Just In
Don't Miss
- Lifestyle
ಮಂಗಳವಾರದ ಭವಿಷ್ಯ: ಇಂದು ಯಾವ ರಾಶಿಯವರಿಗೆ ಅದೃಷ್ಟದ ದಿನ
- Education
International Labour Day 2021: ಮೇ 1ರಂದು ಕಾರ್ಮಿಕರ ದಿನವನ್ನಾಗಿ ಏಕೆ ಆಚರಿಸಲಾಗುತ್ತೆ ?
- News
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಕೊರೊನಾ ಸೋಂಕಿತೆ ಸಾವು
- Sports
ಐಪಿಎಲ್ 2021: ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಚೆನ್ನೈ ಸೂಪರ್ ಕಿಂಗ್ಸ್
- Movies
ಸಿನಿಮಾಕ್ಕಾಗಿ ಪ್ರಭಾಸ್-ಸೈಪ್ ಅಲಿ ಖಾನ್ ತೆಗೆದುಕೊಳ್ಳುತ್ತಿದ್ದಾರೆ ದೊಡ್ಡ ರಿಸ್ಕ್
- Finance
ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್ನ ಏಪ್ರಿಲ್ 19ರ ಮಾರುಕಟ್ಟೆ ದರ ಇಲ್ಲಿದೆ
- Automobiles
ಪವರ್ಫುಲ್ ಎಂಜಿನ್ ಹೊಂದಿರುವ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್ಯುವಿ ಕಾರಿನ ವಿಡಿಯೋ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹಾನರ್ x10 ಮ್ಯಾಕ್ಸ್ ಸ್ಮಾರ್ಟ್ಫೋನ್ ಫೀಚರ್ಸ್ ಬಹಿರಂಗ!
ಸ್ಮಾರ್ಟ್ಫೋನ್ ವಲಯದಲ್ಲಿ ಸಾಕಷ್ಟು ವಿಭಿನ್ನ ಮಾದರಿಯ ಸ್ಮಾರ್ಟ್ಫೋನ್ಗಳು ಲಭ್ಯವಿವೆ. ಈಗಾಗಲೇ ಹಲವು ಕಂಪೆನಿಗಳು ತಮ್ಮ ವೈವಿಧ್ಯಮಯ ಸ್ಮಾರ್ಟ್ಫೋನ್ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದರಲ್ಲಿ ಹಾನರ್ ಕಂಪೆನಿ ಕೂಡ ಒಂದಾಗಿದ್ದು, ತನ್ನ ವಿಶೇಷ ಸ್ಮಾರ್ಟ್ಫೋನ್ಗಳಿಂದ ಗುರುತಿಸಿಕೊಂಡಿದೆ. ಸದ್ಯ ಇದೀಗ ತನ್ನ ಮತ್ತೊಂದು ಹೊಸ ಮಾದರಿಯ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ.

ಹೌದು, ಹಾನರ್ ಸಂಸ್ಥೆ ತನ್ನ ಹೊಸ ಹಾನರ್ x10 ಮ್ಯಾಕ್ಸ್ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಇನ್ನು ಈ ಸ್ಮಾರ್ಟ್ಫೋನ್ ಇದೇ ಜುಲೈ 2 ರಂದು ಬಿಡುಗಡೆಯಾಗಲಿದೆ ಎಂದು ವರದಿ ಆಗಿದೆ. ಇನ್ನು ಈ ಸ್ಮಾರ್ಟ್ಫೋನ್ ವಿನ್ಯಾಸ ಹೇಗಿರಲಿದೆ ಅನ್ನೊದು ವೀಬೊ ವೆಬ್ಸೈಟ್ನಲ್ಲಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಹಾನರ್ x10 ಮ್ಯಾಕ್ಸ್ ಸ್ಮಾರ್ಟ್ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 800 5G SoC ಪ್ರೊಸೆಸರ್ ಹೊಂದಿರಲಿದೆ ಎನ್ನಲಾಗ್ತಿದೆ. ಇನ್ನು ಈ ಸ್ಮಾರ್ಟ್ಫೋನ್ ವಿಶೇಷತೆ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್ನು ಈ ಸ್ಮಾರ್ಟ್ಫೋನ್ ಹೊಸ ಮಾದರಿಯ ವಿನ್ಯಾಸವನ್ನ ಹೊಂದಿರಲಿದೆ ಎನ್ನಲಾಗ್ತಿದೆ. ಅಲ್ಲದೆ ಇದು ಯುವ ಜನತೆಯ ಆಶಯಕ್ಕೆ ಅನುಗುಣವಾದ ಉತ್ತಮ ಡಿಸ್ಪ್ಲೇ ಹೊಂದಿರಲಿದ್ದು, ಇದು 7.09 ಇಂಚಿನ ಡಿಸ್ಪ್ಲೇ ಹೊಂದಿರುವ ಸಾಧ್ಯತೆ ಇದೆ. ಇದಲ್ಲದೆ ಈ ಸ್ಮಾರ್ಟ್ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 800 5G SoC ಪ್ರೊಸೆಸರ್ ಹೊಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಅಲ್ಲದೆ ಇದು ಮೀಡಿಯಾ ಟೆಕ್ MT6873 SoC ಇಂದ ರನ್ ಆಗಲಿದೆ ಅನ್ನೊ ಮಾತು ಸಹ ಇದೆ. ಹಾಗೇಯೇ ಈ ಸ್ಮಾರ್ಟ್ಫೋನ್ ಉತ್ತಮ ಸ್ಟೋರೇಜ್ ಸಾಮರ್ಥ್ಯವನ್ನ ಹೊಂದಿರುವ ಸಾಧ್ಯತೆ ಇದೆ.

ಇದಲ್ಲದೆ ಈ ಸ್ಮಾರ್ಟ್ಫೋನ್ ಕ್ಯಾಮೆರಾ ಸೆಟ್ಅಪ್ ಹೇಗಿರಲಿದೆ ಅನ್ನೊದು ಇನ್ನು ತಿಳಿದುಬಂದಿಲ್ಲ. ಆದರೆ ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿರಲಿದೆ ಎನ್ನಲಾಗ್ತಿದೆ. ಅಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ ಎನ್ನಲಾಗ್ತಿದೆ.

ಇನ್ನು ಹಾನರ್ x10 ಮ್ಯಾಕ್ಸ್ ಸ್ಮಾರ್ಟ್ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ಅಪ್ ಅನ್ನು ಹೊಂದಿದ್ದು, 22.5W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ಸಾಧ್ಯತೆ ಇದೆ. ಇನ್ನು ಹಾನರ್ x10 ಮ್ಯಾಕ್ಸ್ ಸ್ಮಾರ್ಟ್ಫೋನ್ ಸ್ಪೀಕರ್ ಗ್ರಿಲ್ ಅನ್ನು ಸಹ ಹೊಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಸದ್ಯ 5G ಬೆಂಬಲದೊಂದಿಗೆ ಬರಲಿರುವ ಹಾನರ್ x10 ಮ್ಯಾಕ್ಸ್ ಅನ್ನು ಇದೇ ಜುಲೈ 2 ರಂದು ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗ್ತಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999