ಆಟೋ, ಟ್ಯಾಕ್ಸಿ ಚಾಲಕರು 3 ಸಾವಿರ ಸಹಾಯಧನಕ್ಕೆ ಅರ್ಜಿಸಲ್ಲಿಸಲು ಹೀಗೆ ಮಾಡಿ!

|

ಪ್ರಸ್ತುತ ದೇಶದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಎರಡನೇ ಅಲೆಯ ತೀವ್ರತೆಯನ್ನು ನಿಯಂತ್ರಿಸಲು ಹಲವು ರಾಜ್ಯಗಳು ಲಾಕ್‌ಡೌನ್‌ ಘೊಷಿಸಿವೆ. ಇದರಲ್ಲಿ ಕರ್ನಾಟಕ ರಾಜ್ಯವೂ ಕೂಡ ಒಂದು. ಇನ್ನು ಕರ್ನಾಟಕದಲ್ಲಿ ಈಗಾಗಲೇ ಕೋವಿಡ್‌ ಎರಡನೇ ಅಲೆಯ ಎರಡನೇ ಹಂತದ ಲಾಕ್‌ಡೌನ್‌ ಜಾರಿಯಲ್ಲಿದೆ. ಎರಡನೇ ಅಲೆಯ ಲಾಕ್‌ಡೌನ್‌ ಪರಿಣಾಮದಿಂದಾಗಿ ವಿವಿಧ ವಲಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸಂಕಷ್ಟಕ್ಕೆ ಎದುರಿಸಿದ್ದು, ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೂ ಲಾಕ್‌ಡೌನ್ ಬಿಸಿ ತಟ್ಟಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ 3 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದು, ಅರ್ಜಿ ಸಲ್ಲಿಸಿ ಹಣ ಪಡೆಯಬಹುದಾಗಿದೆ.

ಲಾಕ್‌ಡೌನ್

ಹೌದು, ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದೆ. ಈ ಸಂದರ್ಭದಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಆಟೋ, ಟ್ಯಾಕ್ಸಿ, ಕ್ಯಾಬ್‌ ಚಾಲಕರ ಸಂಕಷ್ಟಕ್ಕೆ 3 ಸಾವಿರ ರೂ ಗಳ ಸಹಾಯಧನ ಘೋಷಿಸಿದೆ. ಇನ್ನು ಚಾಲಕರಿಗೆ ಸರ್ಕಾರ ನೀಡುವ ಸಹಾಯಧನಕ್ಕೆ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ಇಂದಿನಿಂದ ಚಾಲಕರು ಅರ್ಜಿ ಸಲ್ಲಿಸಬಹುದಾಗಿದೆ. ಹಾಗಾದ್ರೆ ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಸರ್ಕಾರ

ಕರ್ನಾಟಕ ಸರ್ಕಾರ ಲಾಕ್‌ಡೌನ್‌ ಸಮಸ್ಯೆಗೆ ಒಳಗಾಗಿರುವ ವಿವಿಧ ವಲಯದ ಜನರಿಗೆ ಸಹಾಯಧನ ನೀಡಲು ಆರ್ಥಿಕ ಪ್ಯಾಕೇಜ್‌ ಘೋಷಣೆ ಮಾಡಿತ್ತು. ಆದರತೆ ಇಂದಿನಿಂದ ಆಟೋ, ಟ್ಯಾಕ್ಸಿ, ಕ್ಯಾಬ್‌ ಚಾಲಕರು ತಮ್ಮ ಸಹಾಯಧನ ಪಡೆದುಕೊಳ್ಳಲು ಅರ್ಜಿಸಲ್ಲಿಸಬಹುದಾಗಿದೆ. ಇಂದು ಬೆಳಿಗ್ಗೆ 11 ಗಂಟೆಯಿಂದ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಇನ್ನು ಅರ್ಜಿಸಲ್ಲಿಸುವಾಗ ಕೆಲವೊಂದು ಅರ್ಹ ಮಾನದಂಡಗಳನ್ನು ಪಾಲಿಸಬೇಕಾಗಿದೆ. ಅಗತ್ಯ ದಾಖಲೆಗಳನ್ನು ನೀಡುವುದು ಅವಶ್ಯಕವಾಗಿದೆ.

ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸವುದು ಹೇಗೆ?

ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸವುದು ಹೇಗೆ?

ಸೇವಾಸಿಂಧು ಅಪ್ಲಿಕೇಶನ್‌ನಲ್ಲಿ ಅರ್ಜಿ ಸಲ್ಲಿಸಲು, ಆಟೋ ಡ್ರೈವರ್‌ಗಳು ಮತ್ತು ಟ್ಯಾಕ್ಸಿ ಡ್ರೈವರ್‌ಗಳು ಮೊದಲು ಸೇವಾ ಸಿಂದು ಅವರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕಾಗುತ್ತದೆ. ನಂತರ ಅಧಿಕೃತ ಸೇವಾ ಸಿಂದು ವೆಬ್‌ಸೈಟ್‌ನ ಮುಖಪುಟದಲ್ಲಿ, "COVID-19 ಗಾಗಿ ಸ್ವಯಂ-ರಿಕ್ಷಾ ಚಾಲಕರು ಮತ್ತು ಟ್ಯಾಕ್ಸಿ ಡ್ರೈವರ್‌ಗಳಿಗೆ ನಗದು ಪರಿಹಾರ ವಿತರಣೆ" ಆಯ್ಕೆಯನ್ನು ನೀವು ಕಾಣಬಹುದು. ಈ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಮತ್ತು ಚಾಲಕ ನೋಂದಣಿ ಫಾರ್ಮ್ ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಪರದೆಯಲ್ಲಿ ಕಾಣಿಸುತ್ತದೆ. ಅಗತ್ಯವಿರುವ ಎಲ್ಲ ವಿವರಗಳನ್ನು ಅರ್ಜಿ ನಮೂನೆಯಲ್ಲಿ ನಮೂದಿಸಿ. ನಂತರ, ಸಲ್ಲಿಸು ಬಟನ್ ಕ್ಲಿಕ್ ಮಾಡಿ ಮತ್ತು ನಿಮ್ಮ ಅರ್ಜಿ ನಮೂನೆಯ ಪ್ರಿಂಟ್‌ ತೆಗೆದುಕೊಳ್ಳಬಹುದಾಗಿದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

ಪ್ರಯೋಜನಗಳನ್ನು ಪಡೆಯಲು ಅರ್ಜಿದಾರರಿಗೆ ಈ ಯೋಜನೆಯಡಿ ಅರ್ಜಿಯನ್ನು ಸಲ್ಲಿಸಲು ಈ ಕೆಳಗಿನ ದಾಖಲೆಗಳು ಬೇಕಾಗುತ್ತವೆ.
* ಆಧಾರ್ ಸಂಖ್ಯೆ, ಪ್ಯಾನ್ ಸಂಖ್ಯೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ವಿವರ.
* ಪಾಸ್‌ಪೋರ್ಟ್ ಗಾತ್ರದ ಫೋಟೋ
* 2021ರ ಏಪ್ರಿಲ್ 24ರವರೆಗೆ ಚಾಲ್ತಿಯಲ್ಲಿರುವ ಡ್ರೈವಿಂಗ್‌ ಲೈಸೆನ್ಸ್‌(ಡಿಎಲ್)
* ವಾಸಸ್ಥಳ ಪ್ರಮಾಣಪತ್ರ
* ವಾಹನ ನೋಂದಣಿ ಪ್ರಮಾಣಪತ್ರ
* ಮತದಾರರ ಗುರುತಿನ ಚೀಟಿ
ಇನ್ನು ಸೇವಾಸಿಂಧುನಲ್ಲಿ ಅರ್ಜಿ ಸಲ್ಲಿಸುವ ಆಟೋ, ಕ್ಯಾಬ್‌, ಟ್ಯಾಕ್ಸಿ ಚಾಲಕರ ಅರ್ಜಿ ಪರಿಶೀಲಿಸಿದ ನಂತರ ಅವರ ಖಾತೆಗೆ ನೇರ ನಗದು ವರ್ಗಾವಣೆ ಆಗಲಿದೆ.

Most Read Articles
Best Mobiles in India

English summary
Here is all you need to know about Seva Sindhu, how to apply, eligibility, required documents.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X