ಪದೇ ಪದೇ SIM ಪೋರ್ಟ್ ಮಾಡಬಹುದೇ?..ಪೋರ್ಟ್‌ ಮಾಡುವ ಮುನ್ನ ಈ ವಿಷಯ ಗೊತ್ತಿರಲಿ!

|

ಮೊಬೈಲ್‌ ಬಳಕೆದಾರರು ತಾವು ಬಳಕೆ ಮಾಡುವ ನೆಟ್‌ವರ್ಕ್ ಸರಿ ಎನಿಸದಿದ್ದಾಗ ಅಥವಾ ನೆಟ್‌ವರ್ಕ್ ಸಮಸ್ಯೆ ಎದುರಿಸಿದ್ದಾಗ, ಮೊಬೈಲ್ ಸಂಖ್ಯೆಯನ್ನು ಬದಲಾಯಿಸದೆ ಮತ್ತೊಂದು ಟೆಲಿಕಾಂ ಸಂಸ್ಥೆಗೆ ವರ್ಗಾವಣೆ ಮಾಡಲು ಮುಂದಾಗುತ್ತಾರೆ. ಇದನ್ನೇ ಸಿಮ್ ಪೋರ್ಟ್‌ ಎಂದು ಹೇಳಲಾಗುತ್ತದೆ. ಟ್ರಾಯ್‌ (ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ) ಸಂಸ್ಥೆಯು ಇತ್ತೀಚಿಗೆ ಸಿಮ್‌ ಪೋರ್ಟೆಬಲ್‌ (MNP ) ಹೊಸ ನಿಯಮ ಜಾರಿ ಮಾಡಿದ್ದು, ಮೊಬೈಲ್‌ ನಂಬರ್ ಪೋರ್ಟ್ ಕಾರ್ಯ ಈಗ ತ್ವರಿತವಾಗಿದೆ. ಆದರೆ ಒಂದು ಸಿಮ್‌ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಬಹುದು ಎಂದು ನಿಮಗೆ ಗೊತ್ತಾ ?

ಪೋರ್ಟ್‌

ಬಳಕೆದಾರರು ಮೊಬೈಲ್ ಸಂಖ್ಯೆಯನ್ನು ಬದಲಾಯಿಸದೆ ಒಂದು ನೆಟವರ್ಕ್‌ನಿಂದ ಮತ್ತೊಂದು ನೆಟವರ್ಕ್‌ಗೆ ಸೇವೆಯನ್ನು ಬದಲಾಯಿಸುವ ಪೋರ್ಟ್‌ (PORT) ಸೌಲಭ್ಯ ಬಳಕೆದಾರರಿಗೆ ಅಧಿಕ ಉಪಯುಕ್ತವಾಗಿದೆ. ಬಳಕೆದಾರರನ್ನು ಸೆಳೆಯಲು ಟೆಲಿಕಾಂ ಪೂರೈಕೆದಾರರು ಸಹ ಆಕರ್ಷಕ MNP ಯೋಜನೆಗಳನ್ನು ನೀಡುತ್ತಿವೆ. ಇನ್ನು ಬಳಕೆದಾರರು ಸಿಮ್‌ ಅನ್ನು ಒಂದು ಟೆಲಿಕಾಂ ಸಂಸ್ಥೆಯಿಂದ ಇನ್ನೊಂದು ಟೆಲಿಕಾಂ ಸಂಸ್ಥೆಗೆ ಪೋರ್ಟ್ ಮಾಡುವ ಕ್ರಮಗಳು ಬಲು ಸುಲಭ ಆಗಿವೆ. ಆದರೆ ಅನೇಕರಲ್ಲಿ ಪದೇ ಪದೇ ಪೋರ್ಟ್ ಮಾಡಬಹುದೇ ಅಥವಾ ಇಲ್ಲವೇ ಎನ್ನುವ ಗೊಂದಲ ಇರುತ್ತದೆ.

ಪದೇ ಪದೇ ಸಿಮ್ ಪೋರ್ಟ್ ಮಾಡಬಹುದೇ?

ಪದೇ ಪದೇ ಸಿಮ್ ಪೋರ್ಟ್ ಮಾಡಬಹುದೇ?

