ಹಾನರ್ ಸ್ಪೋರ್ಟ್ ಮತ್ತು ಸ್ಪೋರ್ಟ್ ಪ್ರೊ ಇಯರ್‌ಫೋನ್‌ ಬಿಡುಗಡೆ!

|

ಹಾನರ್‌ ಕಂಪೆನಿ ಈಗಾಗಲೇ ಟೆಕ್‌ ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಮಾರ್ಟ್‌ ಪ್ರಾಡಕ್ಟ್‌ಗಳನ್ನ ಬಿಡುಗಡೆ ಮಾಡಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಭಾರತೀಯ ಮಾರಕಟ್ಟೆಯಲ್ಲಿ ಹಾನರ್ ಸ್ಪೋರ್ಟ್ ಮತ್ತು ಹಾನರ್ ಸ್ಪೋರ್ಟ್ ಪ್ರೊ ಬ್ಲೂಟೂತ್ ಇಯರ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಶಿಯೋಮಿ ಮತ್ತು ರಿಯಲ್‌ಮಿ ಕಂಪೆನಿಗಳ ಇಯರ್‌ಫೋನ್‌‌ಗಳಿಗೆ ಮಾರುಕಟ್ಟೆಯಲ್ಲಿ ಸ್ಪರ್ಧೆಯೊಡ್ಡುವ ಸೂಚನೆ ನೀಡಿದೆ.

ಹೌದು

ಹೌದು, ಭಾರತೀಯ ಮಾರುಕಟ್ಟೆಯಲ್ಲಿ ಹಾನರ್‌ ಕಂಪೆನಿ ಹಲವಾರು ಸ್ಮಾರ್ಟ್‌ ಉತ್ಪನ್ನಗಳನ್ನ ಬಿಡುಗಡೆ ಮಾಡಿದ್ದು, ಅದರಲ್ಲಿ ಹಾನರ್ ಸ್ಪೋರ್ಟ್ ಮತ್ತು ಹಾನರ್ ಸ್ಪೋರ್ಟ್ ಪ್ರೊ ಬ್ಲೂಟೂತ್ ಇಯರ್‌ಫೋನ್‌ಗಳು ಕೂಡ ಸೇರಿವೆ. ಆಕರ್ಷಕ ವಿನ್ಯಾಸದ ಜೊತೆಗೆ ಯುವ ಜನತೆಗೆ ಒಪ್ಪುವ ಮಾದರಿಯ ಇಯರ್‌ಫೋನ್‌‌ಗಳು ಇವಾಗಿದ್ದು, ಹೊಸ ಮಾದರಿಯ ಅನುಭವ ನೀಡಲಿದೆ ಎಂದು ಹೇಳಲಾಗ್ತಿದೆ. ಅಷ್ಟಕ್ಕೂ ಹಾನರ್‌ ಕಂಪೆನಿಯ ಬ್ಲೂಟೂತ್‌ ಇಯರ್‌ಫೋನ್‌ಗಳ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿ

ಹಾನರ್

ಹಾನರ್ ಸ್ಪೋರ್ಟ್ ಮತ್ತು ಸ್ಪೋರ್ಟ್ ಪ್ರೊ ಬ್ಲೂಟೂತ್ ಇಯರ್‌ಫೋನ್‌ಗಳು ಐಪಿಎಕ್ಸ್ 5 ವಾಟರ್‌ ಪ್ರೂಪ್‌ ಆಗಿದ್ದು, ಫಿಟ್‌ನೆಸ್ ಚಟುವಟಿಕೆಗಳಿಗೆ ಸೂಕ್ತವಾಗಿವೆ. ಹಾನರ್ ಸ್ಪೋರ್ಟ್ ಪ್ರೊ ಅಂತರ್ನಿರ್ಮಿತ ಯುಎಸ್ಬಿ ಟೈಪ್-ಸಿ ಚಾರ್ಜಿಂಗ್‌ ಅನ್ನ ಹೊಂದಿದ್ದು, ಇನ್‌ಸ್ಟಂಟ್‌ ಕನೆಕ್ಟಿವಿಟಿಯನ್ನ ಬೆಂಬಲಿಸಲಿದೆ. ಅಲ್ಲದೆ ಇದು ಕೇವಲ ಐದು ನಿಮಿಷಗಳ ಚಾರ್ಜ್‌ನೊಂದಿಗೆ ನಾಲ್ಕು ಗಂಟೆಗಳ ಪ್ಲೇಬ್ಯಾಕ್ ಸಂಗೀತ ನೀಡುತ್ತದೆ.

