಿವೆ. ಹಾಗೆಯೇ ಈ ಡಿವೈಸ್ A2DP 1.3, HFP 1.6, ಮತ್ತು AVRCP 1.5, ಬ್ಲೂಟೂತ್ 5.0 ಕನೆಕ್ಟಿವಿಟಿ ಸೌಲಭ್ಯಗಳನ್ನು ಪಡೆದಿದೆ. ANC ಹೈಬ್ರೀಡ್‌ ನಾಯಿಸ್ ಕ್ಯಾನ್ಸ್‌ಲೇಶನ್ ಸೌಲಭ್ಯವು ಇದ್ದು, ಆಡಿಯೊ ಗುಣಮಟ್ಟವು ಕ್ರಿಸ್ಪಿ ಆಗಿರಲಿದೆ ಎಂದು ಹೇಳಲಾಗಿದೆ. ಇನ್ನು ಈ ಡಿವೈಸ್ 5.4 ಗ್ರಾಂ ತೂಕ ಪಡೆದಿದೆ.

37mAh ಬ್ಯಾಟರಿ

ಹಾನರ್‌ ಇಯರ್‌ಬಡ್ಸ್‌ 37mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದ್ದು, ಇಯರ್‌ಬಡ್ಸ್‌ ಚಾರ್ಜಿಂಗ್ ಕೇಸ್ 410mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. ಇಯರ್‌ಬಡ್ಸ್‌ ಒಮ್ಮೆ ಪೂರ್ಣ ಚಾರ್ಜ್ ಮಾಡಿದರೇ ಸುಮಾರು 3.5 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಒದಗಿಸಲಿದೆ. ಹಾಗೆಯೇ ಬಡ್ಸ್‌ ಕೇಸ್‌ ಸುಮಾರು 13ಗಂಟೆಗಳ ಮ್ಯೂಸಿಕ್ ಪ್ಲೇ ಬ್ಯಾಕ್ ಸಪೋರ್ಟ್‌ ನೀಡಲಿದೆ. ಚಾರ್ಜಿಂಗ್‌ಗಾಗಿ ಯುಎಸ್‌ಬಿ-ಸಿ ಪೋರ್ಟ್‌ ಸೌಲಭ್ಯ ಹೊಂದಿದೆ.

ಇಯರ್‌ಬಡ್ಸ್‌

ಹಾನರ್‌ ಮ್ಯಾಜಿಕ್ ಇಯರ್‌ಬಡ್ಸ್‌ ನೋಡಲು ಆಪಲ್ ಇಯರ್‌ಬಡ್ಸ್‌ನಂತೆ ಕಾಣುತ್ತವೆ. ಇನ್ನು ಈ ಡಿವೈಸ್‌ ಬೆಲೆಯು €129 ಆಗಿದ್ದು, ಭಾರತದಲ್ಲಿ ಅಂದಾಜು 10,059ರೂ. ಆಗಿರಲಿದೆ. ಇದೇ ಏಪ್ರಿಲ್ 2020ರಲ್ಲಿ ಸೇಲ್‌ ಆರಂಭಿಸಲಿದ್ದು, ಪರ್ಲ್ ವೈಟ್ ಮತ್ತು ಬ್ಲೂ ಕಲರ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

Most Read Articles
Best Mobiles in India

English summary
Honor Magic Earbuds features 10mm drivers for audio reproduction.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X