ಬಳಕೆದಾರರು ಎಷ್ಟು ಬಾರಿ ಬೇಕಾದರೂ ಪೋರ್ಟ್ (PORT) ಮಾಡಬಹುದು. ಇದಕ್ಕೆ ಯಾವುದೇ ನಿರ್ಬಂಧ ಇಲ್ಲ. ಆದರೆ ಯಾವುದೇ ನೆಟ್‌ವರ್ಕ್‌ಗೆ ಪೋರ್ಟ್ ಆಗಬೇಕಾದರೂ, ಪ್ರಸ್ತುತ ಇರುವ ನೆಟ್‌ವರ್ಕ್‌ನಲ್ಲಿ ಬಳಕೆದಾರರು ಕನಿಷ್ಟ 90 ದಿನ ಪೂರೈಸಬೇಕು. ಈ ನಿರ್ದಿಷ್ಟ ಅವಧಿ ಪೂರ್ಣಗೊಳಿಸದೇ ಇನ್ನೊಂದು ಟೆಲಿಕಾಂಗೆ ಪೋರ್ಟ್ ಮಾಡಲು ಸಾಧ್ಯ ಆಗುವುದಿಲ್ಲ. ಹೀಗಾಗಿ ಬಳಕೆದಾರರು ಪದೇ ಪದೇ ಸಿಮ್ ಪೋರ್ಟ್ ಮಾಡಬಹುದು. ಆದರೆ ಕಡಿಮೆ ಎಂದರೂ ಒಂದು ನೆಟ್‌ವರ್ಕ್‌ನಲ್ಲಿ 90 ದಿನಗಳ ಅವಧಿ ಪೂರೈಸಿರಬೇಕು.

ಸಿಮ್ ಪೋರ್ಟ್‌ಗೆ ಎಷ್ಟು ದಿನ ಸಮಯ ಬೇಕು?

ಸಿಮ್ ಪೋರ್ಟ್‌ಗೆ ಎಷ್ಟು ದಿನ ಸಮಯ ಬೇಕು?

ಟೆಲಿಕಾಂ ವಲಯದಲ್ಲಿ ಎಮ್‌ಎನ್‌ಪಿ ಸೌಲಭ್ಯವು ಚಂದಾದಾರರಿಗೆ ಉಪಯುಕ್ತವಾಗಿದ್ದು, ಒಂದು ಆಪರೇಟರ್‌ನಿಂದ ಇನ್ನೊಂದು ಟೆಲಿಕಾಂ ಆಪರೇಟರ್‌ಗೆ ಬದಲಾಯಿಸಬಹುದಾಗಿದೆ. ಈ ಮೊದಲು ಸಿಮ್‌ ಪೋರ್ಟ್‌ ಯಶಸ್ವಿಯಾಗಲು ಸುಮಾರು ಒಂದು ವಾರದ ಕಾಲಾವಧಿ ಆಗುತ್ತಿತ್ತು. ಆದ್ರೆ ಟ್ರಾಯ್‌ನ ಹೊಸ ಎಮ್‌ಎನ್‌ಪಿ ನಿಯಮ ಜಾರಿಯಿಂದ ಇದೀಗ ಬರೀ ಐದು ದಿನಗಳ ಒಳಗಾಗಿ ಸಿಮ್‌ ಫೋರ್ಟ್ ಆಗಲಿದೆ. ಹಾಗಾದರೇ ಮೊಬೈಲ್ ಪೋರ್ಟ್‌ ಮಾಡುವ ಹಂತಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಮೊಬೈಲ್‌ ನಂಬರ್ ಪೋರ್ಟ್ ಮಾಡಲು ಈ ಕ್ರಮಗಳನ್ನು ಅನುಸರಿಸಿ:

ಮೊಬೈಲ್‌ ನಂಬರ್ ಪೋರ್ಟ್ ಮಾಡಲು ಈ ಕ್ರಮಗಳನ್ನು ಅನುಸರಿಸಿ:

* ಸಿಮ್ ಪೋರ್ಟ್‌ ಮಾಡಲು UPC (ಯೂನಿಕ್ ಪೋರ್ಟಿಂಗ್ ಕೋಡ್) ಅಗತ್ಯ.
* ಅದಕ್ಕಾಗಿ ಮೊದಲು UPC (ಯೂನಿಕ್ ಪೋರ್ಟಿಂಗ್ ಕೋಡ್) ಜನರೇಟ್ ಮಾಡುವುದು.
* ಕ್ಯಾಪಿಟಲ್ ಅಕ್ಷರಗಳಲ್ಲಿ PORT-ಸ್ಪೇಸ್‌-ನಿಮ್ಮ ನೊಬೈಲ್ ಸಂಖ್ಯೆ ನಮೂದಿಸಿ. 1900 ನಂಬರ್‌ಗೆ ಎಸ್‌ಎಮ್‌ಎಸ್‌ ಮಾಡುವುದು.
* ಆ ಬಳಿಕ UPC ಎಸ್‌ಎಮ್‌ಎಸ್‌ ಲಭ್ಯವಾಗುತ್ತದೆ.
* ಪೋರ್ಟ್ ಆಗ ಬಯಸುವ ಟೆಲಿಕಾಂ ಸಂಸ್ಥೆಯ ಸರ್ವೀಸ್ ಸೆಂಟರ್‌ಗೆ ಭೇಟಿ ನೀಡುವುದು.
* Customer Acquisition Form (CAF) ತುಂಬುವುದು ಮತ್ತು ಕೆವೈಸಿ ದಾಖಲಾತಿ ನೀಡುವುದು.
* 5 ದಿನಗಳ ಒಳಗಾಗಿ ಸಿಮ್ ಪೋರ್ಟ್ ಆಗುವುದು.