ಹಾನರ್ ಸ್ಪೋರ್ಟ್

ಇನ್ನು ಹಾನರ್ ಸ್ಪೋರ್ಟ್ ಬ್ಲೂಟೂತ್ ಹೆಡ್‌ಫೋನ್‌ಗಳು ಒಂದೇ ಚಾರ್ಜ್‌ನಲ್ಲಿ 10 ದಿನಗಳ ಸ್ಟ್ಯಾಂಡ್‌ಬೈ ಸಮಯವನ್ನು ನೀಡಲಿದ್ದು, 11 ಎಂಎಂ ಡ್ರೈವರ್‌ಗಳನ್ನು ಒಳಗೊಂಡಿವೆ.

ಅಲ್ಲದೆ ಹುವಾವೇ ಹೈಪೇರ್ ತಂತ್ರಜ್ಞಾನದ ಬೆಂಬಲವನ್ನು ಹೊಂದಿದ್ದು, 13 ಎಂಎಂ ಡ್ರೈವರ್‌ಗಳನ್ನು ಸಹ ಹೊಂದಿದೆ. ಈ ಬ್ಲೂಟೂತ್ ಹೆಡ್‌ಫೋನ್‌ಗಳು 5 ಗ್ರಾಂ ತೂಕವನ್ನು ಹೊಂದಿದ್ದು, ಸುರಕ್ಷಿತ ಹಿಡಿತವನ್ನು ಹೊಂದಿವೆ. ಜೊತೆಗೆ 137Mah ಬ್ಯಾಟರಿ ಪ್ಯಾಕ್‌ಆಪ್‌ ಅನ್ನು ಹೊಂದಿವೆ.

ಹೆಡ್‌ಫೋನ್‌ಗಳು

ಅಲ್ಲದೆ ಈ ಹೆಡ್‌ಫೋನ್‌ಗಳು ಬ್ಲೂಟೂತ್ 4.1 ಕನೆಕ್ಟಿವಿಟಿ ಆಯ್ಕೆಯನ್ನ ಹೊಂದಿದ್ದು, ಆಂಡ್ರಾಯ್ಡ್ ಮತ್ತು ಐಒಎಸ್ ಫೋನ್‌ಗಳಿಗೆ ಹೊಂದಿಕೊಳ್ಳುತ್ತದೆ. ಇನ್ನು ಹಾನರ್ ಸ್ಪೋರ್ಟ್ ಬ್ಲೂಟೂತ್ ಹೆಡ್‌ಫೋನ್‌ಗಳ ಬೆಲೆ 1,999,ರೂ. ಆಗಿದ್ದು ಇದು ಅರೋರಾ ಬ್ಲೂ, ಫ್ಲೇಮ್ ರೆಡ್ ಮತ್ತು ಮಿಡ್ನೈಟ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಲಭ್ಯವಿದೆ. ಹಾನರ್ ಸ್ಪೋರ್ಟ್ ಪ್ರೊ ಹೆಡ್‌ಫೋನ್‌ ಬೆಲೆ 3,999, ರೂ.ಆಗಿದ್ದು ಫ್ಯಾಂಟಮ್ ರೆಡ್, ಫ್ಯಾಂಟಮ್ ಗ್ರೇ ಮತ್ತು ಫ್ಯಾಂಟಮ್ ಪರ್ಪಲ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Most Read Articles
Best Mobiles in India

Read more about:
English summary
Honor is making a big comeback in the Indian market with the launch of five new products. At the event in New Delhi, the company launched its Honor 9X alongside Honor Magic Watch 2 and Honor Band 5i. The e-brand of Chinese smartphone maker Huawei also introduced two new Bluetooth sports earphones. To challenge Xiaomi and Realme, the company has launched Honor Sport and Honor Sport Pro Bluetooth earphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X