ಸಿಮ್ ಪೋರ್ಟ್‌ ಮಾಡುವುದು ಹೇಗೆ?..ಇಲ್ಲಿದೆ ಮಾಹಿತಿ:

ಸಿಮ್ ಪೋರ್ಟ್‌ ಮಾಡುವುದು ಹೇಗೆ?..ಇಲ್ಲಿದೆ ಮಾಹಿತಿ:

ಸಿಮ್ ಪೋರ್ಟ್ ಸೇವೆ ಪ್ರಾರಂಭಿಸಲು, ಬಳಕೆದಾರರು ತಮ್ಮ ಮೊಬೈಲ್‌ ಸಂಖ್ಯೆಯಿಂದ, ಫೋನ್‌ನಲ್ಲಿರುವ ನಾರ್ಮಲ್ ಮೆಸೇಜಿಂಗ್ ಅಪ್ಲಿಕೇಶನ್ ಮೂಲಕ ಎಸ್‌ಎಮ್‌ಎಸ್‌ ಕಳುಹಿಸಬೇಕು. ಮೆಸೆಜ್‌ನಲ್ಲಿ ‘PORT' ಎಂದು ಬರೆಯುವುದು ನಂತರ ಸ್ಪೇಸ್ ‘ಮೊಬೈಲ್ ಸಂಖ್ಯೆ' ನಮೂದಿಸುವುದು ಬಳಿಕ 1900 ನಂಬರ್‌ಗೆ ಎಸ್‌ಎಮ್‌ಎಸ್‌ ಕಳುಹಿಸುವುದು. ಎಸ್‌ಎಮ್‌ಎಸ್‌ ಸೆಂಡ್ ಆದ ಬಳಿಕ ಬಳಕೆದಾರರ ಇನ್‌ಬಾಕ್ಸ್‌ಗೆ ಸಿಮ್ ಪೋರ್ಟಿಂಗ್ ಕೋಡ್ ಲಭ್ಯವಾಗುವುದು.

ಹೊಸ ಸಿಮ್ ಖರೀದಿಸಲು ಅವಶ್ಯ ಇರುವ ದಾಖಲೆಗಳು

ಹೊಸ ಸಿಮ್ ಖರೀದಿಸಲು ಅವಶ್ಯ ಇರುವ ದಾಖಲೆಗಳು

ಹೊಸ ಸಿಮ್ ಪಡೆಯುವ ಸಮಯದಲ್ಲಿ, ಬಳಕೆದಾರರು ದೃಢೀಕರಣಕ್ಕಾಗಿ ಗುರುತಿನ ಪುರಾವೆ (POI) ಮತ್ತು ವಿಳಾಸದ ಪುರಾವೆ (POA) ಅನ್ನು ನೀಡುವುದು ಅಗತ್ಯ. ಹಾಗಾದರೇ ಹೊಸ ಸಿಮ್ ಪಡೆಯಲು ಈ ಕೆಳಗೆ ಸೂಚಿಸಲಾದ ಅಗತ್ಯ ದಾಖಲೆಗಳಲ್ಲಿ ಯಾವುದಾರೂ ಒಂದು ದಾಖಲೆ ಇದ್ದರೂ ಸರಿ.
* ಆಧಾರ್ ಕಾರ್ಡ್
* ವೋಟರ್ ಐಡಿ
* ಪಾಸ್‌ಪೋರ್ಟ್‌
* ಡ್ರೈವಿಂಗ್ ಲೈಸೆನ್ಸ್‌

Most Read Articles
Best Mobiles in India

English summary
How Many Times Users Can PORT Their Sim: Know These Things Before Sim Port .

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X